- Home
- Life
- Rent House Rules: ಬಾಡಿಗೆ ಮನೆಯಲ್ಲಿ ಎಷ್ಟು ವರ್ಷ ವಾಸವಿದ್ದರೆ ಆ ಮನೆ ಬಾಡಿಗೆದಾರನಿಗೆ ಸ್ವಂತವಾಗುತ್ತೆ?
Rent House Rules: ಬಾಡಿಗೆ ಮನೆಯಲ್ಲಿ ಎಷ್ಟು ವರ್ಷ ವಾಸವಿದ್ದರೆ ಆ ಮನೆ ಬಾಡಿಗೆದಾರನಿಗೆ ಸ್ವಂತವಾಗುತ್ತೆ?
Tenant rights in India: ಬಾಡಿಗೆ ಮನೆಯಲ್ಲಿ ಎಷ್ಟು ವರ್ಷ ವಾಸವಿದ್ದರೆ ಆ ಮನೆ ಬಾಡಿಗೆದಾರನಿಗೆ ಸ್ವಂತವಾಗುತ್ತೆ? ಈ ಬಗ್ಗೆ ನಮ್ಮ ಕಾನೂನು ಏನು ಹೇಳುತ್ತೆ? ಬಾಡಿಗೆ ಮನೆ ಯಾವಾಗ ಬಾಡಿಗೆದಾರನ ಪಾಲಾಗುತ್ತೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಾಡಿಗೆ ಮನೆ ನಿಯಮ
ಬಾಡಿಗೆ ಮನೆ ನಿಯಮ
ಸಮಾಜದಲ್ಲಿ ಒಂದು ದೊಡ್ಡ ತಪ್ಪು ಕಲ್ಪನೆ ಇದೆ. ಒಂದು ಮನೆಯಲ್ಲಿ ಅಥವಾ ಜಾಗದಲ್ಲಿ ತುಂಬಾ ವರ್ಷ ಬಾಡಿಗೆಗಿದ್ದರೆ, ಆ ಆಸ್ತಿ ಬಾಡಿಗೆದಾರನಿಗೆ ಸ್ವಂತವಾಗುತ್ತೆ ಅಂತ ಜನ ಅಂದುಕೊಂಡಿದ್ದಾರೆ. ಅದರಲ್ಲೂ 12 ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಮನೆಯಲ್ಲಿದ್ದರೆ ಆ ಮನೆ ತಮಗೇ ಸೇರುತ್ತೆ ಅಂತ ನಂಬಿದ್ದಾರೆ. ಆದರೆ, ಭಾರತೀಯ ಕಾನೂನಿನ ಪ್ರಕಾರ ಇದು ಶುದ್ಧ ಸುಳ್ಳು. ನೀವು ಎಷ್ಟೇ ವರ್ಷ ಬಾಡಿಗೆಗಿದ್ದರೂ, ಕೇವಲ ಬಾಡಿಗೆದಾರರಾಗಿರುವ ಕಾರಣಕ್ಕೆ ಆ ಮನೆ ನಿಮಗೆ ಎಂದಿಗೂ ಸ್ವಂತವಾಗುವುದಿಲ್ಲ.
ಆಸ್ತಿ ಯಾವಾಗ ಬಾಡಿಗೆದಾರನಿಗೆ ಸೇರುತ್ತೆ?
ಆಸ್ತಿ ಯಾವಾಗ ಬಾಡಿಗೆದಾರನಿಗೆ ಸೇರುತ್ತೆ?
ಬಾಡಿಗೆದಾರ ಪ್ರತಿ ತಿಂಗಳು ಬಾಡಿಗೆ ಕಟ್ಟುತ್ತಾ, ಅಗ್ರಿಮೆಂಟ್ ಪ್ರಕಾರ ಮನೆಯಲ್ಲಿದ್ದರೆ ಆತ ಕೇವಲ ಆಸ್ತಿಯನ್ನು ಬಳಸುವವನಾಗುತ್ತಾನೆ. ಎಷ್ಟೇ ದಶಕ ಕಳೆದರೂ ಮಾಲೀಕನ ಹಕ್ಕುಗಳು ಹಾಗೇ ಇರುತ್ತವೆ. ಆದರೆ ಈ 12 ವರ್ಷದ ಕಥೆ ಹುಟ್ಟಿದ್ದು 'ಲಿಮಿಟೇಶನ್ ಆಕ್ಟ್'ನಿಂದ. ಇದರ ಪ್ರಕಾರ, ಬಾಡಿಗೆದಾರ ಮಾಲೀಕನಿಗೆ ಬಹಿರಂಗವಾಗಿ ಸವಾಲು ಹಾಕಿ, ಯಾವುದೇ ಬಾಡಿಗೆ ಕಟ್ಟದೆ, ಮಾಲೀಕನ ಒಪ್ಪಿಗೆಯಿಲ್ಲದೆ ಸತತ 12 ವರ್ಷ ಆಸ್ತಿಯನ್ನು ತನ್ನ ವಶದಲ್ಲಿಟ್ಟುಕೊಳ್ಳಬೇಕು. ತನ್ನ ಆಸ್ತಿ ಒತ್ತುವರಿಯಾಗಿದೆ ಅಂತ ಗೊತ್ತಿದ್ದರೂ ಮಾಲೀಕ 12 ವರ್ಷ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮಾತ್ರ ಆಸ್ತಿ ಬಾಡಿಗೆದಾರನಿಗೆ ಸೇರುತ್ತದೆ.
ಇದು ಅಷ್ಟು ಸುಲಭವಲ್ಲ
ಇದು ಅಷ್ಟು ಸುಲಭವಲ್ಲ
ಈ ಕಠಿಣ ನಿಯಮಗಳು ಸಾಮಾನ್ಯ ಬಾಡಿಗೆದಾರನಿಗೆ ಅನ್ವಯಿಸುವುದಿಲ್ಲ. ಯಾಕೆಂದರೆ, ಬಾಡಿಗೆದಾರ ಯಾವಾಗಲೂ ಮಾಲೀಕನ ಹಕ್ಕನ್ನು ಒಪ್ಪಿಕೊಂಡೇ ಬಾಡಿಗೆ ಕಟ್ಟುತ್ತಿರುತ್ತಾನೆ. ಹಾಗಾಗಿ, ಸಾಮಾನ್ಯ ಬಾಡಿಗೆದಾರರು ಎಷ್ಟೇ ವರ್ಷ ಒಂದೇ ಮನೆಯಲ್ಲಿದ್ದರೂ ಅವರಿಗೆ ಮಾಲೀಕತ್ವದ ಹಕ್ಕು ಸಿಗುವುದಿಲ್ಲ. ಅಗ್ರಿಮೆಂಟ್ ಮುಗಿದಾಗ ಅಥವಾ ಮಾಲೀಕರು ಕೇಳಿದಾಗ ಬಾಡಿಗೆದಾರರು ಮನೆ ಖಾಲಿ ಮಾಡಿಕೊಡಲೇಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

