ವ್ಯಾಯಾಮ ಮಾಡ್ಬೇಕು ನಿಜ, ಅದಕ್ಕೆ ತಕ್ಕ ಫುಡ್ ತಿಂದ್ರೆ ಮತ್ತೂ ಒಳ್ಳೇದು!
ತೂಕ ಇಳಿಸಿಕೊಂಡು ಸ್ಲಿಮ್ ಆಗಿರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ ಅಲ್ವಾ? ತೂಕ ಇಳಿಸಿಕೊಳ್ಳಲು ಮತ್ತು ಫಿಟ್ ಆಗಿರಲು ಅನೇಕರು ಜಿಮ್‌ನಲ್ಲಿ ಗಂಟೆಗಟ್ಟಲೆ ಕಳೆಯುತ್ತಾರೆ. ಆದರೆ ವರ್ಕೌಟ್ ನಂತರ, ಶಕ್ತಿ ತುಂಬಾ ಕಡಿಮೆಯಾಗುತ್ತೆ. ಆಗ ನೀವು ಆಹಾರದಲ್ಲಿ ಕೆಲವು ಆರೋಗ್ಯಕರ ಪದಾರ್ಥ ಸೇರಿಸಬಹುದು. ವ್ಯಾಯಾಮದ ನಂತರ ಅವುಗಳನ್ನು ಸೇವಿಸೋದು ನಿಮಗೆ ಶಕ್ತಿಯನ್ನು ನೀಡುವ ಕೆಲಸ ಮಾಡುತ್ತೆ. ವರ್ಕೌಟ್ ನಂತರ ನೀವು ಯಾವ ಆಹಾರಗಳನ್ನು ಡಯಟ್ (Diet) ನಲ್ಲಿ ಸೇರಿಸಬಹುದು ಎಂದು ನೋಡೋಣ.
ಪನೀರ್ (Paneer)
ಪನೀರ್ ಪ್ರೋಟೀನ್‌ನ ಉತ್ತಮ ಮೂಲ ಅನ್ನೋದು ನಿಮಗೂ ಗೊತ್ತಿದೆ. ಇದು ಸ್ನಾಯುಗಳಿಗೆ ತುಂಬಾ ಪ್ರಯೋಜನಕಾರಿ. ವರ್ಕೌಟ್ ನಂತರ ನೀವು ಪನೀರ್ ಸೇವಿಸಬಹುದು. ನೀವು ಇದನ್ನು ಕಚ್ಚಾ ಮತ್ತು ಸಲಾಡ್ ಇತ್ಯಾದಿಗಳ ರೂಪದಲ್ಲಿ ಸೇವಿಸಬಹುದು. ಪನೀರ್ ನಿಮಗೆ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಶಕ್ತಿ ನೀಡುತ್ತೆ.
ಡ್ರೈ ಫ್ರೂಟ್ಸ್ (Dry fruits)-
ವರ್ಕೌಟ್ ನಂತರ ಡ್ರೈ ಫ್ರೂಟ್ಸ್ ತಿನ್ನೋದ್ರಿಂದ ಹೆಚ್ಚು ಶಕ್ತಿ ಸಿಗುತ್ತೆ. ಅವು ನಿಮ್ಮ ದೇಹವನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಗೋಡಂಬಿ, ಬಾದಾಮಿ ಮತ್ತು ಪಿಸ್ತಾ ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸಬಹುದು. ಅವು ವಿಟಮಿನ್ಸ್ ಮತ್ತು ಮಿನರಲ್ಸ್‌ಗಳಿಂದ ಸಮೃದ್ಧವಾಗಿವೆ.
ಹಣ್ಣು (Fruits)
ಆಹಾರದಲ್ಲಿ ಹಣ್ಣುಗಳನ್ನು ಸೇರಿಸಬಹುದು. ಸೀಸನಲ್ ಹಣ್ಣುಗಳು ತಕ್ಷಣ ಶಕ್ತಿಯನ್ನು ನೀಡುತ್ತೆ. ಅವುಗಳನ್ನು ಸೇವಿಸೋದ್ರಿಂದ, ಹೊಟ್ಟೆಯೂ ದೀರ್ಘ ಕಾಲದವರೆಗೆ ತುಂಬಿರುತ್ತೆ. ನೀವು ಸೇಬು, ಬಾಳೆಹಣ್ಣು ಮತ್ತು ಆವಕಾಡೊ ಇತ್ಯಾದಿಗಳನ್ನು ಸೇವಿಸಬಹುದು. ಅವು ನಿಮ್ಮನ್ನು ಹೈಡ್ರೇಟ್ ಆಗಿರಿಸಲು ಸಹಾಯ ಮಾಡುತ್ತೆ.
