Health Tips: ಹೆಚ್ಚು ತಿಂದರೆ ಊಟ ಸರಿ ಜೀರ್ಣ ಆಗೋಲ್ವಾ? ಹೀಗ್ಮಾಡಿ
ದಿನ ಬೆಳಗಾದರೆ ಸಮಾರಂಭಗಳು. ಶುಭ ಸಮಾರಂಭಗಳು ಎಂದರೆ ಸಂತೋಷದ ವಿಷಯವೇನೋ ನಿಜ. ಆದರೆ, ಅಲ್ಲಿನ ವಿಧವಿಧವಾದ ಊಟವನ್ನು ತಿಂದು ಹೊಟ್ಟೆ ಕೆಡದಂತೆ ಜೀರ್ಣಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ನೀವು ಮೊದಲೇ ಕಟ್ಟುನಿಟ್ಟಿನ ಡಯಟ್ ಪಾಲಿಸುತ್ತಿರುತ್ತೀರಿ, ಅದರ ಮಧ್ಯದಲ್ಲಿ ಇಂಥ ಭೋಜನಗಳನ್ನು ಸೇವಿಸಿದರೆ!? ಚಿಂತಿಸಬೇಡಿ, ಎಲ್ಲದಕ್ಕೂ ಪರಿಹಾರವಿದೆ.
ಮದುವೆ ಮನೆ ಅಥವಾ ಯಾವುದೇ ಸಮಾರಂಭ (Function) ಅಂದರೆ ಅಲ್ಲಿಗೆ ನಿಮ್ಮ ಗೆಳೆಯರು ಸಂಬಂಧಿಕರು ಪರಿಚಯದವರು ಹೀಗೆ ಹಲವಾರು ಜನ ಸೇರಿರುತ್ತಾರೆ. ಅವರೊಂದಿಗೆ ಮಾತನಾಡುತ್ತಾ ಊಟ ಮಾಡುವುದು ತಿಳಿಯುವುದಿಲ್ಲ. ನಿಮ್ಮ ಸಮಯವನ್ನು (Time) ಸಂತೋಷದಿಂದ ಕಳೆಯುವುದು ಒಂದು ಕಡೆಯಾದರೆ, ಇನ್ನೊಂದು ಕಡೆಯಲ್ಲಿ ಪ್ರತಿದಿನ ಹೀಗೆ ಸಮಾರಂಭ ವಿಶೇಷ ಭೋಜನವನ್ನು (Lunch) ಸೇವಿಸುತ್ತಾ ಹೋದರೆ ನಿಮ್ಮ ಹೊಟ್ಟೆಯ ಗತಿಯೇನು?
ನೀವು ಫಿಟ್ನೆಸ್ (Fitness) ಪ್ರಿಯರಾಗಿದ್ದರೆ ಯಾವೆಲ್ಲ ಆಹಾರ (Food) ಸೇವಿಸಬೇಕು, ಯಾವುದನ್ನು ಸೇವಿಸಬಾರದು ಎಂಬ ದೊಡ್ಡ ಲಿಸ್ಟ್ (List) ಮಾಡಿಕೊಂಡಿರ್ತೀರಿ. ಆದರೆ ಸಮಾರಂಭದ ಊಟ ಇದಕ್ಕಿಂತ ಸಂಪೂರ್ಣ ವಿಭಿನ್ನವಾಗಿರುತ್ತದೆ. ಹಾಗಂದ ಮಾತ್ರಕ್ಕೆ ಅದೇ ಯೋಚನೆಯಲ್ಲಿ ಬೇಸರದಿಂದ ಊಟ ಮಾಡಿದರೆ ಊಟಕ್ಕೆ ಅವಮಾನ ಮಾಡಿದಂತೆ. ಹಾಗಾಗಿ ಆಹಾರ ಸೇವಿಸುವಾಗ ಬೇರೆ ಯಾವುದೇ ಯೋಚನೆಯಿಲ್ಲದೆ ತೃಪ್ತಿಯಿಂದ (Satisfied) ಊಟ ಮಾಡಿ. ಹಾಗೂ ಈ ಕೆಲವು ಸಲಹೆಗಳನ್ನು ಪಾಲಿಸುವುದರ ಮೂಲಕ ನಿಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯ ಕಡೆ ಕೂಡ ಗಮನ ಹರಿಸಿ..
