Healthy food : ಪ್ರತಿ ದಿನ ನೀವೂ ಗೋಧಿ ಚಪಾತಿ ತಿನ್ನೋರಾಗಿದ್ರೆ ಸ್ವಲ್ಪ ದಿನ ನಿಮ್ಮ ರುಟೀನ್ ಬದಲಿಸಿಕೊಳ್ಳಿ. 21 ದಿನ ಗೋಧಿ ಆಹಾರಕ್ಕೆ ಗುಡ್ ಬೈ ಹೇಳಿ. ನಿಮ್ಮ ದೇಹದಲ್ಲಿ ಏನೆಲ್ಲ ಬದಲಾವಣೆ ಆಗುತ್ತೆ ಚೆಕ್ ಮಾಡಿ. 

ಗೋಧಿ (Wheat)ಯನ್ನು ಶತಮಾನಗಳಿಂದ ಪ್ರಪಂಚದಾದ್ಯಂತ ತಿಂತಿದ್ದಾರೆ. ಮೆಕ್ಕೆಜೋಳ ಮತ್ತು ಅಕ್ಕಿಯ ಜೊತೆಗೆ ಗೋಧಿ 4 ಶತಕೋಟಿಗೂ ಹೆಚ್ಚು ಜನರಿಗೆ ಪ್ರಧಾನ ಆಹಾರವಾಗಿದೆ. ಭಾರತದಲ್ಲಿ ಬಹುತೇಕರು ದಿನದಲ್ಲಿ ಒಂದು ಹೊತ್ತಾದ್ರೂ ಗೋಧಿ ಚಪಾತಿ ತಿಂತಾರೆ. ಚಪಾತಿ ನಮ್ಮಆಹಾರದಲ್ಲಿ ಹಾಸುಹೊಕ್ಕಾಗಿದೆ. ಬೆಳಿಗ್ಗೆ, ಮಧ್ಯಾಹ್ನ ಇಲ್ಲ ರಾತ್ರಿ ಗೋಧಿ ಚಪಾತಿ ಬೇಕೇಬೇಕು ಎನ್ನುವವರಿದ್ದಾರೆ. ಗೋಧಿ ಚಪಾತಿ (wheat chapatti) ಆರೋಗ್ಯಕ್ಕೆ ಒಳ್ಳೆಯದು ಅಂದ್ಕೊಂಡು ಅನೇಕರು ಅನ್ನ ತ್ಯಜಿಸಿ ಗೋಧಿಗೆ ಶಿಫ್ಟ್ ಆಗಿದ್ದಾರೆ. ಅನ್ನ, ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತೆ ಎನ್ನುವ ಕಾರಣಕ್ಕೆ ಅನ್ನ ಬಿಟ್ಟ ಅನೇಕರು ಗೋಧಿ ಚಪಾತಿ ತಿನ್ನುವ ಅಭ್ಯಾಸ ಮಾಡ್ಕೊಂಡಿದ್ದಾರೆ. ಮೈದಾ ಬದಲಾಗಿ ಗೋಧಿ ಬಳಕೆ ಹೆಚ್ಚಾಗಿದೆ. ಮೈದಾ ಬ್ರೆಡ್ ಗಿಂತ ಗೋಧಿ ಬ್ರೆಡನ್ನು ಜನರು ಹೆಚ್ಚು ಖರೀದಿ ಮಾಡ್ತಿದ್ದಾರೆ.

ಗೋಧಿ, ಬಿ ಜೀವಸತ್ವ, ಕಬ್ಬಿಣ, ಫೈಬರ್, ಫೈಟೊಸ್ಟೆರಾಲ್ಗಳು ಮತ್ತು ಫೈಟೊನ್ಯೂಟ್ರಿಯೆಂಟ್ ಗಳಿಂದ ಸಮೃದ್ಧವಾಗಿದೆ. ಇಷ್ಟೆಲ್ಲ ಪೋಷಕಾಂಶ ಹೊಂದಿದ್ರೂ ನೀವೂ ಅಂದ್ಕೊಂಡಂತೆ ಗೋಧಿ ಆರೋಗ್ಯಕ್ಕೆ ಒಳ್ಳೆಯದಲ್ಲ. ನಾವು ಬಳಸುವ ಧಾನ್ಯಗಳಲ್ಲಿ ಗೋಧಿ, ಅತ್ಯಂತ ಹಾನಿಕಾರಕ ಧಾನ್ಯ ಅಂತ ತಜ್ಞರು ಹೇಳ್ತಾರೆ. ಬಹಳಷ್ಟು ಕ್ಯಾಲೋರಿ ಗೋಧಿ ಹಿಟ್ಟಿನಲ್ಲಿದೆ. ನೀವು 21 ದಿನಗಳ ಕಾಲ ಗೋಧಿ ಚಪಾತಿ ಅಥವಾ ಗೋಧಿ ಸೇವನೆ ಬಿಟ್ರೆ ನಿಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನವಿದೆ.

ಎಣ್ಣೆ ಬಳಸದೆ ಬಾಯಲ್ಲಿ ನೀರೂರಿಸುವ ಬಿಸಿ ಬಿಸಿಯಾದ ಸ್ಟಫ್ಡ್ ಪೂರಿ ಮಾಡೋದು ಹೇಗೆ?

21 ದಿನ ಗೋಧಿ ಚಪಾತಿ ತಿನ್ನೋದು ಬಿಟ್ರೆ ಏನಾಗುತ್ತೆ? :

• ಗೋಧಿ ಹಿಟ್ಟು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತದೆ. ನೀವು 21 ದಿನ ಗೋಧಿ ಚಪಾತಿ ಬಿಟ್ರೆ ಸಕ್ಕರೆ ಮಟ್ಟ ಸಮತೋಲನಕ್ಕೆ ಬರುತ್ತೆ. ಮಧುಮೇಹ ರೋಗಿಗಳು ಗೋಧಿಯಿಂದ ಆದಷ್ಟು ದೂರವಿದ್ರೆ ಒಳ್ಳೆಯದು.

• ಗೋಧಿ ಚಪಾತಿ ನಿಧಾನವಾಗಿ ಜೀರ್ಣವಾಗುತ್ತದೆ. ಇದ್ರಿಂದ ಗ್ಯಾಸ್, ಆಮ್ಲೀಯತೆ ಸಮಸ್ಯೆ ಹೆಚ್ಚಾಗುತ್ತದೆ. ಗೋಧಿ ಬಿಟ್ರೆ ಈ ಎಲ್ಲ ಸಮಸ್ಯೆಯಿಂದ ಹೊರಗೆ ಬರ್ಬಹುದು.

• ಗೋಧಿಯಲ್ಲಿ ಗ್ಲುಟನ್ ಕಂಡು ಬರುತ್ತದೆ. ಇದು ದೇಹದಲ್ಲಿ ಉರಿಯೂತ ಮತ್ತು ಅಲರ್ಜಿವನ್ನುಂಟು ಮಾಡುತ್ತದೆ. ಕಾಲು – ಕೈ ಸೇರಿದಂತೆ ದೇಹದ ಅನೇಕ ಭಾಗಗಳಲ್ಲಿ ಊತ ಕಾಣಿಸಿಕೊಳ್ಳಬಹುದು. ಗೋಧಿಯನ್ನು ತ್ಯಜಿಸುವುದರಿಂದ ದೇಹದ ಉರಿಯೂತ ಕಡಿಮೆಯಾಗುತ್ತದೆ

• ಗೋಧಿ ತಿನ್ನುವ ಜನರು ಆಲಸ್ಯ ಮತ್ತು ಸುಸ್ತನ್ನು ಅನುಭವಿಸ್ತಾರೆ. ನೀವು 21 ದಿನಗಳ ಕಾಲ ಗೋಧಿಯಿಂದ ದೂರವಿದ್ರೆ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ.

•ಗೋಧಿಯಲ್ಲಿ ಹೆಚ್ಚು ಕ್ಯಾಲೋರಿ ಇರುವ ಕಾರಣ, ತೂಕ ಇಳಿಸಿಕೊಳ್ಳುವವರಿಗೆ ಇದು ಒಳ್ಳೆಯದಲ್ಲ. ಅದ್ರಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ಗಳಿದ್ದು, ಇದು ದೇಹದಲ್ಲಿ ಕೊಬ್ಬನ್ನು ಸಂಗ್ರಹಿಸುತ್ತದೆ. ಇದನ್ನು ತ್ಯಜಿಸುವುದರಿಂದ ತೂಕ ಕಡಿಮೆಯಾಗುತ್ತದೆ.

Oily food ತಿನ್ನಲು ಹೆದರಬೇಡಿ, ಈ ಈಸಿ ಹ್ಯಾಕ್ ಫಾಲೋ ಮಾಡಿ

ಗೋಧಿ ಬದಲು ಯಾವ ಆಹಾರ ತಿನ್ನುವುದು ಒಳ್ಳೆಯದು? : ನಮ್ಮ ಆರೋಗ್ಯ ಸುಧಾರಿಸ್ಬೇಕೆಂದ್ರೆ ನಮ್ಮ ಆಹಾರದ ಸ್ಟೈಲ್ ಬದಲಿಸಬೇಕು. ಗೋಧಿ ಆಹಾರವನ್ನು ನಿಧಾನವಾಗಿ ಬಿಡ್ತಾ ಬನ್ನಿ. ಗೋಧಿ ಬದಲು ನೀವು ರಾಗಿ ಅಥವಾ ಜೋಳದಂತ ಒರಟಾದ ಹಿಟ್ಟನ್ನು ಬಳಸಬೇಕು. ನೀವು ಕಡಲೆ ಹಿಟ್ಟಿನ ಬಳಕೆ ಕೂಡ ಮಾಡಬಹುದು. ಒರಟಾದ ಧಾನ್ಯಗಳು ಜೀವಸತ್ವ, ಖನಿಜ ಮತ್ತು ನಾರಿನಂಶದಿಂದ ಸಮೃದ್ಧವಾಗಿವೆ. ಅವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ ಮತ್ತು ಫಿಟ್ನೆಸ್ ಸುಧಾರಿಸುತ್ತವೆ. ಜೋಳದ ಹಿಟ್ಟಿನ ರೊಟ್ಟಿಯನ್ನು ಬೇಸಿಗೆಯಲ್ಲಿ ತಿನ್ನಬೇಕು. ಚಳಿಗಾಲದಲ್ಲಿ ರಾಗಿ ಹಿಟ್ಟಿನ ರೊಟ್ಟಿಗಳನ್ನು ತಿನ್ನಬೇಕು.