- Home
- Entertainment
- TV Talk
- ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆ ಬರೆದ ಕನ್ನಡ ರಿಯಾಲಿಟಿ ಶೋ; ಹಿಂದಿ, ತೆಲುಗು, ಮಲಯಾಳಂ ಎಲ್ಲೂ ನಡೆದಿಲ್ಲ!
ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆ ಬರೆದ ಕನ್ನಡ ರಿಯಾಲಿಟಿ ಶೋ; ಹಿಂದಿ, ತೆಲುಗು, ಮಲಯಾಳಂ ಎಲ್ಲೂ ನಡೆದಿಲ್ಲ!
ಕನ್ನಡ ಬಿಗ್ ಬಾಸ್ ಸೀಸನ್ 13, ಭಾರತೀಯ ರಿಯಾಲಿಟಿ ಶೋ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ, ಸ್ಪರ್ಧಿಗಳು ಪುರುಷ ಧ್ವನಿಯ ಬದಲಿಗೆ ಮಹಿಳಾ ಧ್ವನಿಯ ಆದೇಶಗಳನ್ನು ಪಾಲಿಸುತ್ತಿದ್ದು, ಒಬ್ಬ ಸ್ಪರ್ಧಿ ಬಿಗ್ ಬಾಸ್ ಧ್ವನಿಯನ್ನು ಕೇಳುವ ಮೊದಲೇ ಎಲಿಮಿನೇಟ್ ಆಗುವ ಸಾಧ್ಯತೆಯಿದೆ.

ಮಹಿಳಾ ಧ್ವನಿಯ ಆದೇಶಕ್ಕೆ ತಲೆಬಾಗಿದ ಸ್ಪರ್ಧಿಗಳು!
ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಇತಿಹಾಸದಲ್ಲೇ ಇದೀಗ ಅತ್ಯಂತ ಅಪರೂಪದ ದಾಖಲೆಯೊಂದು ನಿರ್ಮಾಣವಾಗಿದೆ. ಭಾರತದಲ್ಲಿ ಹಿಂದಿ ಬಿಗ್ ಬಾಸ್ ಆರಂಭವಾಗಿ ಬರೋಬ್ಬರಿ 19 ಸೀಸನ್‌ಗಳು ಯಶಸ್ವಿಯಾಗಿ ಮುಗಿದು 20ನೇ ಸೀಸನ್‌ಗೆ ಕಾಲಿಟ್ಟಿದೆ. ಇತ್ತ ಕನ್ನಡದಲ್ಲಿ 13ನೇ ಸೀಸನ್ ಅದ್ಧೂರಿಯಾಗಿ ಶುರುವಾಗಿದೆ. ಆದರೆ, ಇಷ್ಟು ಸುದೀರ್ಘ ವರ್ಷಗಳ ಇತಿಹಾಸದಲ್ಲಿ ಯಾವ ಭಾಷೆಯಲ್ಲೂ ನಡೆಯದ ಅಚ್ಚರಿಯ ಘಟನೆಯೊಂದು ಕನ್ನಡದ ನೆಲದಲ್ಲಿ ನಡೆದಿದೆ.
ಭಾರತೀಯ ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲು!
ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಬಂಗಾಳಿ ಸೇರಿದಂತೆ ಯಾವುದೇ ಭಾಷೆಯ ಬಿಗ್ ಬಾಸ್ ಇತಿಹಾಸವನ್ನು ಗಮನಿಸಿದರೂ ಅಲ್ಲಿ ಸಾರ್ವಭೌಮನಾಗಿ ಕೇಳಿಬರುತ್ತಿದ್ದದ್ದು ಕೇವಲ ಗಂಭೀರ ಗಂಡು ಧ್ವನಿ ಮಾತ್ರ. ಆದರೆ ಇದೇ ಮೊದಲ ಬಾರಿಗೆ ಬಿಗ್ ಬಾಸ್ ಆವರಣದಲ್ಲಿ ಮಹಿಳೆಯೊಬ್ಬರ ಧ್ವನಿ ಮೊಳಗಿದ್ದು, ಆ ಧ್ವನಿಯೇ ನೀಡಿದ ನಿಯಮ-ಆದೇಶಗಳನ್ನು ಸ್ಪರ್ಧಿಗಳು ಪಾಲಿಸಿದ್ದಾರೆ. ಈ ಮೂಲಕ ಇಡೀ ಭಾರತೀಯ ಬಿಗ್ ಬಾಸ್ ಶೋಗಳಲ್ಲೇ ಹೊಸ ಇತಿಹಾಸ ಸೃಷ್ಟಿಯಾಗಿದೆ.
ವಿಮಾನದೊಳಗೆ ಮೊಳಗಿದ ನಿಗೂಢ ಮಹಿಳಾ ಧ್ವನಿ:
ಈ ಬಾರಿಯ ಸೀಸನ್‌ನಲ್ಲಿ ಬಿಗ್ ಬಾಸ್ ಮನೆಯ ಮುಖ್ಯ ದ್ವಾರದ ಒಳಗೆ ಪ್ರವೇಶಿಸುವ ಮುನ್ನ, ಆವರಣದಲ್ಲಿ ನಿಲ್ಲಿಸಲಾಗಿರುವ ವಿಶೇಷ ವಿಮಾನದಲ್ಲಿ 16 ಮಂದಿ ಸ್ಪರ್ಧಿಗಳನ್ನು ಕೂರಿಸಲಾಗಿತ್ತು. ಅಚ್ಚರಿಯೆಂದರೆ, ಈ ವಿಮಾನದ ಒಳಗಿದ್ದ ಸ್ಪರ್ಧಿಗಳಿಗೆ ಯಾವುದೇ ಪುರುಷ ಬಿಗ್ ಬಾಸ್ ಧ್ವನಿ ಕೇಳಿಸಲಿಲ್ಲ! ಬದಲಾಗಿ, ಮಹಿಳೆಯೊಬ್ಬರ ಖಡಕ್ ಧ್ವನಿ ಕೇಳಿಸಿದ್ದು, ಆಕೆ ನೀಡಿದ ಪ್ರತಿಯೊಂದು ಆದೇಶ ಮತ್ತು ನಿಯಮಗಳನ್ನು ಎಲ್ಲಾ ಸ್ಪರ್ಧಿಗಳು ಚಾಚೂತಪ್ಪದೆ ಪಾಲಿಸಿದ್ದಾರೆ.
ಬಿಗ್ ಬಾಸ್ ಧ್ವನಿಯನ್ನೇ ಕೇಳದೆ ಹೊರಬೀಳ್ತಾರಾ ಸ್ಪರ್ಧಿ?
ಸಾಮಾನ್ಯವಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಪ್ರತಿಯೊಬ್ಬ ಸ್ಪರ್ಧಿಗೂ ಸ್ವತಃ ಬಿಗ್ ಬಾಸ್ ಧ್ವನಿಯೇ ಸ್ವಾಗತ ಕೋರುತ್ತದೆ. ಆದರೆ, ಈ ಬಾರಿ ವಿಮಾನದಲ್ಲಿ ಸಿಲುಕಿರುವ 8 ಮಂದಿ ಸ್ಪರ್ಧಿಗಳಿಗೆ ಇನ್ನುವರೆಗೆ ಸಾಕ್ಷಾತ್ ಬಿಗ್ ಬಾಸ್ ಧ್ವನಿಯನ್ನು ನೇರವಾಗಿ ಆಲಿಸುವ ಅವಕಾಶವೇ ಸಿಕ್ಕಿಲ್ಲ. ಈ 8 ಜನರಲ್ಲಿ ಒಬ್ಬರು ಬಿಗ್ ಬಾಸ್ ಧ್ವನಿಯನ್ನು ಆಲಿಸುವುದಿರಲಿ, ಮನೆಯೊಳಗೆ ಪ್ರವೇಶ ಪಡೆಯುವ ಮುನ್ನವೇ ವಿಮಾನದಿಂದಲೇ ನೇರವಾಗಿ ಮನೆಯಿಂದ ಹೊರಬೀಳಲಿದ್ದಾರೆ (ಎಲಿಮಿನೇಟ್ ಆಗಲಿದ್ದಾರೆ) ಎಂಬ ಮಾತುಗಳು ಕೇಳಿಬರುತ್ತಿವೆ.
24 ಗಂಟೆಗಳ ಕಾಲ ಬಿಗ್ ಬಾಸ್ ಧ್ವನಿಯೇ ಕೇಳಿಸದ ಸೀಸನ್!
ಹಿಂದಿನ 12 ಸೀಸನ್‌ಗಳಲ್ಲಿ ಶೋ ಆರಂಭವಾದ ಮೊದಲ ದಿನವೇ ಗಂಭೀರ ಧ್ವನಿಯೊಂದಿಗೆ ಬಿಗ್ ಬಾಸ್ ಸ್ಪರ್ಧಿಗಳನ್ನು ಸ್ವಾಗತಿಸಿ ಮನೆಯ ಜವಾಬ್ದಾರಿಗಳನ್ನು ವಹಿಸುತ್ತಿದ್ದರು. ಆದರೆ, ಸೀಸನ್ 13ರಲ್ಲಿ ಬರೋಬ್ಬರಿ 36 ಗಂಟೆಗಳ ಕಾಲ ಆ ಪ್ರಸಿದ್ಧ ಧ್ವನಿಯೇ ಕೇಳಿಸಿಲ್ಲ. ಬದಲಿಗೆ, ಒಂದು ದಿನಕ್ಕೂ ಹೆಚ್ಚು ಕಾಲ ಮಹಿಳಾ ಧ್ವನಿಯನ್ನೇ ಆಲಿಸಿ ಆಕೆಯ ಆದೇಶಗಳನ್ನು ಪಾಲಿಸಿರುವುದು ಈ ಸೀಸನ್‌ನ ರೋಚಕ ಟ್ವಿಸ್ಟ್‌ಗಳಿಗೆ ಮುನ್ನುಡಿ ಬರೆದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