- ನಿಮ್ಮ ದೇಹವನ್ನು ಹೈಡ್ರೇಟೆಡ್ (Hydrated) ಆಗಿ ಇಟ್ಟುಕೊಳ್ಳಲು ಪ್ರಯತ್ನಿಸಿ. ತಜ್ಞರು ಹೇಳುವ ಪ್ರಕಾರ, ಹೆಚ್ಚು ನೀರು (Water) ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತದೆ. ಸಾಧ್ಯವಾದರೆ ಬಿಸಿನೀರು ಇಲ್ಲವೇ ಬೆಚ್ಚಗಿನ (Warm) ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ಗ್ಯಾಸ್ಟಿಕ್ ನಂತಹ ಸಮಸ್ಯೆಯಿಂದ ಕೂಡ ನಿಮ್ಮನ್ನು ದೂರ ಇರಿಸುತ್ತದೆ.
Thyroid ಸಮಸ್ಯೆ ಇದೆಯಾ? ತೆಂಗಿನಕಾಯಿ ಬಳಸಿ!
- ಶುಂಠಿ (Ginger) ನೀರನ್ನು ದಿನದಲ್ಲಿ ಹೆಚ್ಚು ಬಾರಿ ಸೇವನೆ ಮಾಡುವುದರಿಂದ ಕೂಡ ಜೀರ್ಣಕ್ರಿಯೆ ಸುಲಲಿತವಾಗಿ ಇರುತ್ತದೆ.
- ನೀರಿಗೆ ನಿಂಬೆಹುಳಿ (Lemon) ಹಾಗು ಉಪ್ಪು ಹಾಕಿಕೊಂಡು ಕುಡಿಯುವುದರಿಂದ ಹೊಟ್ಟೆಯಲ್ಲಿನ ಕಿರಿಕಿರಿ ಅನುಭವ ಸರಿ ಹೋಗುತ್ತದೆ.
- ಇನ್ನು ನೀವು ಕಟ್ಟುನಿಟ್ಟಿನ ಡಯಟ್ (Diet) ಪಾಲಿಸುತ್ತಿರುವವರು ಎಂದಾದರೆ ಊಟವನ್ನು ಸೇವಿಸುವ ಮೊದಲು ಸಲಾಡ್ ನಂತಹ ಪದಾರ್ಥಗಳನ್ನು ಸೇವನೆ ಮಾಡಿ. ಇದು ನಿಮ್ಮ ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ. ಹಾಗೂ ಅಗತ್ಯಕ್ಕಿಂತ ಹೆಚ್ಚಿನ ಊಟ ಸೇವನೆ ಮಾಡದಂತೆ ನೋಡಿಕೊಳ್ಳುತ್ತದೆ.
- ಮುಖ್ಯವಾಗಿ ನೀವು ಆಹಾರ ಸೇವನೆ ಮಾಡುತ್ತಿರುವ ಸಂದರ್ಭದಲ್ಲಿ ಅಯ್ಯೋ, ಈ ಆಹಾರ ಸೇವನೆಯಿಂದ ಆರೋಗ್ಯ ಹಾಳಾಗಬಹುದು ಎಂಬ ಯೋಚನೆ (Guilty) ತಲೆಯಿಂದ ಹೊರಹಾಕಿ. ತಿನ್ನುವ ಆಹಾರ ಸಂತೋಷದಿಂದ ತಿನ್ನಿ..
- ಹೀಗೆ ಹೆಚ್ಚು ಕ್ಯಾಲೊರಿಯುಕ್ತ ಆಹಾರ ಸೇವನೆಯಿಂದ ದೇಹದ ಫಿಟ್ನೆಸ್ ನಲ್ಲಿ ಸ್ವಲ್ಪ ಏರುಪೇರುಗಳು (Fluctuations) ಉಂಟಾಗಬಹುದು. ಅದಕ್ಕಾಗಿ, ನಿಮ್ಮ ದೈನಂದಿನ ದಿನಚರಿಯಲ್ಲಿ ಹೆಚ್ಚಿನ ವ್ಯಾಯಾಮವನ್ನು ಸೇರಿಸಿಕೊಳ್ಳಿ.
Freezerನಲ್ಲಿ ಆಹಾರ ಇಡೋ ಮುನ್ನ ಈ ಆರ್ಟಿಕಲ್ ಓದ್ಬಿಡಿ
- ಊಟದ ತಟ್ಟೆಯನ್ನು ಆರಿಸಿಕೊಳ್ಳುವ ಅವಕಾಶ ನಿಮಗಿದ್ದರೆ, ಆಗ ಸ್ವಲ್ಪ (Small) ಸಣ್ಣ ತಟ್ಟೆಯನ್ನೇ ಆರಿಸಿಕೊಳ್ಳಿ. ಹಾಗೂ ಪದಾರ್ಥಗಳನ್ನು ಬಡಿಸಿಕೊಳ್ಳುವಾಗ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬಡಿಸಿಕೊಳ್ಳಿ, ತಟ್ಟೆ ಸಣ್ಣದಿದ್ದರೆ ಆಗ, ನೀವು ತಟ್ಟೆ (Plate) ತುಂಬಿರುವುದನ್ನು ನೋಡಿ ಇನ್ನು ಹೆಚ್ಚಿಗೆ ಊಟ ಮಾಡುವುದನ್ನು ತಡೆ ಹಿಡಿಯಬಹುದು.
- ಬೇಗ ಬೇಗ ಊಟ ಮಾಡುವ ಬದಲಾಗಿ ನಿಧಾನವಾಗಿ (Slow) ಜಗಿದು ಆಹಾರ ಸೇವನೆ ಮಾಡುವುದರಿಂದ ಹೆಚ್ಚು ಸಮಯ ಬೇಕಾಗುತ್ತದೆ ಹಾಗೂ ಇದರಿಂದಾಗಿ ಅವಶ್ಯಕತೆಗಿಂತ ಹೆಚ್ಚು ಊಟ ಮಾಡುವ ಸಾಧ್ಯತೆ ಕಡಿಮೆ ಇರುತ್ತದೆ.
ಹೀಗೆ ಸಮಾರಂಭಗಳನ್ನಂತೂ ನಿಮ್ಮಿಂದ ತಡೆ ಹಿಡಿಯಲು ಸಾಧ್ಯವಿಲ್ಲ. ಆದರೆ, ನಿಮ್ಮ ದೇಹ ಹಾಗೂ ಆರೋಗ್ಯಕ್ಕೆ ಯಾವ ರೀತಿ ಕಾಳಜಿ ಮಾಡಬಹುದು ಎಂಬ ಆಯ್ಕೆ ನಿಮ್ಮ ಕೈಯಲ್ಲಿಯೇ ಇದೆ. ಹೆಚ್ಚು ಯೋಚನೆ ಮಾಡದೆ ನಿಮಗೆ ಲಭಿಸಿರುವ ಆಹಾರವನ್ನು ಮನಃಸ್ಪೂರ್ತಿಯಾಗಿ ಸೇವನೆ ಮಾಡಿ ಹಾಗೂ ಆ ಬಳಿಕ ಅದನ್ನು ಜೀರ್ಣಿಸಿಕೊಳ್ಳುವ (Digestion) ಕಡೆ ಗಮನಹರಿಸಿ.