- Home
- Life
- Travel
- Forbidden Places: ಭಾರತದಲ್ಲಿವೆ 5 ನಿಗೂಢ ಸ್ಥಳಗಳು.. ಕೋಟಿ ಕೊಟ್ಟರೂ ಇಲ್ಲಿಗೆ ಹೋಗೋಕೆ ಆಗಲ್ಲ.. ಯಾಕೆ?
Forbidden Places: ಭಾರತದಲ್ಲಿವೆ 5 ನಿಗೂಢ ಸ್ಥಳಗಳು.. ಕೋಟಿ ಕೊಟ್ಟರೂ ಇಲ್ಲಿಗೆ ಹೋಗೋಕೆ ಆಗಲ್ಲ.. ಯಾಕೆ?
Forbidden Places in India: ದುಡ್ಡಿದ್ದರೆ ಏನು ಬೇಕಿದ್ರೂ ಮಾಡಬಹುದು ಅಂತಾರೆ. ಭಾರತದಲ್ಲಿ ಎಷ್ಟೇ ಕೋಟಿ ರೂಪಾಯಿ ಕೊಟ್ಟರೂ ಜನರಿಗೆ ಪ್ರವೇಶಿಸಲಾಗದ 5 ನಿಷೇಧಿತ ಸ್ಥಳಗಳಿವೆ. ಈ ನಿಗೂಢ ತಾಣಗಳ ಬಗ್ಗೆ ಈ ಫೋಟೋ ಗ್ಯಾಲರಿಯಲ್ಲಿ ವಿವರವಾಗಿ ನೋಡೋಣ.

ಭಾರತದಲ್ಲಿರುವ 5 ನಿಷೇಧಿತ, ನಿಗೂಢ ಸ್ಥಳಗಳು
ನಮ್ಮ ಭಾರತ ಹಲವು ಭಾಷೆ, ಧರ್ಮ, ಸಂಸ್ಕೃತಿಗಳ ಸಂಗಮ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುಂದರ ಪ್ರವಾಸಿ ತಾಣಗಳಿವೆ. ಆದರೆ, ಕೋಟಿಗಟ್ಟಲೆ ಹಣ ಕೊಟ್ಟರೂ ಪ್ರವೇಶಿಸಲಾಗದ 5 ನಿಷೇಧಿತ ಸ್ಥಳಗಳೂ ಇಲ್ಲಿವೆ.
ಉತ್ತರ ಸೆಂಟಿನೆಲ್ ದ್ವೀಪ
ಅಂಡಮಾನ್ ಮತ್ತು ನಿಕೋಬಾರ್‌ನ ಉತ್ತರ ಸೆಂಟಿನೆಲ್ ದ್ವೀಪ ಇದು. ಇಲ್ಲಿ ಸೆಂಟಿನೆಲೀಸ್ ಎಂಬ ಬುಡಕಟ್ಟು ಜನಾಂಗ ವಾಸಿಸುತ್ತಿದೆ. ಸುಮಾರು 60 ಚದರ ಕಿ.ಮೀ ವಿಸ್ತೀರ್ಣದ ಈ ದ್ವೀಪಕ್ಕೆ ಇವರೇ ರಾಜರು. ಹೊರಗಿನ ಪ್ರಪಂಚದ ಸಂಪರ್ಕವಿಲ್ಲದೆ ಇವರು ಬದುಕುತ್ತಾರೆ.
ಈ ಜನರನ್ನು ರಕ್ಷಿಸಲು ಮತ್ತು ಅವರಿಗೆ ಸೋಂಕು ತಗುಲದಂತೆ ತಡೆಯಲು ಭಾರತ ಸರ್ಕಾರ ಇಲ್ಲಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ. 2018ರಲ್ಲಿ ಇಲ್ಲಿಗೆ ಹೋದ ಅಮೆರಿಕದ 26 ವರ್ಷದ ಜಾನ್ ಚೌ ಎಂಬುವವರನ್ನು ಈ ಬುಡಕಟ್ಟು ಜನಾಂಗದವರು ಕೊಂದಿದ್ದರು.
ಪ್ಯಾಂಗೊಂಗ್ ತ್ಸೋ ಸರೋವರ (Pangong Tso)
ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಪ್ಯಾಂಗೊಂಗ್ ತ್ಸೋ ಸರೋವರವಿದೆ. ಲೇಹ್‌ನಿಂದ ಚೀನಾ ಗಡಿಯವರೆಗೆ ಇದು ಹರಡಿಕೊಂಡಿದೆ. ಹಿಮಾಲಯದ ತಪ್ಪಲಿನಲ್ಲಿರುವ ಈ ಸುಂದರ ಸರೋವರವನ್ನು ನೋಡಲು ಎಲ್ಲರಿಗೂ ಅನುಮತಿ ಇಲ್ಲ.
ಇದರ ಕೆಲವು ಭಾಗಗಳು ಚೀನಾ ಗಡಿಗೆ ತೀರಾ ಹತ್ತಿರದಲ್ಲಿರುವುದರಿಂದ, ಭದ್ರತಾ ಕಾರಣಗಳಿಗಾಗಿ ಜನರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಬಾಬಾ ಅಣು ಸಂಶೋಧನಾ ಕೇಂದ್ರ (BARC)
ಮುಂಬೈನಲ್ಲಿರುವ ಬಾಬಾ ಅಣು ಸಂಶೋಧನಾ ಕೇಂದ್ರ (BARC) ಭಾರತದ ಪ್ರಮುಖ ಪರಮಾಣು ಸಂಶೋಧನಾ ಕೇಂದ್ರವಾಗಿದೆ. ಇದು ಪರಮಾಣು ಶಕ್ತಿ ಇಲಾಖೆ (DAE) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಇಲ್ಲಿ ನಡೆಯುವ ಸಂಶೋಧನೆಗಳು ಅತ್ಯಂತ ರಹಸ್ಯವಾಗಿರುತ್ತವೆ. ಹೀಗಾಗಿ, ಭದ್ರತಾ ಕಾರಣಗಳಿಗಾಗಿ ಸಾರ್ವಜನಿಕರಿಗೆ ಇಲ್ಲಿ ಪ್ರವೇಶವಿಲ್ಲ. ಪೂರ್ವಾನುಮತಿ ಪಡೆದ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.
ಭಾನ್‌ಗಢ ಕೋಟೆ (Bhangarh Fort)
ರಾಜಸ್ಥಾನದಲ್ಲಿರುವ ಭಾನ್‌ಗಢ ಕೋಟೆಗೆ ಹಗಲಿನಲ್ಲಿ ಪ್ರವಾಸಿಗರು ಹೋಗಬಹುದು. ಆದರೆ, ರಾತ್ರಿ ವೇಳೆ ಇಲ್ಲಿಗೆ ಹೋಗುವುದನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಅಧಿಕೃತವಾಗಿ ನಿಷೇಧಿಸಿದೆ. ಇಲ್ಲಿ ದೆವ್ವಗಳ ಕಾಟವಿದೆ, ರಾತ್ರಿ ಹೋದವರು ವಾಪಸ್ ಬಂದಿಲ್ಲ ಎಂಬ ಕಥೆಗಳು ಇಲ್ಲಿ ಪ್ರಚಲಿತದಲ್ಲಿವೆ.
ಇದಲ್ಲದೆ, ಲಡಾಖ್ ಗಡಿಯಲ್ಲಿರುವ ಅಕ್ಸಾಯ್ ಚಿನ್ ಕೂಡ ನಿಷೇಧಿತ ಪ್ರದೇಶ. ಇದು ಭಾರತ ಮತ್ತು ಚೀನಾ ನಡುವಿನ ವಿವಾದಿತ ಗಡಿ ಪ್ರದೇಶವಾಗಿದ್ದು, ಸೇನಾ ವಲಯವಾಗಿರುವುದರಿಂದ ಸಾರ್ವಜನಿಕರಿಗೆ ಪ್ರವೇಶವಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

