ಡಯಾಬಿಟಿಕ್ ರೋಗಿಗಳು ಟ್ರಾವೆಲ್ ಸಂದರ್ಭ ಈ ವಿಷ್ಯಾನ ಮರೆಯಬೇಡಿ
ಯಾರು ಟ್ರಾವೆಲ್ ಮಾಡಲು ಇಷ್ಟಪಡುವುದಿಲ್ಲ ಹೇಳಿ? ಕೆಲವು ಜನರು ಸುತ್ತಾಡಲು ತುಂಬಾ ಇಷ್ಟಪಡುತ್ತಾರೆ. ಆದರೆ, ಒಬ್ಬ ವ್ಯಕ್ತಿಯು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದರೆ, ಸಣ್ಣ ಟೂರಾದರು ರೂಲ್ಸ್ ಮತ್ತು ರೆಸ್ಟ್ರಿಕ್ಷನ್ಸ್ ಜೊತೆ ಟ್ರಾವೆಲ್ ಮಾಡಬೇಕಾಗುತ್ತೆ.
ನಿಮಗೆ ಮಧುಮೇಹದ ಸಮಸ್ಯೆ ಇದ್ದರೆ ವಿಶೇಷವಾಗಿ ಹೊಸ ಸ್ಥಳಕ್ಕೆ ಪ್ರಯಾಣಿಸುವುದು(Travel) ನಿಮ್ಮ ದಿನಚರಿಗೆ ತೊಂದರೆ ಉಂಟು ಮಾಡಬಹುದು. ಲೇಟಾಗಿ ತಿನ್ನುವುದು, ಸಾಮಾನ್ಯಕ್ಕಿಂತ ಹೆಚ್ಚು ಆಕ್ಟಿವಾಗಿರುವುದು ಮತ್ತು ಬೇರೆ ಬೇರೆ ಟೈಮ್ ಝೋನಲ್ಲಿರುವುದು ಮಧುಮೇಹದ ನಿರ್ವಹಣೆಗೆ ಅಡ್ಡಿಪಡಿಸಬಹುದು. ಹಾಗಾದರೆ ಇಂತಹ ಸಮಸ್ಯೆಗೆ ಪರಿಹಾರ ಏನು?
ಪ್ರವಾಸದ ಸಮಯದಲ್ಲಿ ಮಧುಮೇಹಕ್ಕೆ(Diabetes) ಸಂಬಂಧಿಸಿದ ಆರೋಗ್ಯ ಸಮಸ್ಯೆ ತಪ್ಪಿಸಲು, ಮಧುಮೇಹಿಗಳು ಪ್ರವಾಸದ ಮೊದಲು ಮತ್ತು ಪ್ರವಾಸದ ಸಮಯದಲ್ಲಿ ತಮ್ಮನ್ನು ತಾವು ಪ್ರಿಪೇರ್ ಮಾಡುವುದು ಮತ್ತು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳೋದು ಮುಖ್ಯ . ಟ್ರಾವೆಲ್ ಮಾಡುವಾಗ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಮಧುಮೇಹಿಗಳಿಗೆ ಸಹಾಯ ಮಾಡುವ ಕೆಲವು ಟಿಪ್ಸ್ ಇಲ್ಲಿವೆ.
ಬ್ಲಡ್ ಶುಗರ್(Blood sugar) ನಿಯಮಿತವಾಗಿ ಟೆಸ್ಟ್ ಮಾಡುತ್ತಿರಿ
ಮಧುಮೇಹಿಯು ಪ್ರವಾಸದ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆಯ ಬಗ್ಗೆ ನಿಯಮಿತವಾಗಿ ಗಮನ ಹರಿಸಬೇಕು. ಪ್ರತಿದಿನ ಬ್ಲಡ್ ಶುಗರ್ ಟೆಸ್ಟ್ ಮಾಡುವುದು ಉತ್ತಮ. ಬ್ಲಡ್ ಶುಗರ್ ಲೆವೆಲ್ ಏರು ಪೇರಾಗಿದ್ದರೆ ಅದಕ್ಕೆ ಸರಿಯಾದ ಕ್ರಮಗಳನ್ನು, ಮೇಡಿಕೇಶನ್ ತೆಗೆದುಕೊಳ್ಳೋದು ಮುಖ್ಯ.
ಹೈಡ್ರೇಟೆಡ್(Hydrate) ಆಗಿರಿ
ಪ್ರಯಾಣವು ದೀರ್ಘವಾಗಿರಲಿ ಅಥವಾ ಚಿಕ್ಕದಾಗಿರಲಿ, ಎಲ್ಲಾ ಸಮಯದಲ್ಲೂ ಹೈಡ್ರೇಟ್ ಆಗಿರಬೇಕು. ಮಧುಮೇಹಿಯಾದವರು ಟ್ರಾವೆಲ್ ಮಾಡುವಾಗ ಸಾಕಷ್ಟು ನೀರನ್ನು ಕುಡಿಯಬೇಕು.ಹಾಗಾಗಿ ಕೆಲವು ನೀರಿನ ಬಾಟಲಿಗಳನ್ನು ಮಿಸ್ ಮಾಡದೆ ತೆಗೆದುಕೊಳ್ಳಿ.
ಟೆಸ್ಟ್ ಕಿಟ್(Test kit)ನಿಮ್ಮೊಂದಿಗೆ ಇರಿಸಿಕೊಳ್ಳಿ
ಟ್ರಿಪ್ ಗಾಗಿ ಪ್ಯಾಕಿಂಗ್ ಮಾಡುವಾಗ ರೋಗಿಗಳು ತಮ್ಮ ಮೆಡಿಸಿನ್ಸ್, ಪ್ರಿಸ್ಕ್ರಿಪ್ಷನ್, ಡಯಾಬಿಟಿಸ್ ಟೆಸ್ಟ್ ಕಿಟ್, ಕೂಲರ್ ಪ್ಯಾಕ್ ಮಾಡಲು ಮರೆಯಬಾರದು. ಅಲ್ಲದೆ, ಅಗತ್ಯಕ್ಕೆ ಅನುಗುಣವಾಗಿ, ಎರಡು ಪಟ್ಟು ಹೆಚ್ಚು ಔಷಧಿ ಪ್ಯಾಕ್ ಮಾಡಿ.
ಫಿಟ್ ನೆಸ್ ಗಾಗಿ(Fitness) ಸಮಯ ಮೀಸಲಿಡಿ
ಟ್ರಾವೆಲ್ಲಿಂಗ್ನಲ್ಲಿದ್ದರೂ ಖಂಡಿತವಾಗಿಯೂ ಫಿಟ್ ನೆಸ್ ಗಾಗಿ ಸಮಯ ಮೀಸಲಿಡೋದು ತುಂಬಾ ಮುಖ್ಯ. ವ್ಯಾಯಾಮವು ಬ್ಲಡ್ ಶುಗರ್ ಬ್ಯಾಲೆನ್ಸ್ ಆಗಿರಲು ಸಹಾಯ ಮಾಡುತ್ತದೆ. ಆದರೆ, ಓವರ್ ಎಕ್ಸರ್ಸೈಜ್ ಒಳ್ಳೆದಲ್ಲ. ಇದರಿಂದ ಅಪಾಯ ಹೆಚ್ಚಬಹುದು.
ಆರೋಗ್ಯಕರ ತಿಂಡಿ(Health food) ಪ್ಯಾಕ್ ಮಾಡಿ
ಪ್ರವಾಸದ ಸಮಯದಲ್ಲಿ ಎಲ್ಲಿಯೂ ಮಧುಮೇಹಿಗೆ ಸಪರೇಟ್ ಫುಡ್ ಸಿಗೊದಿಲ್ಲ . ಹಾಗಾಗಿ ಪ್ರಯಾಣಿಸುವ ಮೊದಲು ಆರೋಗ್ಯಕರ ತಿಂಡಿ ಮತ್ತು ಆಹಾರಗಳನ್ನು ನಿಮ್ಮೊಂದಿಗೆ ಪ್ಯಾಕ್ ಮಾಡಬೇಕು. ಇದು ಉತ್ತಮ ಆರೋಗ್ಯಕ್ಕೆ ಸಹಕಾರಿ.
ಮೆನು (Menu)ಚೆಕ್ ಮಾಡಿ
ಯಾವುದೇ ಪ್ರವಾಸದ ಸಮಯದಲ್ಲಿ ಹೋಟೆಲ್ ನಲ್ಲಿ ತಿನ್ನುವುದು ಮತ್ತು ಕುಡಿಯುವುದು ಸಾಮಾನ್ಯ. ಆದರೆ ನಿಮಗೆ ಮಧುಮೇಹವಿದ್ದರೆ, ನೀವು ತಿನ್ನುವ ಮತ್ತು ಕುಡಿಯುವ ವಿಷಯದಲ್ಲಿ ಜಾಗರೂಕರಾಗಿರಬೇಕು. ರೆಸ್ಟೋರೆಂಟ್ ಗೆ ಹೋಗುವ ಮೊದಲು ಮೆನು ಚೆಕ್ ಮಾಡಿ, ನಿಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವ ಯಾವುದೇ ಆಹಾರ ಸೇವಿಸಬಾರದು.
