MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಥೈರಾಯ್ಡ್, ಮೈಗ್ರೇನ್, ತೊದಲುವಿಕೆ ಸಮಸ್ಯೆಗೆ ರಾಮಬಾಣ ಈ 40 ಸೆಕೆಂಡುಗಳ ಟ್ರಿಕ್!

ಥೈರಾಯ್ಡ್, ಮೈಗ್ರೇನ್, ತೊದಲುವಿಕೆ ಸಮಸ್ಯೆಗೆ ರಾಮಬಾಣ ಈ 40 ಸೆಕೆಂಡುಗಳ ಟ್ರಿಕ್!

Tongue stretch exercise benefits: ಥೈರಾಯ್ಡ್, ಮೈಗ್ರೇನ್, ಮಾನಸಿಕ ಒತ್ತಡದಂತಹ ಸಮಸ್ಯೆಗಳು ಎಲ್ಲರನ್ನೂ ಕಾಡುತ್ತಿದ್ದು, ಇವುಗಳಿಗೆ ದುಬಾರಿ ಮಾತ್ರೆ ತೆಗೆದುಕೊಳ್ಳೊ ಬದಲು, ಒಂದು ರೂಪಾಯಿ ಖರ್ಚಿಲ್ಲದೆ, ದಿನಕ್ಕೆ ಕೇವಲ 40 ಸೆಕೆಂಡು ಕಾಲ ನಾಲಿಗೆಯನ್ನು ಹೊರಗೆ ಚಾಚುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.

2 Min read
Author : Ashwini HR
Published : Jun 12 2026, 11:36 AM IST
Share this Photo Gallery
  • FB
  • TW
  • Linkdin
  • Whatsapp
15
'ಟಂಗ್ ಸ್ಟ್ರೆಚ್'
Image Credit : Instagram

'ಟಂಗ್ ಸ್ಟ್ರೆಚ್'

‘ಟಂಗ್ ಸ್ಟ್ರೆಚ್’
ಇಂದಿನ ಬ್ಯುಸಿ ಲೈಫ್‌ಸ್ಟೈಲ್‌ನಲ್ಲಿ ಚಿಕ್ಕ ವಯಸ್ಸಿನಲ್ಲೇ ಥೈರಾಯ್ಡ್, ಅತಿಯಾದ ಮಾನಸಿಕ ಒತ್ತಡ, ಮೈಗ್ರೇನ್, ನಿದ್ರಾಹೀನತೆಯಂತಹ ಸಮಸ್ಯೆಗಳು ಸರ್ವೇಸಾಮಾನ್ಯವಾಗಿಬಿಟ್ಟಿವೆ. ಇವುಗಳಿಗಾಗಿ ಜನರು ರೋಗನಿರೋಧಕ ಮಾತ್ರೆಗಳನ್ನು, ರಂಗುರಂಗಿನ ಮದ್ದುಗಳನ್ನು ಬಳಸುತ್ತಿರುತ್ತಾರೆ. ಆದರೆ ದಿನಕ್ಕೆ 40 ಸೆಕೆಂಡು ಮೀಸಲಿಡುವುದರಿಂದ ಒಂದು ರೂಪಾಯಿ ಖರ್ಚಿಲ್ಲದೆ, ಈ ಎಲ್ಲಾ ಸಮಸ್ಯೆಗಳಿಗೆ ಬ್ರೇಕ್ ಹಾಕಬಹುದು ಎಂದು ನಿಮಗೆ ಗೊತ್ತಾ?. ಹೌದು. ಯೋಗ ಶಾಸ್ತ್ರದಲ್ಲಿ 'ಸಿಂಹಾಸನ' ಎಂದು ಕರೆಯಲಾಗುವ ಪ್ರಕ್ರಿಯೆಯನ್ನು ಹೋಲುವ ಈ 'ಟಂಗ್ ಸ್ಟ್ರೆಚ್' ವ್ಯಾಯಾಮದಿಂದ ಸಿಗುವ ಪ್ರಯೋಜನಗಳನ್ನು ನೋಡಿದರೆ ನೀವು ಆಶ್ಚರ್ಯಪಡುತ್ತೀರಿ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ದಿನಾ 40 ಸೆಕೆಂಡು ಸಾಕು
Image Credit : Getty

ದಿನಾ 40 ಸೆಕೆಂಡು ಸಾಕು

ದಿನಾ 40 ಸೆಕೆಂಡು ಸಾಕು
ಆಧುನಿಕ ಜೀವನಶೈಲಿಯಿಂದ ಬರುವ ಒತ್ತಡ, ಥೈರಾಯ್ಡ್, ಮೈಗ್ರೇನ್‌ನಂತಹ ಸಮಸ್ಯೆಗಳಿಗೆ ನಮ್ಮ ದೇಹದಲ್ಲೇ ಒಂದು ಸುಲಭವಾದ ಪರಿಹಾರವಿದೆ. ದಿನವೂ ಬೆಳಗ್ಗೆ ಕೇವಲ 40 ಸೆಕೆಂಡುಗಳ ಕಾಲ ನಾಲಿಗೆಯನ್ನು ಸಂಪೂರ್ಣವಾಗಿ ಹೊರಗೆ ಚಾಚಿ ಹಿಡಿಯುವ ಈ ಸಣ್ಣ ವ್ಯಾಯಾಮವು ಅದ್ಭುತ ಫಲಿತಾಂಶಗಳನ್ನು ನೀಡುತ್ತದೆ. ನಾಲಿಗೆಯನ್ನು ಗಟ್ಟಿಯಾಗಿ ಹೊರಗೆ ಚಾಚುವುದರಿಂದ ಗಂಟಲಿನ ಭಾಗದಲ್ಲಿರುವ ಸ್ನಾಯುಗಳು ಮತ್ತು ನರಗಳು ಚೆನ್ನಾಗಿ ಎಳೆಯಲ್ಪಡುತ್ತವೆ (Stretch ಆಗುತ್ತವೆ). ಇದು ಥೈರಾಯ್ಡ್ ಗ್ರಂಥಿಯನ್ನು (Thyroid Gland) ಉತ್ತೇಜಿಸಿ, ಹಾರ್ಮೋನ್‌ಗಳ ಬಿಡುಗಡೆಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

Related Articles

Related image1
ಬೆಳಗ್ಗೆ 5 ಗಂಟೆಗೆ ಎದ್ದರೆನೇ ಯಶಸ್ಸು ಸಿಗುತ್ತಾ? ನ್ಯೂರೋಸೈಂಟಿಸ್ಟ್ ಹೇಳಿದ್ದನ್ನ ಕೇಳಿದ್ಮೇಲೆ ಶಾಕ್ ಆಗ್ತೀರ!
Related image2
ಫ್ರಿಡ್ಜ್ ನಲ್ಲಿಟ್ಟ ಅನ್ನ ತಿನ್ನುವುದು ಡೇಂಜರಾ? ಕ್ಯಾನ್ಸರ್ ತಜ್ಞರು ಕೊಟ್ರು 4 Tips
35
ಚರ್ಮದ ಸಮಸ್ಯೆಗಳು ನಿವಾರಣೆ
Image Credit : Getty

ಚರ್ಮದ ಸಮಸ್ಯೆಗಳು ನಿವಾರಣೆ

ಚರ್ಮದ ಸಮಸ್ಯೆಗಳು ನಿವಾರಣೆ
ಅಷ್ಟೇ ಅಲ್ಲ, ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದರಿಂದ ಕುತ್ತಿಗೆ ಮತ್ತು ದವಡೆಯ ಸ್ನಾಯುಗಳು ಬಿಗಿಗೊಳ್ಳುತ್ತವೆ. ಈ ವ್ಯಾಯಾಮವು ದವಡೆ ಹಾಗೂ ಮುಖದ ಸ್ನಾಯುಗಳಲ್ಲಿನ ಒತ್ತಡವನ್ನು (Tension) ತಕ್ಷಣವೇ ದೂರ ಮಾಡುತ್ತದೆ. ಇದು ನರಗಳನ್ನು ಶಾಂತಗೊಳಿಸಿ, ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೀಗೆ ನಾಲಿಗೆಯನ್ನು ಎಳೆಯುವುದರಿಂದ ಮುಖದ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ಸಿಗುತ್ತದೆ. ಇದರಿಂದ ಮುಖದ ನರಗಳಲ್ಲಿ ರಕ್ತಸಂಚಾರ (Blood Circulation) ಚುರುಕಾಗುತ್ತದೆ. ಇದು ಚರ್ಮದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಿ, ನೈಸರ್ಗಿಕ ಹೊಳಪು (Glow) ಬರಲು ಮತ್ತು ಡಬಲ್ ಚಿನ್ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

45
ಆರೋಗ್ಯದಲ್ಲಿ ಆಗುತ್ತದೆ ಧನಾತ್ಮಕ ಬದಲಾವಣೆ
Image Credit : x

ಆರೋಗ್ಯದಲ್ಲಿ ಆಗುತ್ತದೆ ಧನಾತ್ಮಕ ಬದಲಾವಣೆ

ಆರೋಗ್ಯದಲ್ಲಿ ಆಗುತ್ತದೆ ಧನಾತ್ಮಕ ಬದಲಾವಣೆ
ಈ ಪ್ರಕ್ರಿಯೆಯ ಮೂಲಕ ಲಾಲಾರಸ ಗ್ರಂಥಿಗಳು (Salivary Glands) ಸಕ್ರಿಯಗೊಳ್ಳುತ್ತವೆ. ಇದು ಗಂಟಲು ಒಣಗುವುದನ್ನು ತಡೆದು, ಗಂಟಲು ನೋವು, ಟಾನ್ಸಿಲ್ಸ್ ಮತ್ತು ಉಸಿರಾಟದ ಸಮಸ್ಯೆಗಳಿಂದ ಉಪಶಮನ ನೀಡುತ್ತದೆ. ಸಣ್ಣ ಮಕ್ಕಳಲ್ಲಿ ಅಥವಾ ದೊಡ್ಡವರಲ್ಲಿ ಮಾತುಗಳು ಸರಿಯಾಗಿ ಬಾರದೇ ಇರುವುದು ಅಥವಾ ತೊದಲುವಿಕೆ (Stammering) ಇದ್ದರೆ, ಈ ವ್ಯಾಯಾಮವನ್ನು ನಿಯಮಿತವಾಗಿ ಮಾಡುವುದರಿಂದ ನಾಲಿಗೆಯ ನಮ್ಯತೆ (Flexibility) ಹೆಚ್ಚಿ, ಉಚ್ಚಾರಣೆ ಸ್ಪಷ್ಟವಾಗುತ್ತದೆ. ಯಾವುದೇ ಅಡ್ಡಪರಿಣಾಮಗಳಿಲ್ಲದ (Side Effects) ಈ 40 ಸೆಕೆಂಡುಗಳ ಸಿಂಪಲ್ ಟ್ರಿಕ್ ಅನ್ನು ನಿಮ್ಮ ದಿನಚರಿಯ ಭಾಗವಾಗಿಸಿಕೊಳ್ಳಿ. ಕೇವಲ ಕೆಲವೇ ದಿನಗಳಲ್ಲಿ ನಿಮ್ಮ ಆರೋಗ್ಯದಲ್ಲಿ ಆಗುವ ಧನಾತ್ಮಕ ಬದಲಾವಣೆಗಳನ್ನು ನೀವೇ ಗಮನಿಸಬಹುದು!

55
ಈ ವ್ಯಾಯಾಮವನ್ನು ಮಾಡುವುದು ಹೇಗೆ?
Image Credit : Instagram

ಈ ವ್ಯಾಯಾಮವನ್ನು ಮಾಡುವುದು ಹೇಗೆ?

ಈ ವ್ಯಾಯಾಮವನ್ನು ಮಾಡುವುದು ಹೇಗೆ?
ಬೆಳಗ್ಗೆ ಹಲ್ಲುಜ್ಜಿದ ನಂತರ ಅಥವಾ ಖಾಲಿ ಹೊಟ್ಟೆಯಲ್ಲಿ ನೇರವಾಗಿ ಕುಳಿತುಕೊಳ್ಳಬೇಕು. ನಿಮ್ಮ ಬಾಯಿಯನ್ನು ಸಂಪೂರ್ಣವಾಗಿ ತೆರೆದು, ನಾಲಿಗೆಯನ್ನು ಎಷ್ಟು ಸಾಧ್ಯವೋ ಅಷ್ಟು ಗಟ್ಟಿಯಾಗಿ ಹೊರಗೆ ಚಾಚಬೇಕು. ಕಣ್ಣುಗಳನ್ನು ಕೂಡ ದೊಡ್ಡದಾಗಿ ಮಾಡಿ, ಉಸಿರಾಡುತ್ತಾ ಈ ಸ್ಥಿತಿಯಲ್ಲಿ 40 ಸೆಕೆಂಡುಗಳ ಕಾಲ ಸ್ಥಿರವಾಗಿ ಇರಬೇಕು.

 
 
 
 
View this post on Instagram
 
 
 
 
 
 
 
 
 
 
 

A post shared by Manisha Yadav (@wellnesswithmanisha)

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆರೋಗ್ಯ
ಆರೋಗ್ಯ ಸಮಸ್ಯೆಗಳು
ಆರೋಗ್ಯಕರ ಆಹಾರಗಳು
ಜೀವನಶೈಲಿ

Latest Videos
Recommended Stories
Recommended image1
Health Benefits: ಹಸಿ ಮೆಣಸಿನಕಾಯಿ vs ಕೆಂಪು ಮೆಣಸಿನಕಾಯಿ: ಆರೋಗ್ಯಕ್ಕೆ ಯಾವುದು ಬೆಸ್ಟ್?
Recommended image2
43ರಲ್ಲೂ 20ರ ಲಲನೆಯಂತೆ ಮಿಂಚುವ ತ್ರಿಷಾ.. ಸೌಂದರ್ಯದ ಸಲುವಾಗಿ ನಟಿ ಇಷ್ಟೆಲ್ಲಾ ಮಾಡ್ತಾರೆ, ಈಸಿ ಅಲ್ಲ!
Recommended image3
Green Chilli Seeds: ಖಾರ ಅಂತ ಬೀಜ ಬಿಸಾಡಬೇಡಿ: ಹಸಿಮೆಣಸಿನಕಾಯಿ ಬೀಜದಲ್ಲಿದೆ ಆರೋಗ್ಯದ ಮಹಾ ಸಂಪತ್ತು!
Related Stories
Recommended image1
ಬೆಳಗ್ಗೆ 5 ಗಂಟೆಗೆ ಎದ್ದರೆನೇ ಯಶಸ್ಸು ಸಿಗುತ್ತಾ? ನ್ಯೂರೋಸೈಂಟಿಸ್ಟ್ ಹೇಳಿದ್ದನ್ನ ಕೇಳಿದ್ಮೇಲೆ ಶಾಕ್ ಆಗ್ತೀರ!
Recommended image2
ಫ್ರಿಡ್ಜ್ ನಲ್ಲಿಟ್ಟ ಅನ್ನ ತಿನ್ನುವುದು ಡೇಂಜರಾ? ಕ್ಯಾನ್ಸರ್ ತಜ್ಞರು ಕೊಟ್ರು 4 Tips
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved