ದೇಹದ ಅತಿದೊಡ್ಡ ಅಂಗ ಯಾವ್ದು? ಅದನ್ನ ಹೇಗೆ ರಕ್ಷಿಸಿಕೊಳ್ಳಬೇಕು; ಇಲ್ಲಿದೆ ಮಾಹಿತಿ
ನಾವು ದೇಹದ ಅಂಗದ ಬಗ್ಗೆ ಯೋಚಿಸಿದ್ರೆ, ಹೃದಯ, ಶ್ವಾಸಕೋಶ ಮತ್ತು ಮೂತ್ರಪಿಂಡಗಳು ಮೆದುಳಿನ ಬಗ್ಗೆ ಮಾತ್ರ ಹೆಚ್ಚಿನ ಮಾತುಕತೆ ನಡೆಸುತ್ತೇವೆ. ಅವುಗಳೇ ನಮ್ಮ ದೇಹದ ಅತಿ ದೊಡ್ಡ ಅಂಗಗಳು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ದೇಹದಲ್ಲಿ ಅತ್ಯಂತ ದೊಡ್ಡ ಮತ್ತು ಗೋಚರ ಅಂಗ ಯಾವುದು ಎಂದು ನಿಮಗೆ ತಿಳಿದಿದ್ಯಾ? ದೇಹದ ಅತಿದೊಡ್ಡ ಅಂಗವೆಂದರೆ ಚರ್ಮ. ಸುಂದರವಾಗಿ ಕಾಣುವುದರ ಜೊತೆಗೆ, ಚರ್ಮವು ಹಾನಿಕಾರಕ ಜೀವಿಗಳಿಂದ ದೇಹವನ್ನು ರಕ್ಷಿಸುವಲ್ಲಿ ಮತ್ತು ದೇಹದ ತಾಪಮಾನವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ದೇಹದಲ್ಲಿ ಚರ್ಮದ (Skin) ತೂಕವು ಸುಮಾರು 15 ಪ್ರತಿಶತದಷ್ಟಿದೆ. ಚರ್ಮದ ಮೂಲಕವೇ ಎಲ್ಲಾ ಅಂಗಗಳು ಒಟ್ಟಿಗೆ ಕೆಲಸ ಮಾಡಲು ಸಾಧ್ಯವಾಗುತ್ತೆ. ಚರ್ಮವು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ನೀಡುವ ಕೆಲಸ ಮಾಡುತ್ತೆ, ಹಾಗೇ ವಿಟಮಿನ್ ಡಿ ಹೀರಿಕೊಳ್ಳಲು ಸಹಾಯ ಮಾಡುತ್ತೆ.
ಚರ್ಮವು ಆರೋಗ್ಯಕರವಾಗಿರೋದು ದೇಹಕ್ಕೆ (Body) ಬಹಳ ಮುಖ್ಯ, ಇದನ್ನು ಚೆನ್ನಾಗಿ ನೋಡಿಕೊಳ್ಳಬೇಕು. ದೇಹದಲ್ಲಿನ ರೋಗಗಳಿಂದ ಚರ್ಮದ ಆರೋಗ್ಯವನ್ನು ಅಂದಾಜು ಮಾಡಬಹುದು. ದೇಹದ ಅತಿದೊಡ್ಡ ಅಂಗವನ್ನು ಹೇಗೆ ನೋಡಿಕೊಳ್ಳಬಹುದು? ಇದರ ರಕ್ಷಣೆ ಹೇಗೆ? ಎಲ್ಲವನ್ನೂ ನಾವಿಂದು ಇಲ್ಲಿ ತಿಳಿಯೋಣ.
ವ್ಯಾಯಾಮ(Exercise)
ಚರ್ಮವನ್ನು ಆರೋಗ್ಯಕರವಾಗಿಸಲು ವ್ಯಾಯಾಮ ಪ್ರಮುಖ ಪಾತ್ರ ವಹಿಸುತ್ತೆ. ವ್ಯಾಯಾಮ ಚರ್ಮದೊಂದಿಗೆ ಎಲ್ಲಾ ಪ್ರಮುಖ ಅಂಗಗಳಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತೆ.
ರಕ್ತದ ಹರಿವಿನ ಹೆಚ್ಚಳದಿಂದಾಗಿ, ಚರ್ಮದ ಜೀವಕೋಶಗಳು ಸಕ್ರಿಯವಾಗಿರುತ್ತವೆ. ಇದರಿಂದ ಚರ್ಮದ ಆರೋಗ್ಯ ಉತ್ತಮವಾಗಿರುತ್ತೆ.
ವ್ಯಾಯಾಮವು ಹೆಚ್ಚು ಬೆವರುವಿಕೆಗೆ (Sweat) ಕಾರಣವಾಗುತ್ತೆ, ಇದು ರಂಧ್ರಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತೆ, ಇದರಿಂದ ಚರ್ಮವು ಮುಕ್ತವಾಗಿ ಉಸಿರಾಡಲು ಸಾಧ್ಯವಾಗುತ್ತೆ. ಹಾಗಾಗಿ ಚರ್ಮದ ಹೆಚ್ಚಿನ ಕಾಳಜಿವಹಿಸೋದು ನಮ್ಮ ಕರ್ತವ್ಯ. ಅದಕ್ಕಾಗಿ ನೀವು ನಿಯಮಿತವಾಗಿ ವ್ಯಾಯಾಮ ಮಾಡೋದನ್ನು ರೂಢಿ ಮಾಡೋದು ಸರಿ.
