ಕೇವಲ 21 ದಿನಗಳಲ್ಲಿ Fat to Fit ಆಗಿದ್ದೇಗೆ ನಟ ಮಾಧವನ್…Weight Lose ಸೀಕ್ರೆಟ್ ಇಲ್ಲಿದೆ
ಖ್ಯಾತ ನಟ ಆರ್. ಮಾಧವನ್ ಕೇವಲ 21 ದಿನಗಳಲ್ಲಿ ತಮ್ಮ ದೇಹವನ್ನು ಪರಿವರ್ತಿಸಿಕೊಂಡು ಜನರನ್ನು ಅಚ್ಚರಿಗೊಳಿಸಿದ್ದಾರೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ, ನಟನ ಫಿಟ್ನೆಸ್ ಜರ್ನಿ ಖಂಡಿತವಾಗಿಯೂ ನಿಮಗೆ ಪ್ರೇರಣೆ ನೀಡಬಹುದು.

ಆರ್. ಮಾಧವನ್ ತೂಕ ಇಳಿಕೆಯ ಸೀಕ್ರೆಟ್
ಇತ್ತೀಚಿನ ದಿನಗಳಲ್ಲಿ, ಬೊಜ್ಜು ದೇಹಕ್ಕೆ ಮಾತ್ರವಲ್ಲದೆ ಮನಸ್ಸಿಗೂ ಸಮಸ್ಯೆಯಾಗಿ ಪರಿಣಮಿಸಿದೆ. ತೂಕ ಹೆಚ್ಚಾದ ನಂತರ ಅನೇಕ ಜನರು ತಮ್ಮ ದೇಹದ ಬಗ್ಗೆ ಮುಜುಗರ ಅನುಭವಿಸುತ್ತಾರೆ. ಒಬ್ಬ ಸೆಲೆಬ್ರಿಟಿಯ ರೂಪಾಂತರವು, ಲಕ್ಷಾಂತರ ಜನರಿಗೆ ಭರವಸೆಯ ಕಿರಣವಾಗುತ್ತದೆ. ಅದೇ ರೀತಿ, ನಟ ಆರ್. ಮಾಧವನ್ ಅವರ 21 ದಿನಗಳ ಫಿಟ್ನೆಸ್ ಜರ್ನಿ ಒಂದು ಸ್ಪೂರ್ತಿದಾಯಕ ಕಥೆಯಾಗಿದ್ದು, ಸರಿಯಾದ ವಿಧಾನದಿಂದ ಬದಲಾವಣೆ ಅಸಾಧ್ಯವಲ್ಲ ಎಂದು ತೋರಿಸುತ್ತದೆ. ಅವರಂತೆ ನೀವು ಹೇಗೆ ತೂಕ ಇಳಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ…
ತೂಕ ಹೆಚ್ಚಳದಿಂದ ಸಮಸ್ಯೆ
ಮಾಧವನ್ ತನ್ನ ಚಿತ್ರ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ಗಾಗಿ ತೂಕ ಹೆಚ್ಚಿಸಿಕೊಂಡರು. ಆದರೆ, ಅವರ ತೂಕ ಹೆಚ್ಚಾಗುತ್ತಿದ್ದಂತೆ, ಚಿತ್ರೀಕರಣದ ಸಮಯದಲ್ಲಿ ಆಯಾಸ, ಭಾರ ಮತ್ತು ಅಸ್ವಸ್ಥತೆ ಸಾಮಾನ್ಯ ಸಮಸ್ಯೆಗಳಾದವು. ಚಿತ್ರ ಮುಗಿದ ನಂತರ, ಅವರು ಕೆಲವೇ ದಿನಗಳಲ್ಲಿ ದೇಹದಲ್ಲಿ ಫ್ಯಾಟ್ ತುಂಬಿಕೊಂಡಿತ್ತು.
ತೂಕ ಇಳಿಸಿಕೊಳ್ಳಲು ಅವರು ಮಾಡಿದ್ದೇನು?
ತೂಕ ಇಳಿಸಿಕೊಳ್ಳಲು ಮಾಧವನ್ ತಮ್ಮ ದೊಡ್ಡ ಅಭ್ಯಾಸವನ್ನು ಬದಲಾಯಿಸಿದರು. ಮೊದಲು ದಿನವಿಡೀ ನಿರಂತರವಾಗಿ ಏನನ್ನಾದರೂ ತಿನ್ನುತ್ತಿದ್ದರು. ನಂತರ ಅವರು, ನಿಗದಿತ ಸಮಯದೊಳಗೆ ತಿನ್ನಲು ನಿರ್ಧರಿಸಿದರು. ಇದು ಅವರ ದೇಹಕ್ಕೆ ಹೊಸ ದಿನಚರಿಯನ್ನು ನೀಡಿತು ಮತ್ತು ಫ್ಯಾಟ್ ಬರ್ನ್ ಪ್ರಕ್ರಿಯೆಯು ಪ್ರಾರಂಭವಾಯಿತು. ಇದನ್ನ ಇಂಟರ್ಮಿಟೆಂಟ್ ಫಾಸ್ಟಿಂಗ್ ಎನ್ನಲಾಗುತ್ತೆ. ನಟ 16:8 ನಿಯಮವನ್ನು ಅಳವಡಿಸಿಕೊಂಡರು, ಇದರಲ್ಲಿ ಅವರು 16 ಗಂಟೆಗಳ ಕಾಲ ಏನನ್ನೂ ತಿನ್ನುತ್ತಿರಲಿಲ್ಲ, ಬದಲಾಗಿ ಕೇವಲ 8 ಗಂಟೆಗಳಲ್ಲಿ ಊಟವನ್ನು ಮುಗಿಸಿದರು.
ಬುದ್ಧಿವಂತಿಕೆಯಿಂದ ಆಹಾರದ ಆಯ್ಕೆ
ಈ ಸಮಯದಲ್ಲಿ ಹಸಿವಿನಿಂದ ಬಳಲುವ ಬದಲು, ತಾನು ತಿನ್ನುವ ಆಹಾರವು ಪೌಷ್ಟಿಕಾಂಶದಿಂದ ಕೂಡಿತ್ತು ಜೊತೆಗೆ ಬ್ಯಾಲೆನ್ಸ್ ಆಗಿರುವಂತೆ ನೋಡಿಕೊಂಡರು. ಪ್ರೋಟೀನ್ ಮತ್ತು ಫೈಬರ್‌ನಿಂದ ಸಮೃದ್ಧವಾಗಿರುವ ಸರಳವಾದ ಮನೆಯಲ್ಲಿ ತಯಾರಿಸಿದ ಊಟಗಳನ್ನು ಮಾಡಿದರು. ಇದು ಅವರ ದೇಹವನ್ನು ಸ್ಟ್ರಾಂಗ್ ಆಗಿರುವಂತೆ ನೋಡಿಕೊಂಡಿತು.
ಫ್ಯಾಟ್ ಕರಗಿದ್ದು ಹೀಗೆ
ಊಟದ ಸಮಯ ಸ್ಥಿರವಾದಾಗ, ದೇಹವು ಹೆಚ್ಚು ಸಮಯ ವಿಶ್ರಾಂತಿ ಪಡೆಯುತ್ತದೆ. ಇದು ಇನ್ಸುಲಿನ್ ಮಟ್ಟವನ್ನು ಸಮತೋಲನಗೊಳಿಸುತ್ತದೆ ಮತ್ತು ದೇಹವು ಕ್ರಮೇಣ ಸಂಗ್ರಹವಾಗಿರುವ ಕೊಬ್ಬನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಪ್ರಾರಂಭಿಸುತ್ತದೆ. ಇದು ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬಿನ ಮೇಲೆ ಹೆಚ್ಚಿನ ಪರಿಣಾಮ ಬೀರಿತು.
ಯಂಗ್ ಲುಕ್
21 ದಿನಗಳಲ್ಲಿ, ಅವರ ಮುಖದಲ್ಲಿನ ಊತ ಕಡಿಮೆಯಾಯಿತು. ಚರ್ಮವು ಕ್ಲಿಯರ್ ಆಗಿ ಕಾಣಲು ಆರಂಭಿಸಿತು, ಜೊತೆಗೆ ದೇಹವು ಲೈಟ್ ಆಗಿರುವ ಭಾವನೆಯನ್ನು ಅನುಭವಿಸಿದರು. ಈ ಬದಲಾವಣೆಯು ಕೇವಲ ಬಾಹ್ಯವಲ್ಲ, ಆದರೆ ಆಂತರಿಕವಾಗಿಯೂ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು.
ನೀವು ಕೂಡ ಈ ವಿಧಾನವನ್ನು ಅಳವಡಿಸಿಕೊಳ್ಳಬಹುದು
ಇಂದಿನ ವೇಗದ ಜೀವನದಲ್ಲಿ, ಜನರು ಹೆಚ್ಚಾಗಿ ಸಮಯದ ಬಗ್ಗೆ ಗಮನ ಹರಿಸದೆ ತಿನ್ನುತ್ತಾರೆ. ಈ ಅಭ್ಯಾಸವು ಬೊಜ್ಜುತನಕ್ಕೆ ಪ್ರಮುಖ ಕಾರಣವಾಗುತ್ತಿದೆ. ಆರ್. ಮಾಧವನ್ ಅವರ ಈ ಕಥೆಯು ನೀವು ತಿನ್ನುವ ಸಮಯವನ್ನು ಸರಿಹೊಂದಿಸಿದರೆ, ನಿಮ್ಮ ದೇಹವು ಬ್ಯಾಲೆನ್ಸ್ ಆಗಿರುತ್ತೆ ಮತ್ತು ಸುಲಭವಾಗಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಅನ್ನೋದನ್ನು ತಿಳಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

