Asianet Suvarna News Asianet Suvarna News

Toxic Positivity: ಖುಷಿಯಾಗಿರಬೇಕೆಂಬುದೇ ಒತ್ತಡವಾಗಿ ನಿಮ್ಮನ್ನ ಕಾಡ್ತಾ ಇದ್ಯಾ?

ಟಾಕ್ಸಿಕ್‌ ಸೈಕಾಲಜಿ ಎನ್ನುವುದೊಂದು ಹೊಸ ಮಾತು ಚಾಲ್ತಿಗೆ ಬಂದಿದೆ. ಸದಾಕಾಲ ಖುಷಿಯಾರಬೇಕು ಎನ್ನುವುದೇ ಒತ್ತಡ ಸೃಷ್ಟಿಸುವ ವಿಚಿತ್ರ ಸಂಗತಿ ಇದು. ಖುಷಿಯಾಗಿರಬೇಕೆಂದು ಒತ್ತಡಕ್ಕೀಡಾಗುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.
 

Are you in stress to be always happy
Author
Bangalore, First Published Feb 28, 2022, 5:58 PM IST

ಪರಿಸ್ಥಿತಿ ಎಂಥದ್ದೇ ಇರಲಿ, ಎಂದಿಗೂ ಧೈರ್ಯಗೆಡಬಾರದು. ಮುಖದಲ್ಲೊಂದು ಮಂದಹಾಸ (Smile) ಸದಾ ಇರಬೇಕು. ಮನದಲ್ಲೂ ಅಷ್ಟೆ, ಖುಷಿ(Happiness)ಯಿರಬೇಕು…ʼ ಇದು ನಾವು ನೀವೆಲ್ಲರೂ ದಿನವೂ ಕೇಳುವ ನುಡಿಗಳು. ಯಾರಾದರೂ ಬೇಸರಲ್ಲಿರುವಾಗ ನಾವೂ ಅವರಿಗೆ ಇದನ್ನೇ ಹೇಳುತ್ತೇವೆ. ನಾವೂ ಇನ್ನೊಬ್ಬರಿಂದ ಇದೇ ಸಲಹೆ (Suggestion) ಪಡೆಯುತ್ತೇವೆ. ಕಳೆದ ಎರಡು ವರ್ಷಗಳ ಇತ್ತೀಚೆಗಂತೂ ಇಂಥದ್ದೊಂದು ಪಾಸಿಟಿವ್‌ (Positive) ಮನಸ್ಥಿತಿ (Mentality) ರೂಢಿಸಿಕೊಳ್ಳಬೇಕೆಂದು ಎಲ್ಲರೂ ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ. ಕೊರೋನಾ ಕಾಲದಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ಧೃತಿಗೆಡದಂತೆ, ಧನಾತ್ಮಕ ಮನಸ್ಥಿತಿಯನ್ನು ಕಳೆದುಕೊಳ್ಳದಂತೆ ಯತ್ನಿಸಿದ್ದೇವೆ.
ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ 'ಟಾಕ್ಸಿಕ್‌ ಪಾಸಿಟಿವಿಟಿʼ(Toxic Positivity) ಎನ್ನುವ ವಿಚಾರ ಹೆಚ್ಚು ಚಾಲ್ತಿಯಲ್ಲಿದೆ. ಅದು ಕಳೆದ ಎರಡು ವರ್ಷಗಳಿಂದ ನಾವು ಕಷ್ಟಪಟ್ಟು ಅಭ್ಯಾಸ ಮಾಡಿಕೊಳ್ಳುತ್ತಿರುವ ಮನಸ್ಥಿತಿಗೆ ಸಂಬಂಧಿಸಿದೆ.

ಕೊರೋನಾ (Corona) ಸಮಯದಲ್ಲಿ ಜೀವನಶೈಲಿಯಲ್ಲಿ ತಂದುಕೊಂಡ ಬದಲಾವಣೆ ಸಾಕಷ್ಟು ಜನರ ಬದುಕನ್ನು ಬದಲಿಸಿದೆ. ಆರೋಗ್ಯದ ವಿಚಾರಕ್ಕೆ ಸಂಬಂಧಿಸಿಯಾಗಲಿ, ಆಹಾರ-ವಿಹಾರಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ನಮ್ಮ ದೈನಂದಿನ ಬದುಕಿನಲ್ಲಿ ಸಾಕಷ್ಟು ಬದಲಾವಣೆ ಬಂದಿದೆ. ಆದರೆ, ನಿರಂತರವಾಗಿ ಖುಷಿಯಾಗಿಯೇ ಇರುವುದು ಸಾಧ್ಯವೇ? ಅಂಥದ್ದೊಂದು ಒತ್ತಡವನ್ನು ಸಹಿಸಿಕೊಳ್ಳುವುದು ಸುಲಭವೇ? ಇಲ್ಲವೇ ಇಲ್ಲ. ಮನುಷ್ಯನ ಭಾವನೆಗಳು ನವರಸದಿಂದ ಕೂಡಿರುತ್ತವೆ. ಅಲ್ಲಿ, ಭಯ (Fear), ದುಃಖ, ನೋವು (Pain), ಮರುಕ, ಕನಿಕರ, ಹತಾಶೆ (Helplessness) ಎಲ್ಲದಕ್ಕೂ ಜಾಗವಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಸದಾಕಾಲ ಖುಷಿಯಾಗಿರಬೇಕೆಂದು ಯತ್ನಿಸುವುದೂ ಸಹ ಒಂದು ರೀತಿಯ ಒತ್ತಡವನ್ನು ಸೃಷ್ಟಿಸಬಲ್ಲದು.

ನೆದರ್‌ ಲ್ಯಾಂಡ್ಸ್‌ (Netherlands)ನ ಟಿಲ್‌ ಬರ್ಗ್‌ (Tilburg) ವಿಶ್ವವಿದ್ಯಾಲಯದ ನೂತನ ಅಧ್ಯಯನವೊಂದು ಇದನ್ನೇ ಹೇಳುತ್ತಿದೆ. ವಿಶ್ವದಾದ್ಯಂತ 40 ದೇಶಗಳ ಸುಮಾರು 7 ಸಾವಿರಕ್ಕೂ ಜನರ ಮೇಲೆ ನಡೆದ ಸಮೀಕ್ಷಾ ಅಧ್ಯಯನ ಇದಾಗಿದ್ದು, ಟಾಕ್ಸಿಕ್‌ ಪಾಸಿಟಿವಿಟಿ ಎನ್ನುವ ನೂತನ ದೃಷ್ಟಿಕೋನವನ್ನು ಹುಟ್ಟುಹಾಕಿದೆ. 
ಅಧ್ಯಯನದ ಪ್ರಕಾರ, ನಿರಂತರವಾಗಿ ಖುಷಿಯಾಗಿರಲು ಯತ್ನಿಸುವುದರಿಂದ ನಮ್ಮ ಮೇಲೆ ಭಾರೀ ಒತ್ತಡ ನಿರ್ಮಾಣವಾಗುತ್ತದೆ. ನಿಜವಾಗಿಯೂ ಖುಷಿಯಾಗಿರುವುದಕ್ಕೂ, ಖುಷಿಯಾಗಿರಲು ಯತ್ನಿಸುವುದಕ್ಕೂ ಭಾರೀ ಅಂತರವಿದೆ. ಖುಷಿಯಾಗಿರಲು ಯತ್ನಿಸುವುದರಿಂದ ಕ್ರಮೇಣ ಮನುಷ್ಯನ ಮನಸ್ಸು ತೀವ್ರವಾದ ಸುಸ್ತು (Fatigue), ಆತಂಕ (Anxiety) ಹಾಗೂ ನೋವನ್ನು ಅನುಭವಿಸುತ್ತದೆ.

Tender Coconut Jelly: ಯಮ್ಮೀ ಯಮ್ಮೀ ಎಳನೀರು ಜೆಲ್ಲಿ.. ಎಲ್ಲಪ್ಪಾ ಎಲ್ಲಿ? ಜೇಬು ತುಂಬಿಸಿದ ಜೆಲ್ಲಿ ಬಿಸ್ನೆಸ್

ಪರಿಸ್ಥಿತಿಯನ್ನು (Situation) ಎದುರಿಸಬೇಕು 
ಅಧ್ಯಯನವು ಇದಕ್ಕೆ ಪರಿಹಾರವನ್ನೇನೂ ಸೂಚಿಸಿಲ್ಲ. ಆದರೆ, ಮಾನಸಿಕ ರೋಗಗಳ ತಜ್ಞರ ಪ್ರಕಾರ, ಪರಿಸ್ಥಿತಿಯನ್ನು ಬಂದಂತೆ ಸ್ವೀಕರಿಸುವುದು ಹೆಚ್ಚು ಸೂಕ್ತ. ಹಾಗೂ ಯಾವುದೇ ಪರಿಸ್ಥಿತಿಯಲ್ಲೂ ಧೃತಿಗೆಡದಿರುವುದು ಅತ್ಯಂತ ಅಗತ್ಯ. ಕೆಲವೊಮ್ಮೆ ನೋವು, ಆತಂಕ, ಹತಾಶೆ ಸಹಜ. ಆದರೆ, ಅದನ್ನೇ ದೀರ್ಘಕಾಲ ಅನುಭವಿಸಬಾರದು. ಸದಾಕಾಲ ಖುಷಿಯಾಗಿರಬೇಕು ಎಂದಾಗ ಸಾಮಾನ್ಯವಾಗಿ ಎಲ್ಲರೂ ಏನು ಮಾಡುತ್ತಾರೆಂದರೆ, ವಾಸ್ತವ ಪರಿಸ್ಥಿತಿಯನ್ನು ಎದುರಿಸಲು ಹಿಂದೇಟು ಹಾಕುತ್ತಾರೆ. ಅದರಿಂದ ವಿಮುಖವಾಗಲು ನೋಡುತ್ತಾರೆ. ಜತೆಗೆ, ಸಂತೋಷಕ್ಕಾಗಿ ಬೇರೆ ಬೇರೆ ರೀತಿಯ ಮಾರ್ಗಗಳ ಮೊರೆ ಹೋಗುತ್ತಾರೆ. ಆದರೆ, ಇದರಿಂದ ಮಾನಸಿಕ ತಳಮಳ ಇನ್ನಷ್ಟು ಹೆಚ್ಚಾಗಬಲ್ಲದು. ಪರಿಸ್ಥಿತಿಯಿಂದ ಹಿಮ್ಮೆಟ್ಟುವ ಬದಲು, ಆ ಕ್ಷಣಕ್ಕೆ ನೋವೋ, ಕಷ್ಟವೋ ಅದನ್ನು ಎದುರಿಸಿಬಿಡಬೇಕು ಎನ್ನುವುದು ಮನೋರೋಗ ತಜ್ಞರ ಸಲಹೆ. 

Vishnu Solanki: ಮಗಳ ಸಾವು, ಅಪ್ಪನ ಸಾವುಗಳ ನಡುವೆಯೂ ಶತಕ ಸಿಡಿಸಿದ ಕ್ರಿಕೆಟ್‌ ಆಟಗಾರ!

ಕೊರೋನಾ ಕಾಲದಲ್ಲಿ ಬಹಳಷ್ಟು ಜನರು ಒತ್ತಡದಿಂದ ಹೈರಾಣಾಗಿದ್ದರು. ಹೇಗೆ ಸಮಾಧಾನದಿಂದ ಇರಬೇಕು ಎನ್ನುವುದೇ ಅವರಿಗೆ ತಿಳಿದಿರಲಿಲ್ಲ. ಕುಡಿತ, ಧೂಮಪಾನದ (Smoking) ಚಟವೂ ಹೆಚ್ಚಾಗಿತ್ತು. ಮನೆಯಲ್ಲೇ ಕುಳಿತು ಸಿನಿಮಾ ನೋಡಿದವರೂ ಕಡಿಮೆ ಇರಲಿಲ್ಲ. ಇವೆಲ್ಲವೂ ಅವರಲ್ಲಿ ಇನ್ನೊಂದು ರೀತಿಯ ಒತ್ತಡವನ್ನೇ ಸೃಷ್ಟಿಸಿತ್ತು ಎನ್ನಲಾಗಿದೆ. ಇನ್ನು, ನೆಮ್ಮದಿಗಾಗಿ ವ್ಯಾಯಾಮ (Exercise), ಧ್ಯಾನ, ಪ್ರಾಣಾಯಾಮಗಳ ಮೊರೆ ಹೋದವರೂ ಹೆಚ್ಚಿದ್ದರು. ಆದರೆ, ದೈನಂದಿನ ಕಾರ್ಯಭಾರದ ನಡುವೆ ಅವುಗಳನ್ನು ಸರಿಯಾಗಿ ನಿಭಾಯಿಸಲಾಗದೆ ಒತ್ತಡಕ್ಕೀಡಾಗಿದ್ದರು.   
 

Follow Us:
Download App:
  • android
  • ios