- Home
- Technology
- Mobiles
- Airtelನಿಂದ ಅತ್ಯಂತ ಅಗ್ಗದ 77 ದಿನಗಳ ವ್ಯಾಲಿಡಿಟಿ ನೀಡುವ ರೀಚಾರ್ಜ್, ಕಡಿಮೆ ಬೆಲೆಗೆ ಇಷ್ಟೆಲ್ಲಾ ಲಾಭ!
Airtelನಿಂದ ಅತ್ಯಂತ ಅಗ್ಗದ 77 ದಿನಗಳ ವ್ಯಾಲಿಡಿಟಿ ನೀಡುವ ರೀಚಾರ್ಜ್, ಕಡಿಮೆ ಬೆಲೆಗೆ ಇಷ್ಟೆಲ್ಲಾ ಲಾಭ!
ಏರ್‌ಟೆಲ್ ಈ ರೀಚಾರ್ಜ್ ಪ್ಯಾಕ್ ಮೂಲಕ 77 ದಿನಗಳ ದೀರ್ಘಾವಧಿ ಮಾನ್ಯತೆಯನ್ನು ನೀಡುತ್ತಿದೆ. ಇದರಲ್ಲಿ 6GB ಡೇಟಾ, ಅನಿಯಮಿತ ಕರೆಗಳು, 600 SMS ಮತ್ತು ಸ್ಪ್ಯಾಮ್ ಕರೆಗಳನ್ನು ತಡೆಯುವ ಸೇಫ್ ನೆಟ್‌ವರ್ಕ್ ಸೌಲಭ್ಯವಿದೆ.

77 ದಿನಗಳ ವ್ಯಾಲಿಡಿಟಿ ನೀಡುವ ಏರ್‌ಟೆಲ್‌ನ ಈ ರಹಸ್ಯ ಪ್ಲಾನ್ ಯಾವುದು?
ಏರ್‌ಟೆಲ್‌ನ ಅಧಿಕೃತ ವೆಬ್‌ಸೈಟ್ ವಿವಿಧ ರೀತಿಯ ರೀಚಾರ್ಜ್ ಪ್ಯಾಕ್‌ಗಳನ್ನು ನೀಡುತ್ತದೆ. ಆದರೆ ಇಂದು ನಾವು 77 ದಿನಗಳ ಡೇಟಾ ಪ್ಯಾಕ್ ಬಗ್ಗೆ ಮಾತನಾಡಿದ್ದೇವೆ. ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.
ಏನೆಲ್ಲಾ ಬೆನಿಫಿಟ್ಸ್ ನೀಡುತ್ತೆ
ಏರ್‌ಟೆಲ್‌ನ 77 ದಿನಗಳ ಡೇಟಾ ಪ್ಯಾಕ್‌ನ ಬೆಲೆ 489 ರೂಪಾಯಿ. ಒಮ್ಮೆ ರೀಚಾರ್ಜ್ ಮಾಡಿದರೆ ನಿಮಗೆ ದೀರ್ಘಾವಧಿಯ ಅವರಿಗೆ ಮಾನ್ಯತೆ ಸಿಗುತ್ತದೆ. ಅದು ಏನೆಲ್ಲಾ ಬೆನಿಫಿಟ್ಸ್ ನೀಡುತ್ತೆ ಅಂತ ನೋಡುವುದಾದರೆ.. ಏರ್‌ಟೆಲ್‌ನ 489 ರೂಪಾಯಿಗಳ ರೀಚಾರ್ಜ್ ಪ್ಯಾಕ್ ಒಟ್ಟು 6 ಜಿಬಿ ಡೇಟಾವನ್ನು ನೀಡುತ್ತದೆ. ಇದು ನಿಮಗೆ ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಆನಂದಿಸಲು ಅವಕಾಶ ನೀಡುತ್ತದೆ.
ಅನಿಯಮಿತ ಕರೆಗಳು
ಜೊತೆ ಏರ್‌ಟೆಲ್‌ನ 498 ರೂಪಾಯಿಗಳ ಈ ರೀಚಾರ್ಜ್ ಪ್ಯಾಕ್ ನಿಮಗೆ ಅನಿಯಮಿತ ಫೋನ್ ಕರೆಗಳನ್ನು ನೀಡುತ್ತದೆ. ಇದರಿಂದ ನೀವು ನಿಮ್ಮ ಸಂವಹವನ್ನು ಸರಾಗವಾಗಿ ನಡೆಸಬಹುದಾಗಿದೆ.
ಏರ್‌ಟೆಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಉಳಿದಂತೆ 489 ರೂಪಾಯಿಗಳ ಈ ಪ್ಯಾಕ್ ಒಟ್ಟು 600 ಎಸ್‌ಎಂಎಸ್ ಕೋಟಾವನ್ನು ಹೊಂದಿದೆ. ಇವರ ವಿವರಗಳು ಏರ್‌ಟೆಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪಡೆದುಕೊಳ್ಳಬಹುದಾಗಿದೆ. ಇದು ನಿಮಗೆ ಒಂದು ರೀಚಾರ್ಜ್‌ನಲ್ಲಿ 77 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದರಿಂದ ನೀವು ದೀರ್ಘಕಾಲದ ವರೆಗೂ ಸೇವೆಯನ್ನು ಪಡೆದುಕೊಳ್ಳಬಹುದು.
ಏರ್‌ಟೆಲ್‌ನ ಸೇಫ್ ನೆಟ್‌ವರ್ಕ್ ಸೇವೆ ಲಭ್ಯ
ವಿಶೇಷ ಎಂದರೆ 489 ಏರ್‌ಟೆಲ್ ರೀಚಾರ್ಜ್ ಪ್ಯಾಕ್‌ನಲ್ಲಿ ಏರ್‌ಟೆಲ್‌ನ ಸೇಫ್ ನೆಟ್‌ವರ್ಕ್ ಸೇವೆಯೂ ಸೇರಿದ್ದು, ಇದು ಸ್ಪ್ಯಾಮ್ ಕರೆಗಳನ್ನು ಹಾಗೂ ಸ್ಕ್ಯಾಮರ್‌ಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ. ಇದರೊಂದಿಗೆ ನೀವು ಅಡೋಬ್ ಎಕ್ಸ್ ಪ್ರೆಸ್ ಉಚಿತ ಸಬ್‌ಸ್ಕ್ರಿಪ್ಷನ್ ಕೂಡ ಸಿಗುತ್ತದೆ.
ಯಾರಿಗೆ ಬೆಸ್ಟ್?
ಕಡಿಮೆ ಬೆಲೆಗೆ ಹೆಚ್ಚು ದಿನಗಳ ಮ್ಯಾನತೆಯನ್ನು ಬಯಸುವ ಬಳಕೆದಾರರಿಗೆ ಈ ಏರ್‌ಟೆಲ್ ಪ್ಲ್ಯಾನ್ ಅತ್ಯುತ್ತಮ ಎಂದು ಹೇಳಬಹುದು. ಅನಿಯಮಿತ ಕರೆಗಳ ಜೊತೆಗೆ ಡೇಟಾ ಕೂಡ ಅಗತ್ಯವಿದ್ದರೆ, ಈ ಪ್ಲ್ಯಾನ್ ದಿ ಬೆಸ್ಟ್ ಆಯ್ಕೆ ಅಂತ ಹೇಳಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

