- Home
- Entertainment
- TV Talk
- BBK 12: ಬಿಗ್‌ಬಾಸ್ ಕೊಟ್ಟ ಟ್ವಿಸ್ಟ್‌ಗೆ ಮನೆ ಮಂದಿಯೆಲ್ಲಾ ಕಂಗಾಲು! ಹೋಗಲಾರೆ, ಬಿಡಲಾರೆ ಧರ್ಮ ಸಂಕಷ್ಟದಲ್ಲಿ ಮೂವರು!
BBK 12: ಬಿಗ್‌ಬಾಸ್ ಕೊಟ್ಟ ಟ್ವಿಸ್ಟ್‌ಗೆ ಮನೆ ಮಂದಿಯೆಲ್ಲಾ ಕಂಗಾಲು! ಹೋಗಲಾರೆ, ಬಿಡಲಾರೆ ಧರ್ಮ ಸಂಕಷ್ಟದಲ್ಲಿ ಮೂವರು!
ನಾಮಿನೇಷನ್ ಬಳಿಕ ಕಿತ್ತಾಡಿಕೊಂಡಿದ್ದ ಸ್ಪರ್ಧಿಗಳಿಗೆ ಬಿಗ್‌ಬಾಸ್ ಹೊಸ ಟ್ವಿಸ್ಟ್ ನೀಡಿದ್ದಾರೆ. ಇಬ್ಬರು ಮಹಿಳೆ ಮತ್ತು ಓರ್ವ ಪುರುಷನಿರುವ ತಂಡಗಳನ್ನು ರಚಿಸುವಂತೆ ಸೂಚಿಸಿದ್ದು, ಇದು ಮನೆಯಲ್ಲಿ ಹೊಸ ಜಗಳ ಮತ್ತು ಸಮೀಕರಣಗಳಿಗೆ ಕಾರಣವಾಗಿದೆ. ರಘು ತಂಡಕ್ಕೆ ಯಾರು ಸೇರಬೇಕು ಎಂಬ ಗೊಂದಲ ತಾರಕಕ್ಕೇರಿದೆ.

ಕಿತ್ತಾಡಿಕೊಂಡಿದ್ದ ಸ್ಪರ್ಧಿಗಳೆಲ್ಲಾ ಶಾಕ್
ಸೋಮವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳು ಯುದ್ಧದ ರೀತಿಯಲ್ಲಿ ಜಗಳ ಮಾಡಿಕೊಂಡಿದ್ದರು. ಇದೆಲ್ಲದರ ಪರಿಣಾಮ ಅಶ್ವಿನಿ ಗೌಡ ಮತ್ತು ಧ್ರುವಂತ್ ಜೊತೆಯಾದ್ರೆ ಇನ್ನುಳಿದ ಸ್ಪರ್ಧಿಗಳೆಲ್ಲರೂ ಒಂದು ಗುಂಪಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಬಿಗ್‌ಬಾಸ್ ನೀಡಿದ ಟ್ವಿಸ್ಟ್‌ಗೆ ಕಿತ್ತಾಡಿಕೊಂಡಿದ್ದ ಸ್ಪರ್ಧಿಗಳೆಲ್ಲಾ ಶಾಕ್ ಆಗಿದ್ದಾರೆ.
ಬಿಗ್‌ಬಾಸ್ ಟ್ವಿಸ್ಟ್ ಏನು?
ಮೂರು ಸದಸ್ಯರವುಳ್ಳ ಎರಡು ತಂಡಗಳನ್ನು ರಚಿಸಿಕೊಳ್ಳಬೇಕು. ಪ್ರತಿಯೊಂದು ತಂಡದಲ್ಲಿ ಓರ್ವ ಪುರುಷ ಸದಸ್ಯ ಮತ್ತು ಇಬ್ಬರು ಮಹಿಳಾ ಸದಸ್ಯರು ಇರಬೇಕೆಂದು ಬಿಗ್‌ಬಾಸ್ ನಿಯಮವೊಂದನ್ನ ಹಾಕಿದ್ದಾರೆ. ಈ ನಿಯಮದಿಂದ ಯಾರನ್ನು ಕರೆದುಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.
ಗಿಲ್ಲಿ ಮತ್ತು ಕ್ಯಾಪ್ಟನ್ ಧನುಷ್
ಈಗಾಗಲೇ ಟಾಸ್ಕ್ ಸೋತಿರುವ ಗಿಲ್ಲಿ ಮತ್ತು ಕ್ಯಾಪ್ಟನ್ ಧನುಷ್ ಅವರನ್ನು ಆಯ್ಕೆ ಮಾಡಿಕೊಳ್ಳುವಂತಿಲ್ಲ. ಹಾಗಾಗಿ ಧ್ರುವಂತ್ ಮತ್ತು ರಘು ತಂಡದಲ್ಲಿ ಮುಖ್ಯವಾಗುತ್ತಾರೆ. ರಘು ಜೊತೆಯಲ್ಲಿಯೇ ಆಟವಾಡಬೇಕು ಅನ್ನೋದು ರಕ್ಷಿತಾ, ಕಾವ್ಯಾ ಮತ್ತು ರಾಶಿಕಾ ಆಸೆಯಾಗಿದ್ದಾರೆ. ಆದ್ರೆ ಇಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.
