Non Veg Lovers Alert.. ಮಾಂಸಾಹಾರ ತಿಂದ ಬಳಿಕ ಈ ಆಹಾರ ತಿನ್ನುವ ತಪ್ಪು ಮಾಡ್ಬೇಡಿ
ನೀವು ಮಾಂಸಾಹಾರ ಪ್ರಿಯರಾಗಿದ್ದು, ನಿಮಗೆ ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ ನೀವು ಮಿಸ್ ಮಾಡದೆ ಇದನ್ನ ಓದಿ. ಯಾಕಂದ್ರೆ ಮೀನು, ಮಾಂಸ, ಕೋಳಿ ತಿಂದ ಬಳಿಕ ನೀವು ಕೆಲವೊಂದು ಆಹಾರಗಳನ್ನು ಸೇವಿಸಬಾರದು. ಇದರಿಂದ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ.

ಮೀನು, ಮಾಂಸ ತಿಂದ ಬಳಿಕ ಈ ಆಹಾರ ಸೇವಿಸಬೇಡಿ
ಮಟನ್, ಚಿಕನ್, ಮೀನು, ಸೀಗಡಿ ಅಥವಾ ಇತರ ಸಮುದ್ರಾಹಾರಗಳನ್ನು ತಿನ್ನಲು ಇಷ್ತಪಡುವವರ ಸಂಖ್ಯೆ ಸಾಕಷ್ಟಿದೆ. ಮಾಂಸಾಹಾರಿಗಳು ವಾರಕ್ಕೆ ಎರಡರಿಂದ ಮೂರು ಬಾರಿಯಾದರೂ ನಾನ್ ವೆಜ್ ಸೇವಿಸುತ್ತಾರೆ. ಆದರೆ ನೀವು ಸೇವಿಸುವ ಮಾಂಸಾಹಾರದೊಡನೆ ಈ ಆಹಾರಗಳನ್ನು ಸೇವಿಸುವುದನ್ನು ನೀವು ಅವಾಯ್ಡ್ ಮಾಡಿ. ಯಾಕಂದ್ರೆ ಈ ಆಹಾರಗಳ ಜೊತೆಗೆ ಕೆಲವು ಆಹಾರಗಳನ್ನು ಸೇವಿಸಿದರೆ ಅದರಿಂದ ಫುಡ್ ಪಾಯ್ಸನ್ ಅಥವಾ ಇನ್ನಿತರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಅವುಗಳನ್ನು ಅವಾಯ್ಡ್ ಮಾಡುವುದು ಉತ್ತಮ. ಕೋಳಿ, ಮಾಂಸ ಅಥವಾ ಮೀನು ತಿಂದ ನಂತರ ನೀವು ಯಾವ ಆಹಾರಗಳನ್ನು ತಪ್ಪಿಸಬೇಕು? ನೋಡೋಣ.
ಹಾಲು ಮತ್ತು ಡೈರಿ ಉತ್ಪನ್ನಗಳು
ನೀವು ಕೋಳಿ ಅಥವಾ ಮೀನು ತಿಂದು ನಂತರ ಹಾಲು ಅಥವಾ ಇತರ ಡೈರಿ ಉತ್ಪನ್ನಗಳನ್ನು ಸೇವಿಸಿದರೆ, ಅದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಹೊಟ್ಟೆಯಲ್ಲಿ ಭಾರವಾದ ಭಾವನೆ ಉಂಟಾಗಬಹುದು. ಮೀನು ತಿಂದು ಹಾಲು ಕುಡಿದ ಕೆಲವು ಜನರು ಚರ್ಮದ ಸಮಸ್ಯೆಗಳನ್ನು ಸಹ ಅನುಭವಿಸುತ್ತಾರೆ. ಗ್ಯಾಸ್, ಅಜೀರ್ಣ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆ ಸಹ ಕಾಡುತ್ತದೆ.
ಮಸಾಲೆಯುಕ್ತ ಆಹಾರಗಳ ಜೊತೆ ಸೇವಿಸಬೇಡಿ
ಕೋಳಿ, ಕುರಿ ಮತ್ತು ಮೀನುಗಳಂತಹ ಮಾಂಸಾಹಾರಗಳನ್ನು ಸಾಮಾನ್ಯವಾಗಿ ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಪದಾರ್ಥಗಳಲ್ಲಿ ತಯಾರಿಸಲಾಗುತ್ತದೆ, ಆದ್ದರಿಂದ ಅವುಗಳನ್ನು ಇತರ ಮಸಾಲೆಯುಕ್ತ ಅಥವಾ ಎಣ್ಣೆಯುಕ್ತ ಆಹಾರಗಳೊಂದಿಗೆ ಸೇವಿಸುವುದನ್ನು ತಪ್ಪಿಸಿ. ಅತಿಯಾಗಿ ಫ್ರೈ ಮಾಡಿದ ತಿಂಡಿಗಳನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಬೀರುತ್ತದೆ, ಇದು ಗ್ಯಾಸ್ಟ್ರಿಕ್, ಅಜೀರ್ಣ, ಹುಳಿ ತೇಗು ಮತ್ತು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ.
ಮಾಂಸಾಹಾರದ ಜೊತೆ ಕೋಲ್ಡ್ ಡ್ರಿಂಕ್
ಮಾಂಸಾಹಾರಿ ಆಹಾರಗಳು ಸಾಮಾನ್ಯವಾಗಿ ಹೀಟ್ ಸ್ವಭಾವವನ್ನು ಹೊಂದಿರುತ್ತದೆ ಮತ್ತು ಹೆವಿಯಾಗಿರುತ್ತದೆ. ಆದ್ದರಿಂದ, ತಿಂದ ತಕ್ಷಣ ಐಸ್ ವಾಟರ್ ಮತ್ತು ತಂಪು ಪಾನೀಯಗಳಂತಹ ತಣ್ಣನೆಯ ಪಾನೀಯಗಳನ್ನು ಕುಡಿಯುವುದನ್ನು ತಪ್ಪಿಸಬೇಕು. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಮತ್ತು ಅಸ್ವಸ್ಥತೆ ಉಂಟುಮಾಡಬಹುದು.
ಸಿಟ್ರಸ್ ಹಣ್ಣುಗಳನ್ನು ಸೇವಿಸುವುದನ್ನು ತಪ್ಪಿಸಿ
ಮೀನು ಅಥವಾ ಕೋಳಿ ಮಾಂಸ ತಿಂದ ತಕ್ಷಣ ಕಿತ್ತಳೆ, ಕಿವಿ, ನಿಂಬೆಹಣ್ಣು ಮತ್ತು ಇತರ ಸಿಟ್ರಸ್ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿ. ಹೆವಿ ಮಾಂಸಾಹಾರಿ ವಸ್ತುಗಳನ್ನು ತಿಂದ ತಕ್ಷಣ ಸಿಟ್ರಸ್ ಹಣ್ಣುಗಳನ್ನು ತಿನ್ನುವುದರಿಂದ ಆಮ್ಲೀಯತೆ, ಹೊಟ್ಟೆ ನೋವು, ಆಮ್ಲ ಹಿಮ್ಮುಖ ಹರಿವು ಮತ್ತು ಎದೆಯುರಿ ಉಂಟಾಗುತ್ತದೆ.
ಚಹಾ ಸೇವನೆ ಮಾಡುವುದನ್ನು ತಪ್ಪಿಸಿ
ಮಾಂಸಾಹಾರನ್ನು ಸೇವಿಸಿದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವುದನ್ನು ತಪ್ಪಿಸಿ. ಮಾಂಸಾಹಾರದ ಜೊತೆ ಚಹಾ ಕುಡಿದರೆ ಕೆಲವು ಪೋಷಕಾಂಶಗಳು, ವಿಶೇಷವಾಗಿ ಕಬ್ಬಿಣದ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
ಮೀನು-ಮಾಂಸ ತಿಂದ ಬಳಿಕ ಶುಗರ್ ಐಟಮ್ ತಿನ್ನಬೇಡಿ
ಮೀನು ಮತ್ತು ಕೋಳಿ ಮಾಂಸವು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಆದ್ದರಿಂದ, ಇವುಗಳನ್ನು ಸೇವಿಸಿದ ನಂತರ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಹೊಂದಿರುವ ಆಹಾರ ಸೇವಿಸುವುದನ್ನು ತಪ್ಪಿಸಿ. ಸಕ್ಕರೆ ಭರಿತ ಸ್ವಿಟ್ಸ್, ಜ್ಯೂಸ್, ಪೇಸ್ಟ್ರಿ ಮತ್ತು ಕೇಕ್ ಸೇವಿಸುವುದರಿಂದ ಕ್ಯಾಲೋರಿ ಸೇವನೆ ಹೆಚ್ಚಾಗುತ್ತದೆ. ಇದರಿಂದ ಜೀರ್ಣಕ್ರಿಯೆ ನಿಧಾನವಾಗಬಹುದು, ಇದು ತೂಕ ಹೆಚ್ಚಾಗಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಲು ಕಾರಣವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

