ಫಿಶ್ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಹಿತ – ಮಿತವಾಗಿ ತಿನ್ಬೇಕು. ಅಷ್ಟೇ ಅಲ್ಲ ಯಾವ ಆಹಾರದ ಜೊತೆ ಇದ್ರ ಕಾಂಬಿನೇಷನ್ ವರ್ಕ್ ಆಗಲ್ಲ ಅನ್ನೋದು ನಿಮಗೆ ಗೊತ್ತಿರಬೇಕು. 

ಅದೆಷ್ಟೋ ನಾನ್ ವೆಜಿಟೇರಿಯನ್ (non vegetarian) ಗೆ ಮೀನು (fish) ಇಷ್ಟವಾಗೋದಿಲ್ಲ. ನೀವು ಮೆನುನಲ್ಲಿ ಫಿಶ್ ಮಿಸ್ ಮಾಡ್ಕೊಂಡ್ರೆ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಸಾಕಷ್ಟು ವಿಟಮಿನ್ ಕಳೆದುಕೊಳ್ತೀರಿ. ಮೀನು ನಿಮ್ಮ ದೇಹದ ಪ್ರತಿಯೊಂದು ಭಾಗಕ್ಕೂ ಅಂದ್ರೆ ನಿಮ್ಮ ತಲೆಯಿಂದ ನಿಮ್ಮ ಕಾಲ್ಬೆರಳುಗಳವರೆಗೆ ಪ್ರಯೋಜನಕಾರಿ. ಮೀನಿನಲ್ಲಿ ಕಡಿಮೆ ಕೊಬ್ಬಿದೆ. ಉತ್ತಮ ಗುಣಮಟ್ಟದ ಪ್ರೋಟೀನ್, ಒಮೆಗಾ-3 ಕೊಬ್ಬಿನಾಮ್ಲ ಮತ್ತು ವಿಟಮಿನ್ ಡಿ ಮತ್ತು ಬಿ2 ನಂತಹ ವಿಟಮಿನ್ಗಳಲ್ಲಿ ಸಮೃದ್ಧವಾಗಿದೆ. ಮೀನು ಕ್ಯಾಲ್ಸಿಯಂ ಮತ್ತು ರಂಜಕ, ಕಬ್ಬಿಣ, ಸತು, ಅಯೋಡಿನ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಖನಿಜಗಳ ಉತ್ತಮ ಮೂಲವಾಗಿದೆ. ಹೃದಯ, ಮೆದುಳನ್ನು ಬಲಪಡಿಸಿ, ನಿದ್ರಾಹೀನತೆ ಸಮಸ್ಯೆ ಕಡಿಮೆ ಮಾಡುವ ಮೀನು, ಮಕ್ಕಳ ಅಸ್ತಮಾಕ್ಕೆ ಒಳ್ಳೆ ಮದ್ದು. ಮೀನನ್ನು ಸೂಪರ್ ಫುಡ್ ಅಂತಾನೇ ಕರೆಯಲಾಗುತ್ತೆ. ಮೀನು ಇಷ್ಟೆಲ್ಲ ಪ್ರಯೋಜ ಹೊಂದಿರೋದು ನಿಜ. ಫಿಶ್ ಫ್ರೈ, ಫಿಶ್ ಕರ್ರಿ ಅಂದಾಗ ಬಾಯಲ್ಲಿ ನೀರು ಬರೋದು ಸಹಜ. ಫಿಶ್ ಪ್ರಿಯರು ಮಧ್ಯರಾತ್ರಿ ಫಿಶ್ ಫುಡ್ ಮಾಡಿಕೊಟ್ರೂ ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಆದ್ರೆ ಈ ಫಿಶ್ ನಿಮ್ಮ ಆರೋಗ್ಯ ಸುಧಾರಿಸ್ಬೇಕು ಅಂದ್ರೆ ನೀವು ಕೆಲ ಆಹಾರದ ಜೊತೆ ಮೀನು ಸೇವನೆ ಮಾಡ್ಲೇಬಾರದು.

ಫಿಶ್ ಜೊತೆ ಈ ಆಹಾರ ತಿನ್ಬೇಡಿ :

ಆಲ್ಕೋಹಾಲ್ : ಆಲ್ಕೋಹಾಲ್ ಕುಡಿತಾ, ಫಿಶ್ ಫ್ರೈ ತಿನ್ನೋರು ನೀವಾಗಿದ್ರೆ ಇನ್ಮುಂದೆ ಈ ಅಭ್ಯಾಸ ಬಿಟ್ಬಿಡಿ. ಪಿಶ್ ಜೊತೆ ಆಲ್ಕೋಹಾಲ್, ವೈನ್ ಸೇವನೆ ಒಳ್ಳೆಯದಲ್ಲ. ಇದು ನಿಮ್ಮ ಲಿವರ್ ಮೇಲೆ ಒತ್ತಡ ಹೆಚ್ಚಾಗುತ್ತೆ. ಕೆಲ ಸ್ಟಡಿ ಪ್ರಕಾರ, ಮೀನು ತಿಂದ್ಮೇಲೆ ಆಲ್ಕೋಹಾಲ್ ಅಥವಾ ವೈನ್ ಕುಡಿದ್ರೆ ನಿಮ್ಮ ಹೃದಯಾಘಾತದ ಅಪಾಯ ಹೆಚ್ಚು.

https://kannada.asianetnews.com/life/this-ai-created-life-lesson-story-becomes-virla-in-social-media/articleshow-yanwdek

ನಿಂಬು – ವಿಟಮಿನ್ ಸಿ : ನೀವು ಫಿಶ್ ಜೊತೆ ನಿಂಬೆ ಹಣ್ಣು ಅಥವಾ ವಿಟಮಿನ್ ಸಿ ಹೆಚ್ಚಿರುವ ಯಾವುದೇ ಆಹಾರವನ್ನು ತಿನ್ನಬಾರದು. ಹಳೆಯ ಅಥವಾ ತುಂಬಾ ದಿನಗಳಿಂದ ಸಂಗ್ರಹಿಸಿಟ್ಟ ಮೀನುಗಳ ಜೊತೆ ನೀವು ಸಿಟ್ರಿಕ್ ಹಣ್ಣುಗಳನ್ನು ತಿಂದ್ರೆ ಆರ್ಸೆನಿಕ್ ವಿಷತ್ವ ಅಥವಾ ಮೀನಿನ ವಿಷದ ಅಪಾಯ ಹೆಚ್ಚು. ಅತಿ ಕಡಿಮೆ ಪ್ರಮಾಣದಲ್ಲಿ ನೀವು ವಿಟಮಿನ್ ಸಿ ಆಹಾರ ತಿನ್ನಬೇಕು.

ಹಸಿರು ಸೊಪ್ಪು : ಪಾಲಕ್, ಕೊತ್ತಂಬರಿ ಸೊಪ್ಪು ಸೇರಿದಂತೆ ಹಸಿರು ಸೊಪ್ಪುಗಳನ್ನು ನೀವು ಫಿಶ್ ಜೊತೆ ತಿನ್ಬೇಡಿ. ದೇಹ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ ನಿಮಗೆ ಗ್ಯಾಸ್, ಹೊಟ್ಟೆ ಉಬ್ಬರ, ಉರಿ ಕಾಣಿಸಿಕೊಳ್ಳುತ್ತದೆ. ಹಸಿರು ಸೊಪ್ಪು ಹಾಗೂ ಫಿಶ್ ಎರಡೂ ಆರೋಗ್ಯಕ್ಕೆ ಉತ್ತಮ. ಆದ್ರೆ ಒಟ್ಟಿಗೆ ಸೇವನೆ ಒಳ್ಳೆಯದಲ್ಲ. ನೀವು ಹಸಿರು ಸೊಪ್ಪುಗಳನ್ನು ಬೇರೆ ಸಮಯದಲ್ಲಿ ಸೇವನೆ ಮಾಡಿ.

ಕರಿದ ಆಹಾರ : ಫಿಶ್ ಜೊತೆ ಕರಿದ ಪದಾರ್ಥ, ಫಾಸ್ಟ್ ಫುಡ್ ತಿಂದ್ರೆ ಜೀರ್ಣಕ್ರಿಯೆ ನಿಧಾನಗೊಳ್ಳುತ್ತೆ. ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಕೊಲೆಸ್ಟ್ರಾಲ್ ಹೆಚ್ಚಿಸಿ, ಹೃದಯ ಸಂಬಂಧಿ ಖಾಯಿಲೆಗೆ ಕಾರಣವಾಗುತ್ತದೆ.

https://kannada.asianetnews.com/health-life/why-are-fennel-and-sugar-candy-served-after-meals-in-restaurants-roo/articleshow-dr0bsh4

ಸಿಹಿ ತಿಂಡಿ : ನೀವು ಮೀನನ್ನು ಲೈಟಾಗಿ, ಆರೋಗ್ಯಕರವಾಗಿ ಸೇವನೆ ಮಾಡ್ಬೇಕು. ಅದ್ರ ಜೊತೆ ಸಿಹಿಯನ್ನೂ ಹೆಚ್ಚಾಗಿ ತಿಂದ್ರೆ ದೇಹದಲ್ಲಿ ಸಕ್ಕರೆ ಪ್ರಮಾಣ ಏರುತ್ತದೆ. ಮಧುಮೇಹದ ಅಪಾಯ ಕಾಡುತ್ತದೆ. ಜೊತೆಗೆ ಚಯಾಪಚಯಕ್ಕೆ ಸಮಸ್ಯೆಯಾಗುತ್ತದೆ. ತೂಕ ಏರಿಕೆ ಅಪಾಯವೂ ಇದ್ರಲ್ಲಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ನೀವು ಆರೋಗ್ಯವಾಗಿರಬೇಕು ಅಂದ್ರೆ ಮೀನನ್ನು ಸರಿಯಾದ ಪ್ರಮಾಣದಲ್ಲಿ, ಸರಿಯಾದ ವಿಧಾನದಲ್ಲಿ ತಿನ್ಬೇಕು.