- Home
- Entertainment
- TV Talk
- BBK 12 ರಘು ಹಾಕಿದ ಚಾಲೆಂಜ್ ಸ್ವೀಕಾರ ಮಾಡ್ತಾರಾ ಧ್ರುವಂತ್? ಚೆಂಡಾಟದಲ್ಲಿ ಸಿಡಿಗುಂಡು ಸ್ಪೋಟ
BBK 12 ರಘು ಹಾಕಿದ ಚಾಲೆಂಜ್ ಸ್ವೀಕಾರ ಮಾಡ್ತಾರಾ ಧ್ರುವಂತ್? ಚೆಂಡಾಟದಲ್ಲಿ ಸಿಡಿಗುಂಡು ಸ್ಪೋಟ
ಬಿಗ್‌ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ, ಧ್ರುವಂತ್ ನೀಡಿದ ಕಾರಣಗಳಿಂದ ರಘು ತೀವ್ರವಾಗಿ ಆಕ್ರೋಶಗೊಂಡಿದ್ದಾರೆ. ತನ್ನ ಅಡುಗೆಯನ್ನು ಟೀಕಿಸಿದ್ದಕ್ಕೆ ಕೆಂಡಾಮಂಡಲರಾದ ರಘು, ಮನೆಯಿಂದ ಹೊರಗೆ ಒಬ್ಬನೇ ಬಾ ಎಂದು ಧ್ರುವಂತ್‌ಗೆ ನೇರ ಸವಾಲು ಹಾಕಿದ್ದಾರೆ.

ರಘು ಆಕ್ರೋಶ
ನಾಮಿನೇಷನ್ ಪ್ರಕ್ರಿಯೆ ವೇಳೆ ರಘು ಮತ್ತು ಧ್ರುವಂತ್ ನಡುವೆ ಕಿಡಿ ಹೊತ್ತಿಕೊಂಡಿದೆ. ಭಾನುವಾರದ ಸಂಚಿಕೆಯಲ್ಲಿಯೂ ರಘು ವಿರುದ್ಧ ಕೆಲವೊಂದು ಕಾರಣಗಳನ್ನು ನೀಡಿದ ಪಂಚಿಂಗ್ ಬ್ಯಾಗ್‌ಗೆ ಗುದ್ದು ನೀಡಿದ್ದರು. ಇದೀಗ ಮತ್ತೆ ಅದೇ ಕಾರಣಗಳನ್ನು ನೀಡಿದ್ದಕ್ಕೆ ರಘು ಆಕ್ರೋಶಗೊಂಡಿದ್ದಾರೆ.
ಧ್ರುವಂತ್ ನೀಡಿದ ಕಾರಣ
ನೀಡಲಾಗಿರುವ ಚೆಂಡಿಗೆ ರಘು ಫೋಟೋ ಅಂಟಿಸಿ ಧ್ರುವಂತ್ ನಾಮಿನೇಟ್ ಮಾಡುತ್ತಾರೆ. ನಾಮಿನೇಟ್ ಯಾಕೆ ಮಾಡಿದ್ದೇವೆ ಎಂಬುದಕ್ಕೆ ಸ್ಪರ್ಧಿಗಳು ಸೂಕ್ತ ಕಾರಣಗಳನ್ನು ಒದಗಿಸಬೇಕಾಗುತ್ತದೆ. ಧ್ರುವಂತ್ ನೀಡಿದ ಕಾರಣಗಳು ತಪ್ಪು ಎಂದು ರಘು ಹೇಳಿದ್ದಾರೆ.
ಲೀಟರ್‌ಗಟ್ಟಲೇ ಎಣ್ಣೆ ಬಳಸಿ
ರಘು ಹೇಳಿದಂತೆ ತಮ್ಮನ್ನು ತೋರಿಸಿಕೊಳ್ಳಲ್ಲ. ಜಿಮ್ ಟ್ರೈನರ್, ಜಡ್ಜ್ ಎಂದು ಹೇಳಿಕೊಂಡು ಲೀಟರ್‌ಗಟ್ಟಲೇ ಎಣ್ಣೆ ಬಳಸಿ ಅಡುಗೆ ಮಾಡ್ತಾರೆ ಎಂದು ಧ್ರುವಂತ್ ಹೇಳುತ್ತಾರೆ. ಭಾನುವಾರವೂ ಇದೇ ಕಾರಣಗಳನ್ನು ನೀಡಿದ್ದರು. ಈ ಕಾರಣಕ್ಕೆ ಕೆಂಡಾಮಂಡಲರಾದ ರಘು, ನಿನಗೆ ನಾಚಿಕೆ ಆಗಬೇಕು. ನಾನು ತಯಾರಿಸಿ ಅಡುಗೆ ಊಟ ಮಾಡಲು ನಾಚಿಕೆ ಆಗಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ನಾನು ಒಬ್ಬನೇ ಬರುತ್ತೇನೆ
ಹೊರಗಡೆ ನೀನು ಎಲ್ಲಿಗೆ ಕರೀತಿಯಾ ಅಲ್ಲಿಗೆ ನಾನು ಒಬ್ಬನೇ ಬರುತ್ತೇನೆ. ನಾನು ಒಬ್ಬನೇ ನಿನಗೆ ಸಾಕು. ಬೇರೆ ಯಾರು ಬೇಡ. ಇವತ್ತು ನಾನು ನಿನಗೆ ಚಾಲೆಂಜ್ ಹಾಕ್ತಿದ್ದೀನಿ ಎಂದು ರಘು ಸವಾಲೆಸೆಯುತ್ತಾರೆ. ಈ ಸವಾಲನ್ನು ಧ್ರುವಂತ್ ಸ್ಭೀಕರಿಸ್ತಾರಾ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಇದನ್ನೂ ಓದಿ: ನಟಿ ರಮ್ಯಾಕೃಷ್ಣನ್ ಜೊತೆಗಿನ ಡಿವೋರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ನಿರ್ದೇಶಕ ಕೃಷ್ಣವಂಶಿ
ಮಾನಸಿಕ ಧ್ರುವಂತ್
ಈ ಪ್ರೋಮೋ ನೋಡಿದ ಬಿಗ್‌ಬಾಸ್ ವೀಕ್ಷಕರು, ಮಾನಸಿಕ ಧ್ರುವಂತ್ ಆಚೆ ಕಳಿಸಿ bigboss ತುಂಬಾ ಓವರ್ ಆಗಿ ಆಡ್ತಾನೆ ಸುದೀಪ್ ಸರ್ ಎದುರಿಗೆ ಮಾತೇ ಬರಲ್ಲ ಅನ್ನೋ ಹಾಗೆ ಇರ್ತಾನೆ. ರಘು ಸುಳ್ಳು ಹೇಳೋ ಮನುಷ್ಯ ಅಲ್ಲಾ ಅವರಲ್ಲಿ ಒಂದು ಪ್ರಭುಧ್ಯತೆ ಇದೆ. ಈ ಧ್ರುವಂತ್ ಯಾಕೆ ಹೀಗೆ ಆಡ್ತಿದ್ದಾನೆ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: BBK 12: ತಳ್ಳಾಟ, ನೂಕಾಟ, ಕಿತ್ತಾಟ; ಇದು ರಕ್ಷಿತಾ ಶೆಟ್ಟಿ Vs ರಾಶಿಕಾ ಶೆಟ್ಟಿ; ಜಗಳದಲ್ಲಿ ಯಾರು ಸರಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

