BBK 13: ಬಿಗ್‌ಬಾಸ್ ಮನೆಯಲ್ಲಿಯೇ ಒಂದುಗೂಡಿತು ವಿಶ್ವ: ಹೇಗಿದೆ ಈ ಬಾರಿಯ ದೊಡ್ಮನೆ
ಕನ್ನಡದ ಬಿಗ್‌ಬಾಸ್ ಹೊಸ ಸೀಸನ್‌ಗಾಗಿ 'ಇಡೀ ಜಗತ್ತು ಒಂದು' ಎಂಬ ಕಲ್ಪನೆಯಲ್ಲಿ ಅದ್ಧೂರಿ ಮನೆ ನಿರ್ಮಾಣವಾಗಿದೆ. ಈ ಮನೆಯಲ್ಲಿ ವಿಶ್ವದ ಪ್ರಮುಖ ಸ್ಥಳಗಳ ಕಲ್ಪನೆಗಳಿದ್ದು, ವಿಶಾಲವಾದ ಕಿಚನ್ ಮತ್ತು ಕನ್ಫೆಷನ್ ರೂಮ್ ಅನ್ನು ಹೊಂದಿದೆ.

ಬಿಗ್‌ಬಾಸ್ 13ರ ವಂಡಲ್‌ಫುಲ್ ಮನೆ
ಬಿಗ್‌ಬಾಸ್ ಅನ್ನೋದೇ ಒಂದು ಜಗತ್ತು. ಈ ಜಗತ್ತಿನಲ್ಲಿ ಬೇರೆ ಬೇರೆ ಮನಸ್ಸಿನ ಜನರನ್ನು ಸ್ಪರ್ಧಿಗಳನ್ನಾಗಿ ಕಳುಹಿಸಲಾಗುತ್ತದೆ. ವೈವಿದ್ಯಮಯ ಜನರ ನಡುವೆ 100 ದಿನ ಬದುಕಿ ಗೆಲ್ಲೋ ವ್ಯಕ್ತಿಯೇ ವಿನ್ನರ್. ಇಂದಿನಿಂದ ಕನ್ನಡದ ಬಿಗ್‌ಬಾಸ್ ಸೀಸನ್ ಆರಂಭಗೊಳ್ಳಲಿದ್ದು, ಈ ಶೋಗಾಗಿ ಬೃಹತ್ ಮನೆಯೊಂದು ನಿರ್ಮಾಣವಾಗಿದೆ. ಈ ಮನೆಯಲ್ಲಿ ಏನೇನಿದೆ ಎಂದು ನೋಡೋಣ ಬನ್ನಿ.
ದೊಡ್ಮನೆಯ ವಿಡಿಯೋ
ಸೀಸನ್ 12ರ ವೇಳೆ ಕರ್ನಾಟಕದ ಸಂಸ್ಕೃತಿ ಕಲ್ಪನೆಯಲ್ಲಿ ಬಿಗ್‌ಬಾಸ್ ಮನೆ ನಿರ್ಮಾಣಗೊಂಡಿತ್ತು. ಆದ್ರೆ ಈ ಬಾರಿ ಇಡೀ ಜಗತ್ತು ಒಂದು ಎಂಬ ಕಲ್ಪನೆಯಲ್ಲಿ ಬೃಹತ್ ಮತ್ತು ಅದ್ಧೂರಿಯಾದ ಮನೆ ನಿರ್ಮಾಣಗೊಂಡಿದೆ. ದೊಡ್ಮನೆಯ ವಿಡಿಯೋ ತುಣುಕುಗಳು ಹೊರ ಬಂದಿದ್ದು, ವೀಕ್ಷಕರಲ್ಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಬಿಗ್‌ಬಾಸ್ ಮನೆ
ಬಿಗ್‌ಬಾಸ್ ಮನೆಯ ಸೆಂಟ್ರಲ್‌ನಲ್ಲಿ ವಿಶ್ವದ ಗೋಳ ಅಳವಡಿಸಲಾಗಿದೆ. ವಿಮಾನದ ಮಾದರಿಯಲ್ಲಿಯೇ ಸಿಟ್ ಔಟ್ ಏರಿಯಾದ, ಎಫೆಲ್ ಟವರ್, ಸ್ಟ್ಯಾಚು ಆಫ್ ಲಿಬರ್ಟಿ, ಯುರೋಪ್‌ನ ಮಲಾನ್ ರಾಜ್, ಡ್ರ್ಯಾಗನ್ ಸೇರಿದಂತೆ ವಿಶ್ವದ ಪ್ರಮುಖ ಸ್ಥಳಗಳ ಕಲ್ಪನೆಗಳು ಈ ಬಾರಿಯ ಬಿಗ್‌ಬಾಸ್ ಮನೆಯಲ್ಲಿರಲಿವೆ. ಹಾಗೆಯೇ ಈ ಬಾರಿ ಕನ್ಫೆಷನ್ ರೂಮ್ ಸಹ ವಿಶಾಲವಾಗಿದೆ.
ವಿಶಾಲವಾದ ಕಿಚನ್
ಬಿಗ್‌ಬಾಸ್ ಮನೆಯಲ್ಲಿ ಜಗಳಕ್ಕೆ ಕಾರಣವಾಗುವ ಸ್ಥಳ ಅಂದ್ರೆ ಅದುವೇ ಕಿಚನ್. ಅಡುಗೆ ಮಾಡುವ ಮತ್ತು ಪಾತ್ರೆ ತೊಳೆಯುವ ವಿಷಯದಲ್ಲಿಯೇ ಸ್ಪರ್ಧಿಗಳ ನಡುವಿನ ಮನಸ್ತಾಪಕ್ಕೆ ಕಾರಣವಾಗುತ್ತದೆ. ಹಾಗಾಗಿ ಈ ಬಾರಿಯೂ ಅಡುಗೆಮನೆ ವಿಶಾಲವಾಗಿ ಡಿಸೈನ್ ಮಾಡಲಾಗಿದೆ.
ಪ್ರೋಮೋ
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಿಗ್‌ಬಾಸ್ ಸುದ್ದಿಗಳು ಟ್ರೆಂಡಿಂಗ್‌ನಲ್ಲಿವೆ. ವಾಹಿನಿಯೇ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಕೆಲವರ ಹೆಸರುಗಳು ರಿವೀಲ್ ಆಗಿವೆ. ಅಗ್ನಿಪರೀಕ್ಷೆಯಲ್ಲಿ ಗೆದ್ದ ಕಾಮನ್ ಮ್ಯಾನ್‌ಗಳು ಸಹ ರಿಯಾಲಿಟಿ ಶೋನ ಭಾಗವಾಗಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

