MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Asian Games 2026
Today's Horoscope
Srirangapatna Dasara 2026
Shivamogga Rain Deficit
Karnataka Power Crisis
Satish Jarkiholi ED Probe
Sharavathi Back Water Muppane
Yeswantpur-Mangaluru Vande Bharat
Kasturi Rangan Report
Siddaramaiah vs Dr HC Mahadevappa
Actress Krishi Thapanda
  • Home
  • Entertainment
  • Movie Reviews
  • 25ಕ್ಕೆ 100 ಕೋಟಿ: ಭಾರತದ ಪ್ರೇಮಕಥೆಯನ್ನು ತೆಗೆದುಕೊಂಡು ಹೋಗುವ ಪಾಕಿಸ್ತಾನದ ಯುವತಿ

25ಕ್ಕೆ 100 ಕೋಟಿ: ಭಾರತದ ಪ್ರೇಮಕಥೆಯನ್ನು ತೆಗೆದುಕೊಂಡು ಹೋಗುವ ಪಾಕಿಸ್ತಾನದ ಯುವತಿ

1965ರ ಹಿನ್ನೆಲೆಯಲ್ಲಿ ನಡೆಯುವ ಸುಂದರ ಪ್ರೇಮಕಥೆಯನ್ನು ಹೇಳುತ್ತದೆ. 20 ವರ್ಷಗಳ ನಂತರ ಪಾಕಿಸ್ತಾನಿ ಯುವತಿ ಮೂಲಕ ಈ ಕಥೆಯ ಭಾವನಾತ್ಮಕ ರಹಸ್ಯಗಳು ಬಿಚ್ಚಿಕೊಳ್ಳುತ್ತವೆ. ಅತ್ಯುತ್ತಮ ದೃಶ್ಯಕಾವ್ಯ ಮತ್ತು ನಟನೆಯಿರುವ ಈ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಬಹುದು.

2 Min read
Author : Mahmad Rafik
Published : Sep 21 2026, 11:10 AM IST
Share this Photo Gallery
  • FB
  • TW
  • Linkdin
  • Whatsapp
18
ಭಾವನಾತ್ಮಕತೆ ಜೊತೆ ಸಾರ್ಥಕತೆಯ ವಿದಾಯ
Image Credit : Sita Ramam, JioHotstar

ಭಾವನಾತ್ಮಕತೆ ಜೊತೆ ಸಾರ್ಥಕತೆಯ ವಿದಾಯ

ಈ ಸಿನಿಮಾ ಥಿಯೇಟರ್‌ಗೆ ಬಂದಾಗ ಪ್ರೇಕ್ಷಕರಿಗೆ ಡಿಕ್ಯೂ (DQ) ಫ್ಯಾಕ್ಟರ್ ದೊಡ್ಡ ಆಕರ್ಷಣೆಯಾಗಿತ್ತು. 1965ರ ಹಿನ್ನೆಲೆಯಲ್ಲಿ ನಡೆಯುವ ಲವ್ ಸ್ಟೋರಿ ಎಂದು ಪ್ರಮೋಷನ್ ಮೂಲಕ ಸಿನಿಮಾ ತಂಡ ಪ್ರೇಕ್ಷಕರಿಗೆ ಪರಿಚಯಿಸಿತ್ತು. ಈ ಸಿನಿಮಾ ನೋಡಿ ಥಿಯೇಟರ್‌ನಿಂದ ಹೊರಬಂದ ಪ್ರೇಕ್ಷಕರಲ್ಲಿ ಸಂತೋಷದ ಜೊತೆಯಲ್ಲಿ ಭಾವುಕತೆಯಿಂದ ಹೊರ ಬಂದರು. 25 ಕೋಟಿ ಬಜೆಟ್‌ನ ಈ ಸಿನಿಮಾ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಕ್ಷಣ ಕ್ಷಣಕ್ಕೂ ಭಾವನಾತ್ಮಕ ತಿರುವು ಪಡೆಯೋ ಸಿನಿಮಾ
Image Credit : Sita Ramam, JioHotstar

ಕ್ಷಣ ಕ್ಷಣಕ್ಕೂ ಭಾವನಾತ್ಮಕ ತಿರುವು ಪಡೆಯೋ ಸಿನಿಮಾ

ಮಲಯಾಳಂ ನಟನ ಇದು ಎರಡನೇ ತೆಲುಗು ಸಿನಿಮಾ ಆಗಿದ್ದರಿಂದ ಬಿಡುಗಡೆಗೂ ಮುನ್ನ ಹೆಚ್ಚು ನಿರೀಕ್ಷೆಯನ್ನು ಮೂಡಿಸಿತ್ತು. ಪ್ರೇಕ್ಷಕರ ನಿರೀಕ್ಷೆಗಿಂತ ಎರಡು ಪಟ್ಟು ಮನರಂಜನೆಯನ್ನು ನೀಡುವಲ್ಲಿ ಸಿನಿಮಾ ಸಕ್ಸಸ್ ಆಗಿತ್ತು. 1965 ಮತ್ತು 1985ರ ನಡುವಿನ ಕಥೆ ಇದಾಗಿದೆ. 1965ರಲ್ಲಿ ನಡೆದ ಘಟನೆಯ ಹುಡುಕಾಟ 1985ರಲ್ಲಿ ನಡೆಯುತ್ತದೆ. ಇಲ್ಲಿಂದ ಕಥೆ ಹಂತ ಹಂತವಾಗಿ ಭಾವನಾತ್ಮಕ ತಿರುವುಗಳನ್ನು ಪಡೆದುಕೊಳ್ಳಲು ಆರಂಭವಾಗುತ್ತದೆ.

Related Articles

Related image1
1957ರ ಕೇರಳ ಕಥೆ, ಭೂಮಿಗಾಗಿ ಹೋರಾಟ; ಗೂಸ್‌ಬಂಪ್ಸ್ ಕ್ಲೈಮ್ಯಾಕ್ಸ್ ಮಲಯಾಳಂ ಸಿನಿಮಾ
Related image2
ಬಿಡುಗಡೆಯಾಗಿ 6 ವರ್ಷದ ನಂತ್ರ ಸದ್ದು ಮಾಡ್ತಿದೆ ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾ
38
ಸಿನಿಮಾದ ಕಥೆ ಏನು?
Image Credit : Sita Ramam, JioHotstar

ಸಿನಿಮಾದ ಕಥೆ ಏನು?

ಲಂಡನ್‌ನಲ್ಲಿ ಓದುತ್ತಿರುವ ಪಾಕಿಸ್ತಾನಿ ಯುವತಿ 'ಅಫ್ರೀನ್' ಮೂಲಕ 'ಸೀತಾ ರಾಮಂ' ಸಿನಿಮಾದ ಕಥೆ ಶುರುವಾಗುತ್ತದೆ. ಅಫ್ರೀನ್ ಅಜ್ಜ ಪಾಕಿಸ್ತಾನಿ ಸೇನೆಯಲ್ಲಿ ಮೇಜರ್ ಆಗಿದ್ದವರು. 1965ರಲ್ಲಿ 'ಲೆಫ್ಟಿನೆಂಟ್ ರಾಮ್' ಬರೆದಿದ್ದ ಒಂದು ಪತ್ರವನ್ನು 1985ರಲ್ಲಿ 'ಮಿಸ್ ಸೀತಾಮಹಾಲಕ್ಷ್ಮಿ'ಗೆ ತಲುಪಿಸುವ ಜವಾಬ್ದಾರಿಯನ್ನು ತಾತ ಅಫ್ರೀನ್‌ಗೆ ಒಪ್ಪಿಸುತ್ತಾರೆ. ಭಾರತ ಮತ್ತು ಪಾಕಿಸ್ತಾನದ ಸೈನಿಕರು ಹೇಗೆ ಸ್ನೇಹಿತರಾದರು ಎಂಬುದು ಅಪ್ಪಟ ದೇಶಭಕ್ತೆಯಾದ ಅಫ್ರೀನ್‌ಗೆ ಅಚ್ಚರಿ ತರುತ್ತದೆ.

