MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • e-KYC Deadline: ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಗುಡ್‌ನ್ಯೂಸ್‌ ಕೊಟ್ಟ ಕೇಂದ್ರ ಸರ್ಕಾರ; ಈಗಲಾದರೂ ಎಚ್ಚೆತ್ತುಕೊಳ್ಳಿ!

e-KYC Deadline: ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಗುಡ್‌ನ್ಯೂಸ್‌ ಕೊಟ್ಟ ಕೇಂದ್ರ ಸರ್ಕಾರ; ಈಗಲಾದರೂ ಎಚ್ಚೆತ್ತುಕೊಳ್ಳಿ!

LPG ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಅಡುಗೆ ಅನಿಲ e-KYC ಪೂರ್ತಿ ಮಾಡಲು ಈ ಹಿಂದೆ ನಿಗದಿ ಮಾಡಿದ್ದ ದಿನಾಂಕವನ್ನು ಆಗಸ್ಟ್ 23ರ ವರೆಗೂ ವಿಸ್ತರಣೆ ಮಾಡಿದೆ. ಆ ಮೂಲಕ ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ.

2 Min read
Author : Sumanth SN
Published : Aug 18 2026, 01:27 PM IST
Share this Photo Gallery
  • FB
  • TW
  • Linkdin
  • Whatsapp
18
ಆಗಸ್ಟ್ 23ರ ವರೆಗೂ ಡೆಡ್‌ಲೈನ್ ವಿಸ್ತರಣೆ
Image Credit : X

ಆಗಸ್ಟ್ 23ರ ವರೆಗೂ ಡೆಡ್‌ಲೈನ್ ವಿಸ್ತರಣೆ

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಅಡುಗೆ ಅನಿಲ ಇ-ಕೆವೈಸಿ ಪೂರ್ತಿ ಮಾಡಲು ಈ ಹಿಂದೆ ನಿಗದಿ ಮಾಡಿದ್ದ ದಿನಾಂಕ ಅಂತ್ಯವಾದ ಕಾರಣ ಗ್ರಾಹಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಆದರೆ ಈಗ ಇಂತಹವರಿಗೆ ಬಿಗ್ ರಿಲೀಫ್ ನೀಡಿದ್ದು, ಇಕೆವೈಸಿ ಮಾಡಿಸುವ ಅಂತಿಮ ದಿನಾಂಕವನ್ನು ಆಗಸ್ಟ್ 23ರ ವರೆಗೂ ವಿಸ್ತರಣೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಗ್ರಾಹಕರಿಗೆ ಮತ್ತೊಂದು ಅವಕಾಶ
Image Credit : Getty

ಗ್ರಾಹಕರಿಗೆ ಮತ್ತೊಂದು ಅವಕಾಶ

ಇಂಡಿಯನ್ ಆಯಿಲ್, ಭಾರತ್ ಗ್ಯಾಸ್, ಹಿಂದೂಸ್ತಾನ ಪೆಟ್ರೋಲಿಯಂ ಕಂಪನಿಗಳ ಗ್ರಾಹಕರಿಗೆ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ನೇರವಾಗಿ ಸಂದೇಶ ಕಳುಹಿಸಿ ಮಾಹಿತಿ ನೀಡುತ್ತಿವೆ ಎಂದು ಗುಡ್ ರಿಟರ್ನ್ಸ್ ವರದಿ ಮಾಡಿದೆ. ದಿನನಿತ್ಯದ ಒತ್ತಡದ ಜೀವನ ಹಾಗು ತಾಂತ್ರೀಕ ಕಾರಣ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಇದುವರೆಗೂ ಇಕೆವೈಸಿ ಮಾಡಿಸಲು ಸಾಧ್ಯವಾಗದ ಗ್ರಾಹಕರ ಆತಂಕ ದೂರವಾಗಿದ್ದು, ಸದ್ಯ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಮತ್ತೊಂದು ಅವಕಾಶ ಸಿಕ್ಕಿದೆ.

Related Articles

Related image1
LPG; ಎಲ್‌ಪಿಜಿ ಗ್ರಾಹಕರೇ ಎಚ್ಚರ! ಗ್ಯಾಸ್ ಬುಕ್ ಮಾಡುವ ಮುನ್ನ ಈ '8' ನಿಯಮ ತಿಳಿಯಿರಿ! ಇಲ್ಲದಿದ್ದರೆ ಸಿಗಲ್ಲ ಸಿಲಿಂಡರ್!
Related image2
Lpg: ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ತಕ್ಷಣವೇ ಮನೆ ಬಾಗಿಲಿಗೆ! ಹೊಸ ನಿಯಮ ಕೇಳಿದ್ರೆ ಗ್ರಾಹಕರು ಫುಲ್ ಖುಷ್!
38
ನೋ ಕ್ಯೂ, ಜಸ್ಟ್ 5 ನಿಮಿಷದಲ್ಲಿ ಇಕೆವೈಸಿ
Image Credit : ANI

ನೋ ಕ್ಯೂ, ಜಸ್ಟ್ 5 ನಿಮಿಷದಲ್ಲಿ ಇಕೆವೈಸಿ

ಇನ್ನು, ಇಕೆವೈಸಿ ಗಡುವು ವಿಸ್ತರಣೆ ಮಾಡಲು ಆನ್‌ಲೈನ್ ವಿಧಾನದಲ್ಲಿ ಹಾಗೂ ಆಫ್‌ಲೈನ್ ವಿಧಾನದಲ್ಲಿ ಎದುರಾದ ಸಮಸ್ಯೆಯೇ ಕಾರಣ ಎಂದು ಹೇಳಲಾಗುತ್ತಿದೆ. ದೇಶದಾದ್ಯಂತ ಒಂದೇ ಬಾರಿಗೆ ಲಕ್ಷಾಂತರ ಗ್ರಾಹಕರ ಕೆವೈಸಿ ಪೂರ್ಣಗೊಳಿಸಲು ಮುಂದಾದ ಸಂದರ್ಭದಲ್ಲಿ ಸರ್ವಸ್‌ ಸಮಸ್ಯೆ ಕಾಣಿಸಿಕೊಂಡಿದ್ದು, ನೂರಾರು ಮಂದಿ ಏಜೆನ್ಸಿಗಳ ಮುಂದೇ ಕ್ಯೂ ನಿಂತ ದೃಶ್ಯಗಳು ಕಾಣಿಸಿದ್ದವು.

48
ಅರ್ಹ ಫಲಾನುಭವಿಗಳಿಗೆ ಮಾತ್ರ ಸಬ್ಸಿಡಿ
Image Credit : ANI

ಅರ್ಹ ಫಲಾನುಭವಿಗಳಿಗೆ ಮಾತ್ರ ಸಬ್ಸಿಡಿ

ಅದರಲ್ಲೂ ಸ್ಥಳಿಯ ಏಜೆನ್ಸಿಗಳ ಬಳಿ ಬಯೋಮೆಟ್ರಿಕ್ ಯಂತ್ರಗಳು ಪದೇ ಪದೇ ಕೈಕೊಡುತ್ತಿದ್ದವು. ಕೆಲವು ಸಂದರ್ಭದಲ್ಲಿ ಒಟಿಪಿಗಳು ಸ್ವೀಕಾರ ಆಗದೆ ಇರೋದು. ಇದರಿಂದ ಸಾಮಾನ್ಯ ಗ್ರಾಹಕರು ಸಮಸ್ಯೆ ಎದುರಿಸಿದ್ದವು, ಈ ಅಂಶಗಳನ್ನು ಗಮನಿಸಿದ ಸರ್ಕಾರ ಒಂದು ವಾರಗಳ ಕಾಲ ಅಂತಿಮ ಗಡುವನ್ನು ವಿಸ್ತರಣೆ ಮಾಡಿದೆ. ಸರ್ಕಾರ ಇಕೆವೈಸಿಯನ್ನು ಪೂರ್ಣಗೊಳಿಸಲು ಗ್ರಾಹಕರ ಬಳಿ ಮನವಿ ಮಾಡುತ್ತಿರುವ ಹಿಂದೆ, ಆರ್ಥಿಕ ಹಾಗೂ ಸಾಮಾಜಿಕ ಕಾರಣಗಳು ಇದೆ. ದೇಶದಾದ್ಯಂತ ಇರುವ ಅಕ್ರಮ ನಕಲಿ ಗ್ಯಾಸ್ ಸಂಪರ್ಕಗಳನ್ನು ಗುರುತಿಸಿ, ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ನೀಡಲು ಮುಂದಾಗುತ್ತಿದೆ.

