MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Karnataka Districts
  • ಗೃಹಜ್ಯೋತಿ ಫ್ರೀ ಕರೆಂಟ್ ಅಂತ ಹೇಳಿ ಜನರ ಜೇಬಿಗೆ ಕತ್ತರಿ ಹಾಕಿತಾ ಬೆಸ್ಕಾಂ? ಸಣ್ಣ ಮನೆಗಳಿಗೂ ಬಂತು ₹5 ಸಾವಿರ ಬಿಲ್!

ಗೃಹಜ್ಯೋತಿ ಫ್ರೀ ಕರೆಂಟ್ ಅಂತ ಹೇಳಿ ಜನರ ಜೇಬಿಗೆ ಕತ್ತರಿ ಹಾಕಿತಾ ಬೆಸ್ಕಾಂ? ಸಣ್ಣ ಮನೆಗಳಿಗೂ ಬಂತು ₹5 ಸಾವಿರ ಬಿಲ್!

ಗಣೇಶ ಚತುರ್ಥಿ ಹಬ್ಬದ ಸಂಭ್ರಮದ ನಡುವೆ, ಬೆಂಗಳೂರಿನ 'ಗೃಹಜ್ಯೋತಿ' ಯೋಜನೆ ಫಲಾನುಭವಿಗಳಿಗೆ ಬೆಸ್ಕಾಂ ದುಬಾರಿ ವಿದ್ಯುತ್ ಬಿಲ್ ನೀಡಿ ಆಘಾತ ನೀಡಿದೆ. ತಾಂತ್ರಿಕ ದೋಷದ ಕಾರಣ ಹೇಳಲಾಗುತ್ತಿದ್ದರೂ, ಸತತ ಎರಡನೇ ತಿಂಗಳೂ ಸಾವಿರಾರು ರೂಪಾಯಿಗಳ ಬಿಲ್ ಬಂದಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

1 Min read
Author : Sathish Kumar KH
Published : Sep 14 2026, 10:37 AM IST
Share this Photo Gallery
  • FB
  • TW
  • Linkdin
  • Whatsapp
14
ಗಣೇಶನ ಹಬ್ಬಕ್ಕೆ ಕೊಟ್ರಲ್ಲಪ್ಪ ಶಾಕ್
Image Credit : Asianet News

ಗಣೇಶನ ಹಬ್ಬಕ್ಕೆ ಕೊಟ್ರಲ್ಲಪ್ಪ ಶಾಕ್

ಬೆಂಗಳೂರು: ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿದ್ದ ರಾಜಧಾನಿ ಜನತೆಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತೀವ್ರ 'ಕರೆಂಟ್ ಶಾಕ್' ನೀಡಿದೆ. ಸರ್ಕಾರದ ಗ್ಯಾರಂಟಿ ಯೋಜನೆಯಾದ ‘ಗೃಹಜ್ಯೋತಿ’ ಅಡಿಯಲ್ಲಿ ಈವರೆಗೆ 'ಜೀರೋ ಬಿಲ್' (Zero Bill) ಪಡೆಯುತ್ತಿದ್ದ ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರ ಕೈಗೆ ದಿಢೀರನೇ ಸಾವಿರಾರು ರೂಪಾಯಿಗಳ ದುಬಾರಿ ಬಿಲ್ ತಲುಪಿದ್ದು, ಜನಸಾಮಾನ್ಯರು ಕಂಗಾಲಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಸಣ್ಣ ಮನೆಗಳಿಗೂ ₹4 ರಿಂದ ₹5 ಸಾವಿರ ಬಿಲ್!
Image Credit : x.com

ಸಣ್ಣ ಮನೆಗಳಿಗೂ ₹4 ರಿಂದ ₹5 ಸಾವಿರ ಬಿಲ್!

ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮಖಾನ್ ಕಾಂಪೌಂಡ್ ಹಾಗೂ ವೈಯಾಲಿಕಾವಲ್ ಸೇರಿದಂತೆ ನಗರದ ಹಲವು ಬಡಾವಣೆಗಳಲ್ಲಿ ಈ ಅವಾಂತರ ಬೆಳಕಿಗೆ ಬಂದಿದೆ. ಒಂದು ಸಣ್ಣ ರೂಮ್‌ನಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೂ ಬರೋಬ್ಬರಿ ₹4,000 ದಿಂದ ₹5,000 ದವರೆಗೂ ಕರೆಂಟ್ ಬಿಲ್ ನೀಡಲಾಗಿದೆ. ಹಬ್ಬದ ಹೊತ್ತಲ್ಲೇ ಬಂದಿರುವ ಈ ದುಬಾರಿ ಬಿಲ್ ನೋಡಿ ಸಾರ್ವಜನಿಕರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Related Articles

Related image1
ಬಿಲ್ ಪಾವತಿ, ಹೊಸ ಸಂಪರ್ಕ, ವರ್ಗಾವಣೆ ಸೇರಿ ಬೆಸ್ಕಾಂ ಆನ್‌ಲೈನ್ ಸೇವೆಗಳು ಇನ್ನು 21 ದಿನ ಸಿಗಲ್ಲ
Related image2
ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್‌ನ್ಯೂಸ್; ಉಚಿತ ವಿದ್ಯುತ್ ಯೋಜನೆಯ ಮಹತ್ವದ ಅಪ್‌ಡೇಟ್ ಕೊಟ್ಟ ಬೆಸ್ಕಾಂ ಎಂಡಿ
34
ತಾಂತ್ರಿಕ ದೋಷವೋ? ಸರ್ಕಾರದ ಜೇಬು ತುಂಬಿಸುವ ತಂತ್ರವೋ?
Image Credit : X

ತಾಂತ್ರಿಕ ದೋಷವೋ? ಸರ್ಕಾರದ ಜೇಬು ತುಂಬಿಸುವ ತಂತ್ರವೋ?

ಕಳೆದ ತಿಂಗಳೂ ಇದೇ ರೀತಿ ದುಪ್ಪಟ್ಟು ಬಿಲ್ ಬಂದಾಗ, ‘ಮೀಟರ್ ತಂತ್ರಾಂಶ ಪರಿಷ್ಕರಣೆ (Software Upgradation) ವೇಳೆ ಉಂಟಾದ ತಾಂತ್ರಿಕ ಸಮಸ್ಯೆ, ಮುಂದಿನ ತಿಂಗಳು ಸರಿಹೋಗಲಿದೆ’ ಎಂದು ಬೆಸ್ಕಾಂ ಸಬೂಬು ನೀಡಿತ್ತು. ಆದರೆ, ಈ ತಿಂಗಳೂ ಸಹ ಅದೇ ಸಮಸ್ಯೆ ಪುನರಾವರ್ತನೆಯಾಗಿದ್ದು, ಗ್ರಾಹಕರು ಗೊಂದಲಕ್ಕೊಳಗಾಗಿದ್ದಾರೆ. ಇದು ಕೇವಲ ತಾಂತ್ರಿಕ ಎಡವಟ್ಟೋ ಅಥವಾ ಉಚಿತ ವಿದ್ಯುತ್ ನೀಡುತ್ತಿರುವ ನೆಪದಲ್ಲಿ ಹಿಂಬಾಗಿಲಿನಿಂದ ಜನರ ಜೇಬಿಗೆ ಕತ್ತರಿ ಹಾಕುವ ಪ್ರಯತ್ನವೋ ಎಂಬ ಅನುಮಾನವನ್ನು ಸ್ಥಳೀಯ ನಿವಾಸಿಗಳು ವ್ಯಕ್ತಪಡಿಸುತ್ತಿದ್ದಾರೆ.

44
ಕಳೆದ ಎರಡು ತಿಂಗಳಿಂದ ಮುಂದುವರಿದ ಗೋಳು:
Image Credit : Asianet News

ಕಳೆದ ಎರಡು ತಿಂಗಳಿಂದ ಮುಂದುವರಿದ ಗೋಳು:

ಶಿವಾಜಿನಗರ, ವೈಯಾಲಿಕಾವಲ್ ಮಾತ್ರವಲ್ಲದೆ ಬೆಂಗಳೂರಿನ ಹಲವೆಡೆ ಕಳೆದ ಎರಡು ತಿಂಗಳಿಂದ ನಿರಂತರವಾಗಿ ದುಪ್ಪಟ್ಟು ಬಿಲ್‌ಗಳು ಬರುತ್ತಿವೆ. ಪ್ರತಿ ತಿಂಗಳು 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುತ್ತಿದ್ದರೂ, ಗೃಹಜ್ಯೋತಿ ಯೋಜನೆ ಅನ್ವಯವಾಗದೆ ಲಕ್ಷಾಂತರ ರೂಪಾಯಿ ಸಂಗ್ರಹಣೆಗೆ ಬೆಸ್ಕಾಂ ಮುಂದಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸಲು ಬಡ ಕುಟುಂಬಗಳು ಪರದಾಡುತ್ತಿದ್ದು, ಬೆಸ್ಕಾಂ ಹಾಗೂ ಇಂಧನ ಇಲಾಖೆ ತಕ್ಷಣವೇ ಮಧ್ಯಪ್ರವೇಶಿಸಿ ಈ ಬಿಲ್ ಗೊಂದಲವನ್ನು ಪರಿಹರಿಸಬೇಕೆಂದು ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ಬೆಸ್ಕಾಂ
ಸರ್ಕಾರಿ ಯೋಜನೆಗಳು

Latest Videos
Recommended Stories
Recommended image1
ಸೆ.17ರ ಕಲ್ಯಾಣ ಕರ್ನಾಟಕ ಉತ್ಸವದಂದು 'ಪ್ರತ್ಯೇಕ ರಾಜ್ಯ ಧ್ವಜ' ಹಾರಾಟ; ಕನ್ನಡಪರ ಸಂಘಟನೆಗಳಿಂದ ಮುಹೂರ್ತ ಫಿಕ್ಸ್!
Recommended image2
ಸಿದ್ದರಾಮಯ್ಯ ಕುಟುಂಬ ಹೊಸ ಬಂಗಲೆಗೆ ಶಿಫ್ಟ್: ಗಣ್ಯರನ್ನು ಆಹ್ವಾನಿಸದೇ ಪೆಂಡಾಲ್ ಮುಚ್ಚಿ ಹೊಸ ಮನೆ ಗೃಹಪ್ರವೇಶ!
Recommended image3
ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ಸಮಯ ಬದಲಾಗುತ್ತಾ? ಪ್ರಯಾಣಿಕರ ಬೇಡಿಕೆಯೇನು?
Related Stories
Recommended image1
ಬಿಲ್ ಪಾವತಿ, ಹೊಸ ಸಂಪರ್ಕ, ವರ್ಗಾವಣೆ ಸೇರಿ ಬೆಸ್ಕಾಂ ಆನ್‌ಲೈನ್ ಸೇವೆಗಳು ಇನ್ನು 21 ದಿನ ಸಿಗಲ್ಲ
Recommended image2
ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್‌ನ್ಯೂಸ್; ಉಚಿತ ವಿದ್ಯುತ್ ಯೋಜನೆಯ ಮಹತ್ವದ ಅಪ್‌ಡೇಟ್ ಕೊಟ್ಟ ಬೆಸ್ಕಾಂ ಎಂಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved