ಟಿಕೆಟ್ ಇಲ್ದೇ ವಿಮಾನದಲ್ಲೋಗೊದು ಹೇಗೆ : ಗೂಗಲ್ ಸರ್ಚ್ ಮಾಡಿ ವಿಮಾನ ಏರಿದ 9ರ ಪೋರ
- ಯಾರಿಗೂ ಕಾಣದಂತೆ ಟಿಕೆಟ್ ಇಲ್ಲದೇ ವಿಮಾನದಲ್ಲಿ ಪ್ರಯಾಣಿಸೋದು ಹೇಗೆ
- ಗೂಗಲ್ ಸರ್ಚ್ ಮಾಡಿ ವಿಮಾನ ಏರಿದ ಬ್ರೆಜಿಲ್ ಬಾಲಕ
- ಟಿಕೆಟ್ ಇಲ್ಲದೇ 2,700 ಕಿ.ಮೀ. ಪ್ರಯಾಣ
9 ವರ್ಷದ ಬ್ರೆಜಿಲಿಯನ್ ಹುಡುಗನೋರ್ವ ಟಿಕೆಟ್ ಇಲ್ಲದೆ ಫ್ಲೈಟ್ ಏರಿ 2,700 ಕಿ.ಮೀ. ಪ್ರಯಾಣ ಬೆಳೆಸಿದ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ, ಮಕ್ಕಳು ವಯಸ್ಕರಿಗಿಂತ ಹೆಚ್ಚು ಬುದ್ಧಿವಂತರಾಗುತ್ತಿದ್ದಾರೆ ಮತ್ತು ಇಂಟರ್ನೆಟ್ ಅಲ್ಲಿ ಹುಡುಕಾಟ ಹೇಗೆ ಮಾಡಬೇಕು ಎಲ್ಲಿ ಯಾವುದು ಸಿಗುವುದು ಎಂಬ ಬಗ್ಗೆ ಮಕ್ಕಳು ಚೆನ್ನಾಗಿ ತಿಳಿದಿದ್ದಾರೆ. 9 ವರ್ಷದ ಬ್ರೆಜಿಲಿಯನ್ ಬಾಲಕನೋರ್ವ ಏಕಾಂಗಿಯಾಗಿ ಸುಮಾರು 2,700 ಕಿಲೋಮೀಟರ್ ಪ್ರಯಾಣಿಸಿದ್ದಾನೆ ಅದು ಕೂಡ ಟಿಕೆಟ್ ಇಲ್ಲದೆ.
ಇಮ್ಯಾನುಯೆಲ್ ಮಾರ್ಕ್ವೆಸ್ ಒಲಿವೇರಾ (Emanuel Marques Oliveira) ಎಂಬ 9 ವರ್ಷದ ಬಾಲಕ ಶನಿವಾರ ಬೆಳಗ್ಗೆ ವಾಯುವ್ಯ ಬ್ರೆಜಿಲ್‌ನ ಮನೌಸ್‌ನಲ್ಲಿರುವ ತನ್ನ ಮನೆಯಿಂದ ಹೊರಟಿದ್ದಾನೆ. ಆತನ ತಾಯಿ, ಡೇನಿಯಲ್ ಮಾರ್ಕ್ವೆಸ್ ಅವರು ಬೆಳಗ್ಗೆ ಎದ್ದಾಗ ಎಮ್ಯಾನುಯೆಲ್ ಹಾಸಿಗೆಯಲ್ಲೇ ಇರುವುದನ್ನು ನೋಡಿದ್ದಾರೆ. ಆದರೆ ಎರಡು ಗಂಟೆಗಳ ನಂತರ ಬಾಲಕ ನಾಪತ್ತೆಯಾಗಿದ್ದ. 'ನಾನು ಬೆಳಗ್ಗೆ 5.30ಕ್ಕೆ ಎಚ್ಚರಗೊಂಡು ಅವನ ಕೋಣೆಗೆ ಹೋದೆ ಮತ್ತು ಅವನು ಎಂದಿನಂತೆ ಮಲಗಿದ್ದನ್ನು ನೋಡಿದೆ ಎಂದು ಡೇನಿಯಲ್ ಮಾರ್ಕೆಲ್ ಹೇಳಿದ್ದಾರೆ. ನಂತರ ಮೊಬೈಲ್ ನೋಡಿ ಮತ್ತೆ ಮಲಗಿದ್ದ ನಾನು 7.30 ಕ್ಕೆ ಮತ್ತೆ ಎದ್ದು ಆತನನ್ನು ನೋಡಲು ಹೋದಾಗ ಆತ ಕೋಣೆಯಲ್ಲಿ ಇಲ್ಲದೇ ಇರುವುದು ಗೊತ್ತಾಗಿ ಗಾಬರಿಗೊಂಡೆ ಎಂದು ಬಾಲಕನ ತಾಯಿ ಹೇಳಿದ್ದಾರೆ.
Sammy Griner: ಈ ವೈರಲ್ ಮೀಮ್ ಬಾಯ್ ಯಾರು ಗೊತ್ತೇ?
ಆದರೆ ಮನೆಯಲ್ಲಿಲ್ಲದ ಈ ಬಾಲಕ ಆಗ್ನೇಯ ರಾಜ್ಯವಾದ ಸಾವೊ ಪಾಲೊದಲ್ಲಿರುವ (Sao Paulo) ಗೌರುಲ್ಹೋಸ್‌ಗೆ (Guarulhos) ವಿಮಾನ ಏರಿದ್ದ. ಆತ ತನ್ನ ಮನೆಯಿಂದ 2,700 ಕಿಲೋಮೀಟರ್ ದೂರ ಪ್ರಯಾಣಿಸಿದ್ದ ಮತ್ತು ಟಿಕೆಟ್ ಖರೀದಿಸದೆ ವಿಮಾನದಲ್ಲಿ ನುಸುಳಿದ್ದ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ ಯುವಕ ಟಿಕೆಟ್ ಇಲ್ಲದೆ ವಿಮಾನದಲ್ಲಿ ಹೋಗುವುದು ಹೇಗೆ ಮತ್ತು ಹಾಗೂ ಯಾರಿಗೂ ತಿಳಿಯದಂತೆ ಹೋಗುವುದು ಹೇಗೆ ಎಂದು ಗೂಗಲ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಇತ್ತ ತನ್ನ ಮಗನ ಇರುವಿಕೆಯ ಬಗ್ಗೆ ತಿಳಿದ ನಂತರ ಆತಂಕಗೊಂಡಿದ್ದ ತಾಯಿ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಯಾವುದೇ ಪ್ರಯಾಣ ದಾಖಲೆಗಳು ಅಥವಾ ಲಗೇಜ್‌ಗಳಿಲ್ಲದೆ ಹುಡುಗ ಹೇಗೆ ವಿಮಾನ ಹತ್ತಿದ್ದ ಎಂದು ಪತ್ತೆ ಮಾಡಲು ಮನೌಸ್ (Manaus) ವಿಮಾನ ನಿಲ್ದಾಣದ ಆಡಳಿತವು ತನಿಖೆ ಆರಂಭಿಸಿದೆ. ಸ್ಥಳೀಯ ಪೊಲೀಸರು ಕೂಡ ತನಿಖೆ ಆರಂಭಿಸಿದ್ದು, ವಿಮಾನ ನಿಲ್ದಾಣದ ಭದ್ರತಾ ಕ್ಯಾಮರಾ ದೃಶ್ಯಾವಳಿಗಳನ್ನು ಕೋರಿದ್ದಾರೆ. ಪೊಲೀಸರ ಪ್ರಕಾರ, ಈ ಬಾಲಕನ ಕುಟುಂಬದಲ್ಲಿ ಯಾವುದೇ ಹಿಂಸಾಚಾರದ ಇತಿಹಾಸವಿಲ್ಲ ಮತ್ತು ಹೀಗೆ ಪ್ರಯಾಣಿಸಿದ ಬಾಲಕ ಸಾವೊ ಪಾಲೊದಲ್ಲಿರುವ (Sao Paulo) ತನ್ನ ಕುಟುಂಬ ಸದಸ್ಯರನ್ನು ಭೇಟಿಯಾಗಲು ಬಯಸಿದ್ದ ಎಂದು ತಿಳಿದು ಬಂದಿದೆ.
ಒಂಭತ್ತು ವರ್ಷದ ಭಾರತೀಯ ಬಾಲಕ ಈಗ ಯೋಗ ಶಿಕ್ಷಕ
ತಿಂಗಳ ಹಿಂದೆ ಅಮೆರಿಕಾದ ಬಾಲಕನೋರ್ವ ಅಮ್ಮನ ಫೋನ್ ಬಳಸಿ ಲಕ್ಷಾಂತರ ಮೌಲ್ಯದ ಪೀಠೋಪಕರಣವನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಘಟನೆ ನಡೆದಿತ್ತು. ಅಮೆರಿಕಾದ ನ್ಯೂಜೆರ್ಸಿಯಲ್ಲಿ 22 ತಿಂಗಳ ಮಗುವೊಂದು ಈ ರೀತಿ ಮಾಡಿದ್ದು, ಫೋನ್ ನೋಡಿದ ಅಮ್ಮ ಹೌಹಾರುವಂತಾಗಿತ್ತು. ನ್ಯೂಯಾರ್ಕ್‌ನ ಮಾಧ್ಯಮವೊಂದರ ಪ್ರಕಾರ ಆಯನ್ಶ್ ಕುಮಾರ್ ( Aayansh Kumar) ಎಂಬ ಪುಟ್ಟ ಮಗು ತನ್ನ ತಾಯಿಯ ಫೋನ್ ಮೂಲಕ ವಾಲ್‌ಮಾರ್ಟ್‌ನಿಂದ ಪೀಠೋಪಕರಣಗಳನ್ನು ಆರ್ಡರ್ ಮಾಡಿದ್ದ.
ಪೀಠೋಪಕರಣಗಳು ಇದ್ದಕ್ಕಿದ್ದಂತೆ ಮನೆಗೆ ಬರಲು ಪ್ರಾರಂಭಿಸಿದಾಗ, ಅವರು ತನ್ನ ಪತಿ ಮತ್ತು ಇಬ್ಬರು ಹಿರಿಯ ಮಕ್ಕಳಲ್ಲಿ ಅದರ ಬಗ್ಗೆ ಕೇಳಿದ್ದಾಳೆ. ಆದರೆ ಮಕ್ಕಳ್ಯಾರು ಬುಕ್ ಮಾಡಿಲ್ಲ ಎಂದು ಹೇಳಿದ್ದರು. ನಂತರ ಇದು ಮನೆಯಲ್ಲಿರು ಸಣ್ಣ ಮಗುವಿನ ಕೃತ್ಯ ಎಂಬುದನ್ನು ಕಂಡು ಕೊಂಡಿದ್ದಾರೆ.