Low Blood Sugar Level: ಮೂತ್ರಪಿಂಡಕ್ಕೆ ಹಾನಿ: ಜೀರಿಗೆಯಿಂದ ಅಡ್ಡ ಪರಿಣಾಮಗಳು ಇವೆ
ಮಜ್ಜಿಗೆ, ಕರಿಬೇವು, ದಾಲ್, ಸಲಾಡ್ ಸೇರಿದಂತೆ ಅನೇಕ ರೀತಿಯ ಅಡುಗೆಯಲ್ಲಿ ಜೀರಿಗೆಯನ್ನು (Cumin seeds) ಬಳಸಲಾಗುತ್ತದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಜೀರಿಗೆಯನ್ನು ಹೆಚ್ಚು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಹೆಚ್ಚಿನ ಹಾನಿಉಂಟಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?
ನವರಾತ್ರಿಯ ದಿನಗಳಲ್ಲಿ, ಜನರು ಮನೆಯಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇವನೆಯನ್ನು ನಿಲ್ಲಿಸುತ್ತಾರೆ. ಇವುಗಳ ಬದಲು ಜೀರಿಗೆಯನ್ನು ಆಹಾರಕ್ಕೆ ಸೇರಿಸಲಾಗುತ್ತದೆ. ಮಜ್ಜಿಗೆ, ಸಾರು, ದಾಲ್, ಸಲಾಡ್ ಸೇರಿದಂತೆ ಅನೇಕ ರೀತಿಯ ಆಹಾರಗಳಿಗೆ ಒಗ್ಗರಣೆಯಾಗಿ ಸಹ ಜೀರಿಗೆಯನ್ನು ಬಳಸಲಾಗುತ್ತದೆ.
ಜೀರಿಗೆ ಆಹಾರದ ರುಚಿಯನ್ನು (Taste to food) ಹೆಚ್ಚಿಸುವುದಲ್ಲದೆ ನಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಯಾವಾಗಲೂ ಜೀರಿಗೆಯ ಉತ್ತಮ ಪರಿಣಾಮಗಳ ಬಗ್ಗೆ ಮಾತ್ರ ನಾವು ತಿಳಿದಿದ್ದೇವೆ. ಆದರೆ ಜೀರಿಗೆಯನ್ನು ಹೆಚ್ಚು ತಿನ್ನುವುದರಿಂದ ಆರೋಗ್ಯಕ್ಕೂ ಹಾನಿ ಎಂದು ನಿಮಗೆ ತಿಳಿದಿದೆಯೇ? ಹೌದು ಅದರಿಂದ ಏನೆಲ್ಲಾ ಸಮಸ್ಯೆ ಕಾಡುತ್ತದೆ ನೋಡೋಣ...
ಎದೆಯುರಿ (Burning chest) - ಹೊಟ್ಟೆಯ ಗ್ಯಾಸ್ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಿಸಲು ಜೀರಿಗೆಯು ತುಂಬಾ ಪರಿಣಾಮಕಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಇದು ಎದೆಯುರಿಯನ್ನು ಪ್ರಚೋದಿಸುತ್ತದೆ ಎಂದು ಕೆಲವೇ ಜನರಿಗೆ ತಿಳಿದಿದೆ, ಇದು ತುಂಬಾ ಸಾಮಾನ್ಯ ಜೀರ್ಣಕಾರಿ ಸಮಸ್ಯೆಯಾಗಿದೆ.
ವಾಸ್ತವವಾಗಿ, ಜೀರಿಗೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಜಠರಗರುಳಿನ ನಾಳದಿಂದ ವೇಗವಾಗಿ ಅನಿಲ ಚಲಿಸುವಂತೆ ಮಾಡುತ್ತದೆ. ಇದರಿಂದ, ಎದೆಯುರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಜನರು ಹೆಚ್ಚಿನ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.
ಯಕೃತ್ತಿನ ಹಾನಿ (Liver Damage) - ಜೀರಿಗೆಯಲ್ಲಿರುವ ತೈಲವು ಹೆಚ್ಚು ಜಿಡ್ಡಿನ ಅಂಶವನ್ನು ಹೊಂದಿರುತ್ತದೆ ಮತ್ತು ಅದಕ್ಕಾಗಿಯೇ ಅತಿಯಾದ ಸೇವನೆಯು ಮೂತ್ರಪಿಂಡ ಅಥವಾ ಯಕೃತ್ತಿನ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಜೀರಿಗೆಯನ್ನು ಸತತವಾಗಿ ಮಿತಿಮೀರಿ ಸೇವಿಸಿದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಆದ್ದರಿಂದ, ಜನರು ಯಾವಾಗಲೂ ಸರಿಯಾದ ಪ್ರಮಾಣದಲ್ಲಿ ಜೀರಿಗೆಯನ್ನು ಸೇವಿಸುವಂತೆ ಸೂಚಿಸಲಾಗಿದೆ.
ಮಾದಕ ವಸ್ತು ಪರಿಣಾಮ (Narcotic effect): ಜೀರಿಗೆಯು ಮಾದಕ ವಸ್ತು ಗುಣಕ್ಕೂ ಹೆಸರುವಾಸಿಯಾಗಿದೆ, ಆದ್ದರಿಂದ ಇದನ್ನು ಬಹಳ ಕಾಳಜಿಯಿಂದ ಬಳಸಬೇಕು. ಜೀರಿಗೆ ಅಡ್ಡ ಪರಿಣಾಮಗಳಲ್ಲಿ ಮಾನಸಿಕ ಸಮಸ್ಯೆ, ನಿದ್ರೆ ಅಥವಾ ವಾಕರಿಕೆಯಂತಹ ವಿಷಯಗಳು ಸಹ ಸೇರಿವೆ. ಜೀರಿಗೆಯ ಅತಿಯಾದ ಸೇವನೆಯಿಂದ ಈ ಎಲ್ಲಾ ಸಮಸ್ಯೆಗಳು ಹೆಚ್ಚಾಗಬಹುದು.
ಕಡಿಮೆ ಬ್ಲಡ್ ಶುಗರ್ ಲೆವೆಲ್ (Low Blood Sugar Level): ಜೀರಿಗೆಯನ್ನು ಹೆಚ್ಚು ತಿನ್ನುವುದರಿಂದ ದೇಹದಲ್ಲಿ ಇದ್ದಕ್ಕಿದ್ದಂತೆ ರಕ್ತದಲ್ಲಿನ ಸಕ್ಕರೆ ಮಟ್ಟವು ಕುಸಿಯಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ನೀವು ಕಷ್ಟಪಟ್ಟು ಪ್ರಯತ್ನಿಸಿದರೆ ಇದನ್ನು ಎಚ್ಚರಿಕೆಯಿಂದ ಬಳಸಬೇಕು. ಸಾಧ್ಯವಾದಷ್ಟು ಕಡಿಮೆ ಬಳಕೆ ಮಾಡಿ.
ನೀವು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದರೂ ಅಥವಾ ಶಸ್ತ್ರ ಚಿಕಿತೆಯನ್ನು ಪಡೆದಿದ್ದರೆ ಜೀರಿಗೆ ತಿನ್ನುವ ಮುನ್ನ ಅದರ ಬಗ್ಗೆ ಕಾಳಜಿ ವಹಿಸಬೇಕು. ಇದನ್ನು ನಿಯಂತ್ರಿಸಲು ಶಸ್ತ್ರಚಿಕಿತ್ಸೆ ಮಾಡುವ ಸುಮಾರು ಎರಡು ವಾರಗಳ ಮೊದಲು ಜೀರಿಗೆ ತಿನ್ನೋದು ಬಿಡಿ, ಯಾಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇಳಿಸುತ್ತದೆ.
ಗರ್ಭಧಾರಣೆ ಅಥವಾ ಸ್ತನ್ಯಪಾನ (Pregnancy or Brest feeding): ಗರ್ಭಾವಸ್ಥೆಯಲ್ಲಿ ಅಥವಾ ಸ್ತನ್ಯಪಾನದಲ್ಲಿ ಜೀರಿಗೆಯನ್ನು ಔಷಧಿಯಾಗಿ ಬಳಸಬಹುದು ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ. ಹಾಗೆ ಮಾಡುವುದರಿಂದ ಕೆಲವು ಕೆಟ್ಟ ಪರಿಣಾಮಗಳೂ ಉಂಟಾಗಬಹುದು. ಆದ್ದರಿಂದ ವೈದ್ಯರನ್ನು ಸಂಪರ್ಕಿಸದೆ ಯಾವುದೇ ಮನೆಮದ್ದುಗಳನ್ನು ತೆಗೆದುಕೊಳ್ಳಬೇಡಿ.