Service Charge ಗ್ರಾಹಕರಲ್ಲಿ ಸರ್ವೀಸ್ ಚಾರ್ಜ್ ಪಾವತಿಗೆ ಒತ್ತಾಯಿಸುವಂತಿಲ್ಲ, ರೆಸ್ಟೋರೆಂಟ್ಸ್‌ಗೆ ಸರ್ಕಾರದ ಎಚ್ಚರಿಕೆ!

  • ಸೇವಾ ಶುಲ್ಕ ಪಾವತಿ ಗ್ರಾಹಕನ ಇಷ್ಟ, ಒತ್ತಾಯಿಸುವಂತಿಲ್ಲ
  • ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಸೂಚನೆ
  • ಹಲವು ದೂರುಗಳ ಬಳಿಕ ಮಹತ್ವದ ಸೂಚನೆ ನೀಡಿದ ಸರ್ಕಾರ
Cannot force consumers to pay service charges Union government warns National Restaurant Association ckm

ನವದೆಹಲಿ(ಮೇ.24): ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕನ ಮೇಲೆ ಒತ್ತಾಯಪೂರ್ವಕವಾಗಿ ಸೇವಾ ಶುಲ್ಕ ವಿಧಿಸಲಾಗುತ್ತಿದೆ ಅನ್ನೋ ದೂರನ್ನು ಗಂಭೀರವಾಗಿ ಪರಿಗಣಿಸಿದ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಇದೀಗ ಮಹತ್ವದ ಸೂಚನೆ ನೀಡಿದೆ. ಯಾವುದೇ ರೆಸ್ಟೋರೆಂಟ್ ಗ್ರಾಹಕನ ಬಳಿಕ ಒತ್ತಾಯಪೂರ್ವಕವಾಗಿ ಸರ್ವೀಸ್ ಚಾರ್ಜ್ ಪಾವತಿಸಲು ಹೇಳುವಂತಿಲ್ಲ ಎಂದಿದೆ.

ಗ್ರಾಹಕರ ವೇದಿಕೆ, ಸಹಾಯವಾಣಿಗೆ ಗ್ರಾಹಕರಿಂದ ಸತತ ದೂರುಗಳು ಬರುತ್ತಿದೆ. ಮಾಧ್ಯಮಗಳಲ್ಲಿ ಹಲವು ವರದಿಗಳು ಪ್ರಕಟಗೊಂಡಿದೆ. ಈ ಎಲ್ಲಾ ಮಾಹಿತಗಳನ್ನು ಆಧರಿಸಿ ಗ್ರಾಹಕ ವ್ಯವಹಾರಗಳ ಇಲಾಖೆ(DoCA) ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ , ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ರೆಸ್ಟೋರೆಂಟ್‌ಗಳು ಗ್ರಾಹಕರ ಬಳಿ ಒತ್ತಾಯಪೂರ್ವಕವಾಗಿ ಸೇವಾ ಶುಲ್ಕ ವಿಧಿಸುತ್ತಿರುವುದು ಗಮನಕ್ಕೆ ಬಂದಿದೆ. ಸೇವಾ ಶುಲ್ಕಾ ಗ್ರಾಹಕನ ಇಷ್ಟವಾಗಿದೆ. ಆತನ ಇಷ್ಟದ ಪ್ರಕಾರ ಪಾವತಿಸುವ ಶುಲ್ಕವಾಗಿದೆ. ಇದನ್ನು ಒತ್ತಾಯಿಸುವಂತಿಲ್ಲ. ಒಂದು ವೇಳೆ ಗ್ರಾಹಕ ಯಾವುದೇ ಸೇವಾ ಶುಲ್ಕ ನೀಡದಿದ್ದರೂ ಆತನಿಗೆ ನೀಡುವ ಸೇವೆಯಲ್ಲಿ ಸಮಸ್ಸೆಯಾಗಬಾರದು ಎಂದು ಪತ್ರದಲ್ಲಿ ಹೇಳಿದ್ದಾರೆ.

ರೆಸ್ಟೋರೆಂಟ್‌ನಲ್ಲಿ ಆಹಾರ ಸರ್ವ್ ಮಾಡೋ ಬುಲೆಟ್ ಟ್ರೈನ್‌: ವಿಡಿಯೋ ನೋಡಿ

ರೆಸ್ಟೋರೆಂಟ್‌ಗಳು ಆಹಾರ, ತಿನಿಸುಗಳಿಗೆ ದುಬಾರಿ ಚಾರ್ಜ್ ಮಾಡುತ್ತಿದೆ. ರೆಸ್ಟೋರೆಂಟ್‌ಗಳ ಸ್ಟಾರ್ ಮೇಲೆ ಬೆಲೆಯೂ ಬೇರೆ ಬೇರೆಯಾಗಿದೆ. ಇದಾದ ಬಳಿಕ ಗ್ರಾಹಕನ ಬಳಿ ಒತ್ತಾಯ ಪೂರ್ವಕವಾಗಿ ಸೇವಾ ಶುಲ್ಕ ವಿಧಿಸುವುದು ತಪ್ಪು ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಹೇಳಿದೆ.

ರೆಸ್ಟೋರೆಂಟ್‌ಗಳು ಗ್ರಾಹಕನಿಗೆ ನೀಡುವ ಅಂತಿಮ ಬಿಲ್‌ನಲ್ಲಿ ಸೇವಾ ಶುಲ್ಕವನ್ನೂ ಹಾಕುತ್ತಿದೆ. ಇದು ಸಾಧ್ಯವಿಲ್ಲ. ಈ ರೀತಿ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.  

ರೆಸ್ಟೋರೆಂಟ್‌ಗಳು ಮೆನು ಕಾರ್ಡ್‌ನಲ್ಲಿ ಸೂಚಿಸಿದ ಬೆಲೆ ಹಾಗೂ ಅದಕ್ಕೆ ತಗುಲುವ ತೆರಿಗೆ ಹೊರತು ಪಡಿಸಿ ಇತರ ಸೇವಾ ಶುಲ್ಕಾ ಸೇರಿದಂತೆ ಯಾವುದೇ ಶುಲ್ಕ ಹಾಕುವಂತಿಲ್ಲ.ಗ್ರಾಹಕರ ಒಪ್ಪಿಗೆ ಇಲ್ಲದೆ, ಅಥವಾ ಒತ್ತಾಯಪೂರ್ವಕವಾಗಿ ಇತರ ಯಾವುದೇ ಶುಲ್ಕ ಸೇರಿಸುವಂತಿಲ್ಲ. ಈ ರೀತಿ ಯಾವುದೇ ರೆಸ್ಟೋರೆಂಟ್ ಮಾಡಿದರೆ ಕಾನೂನು ಉಲ್ಲಂಘನೆಯಾಗಲಿದೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಖಡಕ್ ವಾರ್ನಿಂಗ್ ನೀಡಿದೆ.

ಗ್ರಾಹಕ ವ್ಯವಹಾರಗಳ ಇಲಾಖೆ ಜೂನ್ 2 ರಂದು ಮಹತ್ವದ ಸಭೆ ಕರೆದಿದೆ. ಈ ಸಭೆಗೆ ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾಗೆ ಆಹ್ವಾನ ನೀಡಿದೆ. 
 

Latest Videos
Follow Us:
Download App:
  • android
  • ios