Wearable Air Sampler: ಕೋವಿಡ್ 19 ಪತ್ತೆಮಾಡಬಲ್ಲ ಕ್ಲಿಪ್-ಆನ್ ಅಭಿವೃದ್ಧಿಪಡಿಸಿದ ಯೇಲ್ ವಿಶ್ವವಿದ್ಯಾಲಯ !
ಸಂಭಾವ್ಯ ಕೋವಿಡ್ 19 ಎಕ್ಸ್‌ಪೋಶರ್‌ಗೆ (Exposure) ನಿಮ್ಮನ್ನು ಎಚ್ಚರಿಸಲು ಸಹಾಯ ಮಾಡುವ ಧರಿಸಬಹುದಾದ ಸಾಧನವನ್ನು ಯುಎಸ್‌ನ ಯೇಲ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
Tech Desk: ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಭಾರತ ಸೇರಿದಂತೆ ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಏರಿಕೆ ಕಾಣುತ್ತಿದೆ. ಕೋವಿಡ್ ಮಹಾಮಾರಿ ಆರಂಭವಾದಾಗಿಂದಲೂ ಕೊರೋನಾ ನಿಯೊಂತ್ರಣಕ್ಕೆ ಜಗತ್ತಿನ ಕಂಪನಿಗಳು ಮತ್ತು ವಿಶ್ವವಿದ್ಯಾಲಯಗಳು ನಾನಾ ಸೌಲಭ್ಯಗಳನ್ನು ಕಲ್ಪಿಸುವ ಹೊಸ ಹೊಸ ಮಾದರಿಯ ವಸ್ತುಗಳನ್ನು ಬಿಡುಗಡೆ ಮಾಡಿವೆ.ಈ ಪಟ್ಟಿಗೆ ಇತ್ತೀಚೆಗಿನ ಸೇರ್ಪಡೆ ಎಂದರೆ ಕೋವಿಡ್ 19 ಮುನ್ನೆಚ್ಚರಿಕೆ ನೀಡುವ ಧರಿಸಬಹುದಾದ ಕ್ಲಿಪ್-ಆನ್ ಸಾಧನ. ಸಂಭಾವ್ಯ ಕೋವಿಡ್ 19 ಎಕ್ಸ್‌ಪೋಶರ್‌ಗೆ (Exposure) ಎಚ್ಚರಿಸಲು ಸಹಾಯ ಮಾಡುವ ಧರಿಸಬಹುದಾದ ಸಾಧನವನ್ನು ಯುಎಸ್‌ನ ಯೇಲ್ ವಿಶ್ವವಿದ್ಯಾಲಯದ (Yale University) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
ಸಾಮಾನ್ಯವಾಗಿ ನಾವು ಸಂಪರ್ಕದಲ್ಲಿರುವವರಿಗೆ ಕೊರೊನಾ ಪಾಸಿಟಿವ್ ದೃಡಪಟ್ಟಿದ್ದರೆ ಅಥವಾ ನಮ್ಮಲ್ಲಿಯೇ ಲಕ್ಷಣಗಳು ಕಾಣಿಸಿಕೊಂಡಾಗ ಕೋವಿಡ್ 19 ಪರೀಕ್ಷೆಗೆ ಮುಂದಾಗುತ್ತೇವೆ. ಆದರೆ ಕೋವಿಡ್ 19 ಪರೀಕ್ಷೆಗಾಗಿ ಆಸ್ಪತ್ರೆಗಳಲ್ಲಿ ಒಂದಾದರೂ ಸರತಿ ಸಾಲಿನಲ್ಲಿ ನಿಲ್ಲಬೇಕು ಅಥವಾ ಸೆಲ್ಫ್ ಟೆಸ್ಟ್ ಕಿಟ್ ಮೂಲಕ ಮೆನಯಲ್ಲಿಯೇ ಪರೀಕ್ಷಿಸಬೇಕು. ಇನ್ನು ಅನೇಕ ರಾಜ್ಯಗಳು ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳನ್ನು ಹೊಂದಿದ್ದು ಅದು ಸಂಭವನೀಯ ಕೋವಿಡ್ 19 ಸೋಂಕಿನ ಬಗ್ಗೆ ನಮಗೆ ಎಚ್ಚರಿಕೆ ನೀಡಬಹುದು. ಆದರೆ ಮೊಬೈಲ್‌ಗಳಲ್ಲಿ ಇಂಥಹ ಆಪ್ ಡೌನ್‌ಲೋಡ್ ಮಾಡುವವರ ಸಂಖ್ಯೆ ಕಡಿಮೆ.
ಇದನ್ನೂ ಓದಿ: Covid 19 Third Wave: ಒಮಿಕ್ರೋನ್ ಭೀತಿ: ಆಕ್ಸಿಮೀಟರ್, ಟೆಸ್ಟಿಂಗ್ ಕಿಟ್, ಮಾಸ್ಕ್‌ಗಳಿಗೆ ಮತ್ತೆ ಭಾರೀ ಬೇಡಿಕೆ!
ಗಾಳಿಯಲ್ಲಿನ ವೈರಸ್ ಪತ್ತೆ: ಈ ಸಮಸ್ಯೆಗೆ ಸುಲಭ ಪರಿಹಾರಕ್ಕಾಗಿ ಕೋವಿಡ್ 19 ಸಂಭವನೀಯ ಅಪಾಯದ ಬಗ್ಗೆ ಎಚ್ಚರಿಸುವ ಕ್ಲಿಪ್-ಆನ್ ಸಾಧನವನ್ನು ಯೇಲ್ ವಿಶ್ವವಿದ್ಯಾಲಯದ ಸಂಶೋಧಕರು ಈಗ ಅಭಿವೃದ್ಧಿಪಡಿಸಿದ್ದಾರೆ. ಇದು ಅತಿ ಕಡಿಮೆ ಮಟ್ಟದ SARS-COV-2, COVID-19ಗೆ ಕಾರಣವಾಗುವ ವೈರಸನ್ನು ಕೂಡ ಸುತ್ತಲಿನ ಗಾಳಿಯಲ್ಲಿ ಪತ್ತೆ ಮಾಡುತ್ತದೆ. ಈ ಸಂಶೋಧನೆ ಜನವರಿ 11 ರಂದು ಪೀರ್-ರಿವ್ಯೂಡ್ ಆನ್‌ಲೈನ್ ಜರ್ನಲ್ ಎನ್ವಿರಾನ್‌ಮೆಂಟಲ್ ಸೈನ್ಸ್ ಅಂಡ್ ಟೆಕ್ನಾಲಜಿ ಲೆಟರ್ಸ್‌ನಲ್ಲಿ ಪ್ರಕಟಿಸಲಾಗಿದೆ.
ಸಾಮಾನ್ಯವಾಗಿ ಸೋಂಕಿತ ವ್ಯಕ್ತಿಗಳು ಕೆಮ್ಮುವುದು, ಸೀನುವುದು, ಮಾತನಾಡುವುದು ಅಥವಾ ಉಸಿರಾಡುವುದರಿಂದ ಗಾಳಿಯಲ್ಲಿ ಸೇರುತ್ತಿದ್ದ ವೈರಸ್ ಕಣಗಳನ್ನು ಪತ್ತೆಹಚ್ಚಲು ದೊಡ್ಡ ಮತ್ತು ದುಬಾರಿ ಗಾಳಿಯ ಮಾದರಿ ಸಾಧನಗಳನ್ನು (Air Sampling Devices) ಬಳಸಲಾಗುತ್ತಿತ್ತು. ಆದರೆ ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು ಯೇಲ್ಸ್ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಅಪ್ಲೈಡ್ ಸೈನ್ಸ್ ಮತ್ತು ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ತಜ್ಞರು ಫ್ರೆಶ್ ಏರ್ ಕ್ಲಿಪ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಇದು ಬ್ಯಾಡ್ಜ್-ಆಕಾರದ ಸಾಧನವಾಗಿದ್ದು ಒಳಗಿನ ಫಿಲ್ಮ ಸುಮಾರು 1 ಇಂಚು ಸುತ್ತಮುತ್ತಲಿನ ಗಾಳಿಯ ಮಾದರಿಗಳನ್ನು ಸಂಗ್ರಹಿಸುವ 3D-ಮುದ್ರಿತ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಯಾವುದೇ ವಿದ್ಯುತ್ ಮೂಲವನ್ನು ಹೊಂದಿಲ್ಲ ಎಂಬುದು ಉಲ್ಲೇಖನೀಯ
ಇದನ್ನೂ ಓದಿ: ible Airvida E1: ಕೊರೋನಾ ವೈರಸ್‌ನಿಂದ ರಕ್ಷಣೆ ನೀಡುವ ಏರ್ ಪ್ಯೂರಿಫೈಯರ್ ಇಯರ್‌ಫೋನ್ಸ್!
"ಫ್ರೆಶ್ ಏರ್ ಕ್ಲಿಪ್ ಗಾಳಿಯಲ್ಲಿ SARS-CoV-2 ಗೆ ಒಡ್ಡಿಕೊಳ್ಳುವುದನ್ನು ನಿರ್ಣಯಿಸಲು ಬಳಸಬಹುದಾದ ಒಂದು ಧರಿಸಬಹುದಾದ ಸಾಧನವಾಗಿದೆ. ಈ ಕ್ಲಿಪ್‌ನೊಂದಿಗೆ ನಾವು ಸಾಮಾನ್ಯ SARS-CoV-2 ಸಾಂಕ್ರಾಮಿಕ ಡೋಸ್‌ಗಿಂತ ಕಡಿಮೆ ಮಟ್ಟದ ವೈರಸ್ ಕಣಗಳನ್ನು ಕೂಡ ಕಂಡುಹಿಡಿಯಬಹುದು." ಎಂದು ಅಧ್ಯಯನದ ಲೇಖಕ ಮತ್ತು ಚಿಪ್ ಸೃಷ್ಟಿಕರ್ತ, ಯೇಲ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಮತ್ತು ಯೇಲ್ ಕೆಮಿಕಲ್ ಮತ್ತು ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ಪ್ರೊಫೆಸರ್, ಕ್ರಿಸ್ಟಲ್ ಗೋಡ್ರಿ ಪೊಲ್ಲಿಟ್ ಸಂಶೋಧನೆಯ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತ್ವರಿತ ಕ್ರಮ ತೆಗೆದುಕೊಳ್ಳಲು ಸಹಾಯಕ: "ಫ್ರೆಶ್ ಏರ್ ಕ್ಲಿಪ್ ಕೋವಿಡ್ 19 ಎಕ್ಸ್‌ಫೋಷರ್ ಮೊದಲೇ ಗುರುತಿಸಲು ಸಹಾಯ ಮಾಡುತ್ತದೆ. ಹೀಗಾಗಿ ಕೋವೀಡ್ 19 ಪರೀಕ್ಷಿಸಲು ಅಥವಾ ಕ್ವಾರಂಟೈನ್ ಮಾಡಲು ತ್ವರಿತ ಕ್ರಮ ತೆಗೆದುಕೊಳ್ಳಲು ಇದು ಅನುವು ಮಾಡಿಕೊಡುತ್ತದೆ" ಎಂದು ಕ್ರಿಸ್ಟಲ್ ಹೇಳಿದ್ದಾರೆ. ಸಂಶೋಧಕರು ಜನವರಿ ಮತ್ತು ಮೇ 2021 ರ ನಡುವೆ 62 ಪರೀಕ್ಷಾ ಕ್ಲಿಪ್ ಅನ್ನು ಧರಿಸಿದ್ದರು. ಕೆಲವರು ರೆಸ್ಟೊರೆಂಟ್‌ಗಳು, ನಿರಾಶ್ರಿತರ ಮನೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುವಾಗ ಕ್ಲಿಪ್ ಅನ್ನು ಧರಿಸಿದ್ದರೆ, ಇತರರು ಶಾಪಿಂಗ್ ಮತ್ತು ವ್ಯಾಯಾಮದಂತಹ ದೈನಂದಿನ ಚಟುವಟಿಕೆಗಳಲ್ಲಿ ಅವುಗಳನ್ನು ಧರಿಸಿದ್ದರು. ಪರೀಕ್ಷೆಯಲ್ಲಿ ಭಾಗವಹಿಸುವವರಿಗೆ ಸತತ ಐದು ದಿನಗಳವರೆಗೆ ಕೆಲಸದ ಸ್ಥಳದಲ್ಲಿ ಕ್ಲಿಪ್ ಧರಿಸಲು ತಿಳಿಸಲಾಗಿತ್ತು . ನಂತರ, ಕ್ಲಿಪ್‌ಗಳೊಳಗಿನ ಫಿಲ್ಮ್ ಅನ್ನು ವೈರಸ್ ಇರುವಿಕೆಗಾಗಿ ಪರೀಕ್ಷಿಸಲಾಯಿತು.
ಸಂಶೋಧಕರು ಐದು ಕ್ಲಿಪ್‌ಗಳಲ್ಲಿ COVID ನ ಪುರಾವೆಗಳನ್ನು ಕಂಡುಕೊಂಡಿದ್ದಾರೆ. ನಾಲ್ಕು ರೆಸ್ಟೋರೆಂಟ್ ಕೆಲಸಗಾರರು ಹಾಗೂ ಒಬ್ಬರು ನಿರಾಶ್ರಿತರ ಕೇಂದ್ರದಲ್ಲಿ ಕೆಲಸ ಮಾಡುವ ವ್ಯಕ್ತಿಯಿಂದ ಸೋಂಕು ತಗುಲಿರುವ ಪ್ರಮಾಣಕ್ಕಿಂತ ಕಡಿಮೆ ವೈರಸ್ ಮಟ್ಟದ ವೈರಸ್ ಪತ್ತೆ ಮಾಡಿದ್ದಾರೆ. ಸಂಶೋಧಕರು ಫ್ರೆಶ್ ಏರ್ ಕ್ಲಿಪ್‌ಗಳನ್ನು ಕನೆಕ್ಟಿಕಟ್‌ನಲ್ಲಿರುವ ( Connecticut) ಆರೋಗ್ಯ ರಕ್ಷಣಾ ಸೌಲಭ್ಯಗಳಲ್ಲಿ ಹೆಚ್ಚುವರಿ ಅಧ್ಯಯನಗಳಲ್ಲಿ ಬಳಸುತ್ತಿದ್ದಾರೆ ಮತ್ತು ಭವಿಷ್ಯದಲ್ಲಿ ಅವುಗಳನ್ನು ಸಾರ್ವಜನಿಕರ ಬಳಕೆಗೆ ಬಿಡುಗಡೆ ಮಾಡುವ ಯೋಜನೆ ಸಿದ್ಧಪಡಿಸುತ್ತಿದ್ದಾರೆ.