MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Darshan Renukaswamy Case
Farm Chemicals Under Scanner
Kanteerava Stadium Renovation
Karnataka Electoral Roll
Bengaluru 2nd International Airport
Bengaluru Land Scam
Mahatma Gandhi Manuscript Auction
Divorce Laws India
ISI Backed Terror Network
Mohan Bhagavat Canada Visit
  • Home
  • Life
  • Health
  • ನಿಮಗೆ ಹಸಿವಾದಾಗ ಈ ಆರೋಗ್ಯಕರ ಸ್ನಾಕ್ಸ್ ಟ್ರೈ ಮಾಡಿ ನೋಡಿ

ನಿಮಗೆ ಹಸಿವಾದಾಗ ಈ ಆರೋಗ್ಯಕರ ಸ್ನಾಕ್ಸ್ ಟ್ರೈ ಮಾಡಿ ನೋಡಿ

ಶುಗರ್ ಕ್ರೇವಿಂಗ್ಸ್ ನಿಮ್ಮ ಡಯಟ್ ನ್ನು ಹಾಳು ಮಾಡ್ತಿದ್ಯಾ?, ಇದರಿಂದಾಗಿ ನಿಮ್ಮ ತೂಕ ಇಳಿಸುವ ಜರ್ನಿಗೆ ಮಿಸ್ ಆಗ್ತಿತಿದೆಯೇ? ಹಾಗಿದ್ರೆ ಏನು ಮಾಡಬೇಕು ಗೊತ್ತಾ? ನೀವು ಹಸಿವಾದಾಗ ಸ್ನಾಕ್ಸ್ ತಿನ್ನಬಹುದು, ಆದರೆ ಎಂತಹ ಆಹಾರ ತಿನ್ನಬೇಕು ಅನ್ನೋದನ್ನು ನೀವು ನೆನಪಿಟ್ಟುಕೊಂಡ್ರೆ ಸಾಕು. 

2 Min read
Author : Suvarna News
Published : Jun 28 2022, 05:52 PM IST
Share this Photo Gallery
  • FB
  • TW
  • Linkdin
  • Whatsapp
110

ನಿಮಗೆ ಹಸಿವಾದಾಗ ನೀವು ಚಹಾ ಅಥವಾ ಕಾಫಿ ಕುಡಿಯುತ್ತೀರಾ? ಅಥವಾ ಸಮೋಸಾ (Samosa)ಅಥವಾ ಚಿಪ್ಸ್ ತಿಂತೀರಾ? ಇವುಗಳಲ್ಲಿ ಒಂದು ನಿಮ್ಮ ಆಯ್ಕೆಯಾಗಿದ್ರೆ, ಇವು ನಿಮ್ಮ ವೆಯಿಟ್ ಲಾಸ್ ಜರ್ನಿಗೆ ಅಡ್ಡಿಪಡಿಸುತ್ತೆ. ಹಾಗಾಗಿ ಹಸಿವನ್ನು  ಹೇಗೆ ತಪ್ಪಿಸೋದು ಮತ್ತು ಮಂಚಿಂಗ್ ಸ್ನ್ಯಾಕ್ಸ್ ಆಗಿ ಆರೋಗ್ಯಕರ ಆಯ್ಕೆ ಯಾವುದು ಅನ್ನೋದನ್ನು ತಿಳಿಯಿರಿ.
 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210

ಬಾಳೆಹಣ್ಣಿನ ಚಿಪ್ಸ್ (Banana Chips)
ಬಾಳೆಹಣ್ಣು ಆರೋಗ್ಯಕ್ಕೆ ರಾಮಬಾಣ. ಮಾಗಿದ ಬಾಳೆಹಣ್ಣು ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತೆ, ಜೊತೆಗೆ ಉತ್ತಮ ಆರೋಗ್ಯಕ್ಕೂ ಇದು ಸಹಕಾರಿ. ಕಚ್ಚಾ ಬಾಳೆಹಣ್ಣು ಸಹ ದೇಹಕ್ಕೆ ತುಂಬಾನೆ ಉತ್ತಮ ಹಣ್ಣು ಎಂದು ಪರಿಗಣಿಸಲಾಗುತ್ತೆ. 

310

ಬಾಳೆಹಣ್ಣಿನಲ್ಲಿ ನಾರಿನಂಶ, ಪೊಟ್ಯಾಸಿಯಮ್, ವಿಟಮಿನ್, ಬಿ6, ವಿಟಮಿನ್ ಸಿ(Vitamin C), ಆಂಟಿ ಒಕ್ಸಿಡಾಂಟ್ಸ್ ಮತ್ತು ಫೈಟೋನ್ಯೂಟ್ರಿಯೆಂಟ್ ಸಮೃದ್ಧವಾಗಿವೆ. ನೀವು ಬಾಳೆಹಣ್ಣಿನ ಚಿಪ್ಸ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ, ಅದು ನಿಮ್ಮನ್ನು ದೀರ್ಘಕಾಲದವರೆಗೆ ಶಕ್ತಿಯುತವಾಗಿರಿಸುತ್ತೆ. ಇದರಿಂದ ತೂಕದ ಮೇಲೆ ಹೆಚ್ಚಿನ ಪರಿಣಾಮ ಕೂಡ ಉಂಟಾಗೋದಿಲ್ಲ. 

410

ಮಖಾನ (Makhana)
ನೀವು ಯಾವಾಗ ಬೇಕಾದರೂ ಮಖಾನಾವನ್ನುಮಂಚಿಂಗ್ ಸ್ನಾಕ್ಸ್ ಆಗಿ ಸೇವಿಸಬಹುದು. ನೀವು ಅದಕ್ಕೆ ನಿಮಗೆ ಬೇಕೆನಿಸಿದ ರುಚಿಯನ್ನು ಸೇರಿಸಿ, ಸ್ನಾಕ್ಸ್ ತಯಾರಿಸಬಹುದು. ಇದು ಖಂಡಿತವಾಗಿಯೂ ನಿಮಗೆ ಇಷ್ಟವಾಗುತ್ತೆ.

510

ನೀವು ಪುದೀನಾ (Mint) ಸ್ಮೆಲ್ ಇಷ್ಟ ಪಡೋದಾದರೆ, ಮಖಾನ ಹುರಿಯುವಾಗ ಪುದೀನಾ ಎಲೆ ಅದರ ಮೇಲೆ ಹಾಕಿ. ಇದನ್ನು ತಿನ್ನೋದ್ರಿಂದ ಶಕ್ತಿ ಸಿಗುತ್ತೆ. ಈ ಸೀಸನ್ ನಲ್ಲಿ ನೀವು ಅನಾರೋಗ್ಯಕರ ಆಹಾರದ ಬದಲಾಗಿ, ಒಂದು ಹಿಡಿ ಒಣ ಹುರಿದ ಮಖಾನಾ ತಿನ್ನಬಹುದು.

610

ಪಾಪ್ ಕಾರ್ನ್ (Popcorn)
ನೀವು ವೈಟ್ ಲಾಸ್ ಮಾಡೋದರ ಜೊತೆಗೆ ಆರೋಗ್ಯಕರ ಸ್ನಾಕ್ಸ್ ಸೇವಿಸಲು ಬಯಸಿದರೆ, ನೀವು ಸಾಲ್ಟ್ ಹಾಕಿ ಹುರಿದ ಪಾಪ್ ಕಾರ್ನ್ ಸೇವಿಸಬಹುದು. ಹಾಟ್ ಪಾಪ್ ಕಾರ್ನ್ ಹಸಿವನ್ನು ನಿವಾರಿಸುತ್ತೆ ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ನೀಡುತ್ತೆ . 

710

ನೀವು ಪಾಪ್ ಕಾರ್ನ್ ನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸಹ ಸೇರಿಸಬಹುದು. ಇದು ಉತ್ತಮ ಡಯಟ್(Diet) ಆಗಿದೆ. ನೀವು ಹೊರಗೆ ಹೋದಾಗಲೆಲ್ಲಾ, ಅದನ್ನು ಸಹ ಪ್ಯಾಕ್ ಮಾಡಿ ತೊಗೊಂಡು ಹೋಗ್ಬಹುದು. ಅನಾರೋಗ್ಯಕರ ಆಹಾರದ ಬದಲು ಇದನ್ನು ಸೇವಿಸೋದು ಬೆಸ್ಟ್.

810

ಬಾದಾಮಿ(Almond)
ರುಚಿಕರವಾದ ತಿಂಡಿಗೆ ಬಾದಾಮಿ ಉತ್ತಮ ಆಯ್ಕೆಯಾಗಿದೆ. ರಾತ್ರಿ 5-6 ಬಾದಾಮಿ ನೆನಸಿ ಬೆಳಗ್ಗೆ ತಿನ್ನಿ. ಇದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದೆ. ಇದು ತೂಕ ಕಡಿಮೆ ಮಾಡಲು ಸಹ ಸಹಕಾರಿಯಾಗಿದೆ. ಬೇಕಿದ್ರೆ ನೀವೂ ಟ್ರೈ ಮಾಡಿ ನೋಡಿ.
 

910

ಬಾದಾಮಿ ಫೈಬರ್ (Fibre), ಉತ್ತಮ ಕೊಬ್ಬು, ಮೆಗ್ನೀಸಿಯಮ್, ಪೊಟ್ಯಾಸಿಯಮ್  ಸಹ ಹೊಂದಿದೆ. ಇದರಲ್ಲಿರುವ ವಿಟಮಿನ್ ಇ ಆಂಟಿ-ಎಂಗೇಜಿಂಗ್ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ, ಇದು ಚರ್ಮಕ್ಕೆ ಒಳ್ಳೆಯದು. ಪ್ರತಿದಿನ ಇದನ್ನು ಸೇವಿಸಿ ನೋಡಿ. 

1010

ಹುರಿದ ಕಡಲೆ
ತೂಕ ಇಳಿಸುವ ಸ್ನಾಕ್ಸ್ ಗಳಲ್ಲಿ (Snacks) ಕಡಲೆಗೆ  ಹೆಚ್ಚು ಆದ್ಯತೆ ನೀಡಲಾಗುತ್ತೆ . ಹುರಿದ ಕಡಲೆ ಪ್ರೋಟೀನ್ ಮತ್ತು ಫೈಬರ್ ಹೊಂದಿರುತ್ತೆ. ಹುರಿದ ಕಡಲೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತೆ. ಕಡಲೆ ತಿಂದರೆ ನೀವು ದೀರ್ಘಕಾಲದವರೆಗೆ ಹಸಿವು ಅನುಭವಿಸೋದಿಲ್ಲ, ಇದರಿಂದ ನೀವು ಮತ್ತೆ ಮತ್ತೆ ತಿನ್ನೋದನ್ನು ತಪ್ಪಿಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಆರೋಗ್ಯ

Latest Videos
Recommended Stories
Recommended image1
ಔಷಧಿ ಖರೀದಿಸುವ ಮುನ್ನ ಈ ಪ್ರಶ್ನೆಗಳನ್ನು ಕೇಳಿ! ಇಲ್ಲದಿದ್ದರೆ ಆರೋಗ್ಯಕ್ಕೆ ಅಪಾಯ
Recommended image2
ನಿಮ್ಮ ದೇಹದಲ್ಲಿ ಪ್ರೋಟೀನ್ ಕಡಿಮೆ ಆಗಿದ್ರೆ ಈ ಲಕ್ಷಣಗಳು ಕಾಣಿಸುತ್ತವೆ; ಪರಿಹಾರಕ್ಕೆ ಹೀಗೆ ಮಾಡಿ!
Recommended image3
ಸ್ತನ ಕ್ಯಾನ್ಸರ್‌ನಿಂದ ಕೂದಲು ಕಳೆದುಕೊಂಡರೂ ಕುಗ್ಗದ ಖ್ಯಾತ ಶೆಫ್ ಪಂಕಜ್ ಭದೌರಿಯಾ.. ಮಹಿಳೆಯರಿಗೆ ಹೇಳಿದ ಕಿವಿಮಾತಿದು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved