MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Duleep Trophy Final
Today's Horoscope in Kannada
Mantralaya Online Scam
Hubballi Ganeshotsava
Kalaburagi Drought List
Pitru Paksha 2026 Date
PM Modi Meeting
Karnataka Farmers
Gulbarga Bus Accident
Western Ghats ESA
Karnataka Taxi Fare Meter
Bigg Boss Kannada 13
  • Home
  • Life
  • Relationship
  • ಪತಿಯ ಜೊತೆ ವಿದೇಶ ಸುತ್ತಾಟ: ವಾರ್ಷಿಕೋತ್ಸವ ಸಂಭ್ರಮದಲ್ಲಿ Anchor Anushree- ಕ್ಯೂಟ್​ ಫೋಟೋಸ್​​ ವೈರಲ್​

ಪತಿಯ ಜೊತೆ ವಿದೇಶ ಸುತ್ತಾಟ: ವಾರ್ಷಿಕೋತ್ಸವ ಸಂಭ್ರಮದಲ್ಲಿ Anchor Anushree- ಕ್ಯೂಟ್​ ಫೋಟೋಸ್​​ ವೈರಲ್​

ಆ್ಯಂಕರಿಂಗ್ ಕ್ಷೇತ್ರದಲ್ಲಿ 20 ವರ್ಷ ಪೂರೈಸಿರುವ ಅನುಶ್ರೀ, ಇದೀಗ ಪತಿ ರೋಷನ್ ಜೊತೆ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸುತ್ತಿದ್ದಾರೆ. ಗಗನಸಖಿಯಾಗುವ ಕನಸು ಕಂಡಿದ್ದ ಅವರು, ತಮ್ಮ ಹಿಂದಿನ ಕಷ್ಟದ ದಿನಗಳನ್ನು ಮರೆತು, ಪತಿಯೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ.

2 Min read
Author : Suchethana D
Published : Sep 02 2026, 07:20 PM IST
Share this Photo Gallery
  • FB
  • TW
  • Linkdin
  • Whatsapp
16
ಆ್ಯಂಕರಿಂಗ್​ ಕ್ಷೇತ್ರದ ತಾರೆ
Image Credit : Anchor Anushree Instagram

ಆ್ಯಂಕರಿಂಗ್​ ಕ್ಷೇತ್ರದ ತಾರೆ

ಪಟಪಟ ಎಂದು ಮಾತನಾಡುತ್ತಾ, ವೇದಿಕೆಯ ಮೇಲೆ ಆ ಸನ್ನಿವೇಶಕ್ಕೆ ತಕ್ಕಂತೆ ಆ ವಿಷಯವನ್ನು ಹೇಳುತ್ತಾ, ಸದಾ ಎಲ್ಲರನ್ನೂ ನಕ್ಕು ನಗಿಸೋರು ಎಂದರೆ ಅವರು ಆ್ಯಂಕರ್​ ಅನುಶ್ರೀ (Anchor Anushree). ಆ್ಯಂಕರಿಂಗ್​ ಎನ್ನುವ ಕಲೆ ಬೇಕು ಎಂದರೆ ಕರಗತವಾಗುವಂಥದ್ದಲ್ಲ. ಅದರಲ್ಲಿಯೂ ರಿಯಾಲಿಟಿ ಷೋ ಸಕ್ಸಸ್​ ಮಾಡುವಲ್ಲಿ ಆ್ಯಂಕರ್ಸ್​ ಪಾತ್ರ ಬಹು ಮುಖ್ಯವಾಗಿರುತ್ತದೆ. ಅವರಿಗೆ ಹೀಗೆಯೇ ಮಾತನಾಡಬೇಕು ಎಂದು ಮೊದಲೇ ಸ್ಕ್ರಿಪ್ಟ್​ ನೀಡುತ್ತಾರೆಯಾದರೂ, ಎಲ್ಲವೂ ಸ್ಕ್ರಿಪ್ಟ್​ನಿಂದಲೇ ನಡೆಯುವಂಥ ಕಲೆ ಆ್ಯಂಕರಿಂಗ್​ ಅಲ್ಲ. ಆ ಕ್ಷಣದಲ್ಲಿ, ಆ ಪರಿಸ್ಥಿತಿಗೆ ತಕ್ಕಂತೆ ಮಾತನಾಡುವ, ಜನರನ್ನು ನಗಿಸುವ ಕಲೆ ಸುಲಭವೂ ಅಲ್ಲ. ಅದು ಒಲಿದಿರುವುದು ಆ್ಯಂಕರ್​ ಅನುಶ್ರೀ ಅವರಂಥ ಕೆಲವೇ ಕೆಲವು ಆ್ಯಂಕರ್​ಗಳಿಗೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮನ ಮೆಚ್ಚಿದ ಜೋಡಿ
Image Credit : Asianet News