ನಿದ್ರೆ (Sleep)
ಚೆನ್ನಾಗಿ ನಿದ್ರೆ ಮಾಡೋದರಿಂದ ಚರ್ಮವು ಆರೋಗ್ಯಕರವಾಗಿರಲು ಸಹಾಯ ಮಾಡುತ್ತೆ. ನಿದ್ರೆಯ ಸಮಯದಲ್ಲಿ ಚರ್ಮವು ರಿಜನರೇಟ್ ಆಗುತ್ತೆ. ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕುತ್ತೆ. 18 ರಿಂದ 60 ವರ್ಷ ವಯಸ್ಸಿನ ವಯಸ್ಕರು ರಾತ್ರಿಯಲ್ಲಿ ಕನಿಷ್ಠ 7 ಗಂಟೆಗಳ ಕಾಲ ಸಾಕಷ್ಟು ನಿದ್ರೆ ಪಡೆಯಬೇಕು.
ಚರ್ಮವನ್ನು ಆರೋಗ್ಯಕರ ಮತ್ತು ಸುಂದರವಾಗಿಸಲು ತಾಜಾ ಗಾಳಿಯ (Fresh air) ಅಗತ್ಯವಿದೆ. ಮನೆಯೊಳಗಿನ ಗಾಳಿಯು ಸಾಕಷ್ಟು ಡ್ರೈ ಆಗಿದ್ದರೆ, ಇದು ಚರ್ಮವನ್ನು ಹಾಳುಮಾಡಬಹುದು. ಚರ್ಮದ ಕೋಶಗಳನ್ನು ಸರಿಪಡಿಸಲು ತಾಜಾ ಗಾಳಿಯ ಅಗತ್ಯವಿದೆ, ಆದ್ದರಿಂದ ಚರ್ಮವನ್ನು ದಿನಕ್ಕೆ 30 ನಿಮಿಷಗಳ ಕಾಲ ಹೊರಗಿನ ತಾಜಾ ಗಾಳಿಗೆ ಒಡ್ಡಿಕೊಳ್ಳುವುದು ಅಗತ್ಯ. ತಾಜಾ ಗಾಳಿಯು ಚರ್ಮದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.
ಚರ್ಮದ ಆರೋಗ್ಯಕ್ಕೆ ಪೋಷಕಾಂಶಗಳು
ಆಂಟಿ-ಆಕ್ಸಿಡೆಂಟ್ (Anti-oxidant)- ಚರ್ಮವನ್ನು ಆರೋಗ್ಯಕರವಾಗಿಸಲು, ಆಹಾರದಲ್ಲಿ ಸಾಕಷ್ಟು ಪ್ರಮಾಣದ ಆಂಟಿ-ಆಕ್ಸಿಡೆಂಟ್ ಗಳನ್ನು ಸೇರಿಸಿ. ಹಸಿರು ಸೊಪ್ಪು ತರಕಾರಿಗಳು, ಬಾಳೆಹಣ್ಣುಗಳು, ಬೆರ್ರಿಗಳನ್ನು ಆಹಾರದಲ್ಲಿ ಸೇರಿಸಬಹುದು. ಇದರಿಂದ ಚರ್ಮವು ತಾಜಾತನದಿಂದ ಕೂಡಿರುತ್ತೆ. ಆರೋಗ್ಯಕರವಾಗಿಯೂ ಇರುತ್ತೆ.
ಕೊಬ್ಬು- ಚರ್ಮದ ಆರೈಕೆಗಾಗಿ, ಮೊನೊಸ್ಯಾಚುರೇಟೆಡ್ ಮತ್ತು ಪಾಲಿಅನ್ ಸ್ಯಾಚುರೇಟೆಡ್ ಕೊಬ್ಬುಗಳನ್ನು ಆಹಾರದಲ್ಲಿ ಸೇರಿಸಬೇಕು. ಇವು ಸಾಲ್ಮನ್, ವಾಲ್ನಟ್ (Walnut) ಮತ್ತು ಚಿಯಾ ಬೀಜಗಳಲ್ಲಿ ಸಮೃದ್ಧವಾಗಿವೆ.ಹಾಗಾಗಿ ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
ಪ್ರೋಬಯಾಟಿಕ್ಸ್- ಮೊಸರು ಮತ್ತು ಡೈರಿ ಉತ್ಪನ್ನಗಳು (Dairy products) ಚರ್ಮಕ್ಕೆ ಪ್ರಯೋಜನಕಾರಿಯಾಗಿವೆ. ನೀವು ಆಹಾರದಲ್ಲಿ ಹೆಚ್ಚಿನ ನಾರಿನಂಶವನ್ನು ಸಹ ಸೇರಿಸಬಹುದು. ಚರ್ಮವು ನಿಮ್ಮ ಆರೋಗ್ಯದ ಬಗ್ಗೆ ಸರಿಯಾಗಿ ಮಾಹಿತಿ ನೀಡುತ್ತೆ. ಹಾಗಾಗಿ, ನಿಮ್ಮ ಚರ್ಮವನ್ನು ಸಾಧ್ಯವಾದಷ್ಟು ಕೇರ್ ಮಾಡಿ, ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.