ಎಕ್ಕದ ಎಲೆ ಬಳಸಿ, ಮತ್ತೆ ಮೊಣಕಾಲು ನೋವಿನ ಚಿಂತೆಯಿಲ್ಲ
ನೋಡೋಕೆ ಸುಂದರವಾಗಿರೋ ಈ ಹೂವುಗಳು (Flower) ಸಾಮಾನ್ಯವಾಗಿ ಮನೆಯ ಸುತ್ತಲೆಲ್ಲಾ ಬೇಕಾಬಿಟ್ಟಿ ಬೆಳೆದಿರುತ್ತೆ. ಆದ್ರೆ ಈ ಹೂವನ್ನು ಬಳಸಿ ನಿಮ್ಮನ್ನು ದಿನನಿತ್ಯ ಕಾಡೋ ಮೊಣಕಾಲು ನೋವನ್ನು (Knee Pain) ಬಗೆಹರಿಸಿಕೊಳ್ಬೋದು ಅನ್ನೋದು ನಿಮ್ಗೆ ಗೊತ್ತಾ ? ಅದ್ಹೇಗೆ, ಏನು ನಾವ್ ಹೇಳ್ತೀವಿ.
ಹಿರಿಯರು ತಮ್ಮ ಆರೋಗ್ಯ ಸಮಸ್ಯೆ (Health Problem)ಗಳಿಗೆ ಮೆಡಿಸಿನ್‌ಗಳ ಮೊರೆ ಹೋಗುವುದಕ್ಕಿಂತ ಹೆಚ್ಚು, ಹಳೇ ಕಾಲದ ಮನೆಮದ್ದುಗಳನ್ನು ಪ್ರಯತ್ನಿಸುವುದೇ ಜಾಸ್ತಿ. ಅಂಥಾ ಮ್ಯಾಜಿಕಲ್ ಗುಣವಿರುವ ಗಿಡಗಳಲ್ಲೊಂದು ಎಕ್ಕದ ಗಿಡ (Aak plant). ಎಕ್ಕದ ಗಿಡದಲ್ಲಿ ಬಿಡುವ ಸುಂದರ ಹೂವುಗಳು. ದೇವರ ಪೂಜೆಗೂ ಬಳಸಲ್ಪಡುವ ಈ ಹೂಗಳು ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಸುಲಭವಾಗಿ ಮೂಳೆಗಳು ಮತ್ತು ಸಂಧಿವಾತದಿಂದ ಉಂಟಾಗುವ ಕೀಲು ನೋವು, ರಕ್ತದೊತ್ತಡ ಅಥವಾ ಸಕ್ಕರೆ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಮಾತ್ರವಲ್ಲ ಮೊಣಕಾಲು ನೋವನ್ನು (Knee pain) ಥಟ್ಟೆಂದು ಶಮನಗೊಳಿಸುವ ಪವರ್ ಈ ಎಕ್ಕದ ಹೂವಿನಲ್ಲಿದೆ.
ಎಕ್ಕದ ಗಿಡದ ಎಲೆಗಳು, ಹೂವುಗಳು, ಬೇರುಗಳು ಮತ್ತು ಬೀಜಗಳನ್ನು ಒಳಗೊಂಡಂತೆ ಆಕ್ ಮರದ ಬಹುಪಾಲು ಭಾಗಗಳನ್ನು ಔಷಧಿಯಾಗಿ ಬಳಸಲಾಗುತ್ತದೆ. ಎಕ್ಕದ ಗಿಡವನ್ನು ಸ್ಪರ್ಶಿಸುವುದರಿಂದಲೂ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಎಕ್ಕ ಎಲೆಗಳಿಂದ ತಯಾರಿಸುವ ಎಣ್ಣೆ ಅತ್ಯಂತ ಶ್ರೇಷ್ಠವಾಗಿದೆ ಮತ್ತು ಹಲವು ನೋವಿಗೆ ಶಮನ ನೀಡುತ್ತದೆ. ಎಕ್ಕ ಗಿಡದ, ಹೂವಿನ ಕೆಲವು ಅತ್ಯದ್ಭುತ ಪ್ರಯೋಜನಗಳು ಇಲ್ಲಿವೆ.
Knee Pain: ಮಂಡಿ ನೋವೇ ? ಆಲಿವ್ ಎಲೆಗಳಲ್ಲಿದೆ ಪರಿಹಾರ
1. ಮೊಣಕಾಲು ನೋವನ್ನು ಶಮನಗೊಳಿಸುತ್ತದೆ
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪೋಸ್ಟ್ ಮಾಡಲಾದ ಕ್ಯಾಲೋಟ್ರೋಪಿಸ್ ಗಿಗಾಂಟಿಯಾ (ಎಕ್ಕ ಎಲೆಗಳ ವೈಜ್ಞಾನಿಕ ಹೆಸರು) ಕುರಿತಾದ ಅಧ್ಯಯನವು ಆಕ್ ಎಲೆಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ ಎಂದು ತಿಳಿಸಿದೆ. ಹೀಗಾಗಿ ಇದು ಕೀಲುಗಳಲ್ಲಿನ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಧಿವಾತ ಅಥವಾ ಮೊಣಕಾಲು ನೋವಿನ ಸಮಸ್ಯೆಗಳಿರುವ ಜನರಿಗೆ ಉತ್ತಮವಾಗಿದೆ. ಅಧ್ಯಯನದ ಪ್ರಕಾರ ಇದನ್ನು ರುಮಾಟಿಕ್ ನೋವಿಗೂ ಬಳಸಬಹುದಾಗಿದೆ.
ಕೋವಿಡ್ -19ನಿಂದ ಚೇತರಿಸಿಕೊಂಡ ಬಳಿಕ ಸ್ನಾಯು ಅಥವಾ ಕೀಲು ನೋವಿನಿಂದ ಬಳಲುತ್ತಿರುವ ಜನರಿಗೆ ಇದು ಉತ್ತಮ ಮನೆಮದ್ದು (Home remedies). ನೋವಿರುವ ಪ್ರದೇಶಕ್ಕೆ ಸ್ವಲ್ಪ ಎಣ್ಣೆಯನ್ನು ಅನ್ವಯಿಸಿ, ಅದನ್ನು ಒಣ ಆಕ್ ಎಲೆಯಿಂದ ಮುಚ್ಚಿ ಮತ್ತು ಬ್ಯಾಂಡೇನ್‌ನಿಂದ ಸುತ್ತಿಕೊಳ್ಳಿ. 5-6 ದಿನಗಳ ಕಾಲ ಹೀಗೆ ಮಾಡುವುದರಿಂದ ಆಂತರಿಕ ಹಾಗೂ ಬಾಹ್ಯ ಊತವನ್ನು ಕಡಿಮೆ ಮಾಡಬಹುದು ಎಂದು ಹಿರಿಯರು ಹೇಳುತ್ತಾರೆ.
2. ಪ್ರಾಣಿಗಳ ಕಡಿತದಿಂದಾದ ಉರಿಯನ್ನು ಕಡಿಮೆ ಮಾಡುತ್ತದೆ
ಚಾರಣಕ್ಕೆ ಹೋದರೆ ಅಥವಾ ಹಾವು, ಚೇಳು ಕಚ್ಚಿದರೆ ಎಕ್ಕ ಗಿಡವನ್ನು ಹುಡುಕಿದರೆ ಸಾಕು. ಎಕ್ಕದ ಎಲೆಗಳು ಉರಿಯೂತದ ಗುಣಲಕ್ಷಣಗಳ ಜೊತೆಗೆ, ವಿಷ-ವಿರೋಧಿ ಪರಿಣಾಮಗಳನ್ನು ಸಹ ಹೊಂದಿವೆ. ಎಲೆಯ ಪೇಸ್ಟ್ ಅನ್ನು ಕೀಟಗಳು ಕಚ್ಚಿದ ಜಾಗಕ್ಕೆ ಹಚ್ಚುವುದರಿಂದ ಗಾಯಕ್ಕೆ ಚಿಕಿತ್ಸೆ ನೀಡಬಹುದು. ಕ್ರಿಶ್ಚಿಯನ್ ಅಗ್ಯಾರೆ ಎಂಬ ವಿಜ್ಞಾನಿ ಜರ್ನಲ್ ಆಫ್ ಎಥ್ನೋಫಾರ್ಮಕಾಲಜಿ, 2016ನಲ್ಲಿಆಕ್ ಅಂತಹ ಗಾಯಗಳನ್ನು ಗುಣಪಡಿಸಲು ಸಮರ್ಥವಾಗಿದೆ ಎಂದು ಬರೆದಿದ್ದಾರೆ.
ಸಂಧಿವಾತ-ಮೊಣಕಾಲು ನೋವು: ಅಡುಗೆಯಲ್ಲಿ ಸೇರಲಿ ಚಿಟಿಕೆ ಅರಶಿನ..!
3. ಮಧುಮೇಹಿಗಳಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿನ 2011ರ ಅಧ್ಯಯನವು ಆಕ್ ಅಥವಾ ಎಕ್ಕದ ಎಲೆಗಳು ಹೈಪೊಗ್ಲಿಸಿಮಿಕ್ ಪರಿಣಾಮವನ್ನು ಹೊಂದಿದ್ದು, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹಿ (Diabetes)ಗಳಲ್ಲಿ ಇನ್ಸುಲಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಬಹಿರಂಗಪಡಿಸಿದೆ. ಮಧುಮೇಹಕ್ಕೆ ಚಿಕಿತ್ಸೆ ನೀಡಲು ಈ ಎಲೆಗಳನ್ನು ಗಿಡಮೂಲಿಕೆ ಔಷಧಿಗಳಾಗಿ ಅಥವಾ ಮಿಶ್ರಣಗಳಾಗಿ ಬಳಸಬಹುದು. ಅಥವಾ ಪಾದಗಳ ಕೆಳಗೆ ಆಕ್ ಎಲೆಗಳನ್ನು ಹಾಕುವುದು ಮತ್ತು ಅವುಗಳ ಮೇಲೆ ಸಾಕ್ಸ್ ಅನ್ನು ಧರಿಸುವ ಅಭ್ಯಾಸ ಮಾಡುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
4. ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಒಳ್ಳೆಯದು
ಎಕ್ಕದ ಹೂವು ಅಥವಾ ಬೀಜಗಳನ್ನು ಸೇವಿಸಿದರೆ, ಹೊಟ್ಟೆಯ ಸಮಸ್ಯೆಗಳಾದ ಮಲಬದ್ಧತೆ (Constipation), ಗ್ಯಾಸ್, ಉಬ್ಬುವುದು ಮತ್ತು ಇತರ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತವೆ. ಎಕ್ಕದ ಹೂವನ್ನು ಪೇಸ್ಟ್ ಮಾಡಿ ಸೇವಿಸುವ ಅಭ್ಯಾಸ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.
ಬೇಸಿಗೆಯಲ್ಲಿ ಆರೋಗ್ಯ ಚೆನ್ನಾಗಿರಬೇಕಾ? ನೇರಳೆ ತಿನ್ನೋದ ಮರೀಬೇಡಿ
5. ಉಸಿರಾಟದ ಕಾಯಿಲೆಗಳನ್ನು ಗುಣಪಡಿಸಬಹುದು
ಮ್ಯಾನೇಜ್ಮೆಂಟ್ ಆಫ್ ಹೈ ಆಲ್ಟಿಟ್ಯೂಡ್ ಪ್ಯಾಥೋಫಿಸಿಯಾಲಜಿ, 2018 ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪ್ರತಿದಿನ ಆಕ್ ಹೂವುಗಳು ಅಥವಾ ಬೇರುಗಳನ್ನು (ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ) ಸೇವಿಸುವುದು ಉಸಿರಾಟದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಉತ್ತಮ ಮನೆಮದ್ದು. ಇದು ಆಸ್ತಮಾ, ಶೀತ, ಕೆಮ್ಮು, ಮೂಗು ಸೋರುವಿಕೆ ಮೊದಲಾದ ಸಮಸ್ಯೆಯನ್ನು ಬಗೆಹರಿಸುತ್ತದೆ. ಕೋವಿಡ್-19 (Covid-19) ಮಂಕಿಪಾಕ್ಸ್ (Monkeypox) ಮೊದಲಾದ ಸಾಂಕ್ರಾಮಿಕ ಹರಡುತ್ತಿರುವ ಈ ಸಂದರ್ಭದಲ್ಲಿ ಇದನ್ನು ನಿಮ್ಮ ದೈನಂದಿನ ದಿನಚರಿಯ ಭಾಗವಾಗಿ ಮಾಡುವುದು ಉತ್ತಮವಾಗಿರುತ್ತದೆ.