Food Safety Tips: ಉಳಿದ ಆಹಾರವನ್ನು ಮತ್ತೆ ಬಿಸಿ ಮಾಡಿ ತಿನ್ಬಾರ್ದಂತೆ, ಯಾಕೆ ಗೊತ್ತಾ?
Foods you shouldn’t reheat: ಉಳಿದ ಆಹಾರವನ್ನು ಮತ್ತೆ ಬಿಸಿ ಮಾಡಿ ತಿನ್ನುವ ಅಭ್ಯಾಸ ಇದೆಯೇ?. ಹಾಗಿದ್ರೆ ನೀವು ಜಾಗರೂಕರಾಗಿರಬೇಕು. ಯಾಕೆಂದರೆ... ಕೆಲವು ಆಹಾರಗಳನ್ನು ಬಿಸಿ ಮಾಡಿ ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಮುಖ್ಯವಾಗಿ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಯಾವೆಲ್ಲಾ ಆಹಾರ ಬಿಸಿ ಮಾಡ್ಬಾರ್ದು?
ನಮ್ಮಲ್ಲಿ ಹಲವರಿಗೆ ತಣ್ಣಗಾದ ಆಹಾರ ತಿನ್ನಲು ಇಷ್ಟವಾಗುವುದಿಲ್ಲ. ಅದರಲ್ಲೂ ಚಳಿಗಾಲದಲ್ಲಿ ಬಿಸಿ ಬಿಸಿಯಾದ ಆಹಾರವನ್ನೇ ತಿನ್ನಲು ಬಯಸುತ್ತಾರೆ. ಹಾಗಂತ, ಮಾಡಿದ ಅಡುಗೆಯನ್ನು ಬಿಸಾಡಲು ಆಗುವುದಿಲ್ಲವಲ್ಲ. ಆದ್ದರಿಂದ ಅದನ್ನು ಬಿಸಿ ಮಾಡಿಕೊಂಡು ತಿನ್ನುತ್ತಾರೆ. ಇದರಿಂದ ಉಳಿದ ಆಹಾರ ವ್ಯರ್ಥವಾಗುವುದಿಲ್ಲ. ಆದರೆ, ಹೀಗೆ ಬಿಸಿ ಮಾಡಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಪದೇ ಪದೇ ಬಿಸಿ ಮಾಡುವುದರಿಂದ ಆಹಾರದಲ್ಲಿನ ಪೋಷಕಾಂಶಗಳು ಕಡಿಮೆಯಾಗುತ್ತವೆ ಎಂದು ನಿಮಗೆ ಗೊತ್ತೇ? ಅಷ್ಟೇ ಅಲ್ಲ.. ಹಲವು ಆರೋಗ್ಯ ಸಮಸ್ಯೆಗಳಿಗೂ ಇದು ಕಾರಣವಾಗುತ್ತದೆ. ಅಸಲಿಗೆ, ಯಾವೆಲ್ಲಾ ಆಹಾರಗಳನ್ನು ಬಿಸಿ ಮಾಡಿ ತಿನ್ನಬಾರದು ಎಂದು ಈಗ ತಿಳಿಯೋಣ.
ಉಳಿದ ಅನ್ನ, ಸಾಂಬಾರ್
ಉಳಿದ ಅನ್ನ, ಸಾಂಬಾರ್‌ನಂತಹ ಪದಾರ್ಥಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುವ ಅಭ್ಯಾಸ ಹಲವರಿಗಿರುತ್ತದೆ. ಆದರೆ, ಹೀಗೆ ತಿನ್ನುವುದರಿಂದ ಫುಡ್ ಪಾಯಿಸನಿಂಗ್‌ಗೂ ಕಾರಣವಾಗಬಹುದು. ಇದಕ್ಕೆ ಮುಖ್ಯ ಕಾರಣವೆಂದರೆ, ಬಿಸಿ ಮಾಡಿದಾಗ ಆಹಾರದಲ್ಲಿರುವ ಹಲವು ಪೋಷಕಾಂಶಗಳು ನಾಶವಾಗುತ್ತವೆ. ಕೆಲವು ಸಂಯುಕ್ತಗಳು ವಿಷಕಾರಿಯಾಗುವ ಸಾಧ್ಯತೆ ಇದೆ.
ಆಲೂಗಡ್ಡೆ, ಬೇಯಿಸಿದ ಮೊಟ್ಟೆ
ಪೌಷ್ಟಿಕತಜ್ಞರ ಪ್ರಕಾರ, ಆಲೂಗಡ್ಡೆಯನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನಬಾರದು. ಆಲೂಗಡ್ಡೆಯಲ್ಲಿ ವಿಟಮಿನ್ ಬಿ6, ಪೊಟ್ಯಾಶಿಯಂ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಮತ್ತೆ ಬಿಸಿ ಮಾಡಿದಾಗ ಈ ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ. ಜೊತೆಗೆ ಒಂದು ರೀತಿಯ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಇದೆ. ಇದು ದೇಹಕ್ಕೆ ತುಂಬಾ ಹಾನಿಕಾರಕ.