ಹತ್ತಿರದ ಮೆಡಿಕಲ್ ಶಾಪ್(Medical shop) ಬಗ್ಗೆ ತಿಳಿಯಿರಿ
ಪ್ರಯಾಣದ ಸಮಯದಲ್ಲಿ ನೀವು ಹೋಟೆಲ್ ಅಥವಾ ರೆಸಾರ್ಟ್ ನಲ್ಲಿ ತಂಗಿದ್ದರೆ, ಫಾರ್ಮಸಿಗಳು, ಮೆಡಿಕಲ್ ಸ್ಟೋರ್ ಗಳು, ತುರ್ತು ಸಹಾಯ ಮತ್ತು ಸುತ್ತಮುತ್ತಲಿನ ಆಸ್ಪತ್ರೆಗಳ ಬಗ್ಗೆ ಮಾಹಿತಿ ಪಡೆಯಿರಿ. ಇದರಿಂದ ಬ್ಲಡ್ ಶುಗರ್ ಜಾಸ್ತಿ ಆದರೆ ನೀವು ವೈದ್ಯಕೀಯ ಸಹಾಯಕ್ಕಾಗಿ ಅಲೆದಾಡಬೇಕಾಗಿಲ್ಲ.
ಆರೋಗ್ಯಕ್ಕೆ ಸಂಬಂಧಿಸಿದ ದಾಖಲೆ (Medical Documents)ನಿಮ್ಮೊಂದಿಗಿರಲಿ
ಪ್ರತಿಯೊಬ್ಬ ಮಧುಮೇಹಿಯು ಪ್ರಯಾಣಿಸುವಾಗ ವೈದ್ಯಕೀಯ ಐಡಿ ಬ್ರೇಸ್ ಲೆಟ್ ಧರಿಸಬೇಕು. ಅಷ್ಟೇ ಅಲ್ಲ, ನಿಮ್ಮ ಆರೋಗ್ಯ, ಅಲರ್ಜಿಗೆ ಸಂಬಂಧಿಸಿದ ಐಡಿ ಅಥವಾ ದಾಖಲೆ ನಿಮ್ಮೊಂದಿಗೆ ಇರಿಸಿಕೊಳ್ಳಿ. ಹೀಗೆ ಮಾಡೋದ್ರಿಂದ ಅನಾರೋಗ್ಯ ಸಂದರ್ಭದಲ್ಲಿ ಸುಲಭವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು.
ವೈದ್ಯರನ್ನು ಸಂಪರ್ಕಿಸಿ.(Consult Doctor)
ಮಧುಮೇಹ ಹೊಂದಿರುವ ಜನರಿಗೆ ಯಾವುದೇ ಪ್ರವಾಸವು ಸ್ವಲ್ಪ ಸವಾಲಿನದ್ದಾಗಿರುತ್ತೆ. ಬ್ಲಡ್ ಶುಗರ್ ಯಾವಾಗ ಹೆಚ್ಚಾಗುತ್ತದೆ ಎಂದು ತಿಳಿಯೋದಿಲ್ಲ. ನೀವು ಪ್ರಯಾಣಕ್ಕೆ ಫಿಟ್ ಆಗಿದ್ದರೂ ಅಥವಾ ಇಲ್ಲದಿರಲಿ, ಚೆಕಪ್ ಮಾಡಲು ವೈದ್ಯರನ್ನು ಭೇಟಿ ಮಾಡಿ.
ಮಧುಮೇಹವು ದೈನಂದಿನ ಜೀವನ ಮತ್ತು ಪ್ರಯಾಣವನ್ನು ಹೆಚ್ಚು ಸಮಸ್ಯೆಯಿಂದ ಕೂಡಿರುವಂತೆ ಮಾಡುತ್ತೆ. ಪ್ರವಾಸದ ಮೊದಲು ಮತ್ತು ಪ್ರವಾಸದ ಸಮಯದಲ್ಲಿ ಇಲ್ಲಿ ಹೇಳಿರುವ ಟಿಪ್ಸ್ (Tips)ನಿಮ್ಮ ಮಧುಮೇಹ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತೆ . ಇದು ನಿಮ್ಮ ಪ್ರಯಾಣವನ್ನು ರೋಮಾಂಚನಕಾರಿ ಮತ್ತು ಸ್ಮರಣೀಯವಾಗಿಸುತ್ತೆ .