ಫ್ಯಾಷನ್ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಸಾಮಾಜಿಕ ಮಾಧ್ಯಮದ ಪ್ರಭಾವಿಗಳಾದ ಓರ್ರಿ ಮತ್ತು ಶೆರ್ರಿಸೋನಿ, ಜೀವಂತ ಕೋಳಿಮರಿ ಮತ್ತು ಇಲಿಗಳಿಂದ ಮಾಡಿದ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ವಿಚಿತ್ರ ಫ್ಯಾಷನ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹಂಗಾಮಾ ಸೃಷ್ಟಿಸಿವೆ.
ಫ್ಯಾಷನ್ ಎನ್ನೋದು ಪ್ರತಿದಿನವೂ ಪ್ರತಿ ಕ್ಷಣವೂ ಬದಲಾಗುತ್ತಲೇ ಇರುತ್ತದೆ. ಮೈತುಂಬಾ ಬಟ್ಟೆ ಬಿಟ್ಟು ದೇಹದ ಎಲ್ಲಾ ಅಂಗಾಂಗಗಳನ್ನು ಧಾರಾಳವಾಗಿ ಪ್ರದರ್ಶಿಸುವ ಡ್ರೆಸ್ಗಳ ವರೆಗೆ ಎಲ್ಲವೂ ಈಗ ಮಾಮೂಲಿ ಆಗಿಬಿಟ್ಟಿವೆ. ಲೇಟೆಸ್ಟ್ ಡಿಸೈನ್ಗಾಗಿ ಹಂಬಲಿಸುವ ದೊಡ್ಡ ವರ್ಗವೇ ಇದೆ. ಅದರಲ್ಲಿಯೂ ಸೆಲೆಬ್ರಿಟಿಗಳು ಎಂದ ಮೇಲೆ ಕೇಳಬೇಕೆ? ಇಲ್ಲಿಯವರೆಗೆ ಅರೆಬರೆ ಡ್ರೆಸ್ ಹಾಕಿಕೊಂಡು ನಟಿಯರು ಫೇಮಸ್ ಆಗುತ್ತಿದ್ದರು. ಆದರೆ ಇದೀಗ ಸೋಷಿಯಲ್ ಮೀಡಿಯಾ ಈ ಪರಿಯಲ್ಲಿ ಬೆಳೆದ ಕಾರಣದಿಂದ ಸಾಮಾನ್ಯ ಜನರೂ ಬಲುಬೇಗನೇ ಫೇಮಸ್ ಆಗಲು, ಟ್ರೋಲ್ ಮೂಲಕವೇ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಯಾವುದೇ ಡ್ರೆಸ್ ಹಾಕಿಕೊಳ್ಳಲೂ ಹೇಸುತ್ತಿಲ್ಲ. ಬಟ್ಟೆಗಳ ಮೂಲವೇ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಲೇ, ಕುಖ್ಯಾತಿಯನ್ನು ಗಳಿಸಿ ರಿಯಾಲಿಟಿ ಷೋಗಳಲ್ಲಿ ಛಾನ್ಸ್ ಗಿಟ್ಟಿಸಿಕೊಳ್ಳುತ್ತಿರುವವರು ಎಷ್ಟುಮಂದಿ ಇಲ್ಲ ಹೇಳಿ.
ಹೊಸ ಫ್ಯಾಷನ್
ಇದೇ ಕಾರಣಕ್ಕೆ, ಇದೀಗ ಹೊಸ ಫ್ಯಾಷನ್ ಕಂಡುಹಿಡಿದು ಫೇಮಸ್ ಆಗಲು ಬಯಸುವವರು ಹಲವರು. ಅಂಥದ್ದೇ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅವುಗಳಲ್ಲಿ ಗಮನ ಸೆಳೆದಿದ್ದು ಕೋಳಿ ಮರಿ ಮತ್ತು ಇಲಿಗಳ ವಿಡಿಯೋ. ಇವು ಎಐ ವಿಡಿಯೋದಂತೆ ಕಂಡರೂ ಇದರ ಅಸಲಿಯತ್ತು ಏನೆಂದು ಅವರೇ ಹೇಳಬೇಕಿದೆ.
ಜೀವಂತ ಇಲಿ, ಕೋಳಿಮರಿ
ಬಾಲಿವುಡ್ ಸೆಲೆಬ್ರಿಟಿಗಳ ಅದೃಷ್ಟ ಮನುಷ್ಯ ಎಂದೇ ಕರೆಸಿಕೊಳ್ಳುವ ಸಾಮಾಜಿಕ ಮಾಧ್ಯಮ ಪ್ರಭಾವಿ ಓರ್ರಿ (ಓರ್ಹಾನ್ ಅವತ್ರಮಣಿ -Orhan Awatramani) ಕೋಳಿಮರಿಯ ಡ್ರೆಸ್ ಹಾಕಿಕೊಂಡಿದ್ದರೆ, ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಶೆರ್ರಿಸೋನಿ ಅವರು ಜೀವಂತ ಇಲಿಗಳ ಡ್ರೆಸ್ ಹಾಕಿಕೊಂಡಿದ್ದಾರೆ. ಇದನ್ನು ಕೂಡ ಡಿಸೈನ್ ಮಾಡಿರುವುದು ಓರ್ರಿ ಎಂದೇ ಹೇಳಿದ್ದಾರೆ ಶೆರ್ರಿಸೋನಿ. ಇದರ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಹಂಗಾಮಾ ಸೃಷ್ಟಿಸಿದೆ. ಕೆಲವರು ಇವುಗಳ ಜೀವಂತ ಅಲ್ಲ, ಬದಲಿಗೆ ಏನೋ ಟೆಕ್ನಿಕ್ ಬಳಸಿ ಮಾಡಲಾಗಿದೆ ಎಂದೂ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಇದನ್ನು ನೋಡಿದ್ರೆ ಮೈ ಝುಂ ಎನ್ನುವುದಂತೂ ಗ್ಯಾರೆಂಟಿ ಓರಿ ಅವರು ಇವುಗಳೆಲ್ಲಾ ರಕ್ಷಣೆಗೆ ಒಳಗಾಗಿರುವ ಪಕ್ಷಿಗಳು ಎಂದಿದ್ದಾರೆ.
ಯಾರೀ ಓರ್ರಿ?
ಇನ್ನು ಈ ಓರ್ರಿ ಬಗ್ಗೆ ಸೆಲೆಬ್ರಿಟಿಗಳಿಗೆ ಏನೋ ಒಂದು ಆಕರ್ಷಣೆ. ವಿಭಿನ್ನ ಡ್ರೆಸ್ಸಿಂಗ್, ವಾಕಿಂಗ್, ಮ್ಯಾನರಿಸಂ ಮೂಲಕ ಗಮನ ಸೆಳೆಯುತ್ತಾರೆ ಇವರು. ಎಲ್ಲಾ ನಟಿಯರಿಗೂ ಇವರು ಬೇಕು. ಜೊತೆ ಆ ಪೋಸ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ತನ್ನ ಜೊತೆ ಫೋಟೋ ತೆಗಿಸಿಕೊಳ್ಳುವವರ ಎದೆಯ ಮೇಲೆ ಕೈಯಿಟ್ಟು ತೆಗೆಯುವ ಪೋಸ್, ಈ ಪೋಸ್ ಫೋಟೋಗೆ ಇವರಿಗೆ ಸಿಗುವ ಹಣ 30 ಲಕ್ಷ! Orhan Awatramani ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ರಿಲೆಯನ್ಸ್ ಇಂಡೆಸ್ಟ್ರಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತದೆ. ಇಷ್ಟು ದಿನ ನಟಿಯರು ಹಾಗೂ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳ ಜೊತೆ ಕಾಣಿಸಿಕೊಂಡಿದ್ದರೆ, ಈಗ ಈ ರೀತಿ ಕಾಣಿಸಿಕೊಳ್ಳುತ್ತಿದ್ದಾರೆ.


