Natural Remedy for Constipation: ಪೌಷ್ಟಿಕತಜ್ಞೆ ಖುಷಿ ಛಾಬ್ರಾ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಮಲಬದ್ಧತೆ ಸಮಸ್ಯೆಗೆ ಅದ್ಭುತವಾದ ನೈಸರ್ಗಿಕ ಪರಿಹಾರವನ್ನು ಹಂಚಿಕೊಂಡಿದ್ದಾರೆ . ನೀವು ಮಾಡಬೇಕಾದದ್ದು ಇಷ್ಟೇ..
ಮಲಬದ್ಧತೆ (Constipation) ಪ್ರಪಂಚದಾದ್ಯಂತ ಹೆಚ್ಚಿನ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಈ ಮಲಬದ್ಧತೆ ಸಮಸ್ಯೆಗೆ ಅನೇಕ ಜನರು ಔಷಧಾಲಯ(Pharmacy)ಗಳಲ್ಲಿ ಮಾರಾಟವಾಗುವ ವಿರೇಚಕಗಳನ್ನು ಖರೀದಿಸಿ ಸೇವಿಸುತ್ತಾರೆ. ಆದರೆ ನೀವು ಮಲಬದ್ಧತೆಗೆ ಆಗಾಗ್ಗೆ ವಿರೇಚಕಗಳನ್ನು ಬಳಸಿದರೆ ದೇಹದ ನೈಸರ್ಗಿಕ ಪ್ರಕ್ರಿಯೆಯು ಅಡ್ಡಿಪಡಿಸುತ್ತದೆ ಮತ್ತು ಕರುಳುಗಳು ಕಿರಿಕಿರಿಗೊಳ್ಳುತ್ತವೆ.
ಆದ್ದರಿಂದ ಔಷಧಾಲಯಗಳಲ್ಲಿ ಮಾರಾಟವಾಗುವ ವಿರೇಚಕಗಳನ್ನು ಬಳಸುವ ಬದಲು ನೈಸರ್ಗಿಕ ವಿಧಾನಗಳ ಮೂಲಕ ಮಲಬದ್ಧತೆಯನ್ನು ಸರಿಪಡಿಸಲು ಪ್ರಯತ್ನಿಸಬೇಕು. ಹಾಗಾಗಿ ಮಲಬದ್ಧತೆಗೆ ಉತ್ತಮ ಪರಿಹಾರ ನೀಡುವ, ಕರುಳಿನ ಚಲನೆಯನ್ನು ಸುಧಾರಿಸುವ ಫೈಬರ್ ಭರಿತ ಹಣ್ಣುಗಳು, ಬೀಜಗಳು, ನಟ್ಸ್ ಮತ್ತು ಮಸಾಲೆಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಪೌಷ್ಟಿಕತಜ್ಞೆ ಖುಷಿ ಛಾಬ್ರಾ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಮಲಬದ್ಧತೆ ಸಮಸ್ಯೆಗೆ ಅದ್ಭುತವಾದ ನೈಸರ್ಗಿಕ ಪರಿಹಾರವನ್ನು ಹಂಚಿಕೊಂಡಿದ್ದಾರೆ . ನೀವು ಮಾಡಬೇಕಾದದ್ದು ಇಷ್ಟೇ..
"ಮೊದಲಿಗೆ ಕಿವಿ ಹಣ್ಣನ್ನು ಕಟ್ ಮಾಡಿ, ಇದರ ಮೇಲೆ ನೀರಿನಲ್ಲಿ ನೆನೆಸಿಟ್ಟ ಚಿಯಾ ಬೀಜ ಒಂದು ಚಮಚ ಮತ್ತು 1 ಚಿಟಿಕೆ ಚಕ್ಕೆ ಅಥವಾ ದಾಲ್ಚಿನ್ನಿ ಪುಡಿಯನ್ನು ಸೇರಿಸಿ. ಇದನ್ನು ಸತತ 3 ದಿನಗಳವರೆಗೆ ಪ್ರತಿದಿನ ಸೇವಿಸಿದರೆ ನೀವು ಮಲಬದ್ಧತೆಗೆ ವಿದಾಯ ಹೇಳಬಹುದು" ಎಂದು ಹೇಳಿದ್ದಾರೆ.
ಇದು ಹೇಗೆ ಕೆಲಸ ಮಾಡುತ್ತದೆ?
ಕಿವಿ ಹಣ್ಣು
ಖುಷಿ ಛಾಬ್ರಾ ಅವರ ಪ್ರಕಾರ, "ಕಿವಿ ಹಣ್ಣಿನಲ್ಲಿ ಆಕ್ಟಿನಿಡಿನ್ ಎಂಬ ನೈಸರ್ಗಿಕ ಕಿಣ್ವ ಸಮೃದ್ಧವಾಗಿದೆ. ಇದು ಪ್ರೋಟೀನ್ ಅನ್ನು ಒಡೆಯಲು ಸಹಾಯ ಮಾಡುತ್ತದೆ ಮತ್ತು ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ಅಲ್ಲದೆ, ಈ ಹಣ್ಣಿನಲ್ಲಿರುವ (ಸಿಪ್ಪೆ ಸಮೇತ) ಕರಗದ ನಾರು ಮಲದ ಪ್ರಮಾಣವನ್ನು ಹೆಚ್ಚಿಸುತ್ತದೆ. ಮಲವನ್ನು ಮೃದುಗೊಳಿಸುತ್ತದೆ ಮತ್ತು ಸುಲಭವಾಗಿ ವಿಸರ್ಜನೆ ಮಾಡುತ್ತದೆ. ಹೀಗೆ ಇದು ಮಲಬದ್ಧತೆಯನ್ನು ಗುಣಪಡಿಸುತ್ತದೆ."
ಚಿಯಾ ಬೀಜ
ಇನ್ನು ಚಿಯಾ ಬೀಜಗಳ ವಿಚಾರಕ್ಕೆ ಬರುವುದಾದರೆ ಕರುಳಿನ ಆರೋಗ್ಯವನ್ನು ಸುಧಾರಿಸಲು ಉತ್ತಮವಾಗಿವೆ. ಏಕೆಂದರೆ ಇದು ಒಳಗೊಂಡಿರುವ ಫೈಬರ್ ಕರುಳಿನ ಸೂಕ್ಷ್ಮಜೀವಿಗಳ ಚಟುವಟಿಕೆಯನ್ನು ಸುಧಾರಿಸಲು ಮತ್ತು ಕರುಳಿನ ಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿದಾಗ, ಅವು ತಮ್ಮ ತೂಕಕ್ಕಿಂತ 10 ಪಟ್ಟು ಹೆಚ್ಚು ನೀರಿನಲ್ಲಿ ಹೀರಿಕೊಳ್ಳುತ್ತವೆ, ಕರುಳನ್ನು ನಯಗೊಳಿಸುವ ಮತ್ತು ಮಲ ವಿಸರ್ಜನೆಯನ್ನು ಸುಲಭಗೊಳಿಸುವ ಜೆಲ್ ತರಹದ ರಚನೆಯನ್ನು ರೂಪಿಸುತ್ತವೆ. ಅವು ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಪ್ರಿಬಯಾಟಿಕ್ ಫೈಬರ್‌ಗಳಲ್ಲಿ ಸಮೃದ್ಧವಾಗಿವೆ. ಅಷ್ಟೇ ಅಲ್ಲ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ಸುಧಾರಿಸಲು ಸಹಾಯ ಮಾಡುತ್ತವೆ ಎಂದು ಪೌಷ್ಟಿಕತಜ್ಞರು ಹೇಳಿದ್ದಾರೆ.
ಚಕ್ಕೆ ಅಥವಾ ದಾಲ್ಚಿನ್ನಿ
ಹಾಗೆಯೇ ಚಕ್ಕೆ ಅಥವಾ ದಾಲ್ಚಿನ್ನಿಯಲ್ಲಿ ಉರಿಯೂತ ನಿವಾರಕ ಗುಣಗಳು ಸಮೃದ್ಧವಾಗಿವೆ. ಇವು ಜೀರ್ಣಕ್ರಿಯೆಯನ್ನು ಹೆಚ್ಚಿಸುವುದಲ್ಲದೆ, ಕರುಳಿನ ಚಲನಶೀಲತೆಯನ್ನ ಸಹ ಬೆಂಬಲಿಸುತ್ತವೆ. ಇದು ಉಬ್ಬುವುದು ಮತ್ತು ಅಸ್ವಸ್ಥತೆಯಂತಹ ಸಾಮಾನ್ಯ ಜೀರ್ಣಕಾರಿ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ಈ ಮೂರು ಪದಾರ್ಥಗಳನ್ನು ಒಟ್ಟಿಗೆ ತೆಗೆದುಕೊಂಡಾಗ ಅವು ಕೊಲೊನ್ ಅನ್ನು ಹೈಡ್ರೀಕರಿಸುತ್ತವೆ ಮತ್ತು ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುತ್ತವೆ. ಜೊತೆಗೆ ಯಾವುದೇ ವಿರೇಚಕಗಳನ್ನು ತೆಗೆದುಕೊಳ್ಳದೆ ನೈಸರ್ಗಿಕವಾಗಿ ಜೀರ್ಣಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ನೀರು ಕುಡಿಯೋದು ಮರಿಬೇಡಿ
ನಿರ್ದಿಷ್ಟವಾಗಿ ಹೇಳುವುದಾದರೆ ಈ ಮಿಶ್ರಣವನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸತತ 3 ದಿನಗಳವರೆಗೆ ಸೇವಿಸಬೇಕು. ಹೀಗೆ ಮಾಡುವುದರಿಂದ, ನೀವು ಉತ್ತಮ ಬದಲಾವಣೆಯನ್ನು ಕಾಣಬಹುದು. ಆದರೆ ಈ ಪ್ರಯತ್ನವನ್ನು ಕೈಗೊಳ್ಳುವಾಗ, ನಿಮ್ಮ ದೇಹವನ್ನು ಸಾಕಷ್ಟು ಹೈಡ್ರೀಕರಿಸಬೇಕು. ಅಂದರೆ ನೀವು ದಿನವಿಡೀ ಸಾಕಷ್ಟು ನೀರು ಕುಡಿಯಬೇಕು ಎಂದು ಪೌಷ್ಟಿಕತಜ್ಞರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ
