- Home
- Life
- Health
- ಕಡಲೆಕಾಯಿಯಂತೆ ಸಿಪ್ಪೆಯೂ ಪ್ರಯೋಜನಕಾರಿ.. ಒಂದೇ ವಾರದೊಳಗೆ ಬಿರುಕು ಬಿಟ್ಟ ಹಿಮ್ಮಡಿ, ತುಟಿಗೆ ಪರಿಹಾರ ಸಿಗುತ್ತೆ
ಕಡಲೆಕಾಯಿಯಂತೆ ಸಿಪ್ಪೆಯೂ ಪ್ರಯೋಜನಕಾರಿ.. ಒಂದೇ ವಾರದೊಳಗೆ ಬಿರುಕು ಬಿಟ್ಟ ಹಿಮ್ಮಡಿ, ತುಟಿಗೆ ಪರಿಹಾರ ಸಿಗುತ್ತೆ
Peanut peel home remedies: ಸಾಮಾನ್ಯವಾಗಿ ನಿಷ್ಪ್ರಯೋಜಕವೆಂದು ಎಸೆಯುವ ಕಡಲೆಕಾಯಿ ಸಿಪ್ಪೆಯೂ ಸಹ ಬಹಳ ಪ್ರಯೋಜನಕಾರಿ. ಕಡಲೆಕಾಯಿಯಂತೆಯೇ ಕಡಲೆಕಾಯಿ ಸಿಪ್ಪೆಯು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿದೆ.

ಅನೇಕ ರೋಗಗಳನ್ನ ಬರದಂತೆ ತಡೆಯುತ್ತೆ
ವಿಶೇಷವಾಗಿ ಚಳಿಗಾಲದಲ್ಲಿ ಬಿಸಿ ಬಿಸಿ ಕಡಲೆಕಾಯಿ ಅಥವಾ ಶೇಂಗಾ ತಿನ್ನಲು ಜನರಿಗೆ ಬಹಳ ಇಷ್ಟ. ಹಾಗಾಗಿಯೇ ಬಹುತೇಕರು ಬೆಂಕಿಯ ಬಳಿ ಕುಳಿತು ಕಡಲೆಕಾಯಿಯನ್ನ ಆಸ್ವಾದಿಸುತ್ತಾರೆ. ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದೂ ಕರೆಯುತ್ತಾರೆ. ಆದರೆ ಸಾಮಾನ್ಯವಾಗಿ ನಿಷ್ಪ್ರಯೋಜಕವೆಂದು ಎಸೆಯುವ ಕಡಲೆಕಾಯಿ ಸಿಪ್ಪೆಯು ಸಹ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ?. ಹೌದು. ಕಡಲೆಕಾಯಿಯಂತೆ ಸಿಪ್ಪೆಯೂ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿದೆ. ಇವುಗಳ ಸೇವನೆಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಅನೇಕ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಕಡಲೆಕಾಯಿ ಸಿಪ್ಪೆಯೂ ತುಂಬಾ ಪ್ರಯೋಜನಕಾರಿ
ಬಿಎಂಎಸ್ ಹೋಲಿಸ್ಟಿಕ್ಸ್‌ನ ಡಾ. ಕರಣ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಕಡಲೆಕಾಯಿ ಸಿಪ್ಪೆಯೂ ತುಂಬಾ ಪ್ರಯೋಜನಕಾರಿ ಎಂದು ವಿವರಿಸಿದ್ದಾರೆ. ಚಳಿಗಾಲದಲ್ಲಿ ತುಟಿಗಳು ಮತ್ತು ಹಿಮ್ಮಡಿಗಳು ಬಿರುಕು ಬಿಟ್ಟಾಗ ಕಡಲೆಕಾಯಿ ಸಿಪ್ಪೆ ಗುಣಪಡಿಸುವಲ್ಲಿ ಬಹಳ ಪರಿಣಾಮಕಾರಿಯಂತೆ.
ತುಟಿ ಮತ್ತು ಹಿಮ್ಮಡಿಗೆ ಪರಿಣಾಮಕಾರಿ
ಬಿರುಕು ಬಿಟ್ಟ ಹಿಮ್ಮಡಿಯಿಂದ ಬಳಲುತ್ತಿರುವವರಿಗೆ ಕಡಲೆಕಾಯಿ ಸಿಪ್ಪೆ ತುಂಬಾ ಪರಿಣಾಮಕಾರಿ. ಕಡಲೆಕಾಯಿ ಸಿಪ್ಪೆಯಿಂದ ಪುಡಿ ಮಾಡಿ ಅರ್ಧ ಗ್ಲಾಸ್ ನೀರಿನೊಂದಿಗೆ ಬೆರೆಸಿ. ಪೇಸ್ಟ್ ಮಾಡಿ ನಿಮ್ಮ ತುಟಿ ಮತ್ತು ಹಿಮ್ಮಡಿಗಳಿಗೆ ಹಚ್ಚಿ. ಒಂದು ವಾರದೊಳಗೆ ಬಿರುಕು ಬಿಟ್ಟ ಹಿಮ್ಮಡಿಯಿಂದ ನಿಮಗೆ ಪರಿಹಾರ ಸಿಗುತ್ತದೆ.
ಕಡಲೆಕಾಯಿ ಸಿಪ್ಪೆಯ ಪ್ರಯೋಜನಗಳು
ಕಡಲೆಕಾಯಿ ಸಿಪ್ಪೆಗಳು ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಇವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇವುಗಳಲ್ಲಿರುವ ರೆಸ್ವೆರಾಟ್ರೊಲ್ ಮತ್ತು ಪಾಲಿಫಿನಾಲ್‌ಗಳಂತಹ ಸಂಯುಕ್ತಗಳು ದೇಹವನ್ನು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದಿಂದ ರಕ್ಷಿಸುತ್ತವೆ.
ದೇಹವನ್ನು ಬೆಚ್ಚಗಿಡುತ್ತೆ
ಕಡಲೆಕಾಯಿಗಳು ಉಷ್ಣತೆ ಹೆಚ್ಚಿಸುವ ಪರಿಣಾಮವನ್ನು ಹೊಂದಿರುತ್ತವೆ. ಅದಕ್ಕಾಗಿಯೇ ಚಳಿಗಾಲದಲ್ಲಿ ಅವುಗಳನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಏಕೆಂದರೆ ಇವು ದೇಹವನ್ನು ಒಳಗಿನಿಂದ ಬೆಚ್ಚಗಿಡಲು ಸಹಾಯ ಮಾಡುತ್ತವೆ.
ಕಡಲೆಕಾಯಿ ಸೇವನೆಯ ಪ್ರಯೋಜನಗಳು
ಇನ್ನು ಕಡಲೆಕಾಯಿ ತಿನ್ನುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಕಡಲೆಕಾಯಿ ಬಾದಾಮಿಗಿಂತ ಅಗ್ಗವಾಗಿದ್ದು, ಬಾದಾಮಿಯಂತೆಯೇ ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಕಡಲೆಕಾಯಿಗಳು ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಇವು ವಿಟಮಿನ್ ಇ ಮತ್ತು ಬಿ 6, ಕಬ್ಬಿಣ, ಸತು, ಪೊಟ್ಯಾಶಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂನಂತಹ ಪೋಷಕಾಂಶಗಳನ್ನು ಸಹ ಒಳಗೊಂಡಿರುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