ಹಸಿರು ಸೊಪ್ಪು ತರಕಾರಿಗಳು - (Green vegetables)
ನಿಮ್ಮ ಡಯಟ್‌ನಲ್ಲಿ ಹಸಿರು ಎಲೆ ತರಕಾರಿಗಳನ್ನು ಸೇರಿಸಬಹುದು. ವರ್ಕೌಟ್ ನಂತರ, ಪಾಲಕ್ ಮತ್ತು ಬ್ರೊಕೋಲಿ ಇತ್ಯಾದಿಗಳನ್ನು ಸೇವಿಸಬಹುದು. ಅವು ನಿಮಗೆ ಶಕ್ತಿ ನೀಡುತ್ತೆ. ವ್ಯಾಯಾಮದ ನಂತರ ತಿನ್ನಲು ಇವು ಆರೋಗ್ಯಕರ ಆಯ್ಕೆಯಾಗಿದೆ.
ಚಾಕೊಲೇಟ್ ಮಿಲ್ಕ್ (Chocolate milk)
ಕಲೇಟ್ ಹಾಲಿನಲ್ಲಿ ವ್ಯಾಯಾಮದ ನಂತರ ನಿಮಗೆ ಬೇಕಾದ ಎಲ್ಲ ಪೌಷ್ಟಿಕ ಅಂಶ ಹೊಂದಿರುತ್ತೆ. ಅಂದರೆ ಕಾರ್ಬೋಹೈಡ್ರೇಟ್, ಪ್ರೋಟೀನ್, ಫ್ಲೂಯಿಡ್ ಮತ್ತು ಎಲೆಕ್ಟ್ರೋಲ್ಸ್. ವಾಸ್ತವವಾಗಿ, ವ್ಯಾಯಾಮದ ನಂತರ ಹಾಲು ಸೇವಿಸೋದು ಸ್ನಾಯು ಪ್ರೋಟೀನ್ ಸಿಂಥೆಸಿಸ್ ಮತ್ತು ರಿ ಹೈಡ್ರೇಶನ್ ಅನ್ನು ಹೆಚ್ಚಿಸುತ್ತೆ, ಗ್ಲೈಕೋಜೆನ್ ಅನ್ನು ಮತ್ತೆ ಸ್ಟೋರ್ ಮಾಡುತ್ತೆ ಮತ್ತು ವ್ಯಾಯಾಮದ ನಂತರದ ಸ್ನಾಯು ನೋವನ್ನು ಕಡಿಮೆ ಮಾಡುತ್ತೆ.
ಮೊಟ್ಟೆ(Egg) ಮತ್ತು ಸಂಪೂರ್ಣ ಧಾನ್ಯದ ಟೋಸ್ಟ್
ಬೇಯಿಸಿದ ಮೊಟ್ಟೆಯಾಗಿರಲಿ, ಸ್ಕ್ರ್ಯಾಂಬ್ಲ್ಡ್ ಆಗಿರಲಿ, ಪೌಂಚೆಡ್ ಆಗಿರಲಿ ಅಥವಾ ತರಕಾರಿ ಆಮ್ಲೆಟ್ ನಲ್ಲಿರಲಿ, ಮೊಟ್ಟೆಗಳು ಪ್ರೋಟೀನ್‌ನ ಅತ್ಯುತ್ತಮ ಮೂಲ (ದೊಡ್ಡ ಮೊಟ್ಟೆಯಲ್ಲಿ ಸರಾಸರಿ 11 ಗ್ರಾಂ ಪ್ರೋಟೀನ್ ಇರುತ್ತೆ). ಹಾಗೇ ಟೋಸ್ಟ್ ಉತ್ತಮ ಗುಣಮಟ್ಟದ ಕಾರ್ಬೋಹೈಡ್ರೇಟ್ ಗಳನ್ನು ಒದಗಿಸುತ್ತೆ.
ಸ್ಮೂಥಿ (Smoothie) (ಪ್ರೋಟೀನ್ ಪುಡಿ, ಎಳನೀರು, ಹಣ್ಣು ಮತ್ತು ತರಕಾರಿಗಳಿಂದ ತಯಾರಿಸಲಾಗುತ್ತೆ).
ಹಣ್ಣು ಮತ್ತು ತರಕಾರಿಗಳು ವ್ಯಾಯಾಮ ಉಂಟು ಮಾಡೋ ಹಾನಿಯಿಂದ ಜೀವಕೋಶಗಳನ್ನು ರಕ್ಷಿಸುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಮತ್ತು ಪ್ರೋಟೀನ್ ಸ್ನಾಯುಗಳ ರಿಪೇರಿಗೆ ಸಹಾಯ ಮಾಡುತ್ತೆ.