- Home
- Life
- Health
- Limiting Sugar for Babies: ಮಕ್ಕಳಿಗೆ ಮೊದಲ 2 ವರ್ಷ ಸಕ್ಕರೆ ಕೊಡೋದು ಡೇಂಜರ್… ಕೊಟ್ಟು ತಪ್ಪು ಮಾಡ್ಬೇಡಿ
Limiting Sugar for Babies: ಮಕ್ಕಳಿಗೆ ಮೊದಲ 2 ವರ್ಷ ಸಕ್ಕರೆ ಕೊಡೋದು ಡೇಂಜರ್… ಕೊಟ್ಟು ತಪ್ಪು ಮಾಡ್ಬೇಡಿ
ಮಗುವಿನ ಮೊದಲ 1000 ದಿನಗಳಲ್ಲಿ ಸಕ್ಕರೆ ಸೇವನೆಯನ್ನು ಮಿತಿಗೊಳಿಸುವುದು ಕೇವಲ "ಆರೋಗ್ಯಕರ ಆಹಾರ" ಕ್ರಮ ಮಾತ್ರವಲ್ಲ. ಇದು ಅಕ್ಷರಶಃ ಅವರ ಭವಿಷ್ಯವನ್ನು ರೂಪಿಸುತ್ತದೆ. ಮಕ್ಕಳ ಜೀವನದಿಂದ ಸಕ್ಕರೆಯನ್ನು ಅವಾಯ್ಡ್ ಮಾಡಿದ್ರೆ, ಅದರಿಂದ ಮಗುವಿಗೆ ಏನೆಲ್ಲಾ ಪ್ರಯೋಜನಗಳು ಸಿಗುತ್ತೆ ನೋಡೋಣ.

ಜೀವನದ ಮೊದಲ 1000 ದಿನ
ಜೀವನದ ಮೊದಲ ಸಾವಿರ ದಿನ ಅಂದ್ರೆ ಡೆಲಿವರಿ ಆದಾಗಿನಿಂದ ಹಿಡಿದು ಮಗುವಿಗೆ ಎರಡು ವರ್ಷ ತುಂಬುವಲ್ಲಿಯವರೆಗೆ, ಮಕ್ಕಳ ಮೆದುಳು, ಇಮ್ಯೂನಿಟಿ ಸಿಸ್ಟಮ್ ಮತ್ತು ಮೆಟಾಬಾಲಿಸಂ ವೇಗವಾಗಿ ಬೆಳೆಯುತ್ತದೆ. ಇಂತಹ ಸಮಯದಲ್ಲಿ ಮಕ್ಕಳನ್ನು ಆರೋಗ್ಯಯುತವಾಗಿ ನೋಡಿಕೊಳ್ಳೋದು ಮುಖ್ಯ.
ಸಕ್ಕರೆ ಅಂಶ ಹೆಚ್ಚು ನೀಡಬೇಡಿ
ಎರಡು ವರ್ಷಗಳವರೆಗಿನ ಸಮಯದಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಸಕ್ಕರೆಯ ಅಂಶವನ್ನು ನೀಡುವುದನ್ನು ಸಂಪೂರ್ಣವಾಗಿ ಅವಾಯ್ಡ್ ಮಾಡಬೇಕು. ಇಲ್ಲವಾದರೆ ಮಕ್ಕಳಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಸಕ್ಕರೆ ಹೆಚ್ಚಾದ್ರೆ ಏನಾಗುತ್ತೆ?
ಮಕ್ಕಳ ಈ ಬೆಳವಣಿಗೆಯ ಅವಧಿಯಲ್ಲಿ ಅವರಿಗೆ ಹೆಚ್ಚಿನ ಸಕ್ಕರೆಯ ಅಂಶವನ್ನು ನೀಡಬಾರದು, ಹೆಚ್ಚು ಸಕ್ಕರೆ ಅಂಶ ನೀಡಿದಷ್ಟು ಮಕ್ಕಳಲ್ಲಿ ಬೊಜ್ಜು, ರೋಗ ನಿರೋಧಕ ಶಕ್ತಿಯ ಕೊರತೆ ಹಾಗೂ ಮೆದುಳಿನ ಬೆಳವಣಿಗೆಯಲ್ಲಿ ಕುಂಠಿತ ಉಂಟಾಗುತ್ತದೆ.
ಕಡಿಮೆ ಸಕ್ಕರೆಯಿಂದ ಆರೋಗ್ಯ ಲಾಭ
- ಸ್ಮರಣಶಕ್ತಿ ಮತ್ತು ಕಲಿಕೆಯ ಕಾರ್ಯಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುತ್ತಾರೆ
- ಆರೋಗ್ಯಕರ ತೂಕದ ಪಥಗಳನ್ನು ಹೊಂದಿರುತ್ತಾರೆ
- ಇದಲ್ಲದೇ ಮಧುಮೇಹ, ಹೃದ್ರೋಗ ಮತ್ತು ಚಯಾಪಚಯ ಸಮಸ್ಯೆಗಳ ಕಡಿಮೆ ಅಪಾಯ
ಅಧ್ಯಯನ ಏನು ಹೇಳುತ್ತೆ?
ಯಾವ ಮಕ್ಕಳು ತಾವು ಎರಡು ವರ್ಷ ತಲುಪುವವರೆಗೆ ಕಡಿಮೆ ಪ್ರಮಾಣದಲ್ಲಿ ಸಕ್ಕರೆಯನ್ನು ಸೇವಿಸುತ್ತಾರೆ. ಅಥವಾ ಸಕ್ಕರೆಯೇ ಸೇವಿಸುವುದಿಲ್ಲವೋ? ಅಂತಹ ಮಕ್ಕಳಲ್ಲಿ ಲರ್ನಿಂಗ್ ಸ್ಕಿಲ್ ಮತ್ತು ಮೆಮೊರಿ ಪವರ್ ಇತರ ಮಕ್ಕಳಿಗಿಂದ ಹೆಚ್ಚಾಗಿರುತ್ತೆ.
ಮಕ್ಕಳ ಆರೋಗ್ಯ ರೂಪಿಸಿ
ಮೊದಲ ಸಾವಿರ ದಿನ ಸಕ್ಕರೆ ಆವಾಯ್ಡ್ ಮಾಡೋದು ಅಂದ್ರೆ ಮಕ್ಕಳನ್ನು ಪರ್ಫೆಕ್ಟ್ ಆಗಿ ಮಾಡೋದು ಅಂತ ಅಲ್ಲ, ಬದಲಾಗಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನೀವು ನೆರಳಾಗುತ್ತೀರಿ ಎಂದು ಅರ್ಥ.