58
ನಕಲಿ ಗ್ರಾಹಕರಿಗೆ ಚೆಕ್‌ಮೇಟ್
Image Credit : X

ನಕಲಿ ಗ್ರಾಹಕರಿಗೆ ಚೆಕ್‌ಮೇಟ್

ಕೇಂದ್ರ ಸರ್ಕಾರ ಮಹತ್ವಕಾಂಕ್ಷಿ ಯೋಜನೆಯಾಗಿರುವ ಪ್ರಧಾನಮಂತ್ರಿ ಉಜ್ವಲ ಯೋಜನಾ, ಪಹಾಲ್ ಅಡಿ ಸರ್ಕಾರ ಡಿಬಿಟಿ ಮೂಲಕ ಸಬ್ಸಿಡಿ ನೀಡುತ್ತಿದ್ದು, ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದೆ. ಇದರಂತೆ ಒಂದು ಕುಟುಂಬಕ್ಕೆ ಒಂದು ಕನೆಕ್ಷನ್ ಇರುವಂತೆ ಸರ್ಕಾರ ಕ್ರಮಕೈಗೊಳ್ಳುತ್ತಿದೆ.

68
ಇ-ಕೆವೈಸಿ ಮಾಡಿಸಿಲ್ಲ ಎಂದರೆ ಏನಾಗುತ್ತೆ?
Image Credit : Gemini AI

ಇ-ಕೆವೈಸಿ ಮಾಡಿಸಿಲ್ಲ ಎಂದರೆ ಏನಾಗುತ್ತೆ?

ಹೊಸದಾಗಿ ನಿಗದಿ ಮಾಡಿರುವ ದಿನಾಂಕದ ವೇಳೆಗೆ ಇಕೆವೈಸಿ ಪೂರ್ಣಗೊಳಿಸದಿದ್ದರೆ ಗ್ರಾಹಕರು ಸಬ್ಸಡಿ ಸೌಲಭ್ಯವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಅಲ್ಲದೇ ಭವಿಷ್ಯದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿಕೊಳ್ಳುವ, ಡೋರ್ ಡೆಲಿವರಿ ಪಡೆದುಕೊಳ್ಳುವ ಪ್ರಕ್ರಿಯೆಯೂ ಬಂದ್ ಆಗುವ ಸಾಧ್ಯತೆ ಇದೆ.

78
ಗ್ರಾಮೀಣ ಭಾಗದ ಜನರು ಏನು ಮಾಡಬೇಕು?
Image Credit : Asianet News

ಗ್ರಾಮೀಣ ಭಾಗದ ಜನರು ಏನು ಮಾಡಬೇಕು?

ಗ್ರಾಮೀಣ ಭಾಗದ ಜನರು ಇಕೆವೈಸಿ ಮಾಡಿಸಲು ಆಫ್ ಲೈನ್ ಪ್ರಕ್ರಿಯೆಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ನೇರವಾಗಿ ಎಚ್ಪಿ, ಇಂಡಿಯನ್, ಭಾರತ್ ಗ್ಯಾಸ್ ಏಜೆನ್ಸಿಗಳ ಕಚೇರಿಗಳಿಗೆ ತೆರಳಿ ಅಗತ್ಯ ದಾಖಲೆಗಳನ್ನು ನೀಡಿ ಇ-ಕೆವೈಸಿ ಪೂರ್ಣಗೊಳಿಸಬಹುದು. ಈ ಪ್ರಕ್ರಿಯೆಗೆ ಕೇವಲ 5 ನಿಮಿಷ ತೆಗೆದುಕೊಳ್ಳುತ್ತದೆ. ಇನ್ನು, ಇ-ಕೆವೈಸಿ ಮಾಡಿಸುವ ಸಂದರ್ಭದಲ್ಲಿ ಯಾವುದೇ ಹಣ ನೀಡುವಂತೆ ಇಲ್ಲ ಎಂದು ಗಮನಿಸಬೇಕಾಗುತ್ತದೆ.

88
5 ನಿಮಿಷದಲ್ಲಿ ಇ-ಕೆವೈಸಿ ಮನೆಯಲ್ಲಿ ಮಾಡಿ!
Image Credit : Asianet News

5 ನಿಮಿಷದಲ್ಲಿ ಇ-ಕೆವೈಸಿ ಮನೆಯಲ್ಲಿ ಮಾಡಿ!

ಏಜೆನ್ಸಿಗಳ ಕಚೇರಿಗೆ ತೆರಳಲು ಸಮಯ ಇಲ್ಲದವರು ಆನ್ ಲೈನ್‌ನಲ್ಲಿ ಇ-ಕೆವೈಸಿ ಪೂರ್ಣಗೊಳಿಸಬಹುದು. ವೃದ್ಧರು, ಉದ್ಯೋಗಕ್ಕೆ ತೆರಳುವವರು ತಮ್ಮ ಬಳಿ ಇರುವ ಸ್ಮಾರ್ಟ್ ಫೋನ್ ಮೂಲಕ ಕೇವಲ 5 ನಿಮಿಷದಲ್ಲಿ ಇ-ಕೆವೈಸಿ ಪೂರ್ಣಗೊಳಿಸಬಹುದು. ಇದಕ್ಕಾಗಿ ನೀವು ನಿಮ್ಮ ಮೊಬೈಲ್‌ನಲ್ಲಿ ನಿಮ್ಮ ಬಳಿ ಇರುವ ಗ್ಯಾಸ್ ಕಂಪನಿಯ ಅಧಿಕೃತ ಆಪ್ ಡೌನ್ ಲೋಡ್ ಮಾಡಿಕೊಂಡು ಲಾಗ್ ಇನ್ ಆಗಬೇಕು. ಜೊತೆಗೆ ಆಧಾರ್ ಸಂಸ್ಥೆಯ Aadhaar FaceRD ಎಂ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಗ್ಯಾಸ್ ಆಪ್‌ನಲ್ಲಿ ನಿಮ್ಮ ಮೊಬೈಲ್ ನಂಬರ್, ಒಟಿಪಿ ಮೂಲಕ ಲಾಗಿನ್ ಆಗಿ, ಪ್ರೋಫೈಲ್ ಸೆಕ್ಷನ್‌ನಲ್ಲಿರುವ ಇಕೆವೈಸಿ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ಆ ಬಳಿಕ 12 ನಂಬರ್‌ಗಳ ಆಧಾರ್ ನಂಬರ್ ನಮೂದಿಸಿ ಫ್ರಂಟ್ ಕ್ಯಾಮೆರಾ ಮೂಲಕ ಫೇಸ್ ಸ್ಕ್ಯಾನ್ ಮಾಡಿ ಪ್ರೋಸೆಸ್ ಮಾಡಬೇಕು. ಜೊತೆಗೆ ನೋವು ಪಿಎಂಯುವೈ ಅಧಿಕೃತ ವೆಬ್‌ಸೈಟ್ ಮೂಲಕವೂ ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳಬಹುದು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SS
Sumanth SN
ಕಳೆದ 09 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಊರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲುಕಿನ ಸೀಕಲ್ಲು ಎಂಬ ಗ್ರಾಮ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದು, ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್, ನ್ಯೂಸ್18 ಕನ್ನಡದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಈಗ ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಲೀಡ್-ಲೋಕಲ್ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ, ರಾಜಕೀಯ, ಸ್ಪೋರ್ಟ್ಸ್, ಕೃಷಿ ನನ್ನ ಆಸಕ್ತಿಯ ಕ್ಷೇತ್ರಗಳು.
ಎಲ್‌ಪಿಜಿ
ಆಧಾರ್ ಕಾರ್ಡ್

Latest Videos
Recommended Stories
Recommended image1
Bengaluru: ಒಂದೇ ದಿನ ₹35 ಲಕ್ಷ ಮೌಲ್ಯದ HMT ವಾಚ್‌ ಮಾರಾಟ: ಹೆಚ್‌ಡಿ ಕುಮಾರಸ್ವಾಮಿ
Recommended image2
Latte Factor: ದಿನಕ್ಕೆ ₹100ರ ಲೆಕ್ಕ, ಕೋಟಿ ಗಳಿಕೆ ಪಕ್ಕಾ; ಕೋಟ್ಯಧಿಪತಿಯಾಗೋ ಟಿಪ್ಸ್
Recommended image3
ಕರ್ನಾಟಕ, ಜಾರ್ಖಂಡ್ ಹಾಗೂ ಮಹಾರಾಷ್ಟ್ರದಲ್ಲಿ ಮಳೆ ಅಭಾವ: ದೇಶದಲ್ಲಿ ಭತ್ತದ ಬಿತ್ತನೆ 14.37 ಲಕ್ಷ ಹೆಕ್ಟೇರ್‌ ಕುಸಿತ!
Related Stories
Recommended image1
LPG; ಎಲ್‌ಪಿಜಿ ಗ್ರಾಹಕರೇ ಎಚ್ಚರ! ಗ್ಯಾಸ್ ಬುಕ್ ಮಾಡುವ ಮುನ್ನ ಈ '8' ನಿಯಮ ತಿಳಿಯಿರಿ! ಇಲ್ಲದಿದ್ದರೆ ಸಿಗಲ್ಲ ಸಿಲಿಂಡರ್!
Recommended image2
Lpg: ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ತಕ್ಷಣವೇ ಮನೆ ಬಾಗಿಲಿಗೆ! ಹೊಸ ನಿಯಮ ಕೇಳಿದ್ರೆ ಗ್ರಾಹಕರು ಫುಲ್ ಖುಷ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved