MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
CM DK Shivakumar vs HD Devegowda
CM Visits APMC
Today's Horoscope in Kannada
Mekedatu Project Cost
CWRC Meeting Today
KPSC Scam
Ganesh Idol Theft
Mandya Children Wedding
Swachh Vayu Survekshan
108 Ambulance Services
LPG Booking Rules
National Film Awards Ceremony
  • Home
  • Entertainment
  • TV Talk
  • ಬಿಗ್‌ ಬಾಸ್‌ ಮನೆಯಲ್ಲಿ ಓಂ ಪ್ರಕಾಶ್‌ ರಾವ್‌ 2ನೇ ಇನ್ನಿಂಗ್ಸ್‌; ʻಹುಚ್ಚʼ ನಾಯಕಿಯ ಅಕ್ಕನೇ ಇವರ ಧರ್ಮಪತ್ನಿ

ಬಿಗ್‌ ಬಾಸ್‌ ಮನೆಯಲ್ಲಿ ಓಂ ಪ್ರಕಾಶ್‌ ರಾವ್‌ 2ನೇ ಇನ್ನಿಂಗ್ಸ್‌; ʻಹುಚ್ಚʼ ನಾಯಕಿಯ ಅಕ್ಕನೇ ಇವರ ಧರ್ಮಪತ್ನಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರ ಗ್ರ್ಯಾಂಡ್‌ ಓಪನಿಂಗ್‌ ಅದ್ಧೂರಿಯಾಗಿ ನಡೆದಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳ ಪೈಕಿ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್‌ ರಾವ್‌ ಕೂಡ ಪ್ರಮುಖರಾಗಿದ್ದಾರೆ. ವಿಶೇಷವೆಂದರೆ ಓಂ ಪ್ರಕಾಶ್‌ ರಾವ್‌ ಧರ್ಮಪತ್ನಿ ಹುಚ್ಚ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

3 Min read
Author : Sushma Hegde
Published : Sep 07 2026, 12:04 PM IST
Share this Photo Gallery
  • FB
  • TW
  • Linkdin
  • Whatsapp
14
ಬಿಗ್‌ ಬಾಸ್‌ ಮನೆಯಲ್ಲಿ ಓಂ ಪ್ರಕಾಶ್‌ ರಾವ್‌
Image Credit : Asianet News

ಬಿಗ್‌ ಬಾಸ್‌ ಮನೆಯಲ್ಲಿ ಓಂ ಪ್ರಕಾಶ್‌ ರಾವ್‌

ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರ ಗ್ರ್ಯಾಂಡ್‌ ಓಪನಿಂಗ್‌ ಅದ್ಧೂರಿಯಾಗಿ ನಡೆದಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳ ಪೈಕಿ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್‌ ರಾವ್‌ ಕೂಡ ಪ್ರಮುಖರಾಗಿದ್ದಾರೆ. ವಿಶೇಷವೆಂದರೆ, ಓಂ ಪ್ರಕಾಶ್‌ ರಾವ್‌ ಅವರಿಗೆ ಇದು ಬಿಗ್‌ ಬಾಸ್‌ ಮನೆಯ ಎರಡನೇ ಇನ್ನಿಂಗ್ಸ್‌. ಓಂ ಪ್ರಕಾಶ್‌ ರಾವ್‌ ಅವರನ್ನು ವೇದಿಕೆಗೆ ಬರಮಾಡಿಕೊಂಡ ಕಿಚ್ಚ ಸುದೀಪ್‌, ಎಂದಿನಂತೆ ತಮ್ಮದೇ ಶೈಲಿಯಲ್ಲಿ ಕಾಲೆಳೆದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಸೆಕೆಂಡ್‌ ಇನ್ನಿಂಗ್ಸ್‌ಗೆ ಬಂದಿದ್ದೀರಾ ಎಂದು ಕಿಚ್ಚ ಕಿಚಾಯಿಸಿದರು. ಇದೇ ವೇಳೆ, ತಮ್ಮಂತಹ ಸ್ಟಾರ್‌ ನಟರಿಗೆ ನಿರ್ದೇಶನ ಮಾಡಿದ ಪ್ರತಿಭಾವಂತ ನಿರ್ದೇಶಕ ಎಂದು ಓಂ ಪ್ರಕಾಶ್‌ ರಾವ್‌ ಅವರನ್ನು ಸುದೀಪ್‌ ಬಣ್ಣಿಸಿದರು.

ʻಹುಚ್ಚʼ ಚಿತ್ರದ ನಾಯಕಿಯ ಅಕ್ಕನೇ ಓಂ ಪ್ರಕಾಶ್‌ ರಾವ್‌ ಪತ್ನಿ

ಓಂ ಪ್ರಕಾಶ್‌ ರಾವ್‌ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವಾಗ ಅವರ ಪತ್ನಿಯ ವಿಚಾರವೂ ಗಮನ ಸೆಳೆದಿದೆ. ʻಹುಚ್ಚʼ ಸಿನಿಮಾದ ನಾಯಕಿಯಾಗಿ ಕಾಣಿಸಿಕೊಂಡಿದ್ದ ನಟಿಯ ಅಕ್ಕನೇ ಓಂ ಪ್ರಕಾಶ್‌ ರಾವ್‌ ಅವರ ಧರ್ಮಪತ್ನಿ ಎಂಬ ವಿಚಾರ ಇದೀಗ ಮತ್ತೆ ಚರ್ಚೆಗೆ ಬಂದಿದೆ. ಕಿಚ್ಚ ಸುದೀಪ್‌ ಅವರೇ ಬಿಗ್‌ ಬಾಸ್‌ ವೇದಿಕೆಯಲ್ಲಿ ಓಂ ಪ್ರಕಾಶ್‌ ರಾವ್‌ ಅವರ ಪತ್ನಿಯನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಹೀಗಾಗಿ, ಸಿನಿಮಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ಓಂ ಪ್ರಕಾಶ್‌ ರಾವ್‌ ಅವರ ಕುಟುಂಬದ ಕುರಿತ ಕುತೂಹಲವೂ ಹೆಚ್ಚಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಇದು ಓಂ ಪ್ರಕಾಶ್‌ ರಾವ್‌ ಅವರ ಎರಡನೇ ಬಿಗ್‌ ಬಾಸ್‌ ಎಂಟ್ರಿ
Image Credit : Asianet News

ಇದು ಓಂ ಪ್ರಕಾಶ್‌ ರಾವ್‌ ಅವರ ಎರಡನೇ ಬಿಗ್‌ ಬಾಸ್‌ ಎಂಟ್ರಿ

ಓಂ ಪ್ರಕಾಶ್‌ ರಾವ್‌ ಅವರು ಈ ಹಿಂದೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 4ರಲ್ಲಿಯೇ ವೈಲ್ಡ್‌ ಕಾರ್ಡ್‌ ಮೂಲಕ ದೊಡ್ಮನೆ ಪ್ರವೇಶಿಸಿದ್ದರು. ಆದರೆ ಅನಾರೋಗ್ಯದ ಸಮಸ್ಯೆಯಿಂದಾಗಿ ಮನೆಯೊಳಗೆ ಹೆಚ್ಚು ದಿನಗಳ ಕಾಲ ಇರಲು ಸಾಧ್ಯವಾಗಿರಲಿಲ್ಲ. ಎಂಟ್ರಿ ಕೊಟ್ಟ ಕೆಲವೇ ದಿನಗಳಲ್ಲಿ ಅವರು ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದರು. ಇದೀಗ ಸೀಸನ್‌ 13ರಲ್ಲಿ ಮತ್ತೆ ದೊಡ್ಮನೆಗೆ ಕಾಲಿಟ್ಟಿರುವ ಓಂ ಪ್ರಕಾಶ್‌ ರಾವ್‌, ತಮ್ಮ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಈ ಬಾರಿ ಅವರ ಆಟ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

34
ಸ್ಟಾರ್‌ ನಟರಿಗೆ ಆ್ಯಕ್ಷನ್‌ ಕಟ್‌ ಹೇಳಿದ ನಿರ್ದೇಶಕ
Image Credit : Asianet News

ಸ್ಟಾರ್‌ ನಟರಿಗೆ ಆ್ಯಕ್ಷನ್‌ ಕಟ್‌ ಹೇಳಿದ ನಿರ್ದೇಶಕ

ಕನ್ನಡ ಚಿತ್ರರಂಗದಲ್ಲಿ ಓಂ ಪ್ರಕಾಶ್‌ ರಾವ್‌ ಅವರು ನಿರ್ದೇಶಕರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸುದೀಪ್‌, ದರ್ಶನ್‌, ಶಿವರಾಜ್‌ಕುಮಾರ್‌ ಸೇರಿದಂತೆ ಹಲವು ಸ್ಟಾರ್‌ ನಟರಿಗೆ ಅವರು ನಿರ್ದೇಶನ ಮಾಡಿದ್ದಾರೆ. ಶಿವರಾಜ್‌ಕುಮಾರ್‌ ಅಭಿನಯದ ʻಎ.ಕೆ. 47ʼ ಸಿನಿಮಾ ಓಂ ಪ್ರಕಾಶ್‌ ರಾವ್‌ ಅವರ ನಿರ್ದೇಶನದ ಪ್ರಮುಖ ಸಿನಿಮಾಗಳಲ್ಲಿ ಒಂದು. ಆ್ಯಕ್ಷನ್‌ ಥ್ರಿಲ್ಲರ್‌ ಕಥಾಹಂದರದ ಈ ಸಿನಿಮಾ ಬಿಡುಗಡೆಯಾದಾಗ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತ್ತು. ಸುದೀಪ್‌ ನಾಯಕನಾಗಿ ನಟಿಸಿದ್ದ ʻಹುಚ್ಚʼ ಸಿನಿಮಾ ಓಂ ಪ್ರಕಾಶ್‌ ರಾವ್‌ ಅವರ ವೃತ್ತಿಜೀವನದ ಪ್ರಮುಖ ಸಿನಿಮಾಗಳಲ್ಲಿ ಒಂದಾಗಿದೆ. ಆ್ಯಕ್ಷನ್‌, ಸೆಂಟಿಮೆಂಟ್‌ ಹಾಗೂ ಸುದೀಪ್‌ ಅವರ ಅಭಿನಯದಿಂದಾಗಿ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ದರ್ಶನ್‌ ಅಭಿನಯದ ʻಕಳಸಿಪಾಳ್ಯʼ ಕೂಡ ಓಂ ಪ್ರಕಾಶ್‌ ರಾವ್‌ ಅವರ ನಿರ್ದೇಶನದ ಜನಪ್ರಿಯ ಸಿನಿಮಾಗಳಲ್ಲಿ ಒಂದು. ಸಿನಿಮಾದ ಮಾಸ್‌ ಡೈಲಾಗ್‌ಗಳು, ಹಾಡುಗಳು ಹಾಗೂ ದರ್ಶನ್‌ ಅವರ ಪಾತ್ರ ಇಂದಿಗೂ ಅಭಿಮಾನಿಗಳಲ್ಲಿ ಜನಪ್ರಿಯವಾಗಿದೆ. ದರ್ಶನ್‌ ಅಭಿನಯದ ʻಅಯ್ಯʼ ಸಿನಿಮಾವನ್ನೂ ಓಂ ಪ್ರಕಾಶ್‌ ರಾವ್‌ ನಿರ್ದೇಶಿಸಿದ್ದಾರೆ. ಆ್ಯಕ್ಷನ್‌ ಪ್ರಧಾನ ಕಥೆಯ ಈ ಚಿತ್ರವೂ ಅವರ ನಿರ್ದೇಶನದ ಪ್ರಮುಖ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

44
₹3.85 ಕೋಟಿ ವಂಚನೆ ಆರೋಪವೂ ಕೇಳಿಬಂದಿತ್ತು
Image Credit : Asianet News

₹3.85 ಕೋಟಿ ವಂಚನೆ ಆರೋಪವೂ ಕೇಳಿಬಂದಿತ್ತು

ಇತ್ತೀಚೆಗೆ ಓಂ ಪ್ರಕಾಶ್‌ ರಾವ್‌ ವಿರುದ್ಧ ₹3.85 ಕೋಟಿ ವಂಚನೆ ಆರೋಪವೂ ಕೇಳಿಬಂದಿತ್ತು. ʻಫೀನಿಕ್ಸ್‌ʼ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಅವರ ವಿರುದ್ಧ ದಾಖಲಾಗಿತ್ತು. ದೂರಿನ ಪ್ರಕಾರ, ಓಂ ಪ್ರಕಾಶ್‌ ರಾವ್‌ ಮತ್ತು ಅವರ ತಂಡವು ವಾಸುದೇವರೆಡ್ಡಿ, ಭಾಸ್ಕರ್‌ ಶೆಟ್ಟಿ, ವಸಂತಮ್ಮ ಹಾಗೂ ಜಯಲಕ್ಷ್ಮಿ ಎಂಬುವವರಿಂದ ಹಂತ ಹಂತವಾಗಿ ಒಟ್ಟು ₹3 ಕೋಟಿ 85 ಲಕ್ಷ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಸಿನಿಮಾ ನಿರ್ಮಾಣದ ಉದ್ದೇಶಕ್ಕಾಗಿ ಹಣ ಪಡೆದಿದ್ದರೂ, ಸಮಯ ಕಳೆದಂತೆ ಸಿನಿಮಾದ ಯಾವುದೇ ಮಾಹಿತಿ ಸಿಗಲಿಲ್ಲ ಹಾಗೂ ನೀಡಿದ್ದ ಹಣವೂ ವಾಪಸ್‌ ಬಂದಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಸಿನಿಮಾ ನಿರ್ಮಾಣದ ನೆಪದಲ್ಲಿ ಪಡೆದ ಹಣವನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡು ವಂಚನೆ ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿತ್ತು.

ಸದ್ಯ ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರ ಮೂಲಕ ಓಂ ಪ್ರಕಾಶ್‌ ರಾವ್‌ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ದೊಡ್ಮನೆಯಲ್ಲಿ ಅವರ ಆಟ, ಮಾತು ಹಾಗೂ ವ್ಯಕ್ತಿತ್ವ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಬಿಗ್ ಬಾಸ್
ಓಂ ಪ್ರಕಾಶ್ ರಾವ್
ಮನರಂಜನಾ ಸುದ್ದಿ

Latest Videos
Recommended Stories
Recommended image1
Bigg Boss: ಪತ್ನಿ ಬಳಿ ಮಾತ್ರ ಇದನ್ನು ಟ್ರೈ ಮಾಡ್ಲೇ ಬೇಡಿ: ಸ್ಪರ್ಧಿಗಳಿಗೆ ಓಂ ಪ್ರಕಾಶ್​ ಕಿವಿಮಾತು
Recommended image2
ಶ್ರಾವಣಿ Rock, ರಾಮ್ Shock: ದೊಡ್ಮನೆಯಲ್ಲಿ ಹತ್ತಿಕೊಳ್ತು ಆಟದ ಬೆಂಕಿ, ಆಸಿಯಾ ಗರಂ
Recommended image3
'ಮಾಲ್ಗುಡಿ ಡೇಸ್' ಅಭಿಮಾನಿಗಳೇ, ಈ ಸುದ್ದಿ ಮಿಸ್ ಮಾಡ್ಕೋಬೇಡಿ: ಬರ್ತಿದೆ ಮತ್ತೊಂದು ಸ್ವಾಮಿ ಕಥೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved