ರೋಸ್ ವಾಟರ್ ಕುಡಿಯೋದ್ರಿಂದ ಏನೇನು ಪ್ರಯೋಜನಗಳಿವೆ ನೋಡಿ
ಚರ್ಮ (Skin)ವನ್ನು ಸ್ವಚ್ಛ ಮತ್ತು ಸುಂದರವಾಗಿಸಲು ಜನರು ರೋಸ್ ವಾಟರ್ (Rose Water)ನ್ನು ಬಳಸುತ್ತಾರೆ. ರೋಸ್ ವಾಟರ್ ಹಚ್ಚುವುದರಿಂದ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆ (Problem)ಗಳನ್ನು ನಿವಾರಣೆಯಾಗುತ್ತವೆ. ಗುಲಾಬಿ ಹೂವಿನಲ್ಲಿ ಅನೇಕ ಪೋಷಕಾಂಶಗಳಿವೆ. ಅದು ಚರ್ಮವನ್ನು ಸ್ವಚ್ಛವಾಗಿಡುವುದರ ಜೊತೆಗೆ, ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಗುಲಾಬಿಗಳು(Rose) ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ, ಆಂಟಿಮೈಕ್ರೊಬಿಯಲ್ ಗಳು ಮತ್ತು ವಿಟಮಿನ್ ಸಿಯಂತಹ ಅಂಶಗಳನ್ನು ಹೊಂದಿರುತ್ತವೆ. ಇದು ಎಲ್ಲಾ ರೀತಿಯಲ್ಲೂ ಆರೋಗ್ಯಕರವಾಗಿರಿಸುತ್ತದೆ. ನೀವು ಚರ್ಮದ ಮೇಲೆ ರೋಸ್ ವಾಟರ್ ಅನ್ನು ಬಳಸಿರಬಹುದು, ಆದರೆ ಇಂದು ನಾವು ರೋಸ್ ವಾಟರ್ ಕುಡಿಯುವ ಪ್ರಯೋಜನಗಳನ್ನು ಹೇಳುತ್ತಿದ್ದೇವೆ.
ಹೌದು, ನೀವು ಕೇಳಿದ್ದು ಸರಿಯಾಗಿಯೇ ಇದೆ. ನೀವು ರೋಸ್ ವಾಟರ್(Rose Water) ಸೇವಿಸಬಹುದು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಯಕೃತ್ತನ್ನು ಆರೋಗ್ಯಕರವಾಗಿಸುತ್ತದೆ. ರೋಸ್ ವಾಟರ್ ಅನ್ನು ಹೇಗೆ ತಯಾರಿಸುವುದು ಮತ್ತು ರೋಸ್ ವಾಟರ್ ಕುಡಿಯುವುದರಿಂದ ಆಗುವ ಪ್ರಯೋಜನಗಳು ಯಾವುವು ಎಂದು ತಿಳಿಯೋಣ.
ಮನೆಯಲ್ಲಿ ರೋಸ್ ವಾಟರ್ ತಯಾರಿಸುವುದು ಹೇಗೆ?
8-10 ಗುಲಾಬಿ ದಳಗಳನ್ನು ತೆಗೆದುಕೊಳ್ಳಿ ಮತ್ತು ಕುದಿಸಿದ ನೀರನ್ನು ತೆಗೆದುಕೊಳ್ಳಿ. ಗುಲಾಬಿ ದಳಗಳನ್ನು(Rose petals) ಚೆನ್ನಾಗಿ ಸ್ವಚ್ಛಗೊಳಿಸಿ, ಇದರಿಂದ ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ. ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಕುದಿಸಿ ಅದರಲ್ಲಿ ಗುಲಾಬಿ ದಳಗಳನ್ನು ಹಾಕಿ. ಮಡಕೆಯನ್ನು ಮುಚ್ಚಿ ಮತ್ತು ಗ್ಯಾಸ್ ನಲ್ಲಿ ಸಣ್ಣ ಉರಿಯಲ್ಲಿ ಇಡಿ.
ಸ್ವಲ್ಪ ಸಮಯದ ನಂತರ, ಗುಲಾಬಿ ದಳಗಳ ಬಣ್ಣವು ನೀರಿನ ಬಣ್ಣಕ್ಕೆ ತಿರುಗಲು ಪ್ರಾರಂಭಿಸುವುದನ್ನು ನೀವು ನೋಡುತ್ತೀರಿ. ಅಂದರೆ ಗುಲಾಬಿ ದಳ ಬಣ್ಣ ಬಿಡುತ್ತಿದೆ ಎಂದು ಅರ್ಥ. ಗ್ಯಾಸ್ ಆಫ್ ಮಾಡಿ ಮತ್ತು ನೀರನ್ನು ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಡಿ. ನೀರನ್ನು(Water) ಬಸಿದು ಕುಡಿಯಿರಿ. ಮನೆಯಲ್ಲಿ ತಯಾರಿಸಿದ ರೋಸ್ ವಾಟರ್ ರೆಡಿ.
ರೋಸ್ ವಾಟರ್‌ನ ಪ್ರಯೋಜನಗಳು
1. ಜೀರ್ಣಕ್ರಿಯೆ(Digestion) ಸುಧಾರಣೆ: ರೋಸ್ ವಾಟರ್ ಅಥವಾ ಗುಲಾಬಿ ದಳಗಳು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತವೆ. ನೀವು ರೋಸ್ ವಾಟರ್ ನಿಂದ ಮಾಡಿದ ಗಿಡಮೂಲಿಕೆ ಚಹಾವನ್ನು ಸೇವಿಸಿದರೆ, ಅದು ಹೊಟ್ಟೆಯ ಸಮಸ್ಯೆಗಳನ್ನು ತೆಗೆದುಹಾಕುವುದು ಮಾತ್ರವಲ್ಲದೆ ಜೀರ್ಣಕ್ರಿಯೆಯನ್ನು ಉತ್ತಮವಾಗಿರಿಸುತ್ತದೆ. ಮೊಸರಿನೊಂದಿಗೆ ಬೆರೆಸಿದ ಗುಲಾಬಿ ದಳಗಳನ್ನು ಸಹ ನೀವು ತಿನ್ನಬಹುದು.
2. ಗಂಟಲು(Throat) ಸಮಸ್ಯೆ ನಿವಾರಣೆಯಾಗುತ್ತದೆ: ಕೆಲವರಿಗೆ ಗಂಟಲು ಕೆರೆತ ಅಥವಾ ಕಿರಿಕಿರಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದು ವೈರಲ್ ಅಥವಾ ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ರೋಸ್ ವಾಟರ್ ಅನ್ನು ಸೇವಿಸಬೇಕು. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ, ಇದು ಗಂಟಲು ನೋವನ್ನು ನಿವಾರಿಸುತ್ತದೆ.
3. ಒತ್ತಡ(Stress) ದೂರ ಮಾಡುತ್ತದೆ: ಹೆಚ್ಚಿನ ಒತ್ತಡವಿದ್ದರೆ, ರೋಸ್ ವಾಟರ್ ಅನ್ನು ಸೇವಿಸಿ. ಇದು ಒತ್ತಡದ ಸಮಸ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಹಾಕುತ್ತದೆ. ರೋಸ್ ವಾಟರ್ ಒಳಗೆ ಫಿನಾಲಿಕ್ ಗಳು ಕಂಡುಬರುತ್ತವೆ, ಇದು ಖಿನ್ನತೆಯಿಂದ ಉಂಟಾಗುವ ಒತ್ತಡವನ್ನು ನಿವಾರಿಸುತ್ತದೆ. ಆದ್ದರಿಂದ, ಒತ್ತಡದಲ್ಲಿ ವಾಸಿಸುವ ವ್ಯಕ್ತಿಯು ರೋಸ್ ವಾಟರ್ ಅನ್ನು ಸೇವಿಸಬೇಕು.
4. ಯಕೃತ್ತನ್ನು(Liver) ಸ್ವಚ್ಛಗೊಳಿಸುತ್ತದೆ: ರೋಸ್ ವಾಟರ್ ಕುಡಿಯುವುದರಿಂದ ಪಿತ್ತಕೋಶ ಮತ್ತು ಯಕೃತ್ತು ಎರಡನ್ನೂ ಸ್ವಚ್ಛಗೊಳಿಸುತ್ತದೆ. ರೋಸ್ ವಾಟರ್ ಪಿತ್ತರಸ ಸ್ರವಿಸುವಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಶ್ವಾಸನಾಳದ ಸೋಂಕಿನಲ್ಲಿ ರೋಸ್ ವಾಟರ್ ಅಥವಾ ಗುಲಾಬಿ ಚಹಾವನ್ನು ಕುಡಿಯುವುದು ಉಪಯುಕ್ತವಾಗಿದೆ