Health Care : ಪ್ರತಿ ದಿನ ಮಖಾನಾ ತಿನ್ನಿ ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡ್ಕೊಳ್ಳಿ
ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಣ ಮಾಡೋದು ಬಹಳ ಮುಖ್ಯ. ನಮ್ಮ ತಪ್ಪಿನಿಂದಾಗಿ ಕೊಲೆಸ್ಟ್ರಾಲ್ ಹೆಚ್ಚಾಗಿರುತ್ತದೆ. ಅದನ್ನು ನಿಯಂತ್ರಣಕ್ಕೆ ತರುವುದು ಸವಾಲಾಗುತ್ತದೆ. ಆದ್ರೆ ಕೆಲ ಆಹಾರ ಸೇವನೆ ನಮ್ಮ ಕೆಲಸ ಸುಲಭ ಮಾಡುತ್ತದೆ.
ಕೆಟ್ಟ ದಿನಚರಿ, ತಪ್ಪು ಆಹಾರ (Food) ಮತ್ತು ಒತ್ತಡ (Stress) ದಿಂದಾಗಿ ಅನೇಕ ರೋಗ (Disease) ಗಳು ಶುರುವಾಗುತ್ತವೆ. ಇವುಗಳಲ್ಲಿ ಬೊಜ್ಜು, ಮಧುಮೇಹ, ಹೃದ್ರೋಗ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ ಸೇರಿವೆ. ಇದಲ್ಲದೆ ಕೊಲೆಸ್ಟ್ರಾಲ್ ಹೆಚ್ಚಾಗಲು ಪ್ರಾರಂಭಿಸುತ್ತದೆ. ಕೊಲೆಸ್ಟ್ರಾಲ್ ಎಂದ ತಕ್ಷಣ ಎಲ್ಲರೂ ಭಯಗೊಳ್ತಾರೆ. ಆದ್ರೆ ನಮ್ಮ ದೇಹದಲ್ಲಿ ಎರಡು ರೀತಿಯ ಕೊಲೆಸ್ಟ್ರಾಲ್ ಇರುತ್ತದೆ. ಒಂದು ಒಳ್ಳೆಯ ಕೊಲೆಸ್ಟ್ರಾಲ್ ಮತ್ತೊಂದು ಕೆಟ್ಟ ಕೊಲೆಸ್ಟ್ರಾಲ್. ಒಳ್ಳೆಯ ಕೊಲೆಸ್ಟ್ರಾಲ್ ತೆಳ್ಳಗಿರುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ದಪ್ಪಗಿರುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅಂಟಿಕೊಳ್ಳುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ರಕ್ತ ಸಂಚಾರಕ್ಕೆ ತೊಂದರೆಯಾಗುತ್ತದೆ. ಈ ಕಾರಣದಿಂದಾಗಿ ಅಧಿಕ ರಕ್ತದೊತ್ತಡ, ಹೃದಯಾಘಾತದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಬಾರದು ಅಂದ್ರೆ ಆಹಾರದ ಬಗ್ಗೆ ಗಮನ ಹರಿಸಬೇಕಾಗುತ್ತದೆ.
ಮಖಾನಾವನ್ನು ಇಂಗ್ಲಿಷ್‌ನಲ್ಲಿ ಫಾಕ್ಸ್ ನಟ್ಸ್ (Fox Nuts) ಎಂದು ಕರೆಯಲಾಗುತ್ತದೆ. ಇದು ಕಮಲದ ಹೂವಿನ ಭಾಗವಾಗಿದೆ. ಇದು ಕೊಲೆಸ್ಟ್ರಾಲ್ (Cholesterol), ಮೆಗ್ನೀಸಿಯಮ್ (Magnesium), ಕೊಬ್ಬು ಮತ್ತು ಸೋಡಿಯಂ (Sodium) ಅನ್ನು ಹೊಂದಿರುತ್ತದೆ. ಇದರ ಸೇವನೆಯಿಂದ ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಪರಿಹಾರ ಸಿಗುತ್ತದೆ. ಮಖಾನಾವನ್ನು ಬಿಹಾರ (Bihar), ಉತ್ತರ ಪ್ರದೇಶ (Uttar Pradesh) ಮತ್ತು ಅಸ್ಸಾಂನಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಅದರಲ್ಲೂ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಮಖಾನಾ ಬೇಸಾಯ ಅತಿ ಹೆಚ್ಚು. ಸಂಶೋಧನೆಯೊಂದರ ಪ್ರಕಾರ ಮಖಾನಾದಲ್ಲಿ ಮಧುಮೇಹ ವಿರೋಧಿ ಗುಣಗಳಿವೆ. ಇದಕ್ಕಾಗಿ, ಮಧುಮೇಹ ರೋಗಿಗಳು ಮಖಾನಾವನ್ನು ಸಹ ಸೇವಿಸಬಹುದು. ಇದರ ಸೇವನೆಯಿಂದ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.
ನಿಮ್ಮ ಆಹಾರದಲ್ಲಿ ಮಖಾನಾವನ್ನು ಸೇರಿಸುವ ಮೂಲಕ ನೀವು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಬಹುದು. ಇಂದು ನಾವು ಮಖನಾ ಲಾಭಗಳು ಏನು ಹಾಗೆ ಅದು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಹೇಳ್ತೇವೆ.
ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತೆ ಮಖಾನಾ : ಆರೋಗ್ಯ ತಜ್ಞರ ಪ್ರಕಾರ, ಮಖಾನಾದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ. ಇದಲ್ಲದೆ, ಸೋಡಿಯಂ ಮತ್ತು ಸ್ಯಾಚುರೇಟೆಡ್ ಕೊಬ್ಬು ಕೂಡ ಬಹಳ ಕಡಿಮೆ ಕಂಡುಬರುತ್ತದೆ. ಇದಕ್ಕಾಗಿ ಏರುತ್ತಿರುವ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು, ನೀವು ಆಹಾರದಲ್ಲಿ ಮಖಾನಾವನ್ನು ಸೇರಿಸಿಕೊಳ್ಳಬಹುದು. ಇದರಲ್ಲಿ ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದರಿಂದಾಗಿ ಬೇಗ ಹಸಿವಾಗುವುದಿಲ್ಲ.
ಈ Kitchen Hacks ಟ್ರೈ ಮಾಡಿ ನಿಮಿಷದಲ್ಲಿ ಸುಟ್ಟ ಪಾತ್ರೆ ಹೊಳೆಯುವಂತೆ ಮಾಡಿ
ತೂಕ ಇಳಿಕೆ (Weight Loss) : ಸ್ಥೂಲಕಾಯಕ್ಕೆ ಅನೇಕ ಕಾರಣಗಳಿವೆ. ಹಾಗೆಯೇ ಸ್ಥೂಲಕಾಯ ಅನೇಕ ರೋಗಗಳಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನೀವು ನಿಮ್ಮ ಆಹಾರದಲ್ಲಿ ಮಖಾನಾವನ್ನು ಸೇವಿಸಬೇಕು. ಮಖಾನಾದಲ್ಲಿ ಕ್ಯಾಲೋರಿ ತುಂಬಾ ಕಡಿಮೆ ಇರುತ್ತದೆ. ಆದ್ದರಿಂದ ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೂಳೆಗಳಿಗೆ ಬಲ : ಮಖನಾದಲ್ಲಿ ಕ್ಯಾಲ್ಸಿಯಂ ಅಧಿಕವಾಗಿದ್ದು, ಮೂಳೆಗಳನ್ನು ಬಲಗೊಳಿಸುತ್ತದೆ.
ರಕ್ತದೊತ್ತಡ ನಿಯಂತ್ರಣ : ಮಖಾನಾ ತಿನ್ನುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು. ಇದು ಮಧುಮೇಹದ ವಿರುದ್ಧ ಹೋರಾಡಲು ಸಹ ಸಹಾಯ ಮಾಡುತ್ತದೆ. ಕಡಿಮೆ ಸೋಡಿಯಂ ಅಂಶ ಮತ್ತು ಹೆಚ್ಚಿನ ಪೊಟ್ಯಾಸಿಯಮ್ ಅಂಶವು ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮಲಗೋ ಟೈಮಲ್ಲಿ ಮಲಗ್ಲಿಲ್ಲ ಅಂದ್ರೆ ಮುಂದೆ ನಿದ್ರೆಯೇ ಬರೋಲ್ಲ ನೋಡಿ!
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಮಖಾನಾ ಹೀಗೆ ಸೇವನೆ ಮಾಡಿ :
ಅನೇಕರಿಗೆ ಮಖಾನಾ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇತ್ತೀಚಿನ ದಿನಗಳಲ್ಲಿ ಅದರ ಬಳಕೆ ಹೆಚ್ಚಾಗ್ತಿದೆ. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಬಯಸಿದ್ರೆ ನೀವು ಹುರಿದ ಮಖಾನಾವನ್ನು ತಿನ್ನಬಹುದು. ಇದಲ್ಲದೇ ಮಖಾನಾ ಖೀರ್ ಮಾಡಿ ತಿನ್ನಬಹುದು. ಇನ್ನೊಂದೆಡೆ ಬೆಳಗಿನ ಉಪಾಹಾರದಲ್ಲಿ ಮಖಾನಾ ತಿನ್ನುವುದು ಹೆಚ್ಚು ಪ್ರಯೋಜನಕಾರಿ ಎಂದು ತಜ್ಞರು ಹೇಳ್ತಾರೆ. ಮಖಾನಾ ತಿನ್ನಲು ರುಚಿಯಾಗಿರುತ್ತದೆ.