- Home
- Entertainment
- TV Talk
- ಈ ಬಾರಿ ಹವಾ ನೆಕ್ಸ್ಟ್ ಲೆವೆಲ್‌ಗೆ ಇದೆ.. ಬಿಗ್ ಬಾಸ್ ಸೀಸನ್ 13 ಆರಂಭದಲ್ಲೇ ವಿನ್ನರ್ ಯಾರೆಂದು ಹೇಳಿದ ಜನ್ರು!
ಈ ಬಾರಿ ಹವಾ ನೆಕ್ಸ್ಟ್ ಲೆವೆಲ್‌ಗೆ ಇದೆ.. ಬಿಗ್ ಬಾಸ್ ಸೀಸನ್ 13 ಆರಂಭದಲ್ಲೇ ವಿನ್ನರ್ ಯಾರೆಂದು ಹೇಳಿದ ಜನ್ರು!
Bigg Boss Kannada Winner Prediction: ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ 'ಬಿಗ್ ಬಾಸ್' ಇಂದಿನಿಂದ ಆರಂಭವಾಗಲಿದೆ. ಆದರೆ ಶೋ ಶುರುವಾಗುವ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಈ ಬಾರಿಯ ವಿನ್ನರ್ ಯಾರು ಎಂಬ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ.
ಜೋರಾಗಿ ನಡೆಯುತ್ತಿದೆ ಚರ್ಚೆ
ಜೋರಾಗಿ ನಡೆಯುತ್ತಿದೆ ಚರ್ಚೆ
ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಇಂದಿನಿಂದ (ಸೆಪ್ಟೆಂಬರ್ 06) ಅದ್ಧೂರಿಯಾಗಿ ಚಾಲನೆ ಪಡೆಯಲಿದೆ. ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ರಿಯಾಲಿಟಿ ಶೋ ಬಗ್ಗೆ ವೀಕ್ಷಕರಲ್ಲಿ ಬೆಟ್ಟದಷ್ಟು ಕುತೂಹಲ ಮನೆ ಮಾಡಿದೆ. ಆದರೆ, ಈ ಬಾರಿ ವಿಶೇಷವೆಂದರೆ ಶೋ ಆರಂಭವಾಗುವ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಯಾರು ಗೆಲ್ಲಬಹುದು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.
ಸ್ಪರ್ಧಿಗಳು ಯಾರು?
ಸ್ಪರ್ಧಿಗಳು ಯಾರು?
ಬಿಗ್ ಬಾಸ್ ಮನೆಗೆ ಹೋಗುವ ಸ್ಪರ್ಧಿಗಳು ಯಾರು ಎಂಬ ಬಗ್ಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹರಿದಾಡುತ್ತಿದೆ. ವೀಕ್ಷಕರು ತಮ್ಮ ನೆಚ್ಚಿನ ತಾರೆಯರನ್ನು ಬಿಗ್ ಬಾಸ್ ಮನೆಯಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಸಿನಿಮಾ ಹಾಗೂ ಕಿರುತೆರೆ ನಟ-ನಟಿಯರು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಹಾಗೂ ವಿಭಿನ್ನ ರಂಗದ ಪ್ರತಿಭೆಗಳು ಈ ಬಾರಿ ಮನೆಯೊಳಗೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕುತೂಹಲಕ್ಕೆ ಸಾಕ್ಷಿ
ಕುತೂಹಲಕ್ಕೆ ಸಾಕ್ಷಿ
ಸಾಮಾನ್ಯವಾಗಿ ಬಿಗ್ ಬಾಸ್ ಆರಂಭವಾದ ಮೇಲೆ ವಾರಗಳು ಕಳೆದಂತೆ ಯಾರು ಗೆಲ್ಲಬಹುದು ಎಂಬ ಲೆಕ್ಕಾಚಾರ ಶುರುವಾಗುತ್ತದೆ. ಆದರೆ ಈ ಬಾರಿ ಹವಾ ಬೇರೆಯೇ ಇದೆ! ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಮಾಹಿತಿಯ ಪ್ರಕಾರ, ಈ ಸೀಸನ್‌ನಲ್ಲಿ ಒರ್ವ ಮಹಿಳಾ ಸ್ಪರ್ಧಿ (Female Contestant) ವಿನ್ನರ್ ಪಟ್ಟ ಅಲಂಕರಿಸಲಿದ್ದಾರೆ ಎನ್ನಲಾಗುತ್ತಿದೆ. ಇದು ಬಿಗ್ ಬಾಸ್ ಬಗ್ಗೆ ಅಭಿಮಾನಿಗಳಿಗಿರುವ ಅತಿಯಾದ ಆಸಕ್ತಿ ಮತ್ತು ಕುತೂಹಲಕ್ಕೆ ಸಾಕ್ಷಿಯಾಗಿದೆ. ಈ ಫೋಟೋದಲ್ಲಿ ನೀವು ಫ್ಯಾನ್ಸ್ ಏನೆಲ್ಲಾ ಕಾಮೆಂಟ್ಸ್ ಮಾಡಿದ್ದಾರೆ ನೋಡಬಹುದು.
ಮಿಶ್ರ ಪ್ರತಿಕ್ರಿಯೆ
ಮಿಶ್ರ ಪ್ರತಿಕ್ರಿಯೆ
"ಈ ಬಾರಿ ಮಹಿಳಾ ಸ್ಪರ್ಧಿಯೇ ಗೆಲ್ಲುತ್ತಾರೆ" ಎಂದು ಒಂದು ವರ್ಗದ ಅಭಿಮಾನಿಗಳು ಹೇಳುತ್ತಿದ್ದರೆ, ಇನ್ನೊಂದು ವರ್ಗದವರು "ಆಟ ಶುರುವಾಗುವ ಮೊದಲೇ ವಿನ್ನರ್ ಬಗ್ಗೆ ಮಾತನಾಡುವುದು ಸರಿಯಲ್ಲ, ಆಟ ನೋಡಿ ತೀರ್ಮಾನಿಸೋಣ" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ರೀತಿಯ ವಿಭಿನ್ನ ಚರ್ಚೆಗಳು ಬಿಗ್ ಬಾಸ್ ಆರಂಭಕ್ಕೂ ಮುನ್ನವೇ ಶೋಗೆ ಭರ್ಜರಿ ಪ್ರಚಾರ ತಂದುಕೊಟ್ಟಿದೆ.
ಏನೆಲ್ಲಾ ವಿಶೇಷತೆಗಳಿರಲಿವೆ?
ಏನೆಲ್ಲಾ ವಿಶೇಷತೆಗಳಿರಲಿವೆ?
ಒಟ್ಟಿನಲ್ಲಿ, ಯಾರೂ ಊಹಿಸದ ಟ್ವಿಸ್ಟ್‌ಗಳೊಂದಿಗೆ ಆರಂಭವಾಗುತ್ತಿರುವ ಈ ಬಾರಿಯ ಬಿಗ್ ಬಾಸ್ ಸೀಸನ್‌ನಲ್ಲಿ ಏನೆಲ್ಲಾ ವಿಶೇಷತೆಗಳಿರಲಿವೆ ಎಂಬುದನ್ನು ಕಾದು ನೋಡಬೇಕಿದೆ. ಅಂದಹಾಗೆ ಈ ಬಾರಿ ಸೀಸನ್ 13ರ ಅಬ್ಬರ ಶುರುವಾಗುವ ಮೊದಲೇ ಇಡೀ ದೇಶವೇ ತಿರುಗಿ ನೋಡುವಂತಹ ವಿಶೇಷ ಪ್ರೋಮೋ ಒಂದನ್ನು ವಾಹಿನಿ ಬಿಡುಗಡೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಪ್ರೋಮೋದ ವಿಶೇಷತೆಯೆಂದರೆ, ದಕ್ಷಿಣ ಭಾರತದ ನಾಲ್ಕು ಭಾಷೆಗಳ ಬಿಗ್ ಬಾಸ್ ಶೋಗಳ ಜನಪ್ರಿಯ ನಿರೂಪಕರು ಒಂದೇ ಪರದೆಯ ಮೇಲೆ ಕಾಣಿಸಿಕೊಂಡಿರುವುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

