ಹೋಟೆಲ್ ವಡೆ ಗಂಟೆಗಟ್ಟಲೆ ಕ್ರಿಸ್ಪಿಯಾಗಿರೋ ಗುಟ್ಟು ರಟ್ಟಾಯ್ತು: ಮನೆಯಲ್ಲೂ ಈ ಈಸಿ ಟಿಪ್ಸ್ ಫಾಲೋ ಮಾಡಿ
ಮನೆಯಲ್ಲಿ ಮಾಡುವ ವಡೆ ಹೋಟೆಲ್ನಂತೆ ಗರಿಗರಿಯಾಗಿ ಬರುವುದಿಲ್ಲ ಮತ್ತು ಬೇಗನೆ ಮೆತ್ತಗಾಗಿಬಿಡುತ್ತದೆ. ಹೋಟೆಲ್ ಶೈಲಿಯ ಕ್ರಿಸ್ಪಿ ವಡೆ ಮಾಡಲು, ಅದನ್ನು ಎರಡು ಬಾರಿ ಕರಿಯಬೇಕು. ಮೊದಲು ಮಧ್ಯಮ ಉರಿಯಲ್ಲಿ, ನಂತರ ಹೆಚ್ಚಿನ ಉರಿಯಲ್ಲಿ ಕರಿದರೆ ವಡೆ ಹೆಚ್ಚು ಹೊತ್ತು ಗರಿಗರಿಯಾಗಿ ಉಳಿಯುತ್ತದೆ.

ಇಡ್ಲಿ-ವಡೆ ಕಾಂಬಿನೇಷನ್
ವಡೆ ಎಂದರೆ ಬಹುತೇಕ ಎಲ್ಲರ ಬಾಯಲ್ಲಿಯೂ ನೀರು ಬರುವುದು ಇದೆ. ಅದರಲ್ಲಿಯೂ ಇಡ್ಲಿಗೆ ಜೊತೆಯಾಗಿ ವಡೆ ಇದ್ದೇ ಇರಬೇಕು. ಇವರೆಡೂ ಬೆಸ್ಟ್ ಫ್ರೆಂಡ್ಸ್. ಅದಕ್ಕೇ ಇಡ್ಲಿ ಎಂದಾಕ್ಷಣ ವಡೆಯ ನೆನಪಾಗುತ್ತದೆ.
ಎಲ್ಲೋ ಮಿಸ್ ಹೊಡೀತಾ ಇದೆ
ಆದರೆ ಮನೆಯಲ್ಲಿ ಮಾಡುವ ವಡೆ ಏನ್ ಮಾಡಿದ್ರೂ ಹೋಟೆಲ್ ಸ್ಟೈಲ್ ಬರೋದೇ ಇಲ್ಲ. ವಡೆಯ ರೆಸಿಪಿಗಳನ್ನು ನೋಡಿ ನೋಡಿ ಮಾಡಿದ್ರೂ ಹೂಂ ಹೂಂ ಯಾಕೋ ಎಲ್ಲೋ ಮಿಸ್ ಹೊಡಿತಾ ಇದೆ ಎಂದೇ ಎನ್ನಿಸುವುದು ಉಂಟು.
ಬೇಗ ಸಾಫ್ಟ್ ಆಗಿಬಿಡುತ್ತೆ ಅಲ್ವಾ?
ಎಲ್ಲ ಹದವೂ ಸರಿ ಮಾಡಿದ್ರೂ ಯಾಕೋ ವಡೆ ಹೋಟೆಲ್ ರೀತಿ ಟೇಸ್ಟ್ ಬರೋದೇ ಇಲ್ಲ. ಕ್ರಿಸ್ಪಿಯಾಗಿದ್ದರೂ ಹತ್ತೇ ನಿಮಿಷದಲ್ಲಿ ಸಾಫ್ಟ್ ಆಗಿ ಬಿಡುತ್ತದೆ. ಬಹುಶಃ ಅವರು ಅದಕ್ಕೆ ಏನೋ ಟೇಸ್ಟರ್ ಮಿಕ್ಸ್ ಮಾಡ್ತಾರೆ ಎಂದುಕೊಂಡು ಎಷ್ಟೋ ಮಂದಿ ಸಮಾಧಾನ ಪಟ್ಟುಕೊಳ್ಳುವುದು ಇದೆ.
ಕ್ರಿಸ್ಪಿ ಆಗಲ್ಲ ಯಾಕೆ?
ಆದರೆ, ಅಸಲಿಯತ್ತು ಅದು ಅಲ್ಲವೇ ಅಲ್ಲ. ನೀವು ಹದವನ್ನು ಸರಿಯಾಗಿ ಮಾಡಿದ್ರೂ ಒಳಗೆ ಬೆಂದರೆ ಹೊರಗೆ ಬೇಯಲ್ಲ, ಹೊರಗೆ ಕ್ರಿಸ್ಪ ಎನ್ನಿಸಿದರೆ ಒಳಗೆ ಬೆಂದಿರಲ್ಲ. ಇದು ಯಾಕೆ ಗೊತ್ತಾ?
ಈ ಟಿಪ್ಸ್ ಫಾಲೋ ಮಾಡಿ
ಹೋಟೆಲ್ ಸ್ಟೈಲ್ನಲ್ಲಿ ಕ್ರಿಸ್ಪಿಯಾಗಿ ವಡೆ ಮಾಡಲು ನಿಮಗೆ ಬೇಕಿರೋದು ನೀವು ಪರ್ಫೆಕ್ಟಾಗಿ ಮಾಡ್ತಿರೋ ಹದದ ಜೊತೆ ಇನ್ನೊಂದು ಬಹುಮುಖ್ಯವಾದ ಟಿಪ್ಸ್.
ಇಲ್ಲಿದೆ ಆ ಹೋಟೆಲ್ ಗುಟ್ಟು
ಅದೇನೆಂದರೆ, ವಡೆಯನ್ನು ಎರಡು ಸಲ ಎಣ್ಣೆಯಲ್ಲಿ ಫ್ರೈ ಮಾಡಬೇಕು. ನೀವು ಬೀದಿ ಬದಿಯ ಅಂಗಡಿಯಲ್ಲಿ ನಿಂತು ಒಮ್ಮೆ ನೋಡಿದರೆ ಈ ಟಿಪ್ಸ್ ತಿಳಿಯುತ್ತದೆ. ಒಮ್ಮೆ ಮಧ್ಯಮ ಉರಿಯಲ್ಲಿ ವಡೆಯನ್ನು ಬೇಯಿಸಿ ತೆಗೆಯಬೇಕು. ಎಲ್ಲಾ ವಡೆಗಳನ್ನು ಹೀಗೆ ಮಾಡಿ ತೆಗೆದ ಮೇಲೆ, ಇನ್ನೊಂದು ದೊಡ್ಡ ಉರಿಯಲ್ಲಿ ಅವುಗಳನ್ನು ಮತ್ತೆ ಬೇಯಿಸಬೇಕು. ಹೀಗೆ ಮಾಡಿ ನೋಡಿ, ಹೋಟೆಲ್ ಸ್ಟೈಲ್ನಲ್ಲಿ ದೀರ್ಘ ಅವಧಿಯವರೆಗೆ ವಡೆ ಕ್ರಿಸ್ಪಿಯಾಗಿಯೇ ಇರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

