ಕಪ್ಪು ಸೀರೆಯಲ್ಲಿ ಹಾಲಿನಂತೆ ಹೊಳೆಯುತಿದೆ ಮಿಲ್ಕಿ ಬ್ಯೂಟಿ ಅಂದ: ಆಶಿಕಾ ರಂಗನಾಥ್ ಸೆಕ್ಸಿ ಲುಕ್ಗೆ ಪಡ್ಡೆಹೈಕ್ಳು ಫಿದಾ!
ಸ್ಯಾಂಡಲ್ವುಡ್ನ ಮುಗುಳುನಗೆಯ ಬೆಡಗಿ ನಟಿ ಅಶಿಕಾ ರಂಗನಾಥ್ ಇತ್ತೀಚೆಗಷ್ಟೇ ಸಹೋದರಿಯ ಮದುವೆಯ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದ ಬಳಿಕ ಇದೀಗ ಹೊಸ ಫೋಟೋಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಚಂದನವನದ ಬೆಡಗಿ ಆಶಿಕಾ ರಂಗನಾಥ್ ಸುಂದರವಾದ ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಸ್ಯಾರಿಯುಟ್ಟು ವಿತ್ ಸ್ಲೀವ್ಲೆಸ್ ಬ್ಲೌಸ್ ಧರಿಸಿಕೊಂಡು, ಫೋಟೋಶೂಟ್ನಲ್ಲಿ ವಿಭಿನ್ನವಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಮದಗಜನ ಸುಂದರಿ ಅಶಿಕಾ ಡೀಪ್ ಬ್ರಾಡ್ ನೆಕ್ ಬ್ಲೌಸ್ ಧರಿಸಿಕೊಂಡು ಆಕರ್ಷಕವಾಗಿ ಕಣ್ಣಿಗೆ ಬೀಳುವುದರ ಜೊತೆಗೆ, ತುಂಬಾ ಸಿಂಪಲ್ ಮೇಕಪ್ ಹಾಗೂ ಸಖತ್ ಆಗಿ ಹೇರ್ಸ್ಟೈಲ್ ಮಾಡಿಕೊಂಡು ಪೋಸ್ ನೀಡಿದ್ದಾರೆ.
ನಟಿ ಆಶಿಕಾ ಫೋಟೋದಲ್ಲಿ ಆಕರ್ಷಕವಾದ ನೆಕ್ಲೆಸ್ ಧರಿಸಿ ಪೋಸ್ ಕೊಟ್ಟಿದ್ದು, ಹಾಗೆಯೇ ಆಕೆಯ ಕೈನಲ್ಲಿದ್ದ ಮೆಹಂದಿ ರಂಗು ಸುಂದರವಾಗಿ ಮೂಡಿದ್ದರಿಂದ, ಈ ನಟಿ ಇನ್ನಷ್ಟು ಕ್ಯೂಟ್ ಆಗಿ ಕಾಣಿಸಿದ್ದಾರೆ.
ಆಶಿಕಾ ರಂಗನಾಥ್ ಮುದ್ದಾಗಿ ಕೈತುಂಬಾ ಮೆಹಂದಿ ಹಚ್ಚಿ ಹಾಗೆಯೇ ಸೊಂಟದ ಮೇಲೆ ಕೈ ಇಟ್ಟುಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಸದ್ಯ ಈ ನಟಿಯ ಲುಕ್ ಫ್ಯಾನ್ಸ್ಗೆ ಸಖತ್ ಇಷ್ಟವಾಗಿದೆ.
ಆಶಿಕಾ ಫೋಟೋಶೂಟ್ಗಾಗಿ ಮಾಡಿಸಿದ ನ್ಯೂಡ್ ಮೇಕಪ್ ಗಮನ ಸೆಳೆದುದ್ದು ಮಾತ್ರವಲ್ಲದೆ, ಆಕೆಯ ಲಿಪ್ಸ್ಟಿಕ್ ಕಲರ್ ಕೂಡಾ ಆಕರ್ಷಕವಾಗಿತ್ತು. ಈ ಲುಕ್ ಸಹ ಆಶಿಕಾರನ್ನು ಸಖತ್ ಕ್ಯೂಟ್ ಆಗಿ ಕಾಣುವಂತೆ ಮಾಡಿತ್ತು.
ಕ್ರೇಜಿ ಹುಡುಗಿ ಅಶಿಕಾ ರಂಗನಾಥ್ ಸೀರೆ ಧರಿಸಿಕೊಂಡು ಮುದ್ದಾಗಿ ಫೋಟೋಗೆ ಪೋಸ್ ಕೊಡುವುದು ಮಾತ್ರವಲ್ಲದೆ, ಬ್ಲ್ಯಾಕ್ ಆಂಡ್ ವೈಟ್ ಫೋಟೋದಲ್ಲಿಯೂ ಮುದ್ದಾಗಿ ಕಾಣಿಸಿದ್ದಾರೆ. ಹಾಗೆಯೇ ಕಲರ್ ಫೋಟೋ ಕೂಡಾ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ನಟಿ ಅಶಿಕಾಳ ಫೋಟೋಸ್ ಸದ್ಯ ವೈರಲ್ ಆಗಿದ್ದು, ಫೋಟೋಗೆ ಎರಡೂ ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಹಾಗೆಯೇ ನೆಟ್ಟಿಗರೂ ನಟಿಯ ಈ ಸೀರೆಯ ಲುಕ್ ನೋಡಿ ತರೇಹವಾರಿ ಕಾಮೆಂಟ್ ಮಾಡಿದ್ದಾರೆ.
ಆಶಿಕಾ ಫೋಟೋಗಳಿಗೆ ಕಮೆಂಟ್ ವಿಭಾಗದಲ್ಲಿ ಸಾಕಷ್ಟು ಅಭಿಮಾನಿಗಳು ಹಾರ್ಟ್ ಸಿಂಬಲ್ ಹಾಗೂ ಕೆಲವರು ದೇವತೆಯಂತೆ ಕಾಣ್ತಾಯಿದ್ದೀರಾ, ಬ್ಯೂಟಿಫುಲ್, ಹಾಟ್ ಆಗಿ ಕಾಣ್ತೀರಾ ಅಂತ ಬರೆದರೆ, ಮತ್ತೆ ಇನ್ನೊಬ್ಬರು ನೀವು ಶ್ರೀ ಲೀಲಾ ಆದಂಗೆ ಆಗ್ಬೇಡಿ ಎಂದು ಕಮೆಂಟ್ ಮಾಡಿದ್ದಾರೆ.