ಮನ ಮೆಚ್ಚಿದ ಜೋಡಿ

ಆ್ಯಂಕರ್​ ಅನುಶ್ರೀ ಅವರು ಸದ್ಯ ತಾವು ಮನಮೆಚ್ಚಿದ ಹುಡುಗ ರೋಷನ್​ ಅವರನ್ನು ಮದುವೆಯಾಗಿ ಸುಖಮಯ ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ. ಹಲವು ವರ್ಷಗಳಿಂದ ಅನುಶ್ರೀ ಎಲ್ಲಿಯೇ ಹೋದರೂ ಅವರಿಗೆ ಎದುರಾಗುತ್ತಿದ್ದ ಪ್ರಶ್ನೆ ಒಂದೇ. ಅದು ಮದುವೆ ಯಾವಾಗ ಎನ್ನುವುದು. ಎರಡು ವರ್ಷಗಳಿಂದ ಅನುಶ್ರೀ ಅವರು ರೋಷನ್​ ಅವರ ಜೊತೆ ಫ್ರೆಂಡ್​ಷಿಪ್​ನಲ್ಲಿ ಇದ್ದರೂ ಈ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಕೊನೆಗೆ ಒಂದೇ ಸಲ ಮದುವೆಯ ಬಗ್ಗೆ ಮಾತನಾಡಿ ಸರ್​ಪ್ರೈಸ್​ ಕೊಟ್ಟಿದ್ದರು.

Related Articles

Related image1
Anchor Anushree ಸ್ಮೈಲ್​ ಬಗ್ಗೆ ಭವಿಷ್ಯ ನುಡಿದಿದ್ರಂತೆ ಆ ಟೀಚರ್​: ಮಗಳನ್ನು ಹದ್ದುಬಸ್ತಲ್ಲಿ ಇಟ್ಕೊಳಿ ಅಂದಿದ್ರಂತೆ
Related image2
ಅಂದು ಆ್ಯಂಕರ್​ ಅನುಶ್ರೀ, ಇಂದು ಸೋನು ಗೌಡ; ಮಂಚದ ವಿಷ್ಯ ಪದೇಪದೇ ಬರೋದ್ಯಾಕೆ
36
ಮೊದಲ ವಿವಾಹ ವಾರ್ಷಿಕೋತ್ಸವ
Image Credit : Asianet News

ಮೊದಲ ವಿವಾಹ ವಾರ್ಷಿಕೋತ್ಸವ

ಇದೀಗ ಅನುಶ್ರೀ ಅವರು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ವಿದೇಶ ಪ್ರಯಾಣದಲ್ಲಿ ಇರುವಂತೆ ತೋರುತ್ತಿದೆ. ಪತಿ ರೋಷನ್​ ಜೊತೆಗೆ ವಿಶೇಷ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ಅನುಶ್ರೀ ಅವರಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ.

46
ಮರೆತು ಮರೆತು ಎಲ್ಲ ಮರೆತು
Image Credit : Anchor Anushree Instagram

ಮರೆತು ಮರೆತು ಎಲ್ಲ ಮರೆತು

ಇದೀಗ ಅವರು, ನಾನು ನನ್ನ ಹೆಂಡ್ತೀರು ಚಿತ್ರದ ಅರೆರೆರೆ ಮರೆತು ಮರೆತು ಎಲ್ಲ ಮರೆತು ಹಾಯಾಗಿರುವೆ ಮೂರು ಹೊತ್ತುನಿನ್ನ ಹೊರತು ಬೇರೆ ಏನು ನನ್ ಪ್ರೀತೀಗ್ ಗೊತ್ತು... ಹಾಡಿನ ಹಿನ್ನೆಲೆಯಲ್ಲಿ ಪತಿಯ ಜೊತೆ ಕ್ಯೂಟ್​ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ನಿಮಗೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ.

56
ಮುಳ್ಳಿನ ಹಾದಿ
Image Credit : X

ಮುಳ್ಳಿನ ಹಾದಿ

18ನೇ ವಯಸ್ಸಿನಲ್ಲಿಯೇ ಆ್ಯಂಕರಿಂಗ್​ ಕ್ಷೇತ್ರಕ್ಕೆ ಬಂದಿರೋ ಅನುಶ್ರೀ ಅವರ ಈ ಪಯಣಕ್ಕೆ ಇದೀಗ 20 ವರ್ಷಗಳ ಸಂಭ್ರಮ. ಈ ಸಂದರ್ಭದಲ್ಲಿ, ತಾವು ಅನುಭವಿಸಿದ ಕಷ್ಟದ ದಿನಗಳನ್ನು ನೆನೆದು ಅನುಶ್ರೀ ಜೀ ಕನ್ನಡ ವೇದಿಕೆಯಲ್ಲಿ ಭಾವುಕರಾಗಿದ್ದರು. ವೇದಿಕೆಯ ಮೇಲೆಯೇ ಕಣ್ಣೀರಾದರು. ಅನುಶ್ರೀ ಅವರು ಇಂದು ಈ ಮಟ್ಟಕ್ಕೆ ಬೆಳೆಯಬೇಕು ಎಂದರೆ, ಅದರ ಹಿಂದೆ ನೋವಿನ ಹಾದಿಗಳಿವೆ, ಮುಳ್ಳಿನ ಮೇಲೆ ನಡೆದ ದಿನಗಳಿವೆ. ಅದನ್ನೇ ನೆನೆದು ಅನುಶ್ರೀ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆದರೆ, ಇದೀಗ ಎಲ್ಲವನ್ನೂ ಮರೆತು ಪತಿಯ ಜೊತೆ ಸಂತಸದ ದಿನಗಳನ್ನು ಅನುಭವಿಸುತ್ತಿದ್ದಾರೆ. ಇವರಿಗೆ ಅಭಿಮಾನಿಗಳ ಪ್ರೀತಿಯ ಹಾರೈಕೆಯೂ ಜೊತೆಗಿದೆ.

66
ಗಗನಸಖಿ ಆಗುವ ಬಯಕೆ
Image Credit : Social Media

ಗಗನಸಖಿ ಆಗುವ ಬಯಕೆ

ಅಷ್ಟಕ್ಕೂ ಅನುಶ್ರೀ ಅವರಿಗೆ ಗಗನಸಖಿ ಆಗಬೇಕು ಎನ್ನುವ ಅದಮ್ಯ ಬಯಕೆ ಇತ್ತಂತೆ. ಅದಕ್ಕಾಗಿ ಕಂಡಕಂಡ ಜ್ಯೋತಿಷಿಗಳಿಗೆ ಜಾತಕ ತೋರಿಸುತ್ತಿದ್ದರಂತೆ. ಅವರು ನೀನು ತುಂಬಾ ಎತ್ತರಕ್ಕೆ ಹೋಗುತ್ತೀ ಎಂದಿದ್ದರು. ನಾನು ಎತ್ತರ ಎಂದಾಕ್ಷಣ ಆಕಾಶ ಎಂದುಕೊಂಡಿದ್ದೆ, ಗಗನಸಖಿ ಆಗ್ತೇನೆ ಎಂದು ಅಂದುಕೊಂಡಿದ್ದೆ ಎಂದು ಚಂದನ ವಾಹಿನಿಗೆ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ನಟಿ ಹೇಳಿದ್ದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಆಂಕರ್ ಅನುಶ್ರೀ
ಟಿವಿ ಶೋ
ಮನರಂಜನಾ ಸುದ್ದಿ
ಸಂಬಂಧಗಳು
ಮದುವೆ
ವಿದೇಶ ಪ್ರವಾಸ
ಪ್ರೀತಿ

Latest Videos
Recommended Stories
Recommended image1
ರ‍್ಯಾಪಿಡೋ ಪಾರ್ಸೆಲ್ ಬುಕ್ ಮಾಡಿದ ಮಹಿಳೆಗೆ ‘I Love You’ ಮೆಸೇಜ್! ಚಾಲಕನ ಹಠಾತ್ ಪ್ರೇಮ ನಿವೇದನೆಗೆ ಯುವತಿ ಕಂಗಾಲು!
Recommended image2
ಬರ್ತಿದೆ Bhagyalakshmi ಪಾರ್ಟ್​-2! Bigg Boss ಮನೆಯಲ್ಲಿ ತಾಂಡವ್​, ಶ್ರೇಷ್ಠಾ ಜೊತೆ ಭಾಗ್ಯನೂ ಎಂಟ್ರಿ?
Recommended image3
ಪತ್ನಿ ಸುನೀತಾ ಆರೋಪಗಳ ಬೆನ್ನಲ್ಲೇ ಫ್ಯಾನ್ಸ್‌ ಬೆಂಬಲ ಕೋರಿದ್ದೇಕೆ ಬಾಲಿವುಡ್ ನಟ ಗೋವಿಂದ?
Related Stories
Recommended image1
Anchor Anushree ಸ್ಮೈಲ್​ ಬಗ್ಗೆ ಭವಿಷ್ಯ ನುಡಿದಿದ್ರಂತೆ ಆ ಟೀಚರ್​: ಮಗಳನ್ನು ಹದ್ದುಬಸ್ತಲ್ಲಿ ಇಟ್ಕೊಳಿ ಅಂದಿದ್ರಂತೆ
Recommended image2
ಅಂದು ಆ್ಯಂಕರ್​ ಅನುಶ್ರೀ, ಇಂದು ಸೋನು ಗೌಡ; ಮಂಚದ ವಿಷ್ಯ ಪದೇಪದೇ ಬರೋದ್ಯಾಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved