MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Life
  • Travel
  • 'ಹೋಟೆಲ್ ರೂಮಿನಲ್ಲಿ ಬೆಳ್ಳಗಿರೋದೆಲ್ಲಾ ಹಾಲಲ್ಲ'; ಹೊಳೆಯುವ ವಸ್ತುಗಳ ಹಿಂದಿರುವ ಅಪಾಯಗಳನ್ನು ಪರಿಶೀಲಿಸಿ!

'ಹೋಟೆಲ್ ರೂಮಿನಲ್ಲಿ ಬೆಳ್ಳಗಿರೋದೆಲ್ಲಾ ಹಾಲಲ್ಲ'; ಹೊಳೆಯುವ ವಸ್ತುಗಳ ಹಿಂದಿರುವ ಅಪಾಯಗಳನ್ನು ಪರಿಶೀಲಿಸಿ!

ಹೋಟೆಲ್ ರೂಮಿನೊಗಳಗೆ ಹೋಗುತ್ತಿದ್ದಂತೆ ಎಲ್ಲವೂ ಸ್ವಚ್ಛವಾಗಿ, ಹಾಸಿಗೆ ಬೆಳ್ಳಗೆ ಹೊಳೆಯುತ್ತಿರುತ್ತದೆ. ಆದರೆ, ಹೋಟೆಲ್ ರೂಮಿನಲ್ಲಿ ಬೆಳ್ಳಗಿರೋದೆಲ್ಲಾ ಹಾಲಲ್ಲ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಈ ವಸ್ತುಗಳ ಬಗ್ಗೆ ಎಚ್ಚರ ತಪ್ಪಿದರೆ ಅಪಾಯ ಗ್ಯಾರಂಟಿ. ಏನದು ಈ ಲೇಖನದಲ್ಲಿ ತಿಳಿಯಿರಿ.

3 Min read
Author : Sathish Kumar KH
Published : Aug 02 2026, 04:44 PM IST
Share this Photo Gallery
  • FB
  • TW
  • Linkdin
  • Whatsapp
19
Image Credit : Gemini AI

ಹೋಟೆಲ್‌ (Hotel)ಗೆ ಹೋದಾಗ ಬೆಳ್ಳಗಿರೋದೆಲ್ಲಾ ಹಾಲಲ್ಲ ಎಂಬುದನ್ನು ಜ್ಞಾಪಕ ಮಾಡಿಕೊಳ್ಳಲೇಬೇಕು. ಹೋಟೆಲ್‌ (Hotel) ಕೋಣೆಯ (Room) ಒಳಗೆ ಹೆಜ್ಜೆ ಇಡುವ ಮೊದಲೇ ನಿಮಗೆ ಫಳ-ಫಳ ಬೆಳ್ಳಗೆ ಹೊಳೆಯುವ ಬೆಡ್‌ ಕವರ್‌ (Bed Cover) ಹಾಗೂ ಅದಕ್ಕೆ ಜೋಡಿಸಿಟ್ಟ ಬೆಡ್‌ ರನ್ನರ್‌ (Bed Runner)ಗಳು ಆಕರ್ಷಿಸಬಹುದು.

ಆದರೆ ಅದಕ್ಕೂ ಮುನ್ನ ಹೆಜ್ಜೆ ಹೆಜ್ಜೆಗೂ ಇರುವ ಆರೋಗ್ಯದ (Health) ಅಪಾಯಗಳನ್ನು (Risk) ನೀವು ಗಮನಿಸಲೇಬೇಕು. ಇಲ್ಲವಾದಲ್ಲಿ ಸೋಂಕು (Infection) ಹಾಗೂ ಇತರೆ ಆರೋಗ್ಯ ಸಮಸ್ಯೆಗಳು ಕಾಡುವುದು ಗ್ಯಾರಂಟಿ. ಹಾಗಾದರೆ ಯಾವೆಲ್ಲಾ ಎಚ್ಚರಿಕೆ (Precautions) ವಹಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29
Image Credit : google

ನೀವು ಕೆಲ ಹೋಟೆಲ್‌ (Hotel) ಕೋಣೆಗಳಿಗೆ (Room) ಹೋದಾಗ ಅಲ್ಲಿನ ಸ್ನಾನಗೃಹ (Bathroom) ಅಥವಾ ಶೌಚಾಲಯ (Toilet)ವೇ ಅತ್ಯಂತ ಕೊಳಕು ಸ್ಥಳ ಎಂದು ಭಾವಿಸಬಹುದು. ಆದರೆ ಸ್ವಚ್ಛತಾ (Hygiene) ತಜ್ಞರ ಪ್ರಕಾರ, ಹೋಟೆಲ್‌ ಶೌಚಾಲಯದ ಸೀಟಿಗಿಂತಲೂ ಕೋಣೆಯಲ್ಲಿರುವ ಕೆಲವು ವಸ್ತುಗಳಲ್ಲಿ ಹೆಚ್ಚು ಸೂಕ್ಷ್ಮಜೀವಿಗಳು (Germs), ಬ್ಯಾಕ್ಟೀರಿಯಾ (Bacteria) ಹಾಗೂ ವೈರಸ್‌ಗಳು (Virus) ಇರಬಹುದು.

Related Articles

Related image1
ಹೋಟೆಲ್ ಬೆಡ್ ಮೇಲೆ ಬಿಳಿ ಹಾಸಿಗೆ ಓಕೆ, ಈ ಕಲರ್‌ಫುಲ್ ಬಟ್ಟೆ ಹಾಕೋದೇಕೆ? ನೀವೂ ತಿಳಿಯಿರಿ ಸೀಕ್ರೆಟ್ ಟ್ರಿಕ್ಸ್!
Related image2
ಹೋಟೆಲ್ ರೂಮ್ ಕ್ಲೀನ್‌ರಿಗೆ ಕಂಡಿದ್ದು ಕಾಂಡೋಮ್‌ ರಾಶಿ; 1 ಮಿಲಿಯನ್ ವ್ಯೂವ್ ಪಡೆದ ವಿಡಿಯೋ
39
Image Credit : Getty

ಬಾಗಿಲಿನ ಹಿಡಿಕೆಗಳು (Door Handles): ಮುಖ್ಯ ಬಾಗಿಲು (Main Door), ಸ್ನಾನಗೃಹದ (Bathroom) ಬಾಗಿಲು ಅಥವಾ ಕಪಾಟಿನ (Cupboard) ಹಿಡಿಕೆಗಳನ್ನು ಪ್ರತಿದಿನ ಅನೇಕ ಅತಿಥಿಗಳು (Guests) ಮುಟ್ಟುತ್ತಾರೆ. ಹೀಗಾಗಿ ಇವು ಸೂಕ್ಷ್ಮಜೀವಿಗಳ (Germs) ಸಂತಾನೋತ್ಪತ್ತಿಯ ತಾಣವಾಗಿರಬಹುದು. ಆದ್ದರಿಂದ ಕೋಣೆಗೆ (Room) ಪ್ರವೇಶಿಸಿದ ತಕ್ಷಣ ಕೈಗಳನ್ನು ಸ್ಯಾನಿಟೈಸ್‌ (Sanitize) ಮಾಡುವುದು ಉತ್ತಮ.

49
Image Credit : Chat gpt

ಲೈಟ್‌ (Light) ಮತ್ತು ಫ್ಯಾನ್‌ (Fan) ಸ್ವಿಚ್‌ಗಳು (Switches): ಅತಿಥಿಗಳು (Guests) ಕೋಣೆಗೆ (Room) ಪ್ರವೇಶಿಸಿದ ತಕ್ಷಣ ಮೊದಲು ಮುಟ್ಟುವ ವಸ್ತುಗಳೇ ಲೈಟ್‌ ಸ್ವಿಚ್‌ಗಳು (Light Switches). ಇವುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಬ್ಯಾಕ್ಟೀರಿಯಾ (Bacteria) ಮತ್ತು ವೈರಸ್‌ಗಳು (Virus) ಸುಲಭವಾಗಿ ಹರಡಬಹುದು. ಹೆಚ್ಚು ಕೊಳಕಾಗಿದ್ದರೆ ಹೋಟೆಲ್‌ ಸಿಬ್ಬಂದಿಗೆ ತಿಳಿಸಿ ಸ್ಯಾನಿಟೈಸ್‌ (Sanitize) ಮಾಡಿಸಿ.

59
Image Credit : Gemini AI

ಟಿವಿ ರಿಮೋಟ್‌ (TV Remote): ಹೋಟೆಲ್‌ (Hotel) ಕೋಣೆಗಳಲ್ಲಿ ಅತ್ಯಂತ ಹೆಚ್ಚು ಸೂಕ್ಷ್ಮಜೀವಿಗಳು (Germs) ಇರುವ ವಸ್ತುಗಳಲ್ಲಿ ಟಿವಿ ರಿಮೋಟ್‌ (TV Remote) ಪ್ರಮುಖವಾಗಿದೆ. ಬಹುತೇಕ ಅತಿಥಿಗಳು ಇದನ್ನು ಬಳಸುತ್ತಾರೆ. ಆದರೆ ಪ್ರತಿಯೊಬ್ಬ ಅತಿಥಿ (Guest) ಚೆಕ್‌ಔಟ್‌ (Check-out) ಆದ ನಂತರ ಇದನ್ನು ಸ್ಯಾನಿಟೈಸ್‌ (Sanitize) ಮಾಡಲಾಗುತ್ತದೆ ಎಂಬ ಖಾತರಿ ಇರುವುದಿಲ್ಲ.

69
Image Credit : ChatGPT

ಕಾಫಿ ಮೇಕರ್‌ (Coffee Maker) ಅಥವಾ ಕೆಟಲ್‌ (Kettle): ಹೋಟೆಲ್‌ ಕೋಣೆಯಲ್ಲಿರುವ ಕೆಟಲ್‌ (Kettle) ಅಥವಾ ಕಾಫಿ ಮೇಕರ್‌ (Coffee Maker) ಬಳಸುವ ಮೊದಲು ಅವುಗಳನ್ನು ಚೆನ್ನಾಗಿ ತೊಳೆಯುವುದು ಉತ್ತಮ. ಕಪ್‌ (Cup) ಮತ್ತು ಗ್ಲಾಸ್‌ (Glass)‌ಗಳಂತೆ ಇವುಗಳನ್ನು ಪ್ರತಿಸಾರಿ ಡೀಪ್‌ ಕ್ಲೀನ್‌ (Deep Clean) ಮಾಡದೇ ಇರಬಹುದು. ಸ್ವಚ್ಛಗೊಳಿಸದೇ ಬಳಸಿದರೆ ಆರೋಗ್ಯ (Health) ಸಮಸ್ಯೆಗಳು ಎದುರಾಗಬಹುದು.

ಇದನ್ನೂ ಓದಿ: ಹೋಟೆಲ್ ರೂಂಗೆ ಹೋದ್ಮೇಲೆ ಬೆಡ್ ಕೆಳಗೆ ವಾಟರ್ ಬಾಟಲ್ ಎಸೆಯಿರಿ! ಶೇ.99 ರಷ್ಟು ಜನ್ರು ಈ ಸುರಕ್ಷತಾ ಟ್ರಿಕ್ ಮರಿತಾರೆ

79
Image Credit : stockPhoto

ಬೆಡ್‌ ರನ್ನರ್‌ಗಳು (Bed Runners) ಮತ್ತು ದಿಂಬುಗಳು (Pillows): ಹೋಟೆಲ್‌ (Hotel) ರೂಮ್‌ (Room)ಗಳಲ್ಲಿ ಪ್ರತಿ ಅತಿಥಿ (Guest) ಚೆಕ್‌ಔಟ್‌ (Check-out) ಆದ ನಂತರ ಬಿಳಿ ಬೆಡ್‌ಶೀಟ್‌ (Bed Sheet) ಮಾತ್ರ ಬದಲಿಸಲಾಗುತ್ತದೆ. ಆದರೆ ಅಲಂಕಾರಿಕ ದಿಂಬುಗಳು (Decorative Pillows) ಮತ್ತು ಬೆಡ್‌ ರನ್ನರ್‌ಗಳು (Bed Runners) ಪ್ರತಿಬಾರಿಯೂ ತೊಳೆಯಲಾಗುವುದಿಲ್ಲ. ಆದ್ದರಿಂದ ಇವುಗಳನ್ನು ಬಳಸುವಾಗ ಎಚ್ಚರಿಕೆ ವಹಿಸಿ ಹಾಗೂ ಸ್ವಚ್ಛತೆಗೆ (Hygiene) ಆದ್ಯತೆ ನೀಡಿ.

89
Image Credit : Grok AI

ಸ್ನಾನಗೃಹದ (Bathroom) ಸೋಪು (Soap) ಇಡುವ ಜಾಗಗಳು: ಸ್ನಾನಗೃಹ (Bathroom) ಹಾಗೂ ಶೌಚಾಲಯದ (Toilet) ಹೆಚ್ಚಿನ ಭಾಗಗಳನ್ನು ಸ್ಯಾನಿಟೈಸ್‌ (Sanitize) ಮಾಡಲಾಗುತ್ತದೆ. ಆದರೆ ಸೋಪು (Soap), ಶಾಂಪೂ (Shampoo) ಹಾಗೂ ಮೇಕಪ್‌ (Makeup) ಸಾಮಗ್ರಿಗಳನ್ನು ಇಡುವ ಸ್ಥಳಗಳು ಹೆಚ್ಚು ಕೊಳಕಾಗಿರುವ ಸಾಧ್ಯತೆ ಇರುತ್ತದೆ. ಅನೇಕ ಅತಿಥಿಗಳು (Guests) ತಮ್ಮ ವೈಯಕ್ತಿಕ ವಸ್ತುಗಳನ್ನು (Personal Items) ಅಲ್ಲಿಯೇ ಇಡುವುದರಿಂದ ಈ ಭಾಗಗಳಲ್ಲಿ ಸೂಕ್ಷ್ಮಜೀವಿಗಳು (Germs) ಹೆಚ್ಚಿರಬಹುದು.

99
Image Credit : AI Image

ನೀವು ಯಾವಾಗಲೂ ಹೋಟೆಲ್‌ (Hotel)ನಲ್ಲಿ ಉಳಿಯುವಾಗ ಆರೋಗ್ಯಕ್ಕೆ (Health) ಮೊದಲ ಆದ್ಯತೆ ನೀಡಿ. ಕೋಣೆಗೆ (Room) ಹೋದ ತಕ್ಷಣ ಹಾಸಿಗೆ (Bed), ಮ್ಯಾಟ್ರೆಸ್‌ (Mattress) ಸೀಮ್‌ಗಳು (Seams), ಹೆಡ್‌ಬೋರ್ಡ್‌ (Headboard) ಹಾಗೂ ನೈಟ್‌ಸ್ಟ್ಯಾಂಡ್‌ (Nightstand) ಸುತ್ತಮುತ್ತ ಬೆಡ್‌ ಬಗ್ಸ್‌ (Bed Bugs) ಅಥವಾ ಹಾಸಿಗೆ ಹುಳುಗಳು ಇದೆಯೇ ಎಂದು ಪರಿಶೀಲಿಸಿ. ಕಪ್ಪು ಚುಕ್ಕೆಗಳು, ಹಳದಿ ಬಣ್ಣದ ಚರ್ಮದ ಅವಶೇಷಗಳು ಅಥವಾ ಸಣ್ಣ ಕೆಂಪು-ಕಂದು ಬಣ್ಣದ ಹುಳುಗಳು ಕಂಡುಬಂದರೆ ತಕ್ಷಣ ಹೋಟೆಲ್‌ ಸಿಬ್ಬಂದಿಗೆ ತಿಳಿಸಿ ಕೋಣೆಯನ್ನು (Room) ಬದಲಾಯಿಸಲು ಅಥವಾ ಸ್ವಚ್ಛಗೊಳಿಸಲು (Cleaning) ಸೂಚಿಸಿ. ಇದರಿಂದ ಚರ್ಮದ ಸೋಂಕು (Skin Infection) ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಹೋಟೆಲ್‌ಗಳು
ಪ್ರವಾಸ
ಜೀವನಶೈಲಿ

Latest Videos
Recommended Stories
Recommended image1
ವಂದೇ ಭಾರತ್ Vs ಅಮೃತ್ ಭಾರತ್ ಎಕ್ಸ್‌ಪ್ರೆಸ್.. ಎರಡರ ನಡುವಿನ ವ್ಯತ್ಯಾಸಗಳೇನು? ಇವೆರೆಡರಲ್ಲಿ ಯಾವುದು ಬೆಸ್ಟ್?
Recommended image2
ಸಾಯುವ ಮುನ್ನ ಒಮ್ಮೆಯಾದರೂ ಸ್ವರ್ಗ ನೋಡಬೇಕು ಅಂದ್ರೆ ಇಲ್ಲಿಗೆ ಬನ್ನಿ! ಹಿಮಾಲಯದ ಮಡಿಲಲ್ಲಿದೆ ಈ ಅದ್ಭುತ ತಾಣ
Recommended image3
ಫ್ಲೈಟ್ ಟೇಕಾಫ್ ಆದ ತಕ್ಷಣ ಕಿವಿ ಯಾಕೆ ಬಂದ್ ಆಗುತ್ತೆ? ENT ವೈದ್ಯರು ಬಿಚ್ಚಿಟ್ರು ಅಸಲಿ ಕಾರಣ
Related Stories
Recommended image1
ಹೋಟೆಲ್ ಬೆಡ್ ಮೇಲೆ ಬಿಳಿ ಹಾಸಿಗೆ ಓಕೆ, ಈ ಕಲರ್‌ಫುಲ್ ಬಟ್ಟೆ ಹಾಕೋದೇಕೆ? ನೀವೂ ತಿಳಿಯಿರಿ ಸೀಕ್ರೆಟ್ ಟ್ರಿಕ್ಸ್!
Recommended image2
ಹೋಟೆಲ್ ರೂಮ್ ಕ್ಲೀನ್‌ರಿಗೆ ಕಂಡಿದ್ದು ಕಾಂಡೋಮ್‌ ರಾಶಿ; 1 ಮಿಲಿಯನ್ ವ್ಯೂವ್ ಪಡೆದ ವಿಡಿಯೋ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved