MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Karnataka Weather Update
Karnataka Water Crisis
Bengaluru Drone Survey
Karnataka Marriage Registration Rules
Karnataka Lokayukta Raid
Mangaluru Railway Division
Kushtagi-Hubballi New Train
Kadamba Era Inscription
Today's Horoscope
108 Ambulance Strike Karnataka
Kasturirangan Report
Dharmasthala Case Re-investigation
Ayodhya Ram Mandir Theft Case
  • Home
  • Life
  • ಕೋತಿ ಓಡಿಸಲು ಇಲ್ಲಿದೆ ಮಂತ್ರ, ಇದನ್ನು ನೋಡಿದ್ರೆ ಮತ್ತೆ ಮನೆ ಕಡೆ ಬರೋದಿಲ್ಲ ಮಂಗಗಳು

ಕೋತಿ ಓಡಿಸಲು ಇಲ್ಲಿದೆ ಮಂತ್ರ, ಇದನ್ನು ನೋಡಿದ್ರೆ ಮತ್ತೆ ಮನೆ ಕಡೆ ಬರೋದಿಲ್ಲ ಮಂಗಗಳು

ಕಾಡಿನಲ್ಲಿ ವಾಸವಾಗಿದ್ದ ಮಂಗ ನಾಡು ಸೇರಿ ಎಷ್ಟೋ ವರ್ಷಗಳಾಗಿವೆ. ಈಗ ನಗರಗಳಿಗೆ ಮಂಗಗಳು ಲಗ್ಗೆ ಇಡ್ತಿವೆ. ಮನೆ, ತೋಟಗಳಿಗೆ ಹಾನಿ ಮಾಡುವುದರ ಜೊತೆಗೆ ಕೆಲವೊಮ್ಮೆ ಜನರ ಮೇಲೂ ದಾಳಿ ಮಾಡುತ್ವೆ. ಮಂಗಗಳ ಕಾಟದಿಂದ ತಪ್ಪಿಸಿಕೊಳ್ಳಲು ಏನು ಮಾಡ್ಬೇಕು ಗೊತ್ತಾ?

2 Min read
Author : Roopa Hegde
Published : Sep 22 2026, 07:31 PM IST
Share this Photo Gallery
  • FB
  • TW
  • Linkdin
  • Whatsapp
18
ಮಂಗಗಳು ಯಾವುದಕ್ಕೆ ಹೆದರುತ್ತವೆ?
Image Credit : Asianet News

ಮಂಗಗಳು ಯಾವುದಕ್ಕೆ ಹೆದರುತ್ತವೆ?

ಮಂಗಗಳು ತಮ್ಮಗಿಂತ ದೊಡ್ಡದಾದ ಮತ್ತು ಬಲಿಷ್ಠವಾದ ಲಂಗೂರ್ (ಮುಸುವ) ಗಳಿಗೆ ಹೆದರುತ್ತವೆ. ಹೀಗಾಗಿ ಮಂಗಗಳ ಕಾಟ ಹೆಚ್ಚಿರುವ ಪ್ರದೇಶಗಳಲ್ಲಿ ಲಂಗೂರ್ನ ಪೋಸ್ಟರ್ಗಳನ್ನು ಹಾಕಬಹುದು. ಅದನ್ನು ನೋಡಿ ಮಂಗಗಳು ಭಯಪಟ್ಟು ಅಲ್ಲಿಂದ ಓಡಿ ಹೋಗುವ ಸಾಧ್ಯತೆ ಇರುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಜೋರಾದ ಶಬ್ಧ
Image Credit : Asianet News

ಜೋರಾದ ಶಬ್ಧ

ಜೋರಾದ ಮತ್ತು ಹಠಾತ್ ಶಬ್ದಗಳಿಗೆ ಮಂಗಗಳು ಬೆಚ್ಚಿಬೀಳುತ್ತವೆ. ಹೀಗಾಗಿ ಪಾತ್ರೆ ಅಥವಾ ಗಂಟೆ ಬಾರಿಸುವಂತಹ ಶಬ್ದಗಳನ್ನು ಬಳಸಿಕೊಂಡು ಅವುಗಳನ್ನು ದೂರ ಓಡಿಸುವ ಪ್ರಯತ್ನವನ್ನು ನೀವು ಮಾಡಬಹುದು.

Related Articles

Related image1
ಬೀದಿ ನಾಯಿಗಳು ದಾಳಿ ಮಾಡಲು ಬಂದರೆ ಏನು ಮಾಡಬೇಕು? ತಜ್ಞರು ನೀಡಿದ ಸಲಹೆಗಳಿವು
Related image2
ದಿಂಬಿಗೆ ತಲೆಕೊಟ್ಟರೆ ಸಾಕು, ಗಾಢನಿದ್ದೆ ಆವರಿಸಬೇಕೇ..? ಹಾಗಿದ್ರೆ ಮಲಗುವ ಮುನ್ನ ಈ ನೀರು ಕುಡಿಯಿರಿ!
38
ಹೊಳೆಯುವ ವಸ್ತು
Image Credit : Asianet News

ಹೊಳೆಯುವ ವಸ್ತು

ಮಂಗಗಳು ಸಿಡಿಗಳು ಅಥವಾ ಬಿಸಿಲಿನಲ್ಲಿ ಹೊಳೆಯುವ ವಸ್ತುಗಳನ್ನು ನೋಡಿದ್ರೂ ಭಯಪಡುತ್ತವೆ ಎನ್ನುವ ಮಾತಿದೆ. ನೀವು ಮಂಗ ಬರುವ ಜಾಗದಲ್ಲಿ ಹೊಳೆಯುವ ವಸ್ತು ಅಥವಾ ಸಿಡಿಯನ್ನು ನೇತು ಹಾಕಬಹುದು.

48
ಲೇಸರ್ ಲೈಟ್
Image Credit : Asianet News

ಲೇಸರ್ ಲೈಟ್

ಗ್ರಾಮೀಣ ಪ್ರದೇಶಗಳು ಮತ್ತು ಹೊಲಗಳಲ್ಲಿ ಮಂಗಗಳನ್ನು ದೂರ ಮಾಡಲು ಕೆಲವರು ಲೇಸರ್ ಲೈಟ್ ಬಳಸುತ್ತಾರೆ. ಹಠಾತ್ ಕಾಣಿಸುವ ಬೆಳಕು ಮಂಗಗಳನ್ನು ಎಚ್ಚರಗೊಳಿಸಿ ಅಲ್ಲಿಂದ ದೂರ ಹೋಗುವಂತೆ ಮಾಡುತ್ತದೆ. ಆದ್ರೆ ಲೇಸರ್ ಲೈಟನ್ನು ಮಂಗಗಳ ಕಣ್ಣು ಅಥವಾ ಮನುಷ್ಯರ ಕಣ್ಣುಗಳ ಕಡೆಗೆ ನೇರವಾಗಿ ತೋರಿಸುವುದು ಅಪಾಯಕಾರಿ. ಹಾಗಾಗಿ ಇಂತಹ ಸಾಧನಗಳನ್ನು ಬಳಸುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ.

58
ಮೆಣಸಿನಕಾಯಿ ನೀರಿನ ಸ್ಪ್ರೇ
Image Credit : Asianet News

ಮೆಣಸಿನಕಾಯಿ ನೀರಿನ ಸ್ಪ್ರೇ

ಸಾಮಾಜಿಕ ಜಾಲತಾಣಗಳಲ್ಲಿ ಮಂಗಗಳನ್ನು ದೂರವಿಡಲು ಹಲವು ಮನೆಮದ್ದುಗಳ ಬಗ್ಗೆ ಸಲಹೆಗಳು ಹರಿದಾಡುತ್ತವೆ. ಮೆಣಸಿನಕಾಯಿ ನೀರಿನ ಸ್ಪ್ರೇ ಇದರಲ್ಲಿ ಒಂದು. ನೀರಿನಲ್ಲಿ ಕೆಂಪು ಮೆಣಸಿನಕಾಯಿ ಪುಡಿ ಬೆರೆಸಿ ಮನೆಯ ಹೊರಭಾಗ, ಗೋಡೆ ಅಥವಾ ಮಂಗಗಳು ಬರುವ ಸ್ಥಳಗಳಲ್ಲಿ ಸಿಂಪಡಿಸಿದ್ರೆ ಮಂಗಗಳು ಬರುವುದಿಲ್ಲ ಎನ್ನಲಾಗಿದೆ. ಆದ್ರೆ ಯಾವುದೇ ಕಾರಣಕ್ಕೂ ಮಂಗಗಳ ಮೇಲೆ ನೇರವಾಗಿ ಇದನ್ನು ಸಿಂಪಡಿಸಬೇಡಿ.

68
ನಕಲಿ ಹಾವು
Image Credit : Asianet News

ನಕಲಿ ಹಾವು

ಬಾಲ್ಕನಿ ಅಥವಾ ಮನೆಯ ಮೇಲ್ಛಾವಣಿಯಲ್ಲಿ ರಬ್ಬರ್ನ ನಕಲಿ ಹಾವು ಇಟ್ಟರೆ ಮಂಗಗಳು ದೂರ ಓಡುತ್ತವೆ. ಆದರೆ ಇದು ಎಲ್ಲ ಸಂದರ್ಭಗಳಲ್ಲೂ ಪರಿಣಾಮಕಾರಿ ಎಂಬ ಖಚಿತವಾಗಿ ಹೇಳಲು ಸಾಧ್ಯವಿಲ್ಲ.