48
ಪ್ರೀತಿ ಜೊತೆ ದೇಶಭಕ್ತಿಯ ಕಥೆ
Image Credit : Sita Ramam, JioHotstar

ಪ್ರೀತಿ ಜೊತೆ ದೇಶಭಕ್ತಿಯ ಕಥೆ

'ಸೀತಾಮಹಾಲಕ್ಷ್ಮಿ'ಯನ್ನು ಹುಡುಕಿಕೊಂಡು ಹೊರಡುವ ಅಫ್ರೀನ್, ಮದ್ರಾಸ್ ರೆಜಿಮೆಂಟ್‌ನ ಲೆಫ್ಟಿನೆಂಟ್ 'ರಾಮ್'ನನ್ನು ಹುಡುಕುವ ಹಂತಕ್ಕೆ ತಲುಪುತ್ತಾಳೆ. ರಾಮ್ ಯಾರು? ಸೀತೆ ಯಾರು? ಎಂಬುದು ಅಫ್ರೀನ್ ಹುಡುಕಾಟದ ಮೂಲಕ ಪ್ರೇಕ್ಷಕರಿಗೆ ಗೊತ್ತಾಗುತ್ತದೆ. ಹೀಗೆ ರಾಮ್ ಮತ್ತು ಸೀತಾ ಮಹಾಲಕ್ಷ್ಮಿಯ ಲವ್ ಸ್ಟೋರಿ ಬಿಚ್ಚಿಕೊಳ್ಳುತ್ತದೆ. ಟೈಟಲ್ ಪಾತ್ರಗಳ ಪ್ರೀತಿಯ ಸುತ್ತ ಕಥೆ ಸುತ್ತಿದರೂ, ಸಿನಿಮಾ ಹಲವು ಆಯಾಮಗಳಲ್ಲಿ ತೆರೆದುಕೊಳ್ಳುತ್ತದೆ.

58
ದೃಶ್ಯಕಾವ್ಯದ ಕಥನ
Image Credit : Sita Ramam, JioHotstar

ದೃಶ್ಯಕಾವ್ಯದ ಕಥನ

ಹಳೆಯ ಕಾಲಘಟ್ಟದ ಕಥೆಯನ್ನು ಅದ್ಭುತ ದೃಶ್ಯಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಪ್ರೊಡಕ್ಷನ್ ಡಿಸೈನ್ ಬಗ್ಗೆ ನಿರ್ಮಾಪಕರು ತುಂಬಾನೇ ಗಮನಹರಿಸಿದ್ದಾರೆ. ಕ್ಯಾಮೆರಾಮನ್‌ಗಳಾದ ಪಿ.ಎಸ್. ವಿನೋದ್ ಮತ್ತು ಶ್ರೇಯಾಸ್ ಕೃಷ್ಣ ಅವರ ಕ್ಯಾಮೆರಾ ಕಣ್ಣುಗಳು ದೃಶ್ಯಕಾವ್ಯವನ್ನೇ ಸೃಷ್ಟಿಸಿವೆ. ಸಿನಿಮಾದ ಕಲರ್ ಟೋನ್ ಮತ್ತು ಲೈಟಿಂಗ್ ಪ್ರೇಕ್ಷಕರನ್ನು ಸೆಳೆಯುತ್ತದೆ. ಕಾಶ್ಮೀರದ ಲೊಕೇಶನ್‌ಗಳನ್ನು ಛಾಯಾಗ್ರಾಹಕರು ಅಷ್ಟೇ ಸುಂದರವಾಗಿ ಸೆರೆ

68
ಕಲಾವಿದರ ಪರಕಾಯ ಪ್ರವೇಶ
Image Credit : Sita Ramam, JioHotstar

ಕಲಾವಿದರ ಪರಕಾಯ ಪ್ರವೇಶ

ದುಲ್ಕರ್ ಮತ್ತು ಮೃಣಾಲ್ ಠಾಕೂರ್ ಮಾತ್ರವಲ್ಲದೆ, ಸಣ್ಣ ಪಾತ್ರಗಳ ಕಾಸ್ಟಿಂಗ್ ಬಗ್ಗೆಯೂ ತಂಡ ಗಮನಹರಿಸಿದೆ. ಇದು ಪ್ರೇಕ್ಷಕರನ್ನು ಸಿನಿಮಾಗೆ ಹತ್ತಿರ ಮಾಡುತ್ತದೆ. ಸಣ್ಣ ಪಾತ್ರಗಳಿಗೂ ಹೆಸರಾಂತ ನಟರನ್ನು ಕರೆತರಲು ನಿರ್ಮಾಪಕರು ಶ್ರಮಿಸಿದ್ದಾರೆ. ದುಲ್ಕರ್ ಮತ್ತು ಮೃಣಾಲ್ ಠಾಕೂರ್ ಆನ್-ಸ್ಕ್ರೀನ್ ಕೆಮಿಸ್ಟ್ರಿ, ನಿರ್ದೇಶಕರಿಗೆ ಒಂದು ಕಾವ್ಯಾತ್ಮಕ ಲವ್ ಸ್ಟೋರಿ ಹೇಳಲು ಸಹಾಯ ಮಾಡಿದೆ.

78
ಕಥೆಯನ್ನು ಕೊನೆಯವರೆಗೂ ತೆಗೆದುಕೊಂಡು ಹೋಗುವ ರಶ್ಮಿಕಾ ಮಂದಣ್ಣ
Image Credit : Sita Ramam, JioHotstar

ಕಥೆಯನ್ನು ಕೊನೆಯವರೆಗೂ ತೆಗೆದುಕೊಂಡು ಹೋಗುವ ರಶ್ಮಿಕಾ ಮಂದಣ್ಣ

'ರಾಮ್' ಆಗಿ ದುಲ್ಕರ್ ಮತ್ತು 'ಸೀತಾ ಮಹಾಲಕ್ಷ್ಮಿ'ಯಾಗಿ ಮೃಣಾಲ್ ಠಾಕೂರ್ ಜೀವ ತುಂಬಿದ್ದಾರೆ. ರೊಮ್ಯಾಂಟಿಕ್ ಮತ್ತು ಎಮೋಷನಲ್ ದೃಶ್ಯಗಳಲ್ಲಿ ದುಲ್ಕರ್ ಅದ್ಭುತವಾಗಿ ನಟಿಸಿದ್ದಾರೆ. 'ಅಫ್ರೀನ್' ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟನೆ ಕಥೆಯ ಓಟಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ತರುಣ್ ಭಾಸ್ಕರ್, ಸಚಿನ್ ಖೇಡೇಕರ್, ವೆಣ್ಣೆಲ ಕಿಶೋರ್, ಮುರಳಿ ಶರ್ಮಾ, ಪ್ರಕಾಶ್ ರಾಜ್, ಭೂಮಿಕಾ, ಗೌತಮ್ ವಾಸುದೇವ್ ಮೆನನ್ ಮುಂತಾದವರ ನಟನೆ ಕಥೆಗೆ ಪೂರಕವಾಗಿದೆ.

88
ಯಾವ OTT ಪ್ಲಾಟ್‌ಫಾರಂನಲ್ಲಿದೆ ಸಿನಿಮಾ?
Image Credit : Sita Ramam, JioHotstar

ಯಾವ OTT ಪ್ಲಾಟ್‌ಫಾರಂನಲ್ಲಿದೆ ಸಿನಿಮಾ?

ಸೀತಾ ಮತ್ತು ರಾಮ್ ಅವರ ಸುಂದರ ಪ್ರೇಮಕಥೆಗೆ ಹಿನ್ನೆಲೆ ಒದಗಿಸುವಲ್ಲಿ ವಿಶಾಲ್ ಚಂದ್ರಶೇಖರ್ ಅವರ ಸಂಗೀತ ಪ್ರಮುಖ ಪಾತ್ರ ವಹಿಸಿದೆ. ಹಾಡುಗಳು ಕಥೆಯ ಜೊತೆಯಲ್ಲೇ ಸಾಗುತ್ತವೆ. ಸೀತಾ ರಾಮಂ ಸಿನಿಮಾವನ್ನು Amazon Prime Video and Disney+ Hotstar, Amazon MX Playerನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಟಾಲಿವುಡ್
ಸಿನಿಮಾ
ಮನರಂಜನಾ ಸುದ್ದಿ
ಬಾಕ್ಸ್ ಆಫೀಸ್ ಕಲೆಕ್ಷನ್
 

Latest Videos
Recommended Stories
Recommended image1
1957ರ ಕೇರಳ ಕಥೆ, ಭೂಮಿಗಾಗಿ ಹೋರಾಟ; ಗೂಸ್‌ಬಂಪ್ಸ್ ಕ್ಲೈಮ್ಯಾಕ್ಸ್ ಮಲಯಾಳಂ ಸಿನಿಮಾ
Recommended image2
'ಸಿಟಿ ಲೈಟ್ಸ್' ಜೀವನದಲ್ಲಿ ಹುಷಾರಾಗಿ ಇರಬೇಕು: ಬೀದಿ ದೀಪ ಅಯ್ಯೋ ಪಾಪ ಬದುಕು ಶಾಪ!
Recommended image3
ಹಳ್ಳಿಯಲ್ಲಿ ಶಾಲೆಯಿಲ್ಲ, ಮನುಷ್ಯರ ಅನಾಹುತಕ್ಕೆ ಪ್ರಾಣಿಗಳು ಹೊಣೆ: ಹೇಗಿದೆ 'ವಾರಿಯರ್' ಸಿನಿಮಾ?
Related Stories
Recommended image1
1957ರ ಕೇರಳ ಕಥೆ, ಭೂಮಿಗಾಗಿ ಹೋರಾಟ; ಗೂಸ್‌ಬಂಪ್ಸ್ ಕ್ಲೈಮ್ಯಾಕ್ಸ್ ಮಲಯಾಳಂ ಸಿನಿಮಾ
Recommended image2
ಬಿಡುಗಡೆಯಾಗಿ 6 ವರ್ಷದ ನಂತ್ರ ಸದ್ದು ಮಾಡ್ತಿದೆ ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved