ಮಕ್ಕಳು ಖುಷಿ ಪಡುತ್ತವೆ ಅಂತ ಸಿಕ್ಕಾಪಟ್ಟೆ ಚಿಪ್ಸ್ ಕೊಟ್ಟರೆ ಹಲ್ಲು ಹಾಳಾಗುತ್ತೆ!
ಮಗು ಆರೋಗ್ಯವಾಗಿರಬೇಕು, ಅವರ ಬೆಳವಣಿಗೆ ಉತ್ತಮವಾಗಿರಬೇಕು ಎಂದು ಪೋಷಕರು ಬಯಸುತ್ತಾರೆ. ಅನೇಕ ಬಾರಿ, ಚಿಕ್ಕ ಮಕ್ಕಳು ತಿನ್ನಲು ಮತ್ತು ಕುಡಿಯಲು ಹಟ ಮಾಡುತ್ತಾರೆ, ಇದು ಪೋಷಕರಿಗೆ ಕಿರಿಕಿರಿ ಉಂಟುಮಾಡುತ್ತದೆ. ಮಗುವನ್ನು ಪ್ರೀತಿ (Love) ಮಾಡೋದು ಉತ್ತಮ, ಆದ್ರೆ ತಿನ್ನುವ ಮತ್ತು ಕುಡಿಯುವ ವಿಷಯಕ್ಕೆ ಬಂದಾಗ, ಮಗು ಕೇಳೋದ್ದನ್ನೆಲ್ಲಾ ಕೊಡಿಸೋದು ತಪ್ಪು, ಪೋಷಕರಾಗಿ, ಮಗುವಿನ ಆಹಾರದ ಡಿಮ್ಯಾಂಡ್ ಅನ್ನು ಪೂರೈಸುವ ಮೂಲಕ, ನೀವು ಅವನ ಆರೋಗ್ಯದ ಬಗ್ಗೆ ಅಜಾಗರೂಕರಾಗಿದ್ದೀರಿ ಎಂದು ನಿಮಗೆ ತಿಳಿದಿದೆಯೇ?
ಅನೇಕ ಬಾರಿ, ಮಕ್ಕಳು ನಾವು ಕೊಟ್ಟ ಆಹಾರ ತಿನ್ನದೇ ಅದರ ಬದಲು ಚಿಪ್ಸ್ ಮತ್ತು ಚಾಕೊಲೇಟ್‌ಗಳಂತಹ ವಸ್ತುಗಳನ್ನು ತಿನ್ನಲು ಹಟ ಮಾಡುತ್ತಾರೆ. ಪೋಷಕರು (Parents) ಸಹ ಮಗುವಿಗೆ ಹಸಿವಾಗಿರಬೇಕು, ಅವರಿಗೆ ಇಷ್ಟವಾದದ್ದನ್ನು ಕೊಡೋಣ ಎಂದು ಕೊಡ್ತಾರೆ. ಇದು ಮಗುವಿನ ಹೊಟ್ಟೆ ತುಂಬಿಸುತ್ತೆ ನಿಜ. ಆದರೆ ನಿಮ್ಮ ಈ ತಪ್ಪುಗಳು ಮಗುವಿನ ಬಾಯಿಯ ಆರೋಗ್ಯವನ್ನು (Health) ಹಾಳುಮಾಡುತ್ತೆ. ಹೆಚ್ಚು ತಿನ್ನುವ ಮೂಲಕ ಮಗುವಿನ ಹಲ್ಲುಗಳು(Teeth) ಹಾನಿಯಾಗುತ್ತೆ, ಆ ಬಗ್ಗೆ ತಿಳಿಯೋಣ…
ಕಾರ್ಬೊನೇಟೆಡ್ ಡ್ರಿಂಕ್ಸ್(Carbonated Drinks)
ಮಗುವು ತಂಪು ಪಾನೀಯಗಳನ್ನು ಹೆಚ್ಚು ಇಷ್ಟಪಟ್ಟರೆ ಮತ್ತು ಕುಡಿದರೆ, ಅದು ಅವರ ಹಲ್ಲುಗಳು ಬೇಗ ಹಾಳಾಗಲು ಕಾರಣವಾಗುತ್ತದೆ. ಈ ಪಾನೀಯಗಳು ಕಾರ್ಬೊನಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ಹಲ್ಲುಗಳ ಎನಾಮಲ್ ನ್ನು ಹಾಳುಮಾಡುತ್ತದೆ ಮತ್ತು ಹಲ್ಲುಗಳನ್ನು ಸೂಕ್ಷ್ಮವಾಗಿಸುತ್ತದೆ.
ಪ್ಯಾಕ್ ಮಾಡಿದ ಫ್ರುಟ್ ಜ್ಯೂಸ್ (Packed fruit juice)
ಅನೇಕ ಬಾರಿ ಪೋಷಕರು ಜ್ಯೂಸ್ (Juice) ನೀಡುತ್ತಾರೆ, ಇದರಿಂದ ಮಗುವಿನ ಆರೋಗ್ಯಕ್ಕೆ ಪ್ರಯೋಜನವಾಗುತ್ತಿದೆ ಎಂದು ಭಾವಿಸುತ್ತಾರೆ. ಆದ್ರೆ ನಿಜವಾಗಿ, ಪ್ಯಾಕ್ ಮಾಡಿದ ಜ್ಯೂಸ್ ಮಕ್ಕಳ ಬಾಯಿ ಆರೋಗ್ಯವನ್ನು (Oral Health) ಹಾನಿಗೊಳಿಸುತ್ತದೆ. ಅವುಗಳಲ್ಲಿರುವ ಅಂಶವು ಹಲ್ಲುಗಳಿಗೆ ಅಂಟಿಕೊಳ್ಳುತ್ತದೆ ಮತ್ತು ಪ್ರೆಸೆರ್ವಾಟಿವ್ಸ್ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಮಗು ಪ್ಯಾಕ್ ಮಾಡಿದ ಜ್ಯೂಸ್ ಕುಡಿದಾಗಲೆಲ್ಲಾ,ಬಾಯಿ ಮತ್ತು ಹಲ್ಲುಗಳನ್ನು ತೊಳೆಯುವುದನ್ನು ನೆನಪಿಟ್ಟುಕೊಳ್ಳಿ.
ಸಿಟ್ರಸ್ ಹಣ್ಣು(Citrus Fruits)
ವಿಟಮಿನ್ ಸಿ ಸಮೃದ್ಧ ಸಿಟ್ರಸ್ ಹಣ್ಣು ಅನೇಕ ಪ್ರಯೋಜನ ಹೊಂದಿದೆ. ಇದನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಒಳ್ಳೆಯದು, ಆದರೆ ಮಕ್ಕಳ ವಿಷಯಕ್ಕೆ ಬಂದಾಗ, ಹೆಚ್ಚು ಸಿಟ್ರಸ್ ಹಣ್ಣು ಅವರಿಗೆ ಅಪಾಯವನ್ನುಂಟು ಮಾಡಬಹುದು. ಸಿಟ್ರಸ್ ಹಣ್ಣುಗಳಲ್ಲಿರುವ ಆಮ್ಲ ಹಲ್ಲುಗಳ ಎನಾಮಲ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ಉಳಿದ ಹಣ್ಣುಗಳಿಗೆ ಹೋಲಿಸಿದ್ರೆ, ಕಿತ್ತಳೆ ಹಣ್ಣುಗಳಲ್ಲಿ ಕಡಿಮೆ ಆಮ್ಲವಿದೆ, ಆದ್ದರಿಂದ ಸ್ವಲ್ಪ ಕಿತ್ತಳೆ ಹಣ್ಣು ನೀಡಬಹುದು.
ಆಲೂಗಡ್ಡೆ ಚಿಪ್ಸ್
ಆಲೂಗಡ್ಡೆ ಚಿಪ್ಸ್ ನಲ್ಲಿ ಸ್ಟಾರ್ಚ್ ಹೆಚ್ಚಾಗಿರುತ್ತೆ, ಇದು ಮಕ್ಕಳ ಆರೋಗ್ಯ ಮತ್ತು ಬಾಯಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅವು ಹಲ್ಲುಗಳ ನಡುವೆ ಸಿಕ್ಕಿಹಾಕಿಕೊಳ್ಳುತ್ತವೆ, ಇದರಿಂದಾಗಿ ಹುಳುಕುಗಳ ಸಮಸ್ಯೆ ಹೆಚ್ಚುತ್ತೆ. ಮಗು ಚಿಪ್ಸ್ ತಿಂದರೆ, ಎಲ್ಲಾ ಸಮಯದಲ್ಲೂ ಎರಡು ಬಾರಿ ಬ್ರಶ್(Brush) ಮಾಡೋದನ್ನು ಮರೆಯಬೇಡಿ.
ಪಾಪ್ ಕಾರ್ನ್ (Pop corn)
ಹೌದು, ಚಿತ್ರಮಂದಿರದ ಬಿಡುವಿನ ವೇಳೆಯಲ್ಲಿ ಅಥವಾ ಸಂಜೆ ಪಾಪ್ ಕಾರ್ನ್ ಅನ್ನು ಮಗುವಿಗೆನೀಡಿ ಸಂತೋಷಪಟ್ಟರೆ, ನೀವು ತಪ್ಪು ಮಾಡ್ತಾ ಇದ್ದೀರಿ. ಕ್ಯಾರಮೆಲೈಸ್ಡ್, ಬೆಣ್ಣೆ ಮತ್ತು ಉಪ್ಪಿನ ಅಂಶದ ಪಾಪ್ಕಾರ್ನ್ ಕಣಗಳು ಹಲ್ಲುಗಳಿಗೆ ಅಂಟಿಕೊಳ್ಳುತ್ತವೆ, ಇದರಿಂದಾಗಿ ಮಗುವಿಗೆ ಕ್ಯಾವಿಟಿ ಸಮಸ್ಯೆ ಉಂಟಾಗಬಹುದು. ಅಲ್ಲದೆ ಅವರಿಗೆ ಸ್ವೀಟ್ಸ್ ಮತ್ತು ಚಾಕೊಲೇಟ್ ಕಡಿಮೆ ಪ್ರಮಾಣದಲ್ಲಿ ನೀಡಿ.