- Home
- Life
- Travel
- ಮನೆಯಲ್ಲಿ ಸೂಪರ್, ರೈಲಿನಲ್ಲಿ ಸಪ್ಪೆ! ಟ್ರೈನ್ ಜರ್ನಿಯಲ್ಲಿ ಫುಡ್ ಟೇಸ್ಟ್ ಕಮ್ಮಿಯಾಗಲು ಅಸಲಿ ಕಾರಣಗಳಿವು!
ಮನೆಯಲ್ಲಿ ಸೂಪರ್, ರೈಲಿನಲ್ಲಿ ಸಪ್ಪೆ! ಟ್ರೈನ್ ಜರ್ನಿಯಲ್ಲಿ ಫುಡ್ ಟೇಸ್ಟ್ ಕಮ್ಮಿಯಾಗಲು ಅಸಲಿ ಕಾರಣಗಳಿವು!
Why train food tastes bad: ರೈಲಿನಲ್ಲಿ ಜರ್ನಿ ಮಾಡುವಾಗ ಮನೆ ಅಡುಗೆಯಷ್ಟು ರುಚಿ ಸಿಗಲ್ಲ ಯಾಕೆ ಅಂತ ಯಾವತ್ತಾದರೂ ಯೋಚಿಸಿದ್ದೀರಾ? ಇದಕ್ಕೆ ಕೇವಲ ಅಡುಗೆಯವರ ಕೈಚಳಕ ಮಾತ್ರ ಕಾರಣವಲ್ಲ, ಇದರ ಹಿಂದೆ ಕೆಲವು ಆಸಕ್ತಿದಾಯಕ ವೈಜ್ಞಾನಿಕ ಕಾರಣಗಳೂ ಇವೆ!
ರುಚಿ ಗುರುತಿಸುವ ಸಾಮರ್ಥ್ಯ ಕಮ್ಮಿಯಾಗುತ್ತೆ
ರುಚಿ ಗುರುತಿಸುವ ಸಾಮರ್ಥ್ಯ ಕಮ್ಮಿಯಾಗುತ್ತೆ
ರೈಲು ಪ್ರಯಾಣದ ಸಮಯದಲ್ಲಿ ನಿರಂತರವಾಗಿ ಬರುವ ಶಬ್ದಗಳು ನಮ್ಮ ಮೆದುಳಿನ ಮೇಲೆ ಪ್ರಭಾವ ಬೀರುತ್ತವೆ. ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಅತಿ ಹೆಚ್ಚು ಶಬ್ದವಿರುವ ವಾತಾವರಣದಲ್ಲಿ ಸಿಹಿ ಮತ್ತು ಉಪ್ಪಿನ ರುಚಿಯನ್ನು ಗುರುತಿಸುವ ನಮ್ಮ ಸಾಮರ್ಥ್ಯವು ಶೇಕಡ 15 ರಷ್ಟು ಕಡಿಮೆಯಾಗುತ್ತದೆ.
ಮೂಗಿನ ಪಾತ್ರ
ಮೂಗಿನ ಪಾತ್ರ
ನಾವು ಆಹಾರದ ರುಚಿಯನ್ನು ಆಸ್ವಾದಿಸುವಲ್ಲಿ ಶೇಕಡ 80 ರಷ್ಟು ಪಾತ್ರ ನಮ್ಮ ಮೂಗಿನದ್ದೇ ಇರುತ್ತದೆ. ಎಸಿ ಕೋಚ್‌ಗಳಲ್ಲಿ ಗಾಳಿಯು ತುಂಬಾ ಒಣಗಿರುತ್ತದೆ (Dry Air). ಈ ಕಡಿಮೆ ತೇವಾಂಶದ ಕಾರಣ ಮೂಗಿನೊಳಗಿನ ಶ್ಲೇಷ್ಮ ಪದರಗಳು ಒಣಗಿ ಹೋಗಿ, ಆಹಾರದ ಸುವಾಸನೆಯನ್ನು ನಾವು ಸರಿಯಾಗಿ ಆಸ್ವಾದಿಸಲು ಸಾಧ್ಯವಾಗುವುದಿಲ್ಲ.
ಎಲ್ರಿಗೂ ಅಡುಗೆ ಮಾಡ್ತಾರೆ
ಎಲ್ರಿಗೂ ಅಡುಗೆ ಮಾಡ್ತಾರೆ
ರೈಲ್ವೆ ಬೇಸ್ ಕಿಚನ್‌ಗಳಲ್ಲಿ ಪ್ರತಿದಿನ ಸಾವಿರಾರು ಪ್ರಯಾಣಿಕರಿಗಾಗಿ ಒಂದೇ ಬಾರಿಗೆ ಭಾರಿ ಪ್ರಮಾಣದಲ್ಲಿ ಆಹಾರವನ್ನು ತಯಾರಿಸಲಾಗುತ್ತದೆ. ಹೀಗೆ ಅತಿ ದೊಡ್ಡ ಪ್ರಮಾಣದಲ್ಲಿ ಅಡುಗೆ ಮಾಡುವುದರಿಂದ, ಮನೆಯಲ್ಲಿ ಮಾಡುವ ಆಹಾರದಂತೆ ಪ್ರತಿಯೊಂದು ಪದಾರ್ಥದ ಮೇಲೂ ವಿಶೇಷ ಗಮನ ಹರಿಸಲು ಸಾಧ್ಯವಾಗದೆ ರುಚಿ ಕಡಿಮೆಯಾಗುತ್ತದೆ.
ಪದೇ ಪದೇ ಬಿಸಿ ಮಾಡ್ತಾರೆ
ಪದೇ ಪದೇ ಬಿಸಿ ಮಾಡ್ತಾರೆ
ಆಹಾರವನ್ನು ಹಲವು ಗಂಟೆಗಳ ಮುಂಚಿತವಾಗಿಯೇ ಬೇಸ್ ಕಿಚನ್‌ಗಳಲ್ಲಿ ಬೇಯಿಸಿಡಲಾಗಿರುತ್ತದೆ. ನಿಮಗೆ ಕೊಡುವ ಮುನ್ನ ಅದನ್ನು ಕೇವಲ ರೀ-ಹೀಟ್ (ಮತ್ತೆ ಬಿಸಿ) ಮಾಡಲಾಗುತ್ತದೆ. ಆಹಾರವನ್ನು ಪದೇ ಪದೇ ಬಿಸಿ ಮಾಡುವುದರಿಂದ ಅದರಲ್ಲಿನ ನೈಸರ್ಗಿಕ ತೇವಾಂಶ ಮತ್ತು ಅಸಲಿ ಫ್ಲೇವರ್ ಆವಿಯಾಗಿ ಹೋಗುತ್ತದೆ.
ದೇಹದಲ್ಲಿ ಬದಲಾವಣೆ
ದೇಹದಲ್ಲಿ ಬದಲಾವಣೆ
ರೈಲುಗಳು ಎತ್ತರದ ಪ್ರದೇಶಗಳಲ್ಲಿ ಅಥವಾ ವೇಗವಾಗಿ ಚಲಿಸುವಾಗ ವಾತಾವರಣದ ಒತ್ತಡದಲ್ಲಿ ಸ್ವಲ್ಪ ಬದಲಾವಣೆಗಳು ಉಂಟಾಗುತ್ತವೆ. ಇದು ನೇರವಾಗಿ ನಮ್ಮ ದೇಹದ ಜೀರ್ಣಕ್ರಿಯೆ ಹಾಗೂ ನಾಲಿಗೆಯ ಮೇಲಿರುವ ರುಚಿ ಗ್ರಂಥಿಗಳ (Taste Buds) ಸೂಕ್ಷ್ಮತೆಯನ್ನು ಕೊಂಚ ಮಟ್ಟಿಗೆ ಕುಂಠಿತಗೊಳಿಸುತ್ತದೆ.
ಅಸಲಿ ರುಚಿ ಕೆಡುತ್ತೆ
ಅಸಲಿ ರುಚಿ ಕೆಡುತ್ತೆ
ರೈಲಿನಲ್ಲಿ ಆಹಾರವು ಚಪ್ಪೆಯಾಗಿ ಅನಿಸಬಾರದು ಎಂಬ ಉದ್ದೇಶದಿಂದ, ಕಿಚನ್‌ಗಳಲ್ಲಿ ಅಡುಗೆ ಮಾಡುವಾಗ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು, ಎಣ್ಣೆ ಅಥವಾ ಮಸಾಲೆಗಳನ್ನು ಬಳಸಲಾಗುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದಲ್ಲ, ಅಸಲಿ ರುಚಿಯನ್ನೂ ಕೆಡಿಸುತ್ತದೆ.
ತಜ್ಞರು ಹೇಳುವುದೇನು?
ತಜ್ಞರು ಹೇಳುವುದೇನು?
ಆಹಾರವನ್ನು ದೀರ್ಘಕಾಲದವರೆಗೆ ಪ್ಯಾಕ್ ಮಾಡಿ ಇಡುವುದರಿಂದ, ಮಸಾಲೆಗಳು ಹಾಗೂ ಪ್ಯಾಕಿಂಗ್ ಕಂಟೇನರ್‌ನ ಪ್ರಭಾವದಿಂದಾಗಿ ಆಹಾರವು ಒಂದು ವಿಚಿತ್ರವಾದ ಅಥವಾ ಕೃತಕವಾದ ರುಚಿಯನ್ನು ಪಡೆದುಕೊಳ್ಳುತ್ತದೆಯೇ ಹೊರತು, ತಾಜಾ ಆಹಾರದ ನೈಸರ್ಗಿಕ ರುಚಿಯನ್ನು ನೀಡುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.
ಏನ್ ಮಾಡ್ಬೇಕು?
ಏನ್ ಮಾಡ್ಬೇಕು?
ರೈಲು ಪ್ರಯಾಣದಲ್ಲಿ ಆಹಾರವು ಚೆನ್ನಾಗಿ ರುಚಿಸಬೇಕೆಂದರೆ.. ಹಣ್ಣಿನ ಚೂರುಗಳು, ನಿಂಬೆರಸ ಹಿಂಡಿದ ಅಡುಗೆಗಳು, ಅಥವಾ ಕೊಂಚ ಘಾಟಾದ ಚಟ್ನಿ/ಉಪ್ಪಿನಕಾಯಿಗಳಂತಹ ಪದಾರ್ಥಗಳನ್ನು ಜೊತೆಯಲ್ಲಿ ಕೊಂಡೊಯ್ಯುವುದು ಉತ್ತಮ. ಇದು ನಿಮ್ಮ ರುಚಿ ಗ್ರಂಥಿಗಳನ್ನು ಜಾಗೃತವಾಗಿಡುತ್ತದೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

