ನಯನತಾರಾ ತ್ವಚೆ ಮತ್ತು ಕೂದಲ ಆರೈಕೆಗೆ ಈ ಎಣ್ಣೆಯೇ ಬಳಸುವುದಂತೆ!
ಕಾಲಿವುಡ್‌ನ(Kollywood) ಸೌಂದರ್ಯದ ರಾಣಿ ನಯನತಾರಾ ನಟನೆ ಮೂಲಕ ಅಷ್ಟೇ ಅಲ್ಲದೆ ಸಿಂಪ್ಲಿಸಿಟಿ ಇಂದಲೂ ಹೆಚ್ಚು ಆಕರ್ಷಿಸುತ್ತಾರೆ. ನಟನೆ, ಸೌಂದರ್ಯ, ತತ್ವಶಾಸ್ತ್ರ ಮತ್ತು ಕೆಲವು ಚರ್ಮದ ಆರೈಕೆಯ ಸಲಹೆಗಳನ್ನೂ ನೀಡುತ್ತಾರೆ. ಚಳಿಗಾಲ ಆರಂಭವಾಗಿದ್ದು ಕೂದಲೂ (Hair) ಹಾಗೂ ಚರ್ಮದ (Skin) ಆರೈಕೆ ಬಗ್ಗೆ ಹಾಗೂ ಅವರು ಅನುಸರಿಸುವ ಸಾಂಪ್ರದಾಯಿಕ(Traditional) ಪದ್ಧತಿಗಳನ್ನು ಅನುಸರಿಸುತ್ತಾರಂತೆ. ಕೂದಲು ಹಾಗೂ ಚರ್ಮದ ಆರೈಕೆಗೆ ಅವರು ಕೊಬ್ಬರಿ ಎಣ್ಣೆಯನ್ನು(Coconut) ಬಳಸುತ್ತಾರಂತೆ. ಈ ಕುರಿತು ಕೆಲ ಸಲಹೆಗಳನ್ನು ನೀಡಿದ್ದಾರೆ.
ಕೊಬ್ಬರಿ ಎಣ್ಣೆ ತನ್ನ ವಿಶಿಷ್ಟ ಗುಣಗಳನ್ನು ಹೊಂದಿದ್ದು, ಆಯುರ್ವೇದದಲ್ಲಿ ಬಹಳ ಮಹತ್ವ ಪಡೆದಿದೆ. ಗಾಯ ಗುಣಪಡಿಸುವುದರಿಂದ ಹಿಡಿದು, ಕೂದಲು ದಪ್ಪವಾಗಿಸಲೂ ಬಳಸಲಾಗುತ್ತದೆ. ಕೂದಲಿನ ಶುಷ್ಕತೆ ಕಾಪಾಡುವುದಲ್ಲದೆ ಉದುರುವುದನ್ನು ತಡೆಯುತ್ತದೆ. ಚಳಿಗಾಲದಲ್ಲಿ ಬಹುತೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅದಕ್ಕೆಲ್ಲಾ ಉತ್ತಮ ಮನೆಮದ್ದು ಆಉದ್ಧ ಕೊಬ್ಬರಿ ಎಣ್ಣೆ. ಇದು ಕೂದಲು ಒಣಗುವುದು, ಚರ್ಮ ಒಣಗುವುದನ್ನು ತಡೆಯುವ ಗುಣ ಹೊಂದಿದೆ.
ನಯನತಾರಾ ಪ್ರಕಾರ ತೆಂಗಿನೆಣ್ಣೆಯು ಹಲವು ವರ್ಷಗಳಿಂದ ಮಾಯಿಶ್ಚರೈಸರ್ ಆಗಿದ್ದು ಅದನ್ನು ಹಲವು ವರ್ಷಗಳಿಂದ ಅವರು ತಮ್ಮ ದಿನಚರಿಯಲ್ಲಿ ಬಳಸುತ್ತಿದ್ದಾರೆ. ಸಾಂಪ್ರದಾಯಿಕ ಪದ್ಧತಿಯಂತೆ ಕೂದಲು ಮತ್ತು ತ್ವಚೆಗೆ ತೆಂಗಿನೆಣ್ಣೆಯನ್ನು ಬಳಸುವ ವಿಧಾನದ ಬಗ್ಗೆ ಹೇಳಿದ್ದಾರೆ.
1. ತ್ವಚೆಗೆ ಕೊಬ್ಬರಿಎಣ್ಣೆ ಮತ್ತು ಅರಿಶಿಣದ ಮಾಸ್ಕ್
ಸಾಮಾನ್ಯವಾಗಿ ಚಳಿಗಾಲದಲ್ಲಿ ಚರ್ಮ (Skin) ಒಡೆಯುವುದು, ಒಣಗುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಎಷ್ಟೇ ಮಾಯಿಶ್ಚರೈಸರ್ ಕ್ರೀಮ್‌ಗಳನ್ನು (Moisturizer Cream) ಹಚ್ಚಿದರೂ ಅದರಲ್ಲಿ ಕೆಮಿಕಲ್ ಇದ್ದೇ ಇರುತ್ತದೆ. ದೀರ್ಘಕಾಲದವರೆಗೂ ಎಣ್ಣೆಯುಕ್ತ ತ್ವಚೆ ನಿಮ್ಮದಾಗಬೇಕೆಂದರೆ ಅದಕ್ಕೆ ಕೊಬ್ಬರಿ ಎಣ್ಣೆಯ ಈ ಮಾಸ್ಕ್ ಹಚ್ಚುವುದು ಸೂಕ್ತ.
ಬೇಕಾಗುವ ಸಾಮಗ್ರಿಗಳು: ಒಂದು ಚಮಚ ಕೊಬ್ಬರಿಎಣ್ಣೆ, ಒಂದು ಚಮಚ ಅರಿಶಿಣ
ಸೆಲಬ್ರಿಟಿ ಪ್ರಿಯಾಂಕ ಚೋಪ್ರಾ ತ್ವಚೆಗೆ ಬಳಸೋದು ಅಜ್ಜಿಕಾಲದ ಸಿಂಪಲ್ ಟಿಪ್ಸ್
ಮಾಡುವ ವಿಧಾನ: ಮದಲು ಒಂದು ಸಣ್ಣ ಬೌಲ್‌ನಲ್ಲಿ ಕೊಬ್ಬರಿಎಣ್ಣೆಯನ್ನು ಕಾಯಿಸಿಕೊಳ್ಳಿ. ಕೊಬ್ಬರಿ ಎಣ್ಣೆ ಕರಗಿ ನೀರಾದ ನಂತರ ಅದಕ್ಕೆ ಅರಿಶಿಣ(Turmeric) ಹಾಗಿ ಚೆನ್ನಾಗಿ ಒಂದು ಚಮಚದಲ್ಲಿ ಕಲಸಿ. ಈ ಮಿಶ್ರಣವನ್ನು ಚರ್ಮಕ್ಕೆ ಹಚ್ಚಿ 10 ನಿಮಿಷದ ಬಿಡಬೇಕು. ಹೀಗೆ ಹಚ್ಚಿದ ನಂತರ ಚರ್ಮ ಬಿಗಿಯುವುದು, ಸ್ವಲ್ಪ ಉರಿ ಕಾಣಿಸಿಕೊಳ್ಳಬಹುದು. 10 ನಿಮಿಷದ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
ಪ್ರಯೋಜನ: ಕೊಬ್ಬರಿ ಎಣ್ಣೆ ಹಾಗೂ ಅರಿಶಿಣ ಮಿಶ್ರಣವನ್ನು ಚರ್ಮಕ್ಕೆ ಹಚ್ಚುವುದರಿಂದ ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ. ಜೊತೆಗೆ ತೆಂಗಿನ ಎಣ್ಣೆ ಆಧಾರಿತ ಫೇಸ್ ಮಾಸ್ಕ್ಗಳು ನಂಬಲಾಗದಷ್ಟು ಪರಿಣಾಮ ನೀಡುತ್ತದೆ. ಕೆಲವರು ಮೊಡವೆಗಳು ಹೆಚ್ಚಾಗಿದ್ದು ಚರ್ಮಕ್ಕೆ ಎಣ್ಣೆಯನ್ನು ಹಚ್ಚುವಾಗ ಎಚ್ಚರವಹಿಸಬೇಕು. ತೆಂಗಿನ ಎಣ್ಣೆಯಲ್ಲಿನ ಅಣುಗಳು ಚರ್ಮದ ರಂಧ್ರಗಳನ್ನು ಭೇದಿಸಲು ತುಂಬಾ ದೊಡ್ಡದಾಗಿದೆ. ಇದರಿಂದ ಎಣ್ಣೆಯು ಚರ್ಮವನ್ನು ಒಡೆಯದಂತೆ ನೋಡಿಕೊಳ್ಳುತ್ತದೆ. ಅರಿಶಿಣ ಹಾಗೂ ಕೊಬ್ಬರಿ ಎಣ್ಣೆಯ ಕಾಂಬಿನೇಷನ್ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.
Beauty Secrets: ವಿಶ್ವದಲ್ಲೇ ಅತಿ ಹೆಚ್ಚು ಬೆಳ್ಳಗಿದ್ರೂ ಈ ಮಹಿಳೆಯರಿಗೆ ಸಂತೋಷವಿಲ್ಲ
2. ಕೂದಲಿಗೆ ಕೊಬ್ಬರಿಎಣ್ಣೆ ಮತ್ತು ನಿಂಬೆ ರಸ (Lemon)
ಬೇಕಾಗುವ ಸಾಮಗ್ರಿಗಳು: ಒಂದು ಚಮಚ ಕೊಬ್ಬರಿ ಎಣ್ಣೆ, ಒಂದು ಚಮಚ ನಿಂಬೆ ರಸ.
ಮಾಡುವ ವಿಧಾನ: ಕೊಬ್ಬರಿ ಎಣ್ಣೆ ಕರಗಿಸುವ ಮೊದಲು ಒಂದು ಚಮಚ ಶುದ್ಧ ಕೊಬ್ಬರಿ ಎಣ್ಣೆಗೆ ಒಂದು ಚಮಚ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಕಲಸಿ. ತಲೆಹೊಟ್ಟಿನ(Dandruff) ವಿರುದ್ಧ ಹೋರಾಡಲು ಹಾಗೂ ತೇವಾಂಶ ಕಾಯ್ದುಕೊಳ್ಳಲು ಅದಕ್ಕೆ ಟೀ ಟ್ರೀ(Tea Tree) ಎಣ್ಣೆಯನ್ನು ಬೆರಸಿ. ಈ ಮಿಶ್ರಣವನ್ನು ಕೂದಲು ಒಣಗಿರುವಾಗಲೇ ಹಚ್ಚಬೇಕು. ಹಚ್ಚಿದ ಸುಮಾರು 15 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ. ನಂತರ ಎಂದಿನAತೆ ಕೂಲದ ಆರೈಕೆಯನ್ನು ಮುಂದುವರೆಸಿ. ಇದರ ಉತ್ತಮ ಫಲಿತಾಂಶಕ್ಕಾಗಿ ಈ ಮಾಸ್ಕ್ ಅನ್ನು ವಾರದಲ್ಲಿ ಎರಡು ಬಾರಿಯಾದರೂ ಟ್ರೈ ಮಾಡಿ.
ಪ್ರಯೋಜನ: ಈ ಮಾಸ್ಕ್ನಲ್ಲಿ ನಿಂಬೆ ರಸ ಇರುವುದರಿಂದ ನೈಸರ್ಗಿಕವಾಗಿ ಕೂದಲನ್ನು ಸ್ವಚ್ಛಗೊಳಿಸುತ್ತದೆ ಮತ್ತು ಎಣ್ಣೆಯು ತಲೆಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ನಿಂಬೆ ರಸವು ಗ್ರೀಸ್ ಅನ್ನು ಕಡಿಮೆ ಮಾಡುವ ಮೂಲಕ ನೆತ್ತಿಯ ಆರೋಗ್ಯವನ್ನು ಉತ್ತೇಜಿಸುತ್ತದೆ. ಕೋಲೆಯನ್ನು ತೆಗೆದುಹಾಕುತ್ತದೆ ಮತ್ತು ರಂಧ್ರಗಳನ್ನು ಮುಚ್ಚಿಕೊಳ್ಳದಂತೆ ನೋಡಿಕೊಳ್ಳುತ್ತದೆ. ಈ ಮಿಶ್ರಣವು ತಲೆಹೊಟ್ಟನ್ನು ಆಗದಂತೆ ನೋಡಿಕೊಳ್ಳುತ್ತದೆ. ತುರಿಕೆ ಕಡಿಮೆ ಮಾಡುತ್ತದೆ ಮತ್ತು ಕೂದಲನ್ನು ಮೃದುಗೊಳಿಸುತ್ತದೆ.