78
ನಿಂಬೆ ಮತ್ತು ಪಟಿಕದ ನೀರು
Image Credit : Asianet News

ನಿಂಬೆ ಮತ್ತು ಪಟಿಕದ ನೀರು

ನಿಂಬೆ ರಸ ಮತ್ತು ಪಟಿಕವನ್ನು ನೀರಿನಲ್ಲಿ ಬೆರೆಸಿ ಮನೆಯ ಹೊರಭಾಗದಲ್ಲಿ ಸಿಂಪಡಿಸುವ ಸಲಹೆಯನ್ನೂ ನೀಡಲಾಗಿದೆ. ಇದರ ವಾಸನೆಯಿಂದ ಮಂಗಗಳು ದೂರ ಉಳಿಯುತ್ತವೆ ಎನ್ನಲಾಗುತ್ತದೆ.

88
ಕಿಟಕಿ, ಬಾಲ್ಕನಿಗೆ ಜಾಲಿ ಹಾಕಿ
Image Credit : Asianet News

ಕಿಟಕಿ, ಬಾಲ್ಕನಿಗೆ ಜಾಲಿ ಹಾಕಿ

ಮಂಗಗಳು ಮನೆಗೆ ನುಗ್ಗುವುದನ್ನು ತಡೆಯಲು ಕಿಟಕಿ, ಬಾಲ್ಕನಿ ಮತ್ತು ಅಗತ್ಯವಿದ್ದರೆ ಮೇಲ್ಛಾವಣಿಯ ಭಾಗಗಳಿಗೆ ಗಟ್ಟಿಯಾದ ಜಾಲಿ ಅಳವಡಿಸುವುದು ಹೆಚ್ಚು ಪರಿಣಾಮಕಾರಿ. ಜೊತೆಗೆ ಮನೆಯ ಹೊರಗೆ ಆಹಾರ ಪದಾರ್ಥಗಳನ್ನು ಇಡದಿರುವುದು ಕೂಡ ಮಂಗಗಳು ಮತ್ತೆ ಮತ್ತೆ ಬರುವುದನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.ಮಂಗಗಳನ್ನು ಓಡಿಸುವಾಗ ಅವುಗಳ ಮೇಲೆ ವಸ್ತುಗಳನ್ನು ಎಸೆಯುವುದು, ಹೊಡೆಯುವುದು ಅಥವಾ ತುಂಬಾ ಹತ್ತಿರ ಹೋಗಿ ಕೆಣಕುವುದು ಅಪಾಯಕಾರಿ. ಮಂಗಗಳು ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಸುರಕ್ಷಿತ ಅಂತರ ಕಾಯ್ದುಕೊಂಡು, ಅಗತ್ಯವಿದ್ದರೆ ಸ್ಥಳೀಯ ಅರಣ್ಯ ಇಲಾಖೆ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಉತ್ತಮ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegde ಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಜೀವನಶೈಲಿ
ಮಂಗ
 

Latest Videos
Recommended Stories
Recommended image1
ಮನೆಯಲ್ಲೋ, ಎಲ್ಲೋ ಒಂದು ಕಡೆ ಒಬ್ಬರೇ ಇರುವಾಗ ಹೃದಯಾಘಾತವಾದರೆ ತಕ್ಷಣ ಏನು ಮಾಡಬೇಕು?
Recommended image2
ಬೀದಿ ನಾಯಿಗಳು ದಾಳಿ ಮಾಡಲು ಬಂದರೆ ಏನು ಮಾಡಬೇಕು? ತಜ್ಞರು ನೀಡಿದ ಸಲಹೆಗಳಿವು
Recommended image3
ಅಂದು ಪ್ರೊಟೋಕಾಲ್​​ ಮೀರಿ ಭಾರತದ ಬಾಲೆಯ ಎತ್ತಿ ಮೂಗು ಒರೆಸಿದ್ದ ಡಯಾನಾ: 34 ವರ್ಷಗಳ ಬಳಿಕ ಇಂದು
Related Stories
Recommended image1
ಬೀದಿ ನಾಯಿಗಳು ದಾಳಿ ಮಾಡಲು ಬಂದರೆ ಏನು ಮಾಡಬೇಕು? ತಜ್ಞರು ನೀಡಿದ ಸಲಹೆಗಳಿವು
Recommended image2
ದಿಂಬಿಗೆ ತಲೆಕೊಟ್ಟರೆ ಸಾಕು, ಗಾಢನಿದ್ದೆ ಆವರಿಸಬೇಕೇ..? ಹಾಗಿದ್ರೆ ಮಲಗುವ ಮುನ್ನ ಈ ನೀರು ಕುಡಿಯಿರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved