ತೂಕ ಇಳಿಸುತ್ತೆ, ಹಲವು ರೋಗಗಳಿಗೂ ಗುಡ್ ಬೈ ಹೇಳೋ ಶೇಂಗಾ
ಕಡಲೆಕಾಯಿ ಬಡವರ ಬಾದಾಮಿ ಎಂದೇ ಪ್ರಸಿದ್ಧ. ಏಕೆಂದರೆ ಅವು ಕೈಗೆಟಕುವ ದರದಲ್ಲಿ ಸುಲಭವಾಗಿ ಲಭ್ಯವಾಗುತ್ತವೆ, ಅಷ್ಟೇ ಅಲ್ಲ ಶೇಂಗಾ ಸೇವನೆಯಿಂದ ಪ್ರಯೋಜನಗಳು ಸಹ ಸಾಕಷ್ಟಿವೆ. ಇಂದು ನಾವು ನಿಮಗೆ ಶೇಂಗಾ ಸೇವನೆಯಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದರ ಬಗ್ಗೆ ತಿಳಿಸುತ್ತೇವೆ.
ಕಡಲೆಕಾಯಿ (ಶೇಂಗಾ) ಅವಲಕ್ಕಿ, ಪುಳಿಯೊಗರೆ, ಚಿತ್ರಾನ್ನ, ಸಾಬುದಾನಾ ಕಿಚಡಿ ಮತ್ತು ಇತರ ಅನೇಕ ಭಕ್ಷ್ಯಗಳ ರುಚಿ ಹೆಚ್ಚಿಸಲು ಶೇಂಗಾ ಬೀಜ ಬಳಸಲಾಗುತ್ತೆ. ಇದು ಸಾಕಷ್ಟು ಪ್ರೋಟೀನ್ (Protein)ಮತ್ತು ಫೈಬರ್ (Fiber) ಒಳಗೊಂಡಿದೆ. ಅಷ್ಟೇ ಅಲ್ಲ, ಇದು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ, ತೂಕ ಕಳೆದುಕೊಳ್ಳಲು ಸಹ ಇದು ಸಹಾಯ ಮಾಡುತ್ತದೆ.
ಶೇಂಗಾ ಸೇವನೆಯಿಂದ ಮಧುಮೇಹ, ಹೃದಯ ಸಮಸ್ಯೆ (Heart problems), ಕ್ಯಾನ್ಸರ್ (Cancer) ಮತ್ತು ಅಲ್ಝೈಮರ್ ನಂತಹ ಅನೇಕ ರೋಗಗಳ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಆದ್ದರಿಂದ ಇದನ್ನು ಸೂಪರ್ ಫುಡ್ (Super Food) ಎಂದು ಕರೆಯೋದು ಸಹ ತಪ್ಪಲ್ಲ. ಶೇಂಗಾದ ಇತರ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಕೆಟ್ಟ ಕೊಲೆಸ್ಟ್ರಾಲನ್ನು(Bad cholestrol) ಕಡಿಮೆ ಮಾಡುತ್ತೆ
ಶೇಂಗಾ ಬೀಜದಲ್ಲಿ ಮೊನೊಸಾಚುರೇಟೆಡ್ ಕೊಬ್ಬುಗಳಿವೆ, ಇದು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುತ್ತದೆ. ಅದೇ ಸಮಯದಲ್ಲಿ, ಇದು ಉತ್ತಮ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿಸುತ್ತದೆ. ನೀವು ಅದನ್ನು ಯಾವುದೇ ರೀತಿಯ ಆಹಾರಗಳಲ್ಲಿ ಸೇರಿಸುವ ಮೂಲಕ ಈವ್ನಿಂಗ್ ಸ್ನಾಕ್ ಆಗಿ ಸೇವಿಸಬಹುದು.
ತೂಕ ಇಳಿಕೆ(Weight loss)
ಮೇಲೆ ತಿಳಿಸಿದಂತೆ, ಶೇಂಗಾ ಫೈಬರ್ ಮತ್ತು ಪ್ರೋಟೀನ್ ನ ಉತ್ತಮ ಮೂಲವಾಗಿದೆ, ಇದನ್ನು ತಿನ್ನುವ ಮೂಲಕ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ಹಾಗಾಗಿ ಬೇಗನೆ ಹಸಿವಾಗೋದಿಲ್ಲ, ಇದರಿಂದಾಗಿ ಅತಿಯಾಗಿ ತಿನ್ನುವ ಮತ್ತು ಅನಾವಶ್ಯಕವಾಗಿ ತಿಂಡಿ ತಿನ್ನುವ ಅಭ್ಯಾಸ ತಪ್ಪಿಸಬಹುದು.
ಆರೋಗ್ಯಕರ ಹೃದಯ
ಕಡಲೆಕಾಯಿಯಲ್ಲಿರುವ ಮೆಗ್ನೀಸಿಯಮ್, ಫೈಬರ್ (Fibre), ಪೊಟ್ಯಾಸಿಯಮ್, ಮೊನೊಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು, ಸಸ್ಯ ಪ್ರೋಟೀನ್‌ಗಳು ಮತ್ತು ಅನೇಕ ಜೈವಿಕ ಸಕ್ರಿಯ ಅಂಶಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತವೆ, ಇದು ಹೃದಯದ ಆರೋಗ್ಯಕ್ಕೆ ಸಹಕಾರಿ. ಇದರೊಂದಿಗೆ, ರೆಸ್ವೆರಾಟ್ರಾಲ್ ಎಂಬ ಉತ್ಕರ್ಷಣ ನಿರೋಧಕವು ಕಡಲೆಕಾಯಿಯಲ್ಲಿಯೂ ಕಂಡುಬರುತ್ತದೆ, ಇದು ಹೃದಯರಕ್ತನಾಳದ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ.
ಮಧುಮೇಹಕ್ಕೆ(Diabetes) ಪರಿಣಾಮಕಾರಿ
ಮಧುಮೇಹ ಸಮಸ್ಯೆ ಹೊಂದಿರುವವರು ಶೇಂಗಾ ತಿನ್ನೋದು ಆರೋಗ್ಯಕ್ಕೆಉತ್ತಮ. ಏಕೆಂದರೆ ಇದು ರಕ್ತದಲ್ಲಿನ ಗ್ಲುಕೋಸ್ ನಿಯಂತ್ರಣದಲ್ಲಿಡುವ ಫೈಬರ್ ಜೊತೆಗೆ ಮೆಗ್ನೀಸಿಯಮ್ ಮತ್ತು ಆರೋಗ್ಯಕರ ಎಣ್ಣೆಯನ್ನು ಹೊಂದಿರುತ್ತದೆ. ಇದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಮಧುಮೇಹವು ಭಾರತದಲ್ಲಿ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿದೆ. ಅತಿ ಹೆಚ್ಚು ಜನರು ಭಾರದಲ್ಲಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ನೀವು ಅದನ್ನು ತಪ್ಪಿಸಲು ಬಯಸಿದರೆ, ಆಹಾರದ (Food) ಬಗ್ಗೆ ಸಾಕಷ್ಟು ಗಮನ ಹರಿಸಬೇಕು. ಇದಕ್ಕಾಗಿ ನೀವು ವಿಶೇಷವಾಗಿ ನಿಮ್ಮ ಆಹಾರದಲ್ಲಿ ಶೇಂಗಾ ಸೇರಿಸಬೇಕು.
ಚರ್ಮಕ್ಕೆ(Skin) ವರದಾನ
ಕಳಪೆ ಆಹಾರ ಮತ್ತು ಜೀವನಶೈಲಿಯಿಂದಾಗಿ, ದೇಹದ ಒಳಗೆ ಕೊಳಕು ಸಂಗ್ರಹವಾಗಲು ಪ್ರಾರಂಭಿಸುತ್ತದೆ, ಇದರ ಪರಿಣಾಮವು ಮೊದಲು ನಮ್ಮ ಚರ್ಮದ ಮೇಲೆ ಕಂಡುಬರುತ್ತದೆ. ನೀವು ಕಡಲೆಕಾಯಿ ಸೇವಿಸುವ ಮೂಲಕ ಸಮಸ್ಯೆ ನಿವಾರಿಸಬಹುದು. ಇದು ಅರ್ಜಿನೈನ್ ಎಂಬ ಅಮೈನೋ ಆಮ್ಲವನ್ನು ಹೊಂದಿರುತ್ತದೆ, ಇದು ಚರ್ಮವನ್ನು ಆರೋಗ್ಯಕರವಾಗಿಡುತ್ತದೆ.