ಬೇಯಿಸಿದ ಮೊಟ್ಟೆ
ಮೊಟ್ಟೆಗಳನ್ನು ಬೇಯಿಸಿದ ತಕ್ಷಣವೇ ತಿನ್ನಬೇಕು. ಅವುಗಳನ್ನು ಮತ್ತೆ ಬಿಸಿ ಮಾಡಬಾರದು. ಮೊಟ್ಟೆಯ ಪ್ರೋಟೀನ್‌ಗಳಲ್ಲಿ ಹೆಚ್ಚಿನ ಪ್ರಮಾಣದ ನೈಟ್ರೋಜನ್ ಇರುತ್ತದೆ. ಬಿಸಿ ಮಾಡಿದಾಗ ನೈಟ್ರೋಜನ್ ಕ್ಯಾನ್ಸರ್ ಕಾರಕ ವಸ್ತುಗಳನ್ನು ಉತ್ಪಾದಿಸುತ್ತದೆ. ಇದು ನಿಮ್ಮನ್ನು ಕ್ಯಾನ್ಸರ್ ಅಪಾಯಕ್ಕೆ ದೂಡಬಹುದು. ಆದ್ದರಿಂದ, ಮೊಟ್ಟೆಗಳನ್ನು ಬೇಯಿಸಿದ ನಂತರ ಮತ್ತೆ ಬಿಸಿ ಮಾಡಬಾರದು.
ಚಿಕನ್
ಚಿಕನ್ ಅನ್ನು ಒಮ್ಮೆ ಬೇಯಿಸಿದ ನಂತರ, ಎರಡನೇ ಬಾರಿ ಬಿಸಿ ಮಾಡಬಾರದು. ಇದರಿಂದ ಪ್ರೋಟೀನ್‌ಗಳು ಕಡಿಮೆಯಾಗುತ್ತವೆ. ಅವುಗಳ ರೂಪವೂ ಬದಲಾಗುತ್ತದೆ. ಪರಿಣಾಮವಾಗಿ ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಹಲವು ಬಾರಿ ಅಡುಗೆ ಮಾಡಿದ ನಂತರವೂ ಹಾನಿಕಾರಕ ಬ್ಯಾಕ್ಟೀರಿಯಾ ಚಿಕನ್‌ನಲ್ಲಿ ಉಳಿದಿರುತ್ತದೆ. ಬೇಯಿಸಿದ ಚಿಕನ್ ಅನ್ನು ಮೈಕ್ರೋವೇವ್‌ನಲ್ಲಿ ಇಟ್ಟರೆ, ಆ ಬ್ಯಾಕ್ಟೀರಿಯಾ ಮಾಂಸದಾದ್ಯಂತ ಹರಡುತ್ತದೆ.
ಟೀ , ಮಶ್ರೂಮ್ಸ್, ಪಾಲಕ್ ಸೊಪ್ಪು
ಟೀ ಪ್ರಿಯರು ಈ ವಿಷಯವನ್ನು ಖಂಡಿತವಾಗಿ ತಿಳಿದುಕೊಳ್ಳಬೇಕು. ಯಾಕೆಂದರೆ, ಟೀ ಅನ್ನು ಮತ್ತೆ ಮತ್ತೆ ಬಿಸಿ ಮಾಡುವುದು ಒಳ್ಳೆಯದಲ್ಲ. ಹೀಗೆ ಬಿಸಿ ಮಾಡಿದರೆ ಟೀ ರುಚಿ ಬದಲಾಗುತ್ತದೆ. ಅಧಿಕ ಕೆಫೀನ್ ಅಂಶವು ಅಸಿಡಿಟಿ ಮತ್ತು ನಿದ್ರಾಹೀನತೆಗೆ ಕಾರಣವಾಗುತ್ತದೆ. ಆದ್ದರಿಂದ ಟೀ ಅನ್ನು ಯಾವಾಗಲೂ ಫ್ರೆಶ್ ಆಗಿ ಮಾಡಿಕೊಂಡು ಕುಡಿಯುವುದೇ ಉತ್ತಮ.
ಮಶ್ರೂಮ್ಸ್
ಮಶ್ರೂಮ್‌ಗಳನ್ನು ಕೂಡ ಬಿಸಿ ಮಾಡಿ ತಿನ್ನಬಾರದು. ಹೀಗೆ ಮಾಡಿ ತಿಂದರೆ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗೆ ಮಾಡುವುದರಿಂದ ಬ್ಯಾಕ್ಟೀರಿಯಾ ಹೆಚ್ಚಾಗಿ ಆರೋಗ್ಯಕ್ಕೆ ಹಾನಿಯಾಗುತ್ತದೆ.
ಪಾಲಕ್ ಸೊಪ್ಪು
ಪಾಲಕ್ ಸೊಪ್ಪಿನಲ್ಲಿ ನೈಟ್ರೇಟ್‌ಗಳಿದ್ದು, ಮತ್ತೆ ಬಿಸಿ ಮಾಡಿದಾಗ ನೈಟ್ರೈಟ್‌ಗಳಾಗಿ ಬದಲಾಗುತ್ತವೆ. ಇದನ್ನು ತಿನ್ನುವುದರಿಂದ ಮೆಥೆಮೊಗ್ಲೋಬಿನೆಮಿಯಾ ಉಂಟಾಗುತ್ತದೆ. ಅಂದರೆ ಕೆಂಪು ರಕ್ತ ಕಣಗಳು ಆಮ್ಲಜನಕವನ್ನು ಸರಿಯಾಗಿ ಸಾಗಿಸಲು ಸಾಧ್ಯವಾಗುವುದಿಲ್ಲ, ಇದು ಮಾರಣಾಂತಿಕವಾಗಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