ಟಾಸ್ಕ್ ಸೋತು ಸುಣ್ಣವಾಗಿದ್ದ ಗಿಲ್ಲಿ
ಈ ಸಂದರ್ಭದಲ್ಲಿ ರಾಶಿಕಾ ಮತ್ತು ರಕ್ಷಿತಾ ನಡುವೆ ಯಾರು ರಘು ಟೀಂಗೆ ಹೋಗಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ಈ ಸಂದರ್ಭದಲ್ಲಿ ರಕ್ಷಿತಾ ಪರವಾಗಿ ಮಾತನಾಡಲು ಬಂದ ಗಿಲ್ಲಿ ಮತ್ತು ರಾಶಿಕಾ ನಡುವೆ ಮಾತಿನ ಚಕಮಕಿ ನಡೆದಿದೆ. ಟಾಸ್ಕ್ ಸೋತು ಸುಣ್ಣವಾಗಿದ್ದ ಗಿಲ್ಲಿಗೆ ತಮ್ಮ ಮೊಣಚು ಮಾತುಗಳಿಂದಲೇ ರಾಶಿಕಾ ತಿವಿಯುವ ಕೆಲಸವನ್ನು ಮಾಡಿದ್ದಾರೆ.
ಗಿಲ್ಲಿ ವ್ಯಕ್ತಿತ್ವ ಕೆಟ್ಟದಾಗಿದೆ
ಕೆಲವರಿಗೆ ಎಷ್ಟು ಹೇಳಿದ್ರೂ ಬುದ್ಧಿ ಕಲಿಯುವುದೇ ಇಲ್ಲ. ನಾವೇ ಆರ್ಥ ಮಾಡಿಕೊಳ್ಳೋಣ ಅಂತ ಹೋದ್ರು ತಮ್ಮ ಬುದ್ಧಿಯನ್ನು ಬಿಡಲ್ಲ. ಅವರ ಬುದ್ಧಿಯನ್ನು ಬಿಟ್ಟು ಬಾಳಲ್ಲ ಎಂಬುವುದಕ್ಕೆ ಗಿಲ್ಲಿಯೇ ಉದಾಹರಣೆ. ಗಿಲ್ಲಿ ವ್ಯಕ್ತಿತ್ವ ಕೆಟ್ಟದಾಗಿದ್ದು, ಮನೆಯಲ್ಲಿ ಮಾಡಿದ ಕೆಲಸಗಳಿಂದಲೇ ಸೋತು ಟಾಪ್-6 ಆಟದಿಂದ ಹೊರಗೆ ಬಂದು ಇಲ್ಲಿ ಕುಳಿತಿದ್ದೀಯಾ ಎಂದು ಚಳಿ ಬಿಡಿಸಿದ್ದಾರೆ.
ಇದನ್ನೂ ಓದಿ: BBK 12: ಎಲ್ಲಿಗೋ ವೈರಿಂಗ್, ಇನ್ನೆಲ್ಲೋ ಲೈಟಿಂಗ್! ಗಿಲ್ಲಿ-ಕಾವ್ಯಾ ಸ್ನೇಹದಲ್ಲಿ ಅನಿರೀಕ್ಷಿತ ತಿರುವು!
ರಘು ಆಯ್ಕೆ ಯಾರು?
ತಮ್ಮ ತಂಡಕ್ಕೆ ಬರಲು ಇಷ್ಟಪಡುವ ಸ್ಪರ್ಧಿಗಳು ಬಂದು ನಮ್ಮೊಂದಿಗೆ ಮಾತನಾಡಲಿ ಎಂದು ಧ್ರುವಂತ್ ಮತ್ತು ಅಶ್ವಿನಿ ಗೌಡ ಕುಳಿತಿದ್ದಾರೆ. ಇತ್ತ ರಾಶಿಕಾ ಮತ್ತು ರಕ್ಷಿತಾ ಜೊತೆಯಲ್ಲಿ ತಂಡವಾಗಿ ಆಟವಾಡಬೇಕೆಂದು ರಘು ಬಯಸುತ್ತಿದ್ದಾರೆ. ಆದ್ರೆ ರಕ್ಷಿತಾ ಜೊತೆ ಆಟವಾಡಲು ಒಪ್ಪದ ರಾಶಿಕಾ, ಕಾವ್ಯಾ ಅವರನ್ನು ಆಯ್ಕೆ ಮಾಡಿಕೊಳ್ಳುವಂತೆ ರಘುಗೆ ಸಲಹೆ ನೀಡುತ್ತಿದ್ದಾರೆ.
ಇದನ್ನೂ ಓದಿ: BBK 12: ಬಿಗ್‌ಬಾಸ್‌ನಲ್ಲಿ ಟಾಸ್ಕ್ ಅಬ್ಬರ; ಗಿಲ್ಲಿಯನ್ನು ಹಿಂದಿಕ್ಕಿ ಮುಂದೆ ಹೊರಟ ಕಾವ್ಯಾ ಶೈವ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

