MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Raksha Bandhan Wishes
Yash Toxic 2 Days Collections
MLA Vinay Kulkarni
BJP Leaders Meet Siddaramaiah
Nepal Floods Death Toll
Teachers Suspended RSS Pathsanchalan
CM DK Shivakumar
Koppal Urban Development Authority
Toxic Movie Analysis
Nepal-tibet Floods
New Financial Rules September
  • Home
  • Entertainment
  • TV Talk
  • ಆಂಕರ್ ಅನುಶ್ರೀ ಫಸ್ಟ್ ಆನಿವರ್ಸರಿ @ ಕೀನ್ಯಾ: ಕಾಡಲ್ಲಿ ಸಾಥ್ ಕೊಟ್ಟ ರೋಷನ್ ರಾಜ

ಆಂಕರ್ ಅನುಶ್ರೀ ಫಸ್ಟ್ ಆನಿವರ್ಸರಿ @ ಕೀನ್ಯಾ: ಕಾಡಲ್ಲಿ ಸಾಥ್ ಕೊಟ್ಟ ರೋಷನ್ ರಾಜ

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಹಾಗೂ ರೋಷನ್‌ ದಾಂಪತ್ಯ ಜೀವನಕ್ಕೆ ಇದೀಗ ಒಂದು ವರ್ಷ. 2025ರ ಆಗಸ್ಟ್ 28ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಇದೀಗ ಕೀನ್ಯಾದಲ್ಲಿ ವಿಶೇಷವಾಗಿ ಆಚರಿಸುತ್ತಿದ್ದಾರೆ.

2 Min read
Author : Sushma Hegde
Published : Aug 28 2026, 02:33 PM IST
Share this Photo Gallery
  • FB
  • TW
  • Linkdin
  • Whatsapp
14
ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ
Image Credit : Social Media

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಹಾಗೂ ರೋಷನ್‌ ದಾಂಪತ್ಯ ಜೀವನಕ್ಕೆ ಇದೀಗ ಒಂದು ವರ್ಷ. 2025ರ ಆಗಸ್ಟ್ 28ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಇದೀಗ ಕೀನ್ಯಾದಲ್ಲಿ ವಿಶೇಷವಾಗಿ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅನುಶ್ರೀ ಹಾಗೂ ರೋಷನ್‌ ಅವರ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.

ಕೀನ್ಯಾದಲ್ಲಿ ಮೊದಲ ವರ್ಷದ ಆನಿವರ್ಸರಿ

ಮದುವೆಯಾಗಿ ಒಂದು ವರ್ಷ ಪೂರೈಸಿರುವ ಖುಷಿಯಲ್ಲಿರುವ ಅನುಶ್ರೀ ಮತ್ತು ರೋಷನ್‌, ಈ ವಿಶೇಷ ಕ್ಷಣವನ್ನು ಕೀನ್ಯಾದಲ್ಲಿ ಕಳೆಯುತ್ತಿದ್ದಾರೆ. ಪ್ರಕೃತಿಯ ಸೊಬಗಿನ ನಡುವೆ ಇಬ್ಬರೂ ಜೊತೆಯಾಗಿ ಸಮಯ ಕಳೆಯುತ್ತಿರುವ ಕ್ಷಣಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಮೊದಲ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಇಬ್ಬರ ರೊಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನವದಂಪತಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
2025ರ ಆಗಸ್ಟ್ 28ರಂದು ಮದುವೆಯಾಗಿದ್ದರು
Image Credit : Asianet News

2025ರ ಆಗಸ್ಟ್ 28ರಂದು ಮದುವೆಯಾಗಿದ್ದರು

2025ರ ಆಗಸ್ಟ್ 28ರಂದು ಅನುಶ್ರೀ ಅವರು ಕೊಡಗು ಮೂಲದ ರೋಷನ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಬೆಳಗ್ಗೆ 10:56ರ ಶುಭ ಮುಹೂರ್ತದಲ್ಲಿ ಇವರ ವಿವಾಹ ನೆರವೇರಿತ್ತು.ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಹಲವು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದ್ದರು.

ಅಷ್ಟಕ್ಕೂ ಅನುಶ್ರೀ-ರೋಷನ್ ಮೊದಲ ಭೇಟಿ ಹೇಗಿತ್ತು?

ಅನುಶ್ರೀ ಈ ಹಿಂದೆ ತಮ್ಮ ಪ್ರೇಮಕಥೆಯ ಬಗ್ಗೆ ಮಾತನಾಡುವಾಗ ರೋಷನ್‌ ಅವರನ್ನು ಮೊದಲ ಬಾರಿ ಭೇಟಿಯಾದ ಸಂದರ್ಭವನ್ನು ಹಂಚಿಕೊಂಡಿದ್ದರು. ರೋಷನ್‌ ಮತ್ತು ಯುವ ರಾಜ್‌ಕುಮಾರ್‌ ಅವರ ಪತ್ನಿ ಶ್ರೀದೇವಿ ಕಾಲೇಜಿನಿಂದಲೂ ಆತ್ಮೀಯ ಸ್ನೇಹಿತರು. ಶ್ರೀದೇವಿ ಮೂಲಕವೇ ಅನುಶ್ರೀ ಅವರಿಗೆ ರೋಷನ್‌ ಪರಿಚಯವಾಗಿದ್ದರು. ಅವರ ಮೊದಲ ಭೇಟಿ ನಡೆದದ್ದು ಹೊಸಪೇಟೆಯಲ್ಲಿ. ಪುನೀತ ಪರ್ವ ಕಾರ್ಯಕ್ರಮದ ಸಂದರ್ಭ ಇಬ್ಬರ ಪರಿಚಯವಾಗಿತ್ತು. ಆಗ ಇಬ್ಬರ ನಡುವೆ ದೊಡ್ಡ ಮಾತುಕತೆ ಏನೂ ನಡೆದಿರಲಿಲ್ಲ. ಕೇವಲ ಹಾಯ್‌, ಬಾಯ್‌ ಅಷ್ಟೇ ಆಗಿತ್ತು. ಆ ಸಂದರ್ಭದಲ್ಲಿ ರೋಷನ್‌ ಫೋಟೋಗಳನ್ನು ಕ್ಲಿಕ್‌ ಮಾಡುತ್ತಿದ್ದರು. ಫೋಟೋಗಳು ಚೆನ್ನಾಗಿವೆ ಎಂದು ಹೇಳಿದ ಅನುಶ್ರೀ, ಅವುಗಳನ್ನು ಕಳುಹಿಸುವಂತೆ ಕೇಳಿದ್ದರಂತೆ. ರೋಷನ್‌ ನಂಬರ್ ಕೇಳಿದಾಗ ಅನುಶ್ರೀ, “ಏರ್‌ಡ್ರಾಪ್‌ನಲ್ಲಿ ಕಳಿಸಿ” ಎಂದಿದ್ದರಂತೆ. ಆಗ ರೋಷನ್‌ಗೆ ಐಫೋನ್‌ನ ಏರ್‌ಡ್ರಾಪ್‌ ಬಗ್ಗೆ ಗೊತ್ತಿರಲಿಲ್ಲವಂತೆ. ಈ ಸಣ್ಣ ಘಟನೆ ಇಬ್ಬರ ಮೊದಲ ಭೇಟಿಯ ನೆನಪಿನಲ್ಲಿ ವಿಶೇಷವಾಗಿ ಉಳಿದಿದೆ.

34
ಎರಡು ವರ್ಷ ಡೇಟಿಂಗ್… ಯಾರಿಗೂ ಗೊತ್ತಾಗಿರಲಿಲ್ಲ
Image Credit : Asianet News

ಎರಡು ವರ್ಷ ಡೇಟಿಂಗ್… ಯಾರಿಗೂ ಗೊತ್ತಾಗಿರಲಿಲ್ಲ

ಅನುಶ್ರೀ ಮತ್ತು ರೋಷನ್‌ ಸುಮಾರು ಎರಡು ವರ್ಷ ಡೇಟಿಂಗ್ ಮಾಡಿದ್ದರು ಎನ್ನಲಾಗಿದೆ. ಆದರೆ ಈ ವಿಚಾರ ಬಹುತೇಕ ಯಾರಿಗೂ ತಿಳಿದಿರಲಿಲ್ಲ. ರೋಷನ್‌ ಅನುಶ್ರೀ ಜೊತೆ ಕಾಣಿಸಿಕೊಂಡಾಗ, ಅವರನ್ನು ಕೆಲವರು ಸ್ನೇಹಿತ ಅಥವಾ ಬಾಡಿಗಾರ್ಡ್‌ ಎಂದುಕೊಂಡಿದ್ದರಂತೆ. ಹೀಗೆ ಸ್ನೇಹದಿಂದ ಆರಂಭವಾದ ಇವರ ಸಂಬಂಧ ನಿಧಾನವಾಗಿ ಪ್ರೀತಿಗೆ ತಿರುಗಿತು. ನಂತರ ಇಬ್ಬರೂ ಮದುವೆಯಾಗುವ ಬಗ್ಗೆ ಮಾತನಾಡಿಕೊಂಡು, ಕುಟುಂಬದ ಒಪ್ಪಿಗೆಯನ್ನೂ ಪಡೆದುಕೊಂಡರು.

44
ಐಟಿ ಉದ್ಯೋಗಿ ರೋಷನ್
Image Credit : Asianet News

ಐಟಿ ಉದ್ಯೋಗಿ ರೋಷನ್

ರೋಷನ್‌ ಅವರು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅನುಶ್ರೀ ಮಂಗಳೂರಿನವರು, ರೋಷನ್‌ ಕೊಡಗಿನವರು. ಪುನೀತ ಪರ್ವ ಕಾರ್ಯಕ್ರಮದಲ್ಲಿ ಆರಂಭವಾದ ಇವರ ಪರಿಚಯ ಸ್ನೇಹವಾಗಿ, ಬಳಿಕ ಪ್ರೀತಿಯಾಗಿ, ಕೊನೆಗೆ ಮದುವೆಯಾಗಿ ಬದಲಾಗಿದೆ. ಇದೀಗ ಮದುವೆಯಾಗಿ ಒಂದು ವರ್ಷ ಪೂರೈಸಿರುವ ಈ ಜೋಡಿ, ಕೀನ್ಯಾದಲ್ಲಿ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸುತ್ತಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಮೊದಲ ಭೇಟಿಯಲ್ಲಿ ನಂಬರ್ ಕೊಡದೇ ಏರ್‌ಡ್ರಾಪ್‌ ಹೇಳಿದ್ದ ಅನುಶ್ರೀ… ಎರಡು ವರ್ಷ ಯಾರಿಗೂ ಗೊತ್ತಾಗದಂತೆ ಪ್ರೀತಿಸಿ, ಇದೀಗ ಕೀನ್ಯಾದಲ್ಲಿ ಮೊದಲ ಆನಿವರ್ಸರಿ ಆಚರಿಸುತ್ತಿರುವುದು ವಿಶೇಷ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಆಂಕರ್ ಅನುಶ್ರೀ
ಟಿವಿ ಶೋ
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ

Latest Videos
Recommended Stories
Recommended image1
Amruthadhaareಯಲ್ಲಿ ಫಾರಿನ್​ ಟೂರ್​ ಹೋದ ಗೌತಮ್​, ಹೆದ್ದಾರಿ 66 ನಲ್ಲಿ ಪ್ರತ್ಯಕ್ಷ- ಏನಿದು ಹೊಸ ವೇಷ
Recommended image2
ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಡೈನಾಮಿಕ್‌ ಸ್ಟಾರ್‌ ದೇವರಾಜ್‌ ಕಿರಿಮಗ ಪ್ರಣಮ್‌, ಹುಡುಗಿ ಯಾರು?
Recommended image3
Bigg Boss Kannada: ಬಿಗ್‌ಬಾಸ್‌ಗಾಗಿ ಕೆಲಸವನ್ನೇ ಬಿಟ್ಟ ಸ್ಪರ್ಧಿ, ಬಾಸ್‌ಗೆ ಕರೆ ಮಾಡಿ ರಾಜೀನಾಮೆ ಘೋಷಿಸಿದ ಯುವತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved