MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಬೇವು, ಹಾಗಲಕಾಯಿ, ನೇರಳೆ ಹಣ್ಣಿನ ಜ್ಯೂಸ್ ಕುಡಿದ್ರೆ ಲಾಭ ಒಂದೆರಡಲ್ಲ!

ಬೇವು, ಹಾಗಲಕಾಯಿ, ನೇರಳೆ ಹಣ್ಣಿನ ಜ್ಯೂಸ್ ಕುಡಿದ್ರೆ ಲಾಭ ಒಂದೆರಡಲ್ಲ!

ಬೇವು, ಹಾಗಲಕಾಯಿ ಮತ್ತು ನೇರಳೆ ಹಣ್ಣು ಎಲ್ಲವೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇತ್ತೀಚಿನ ದಿನಗಳಲ್ಲಿ, ಬೇವು, ಹಾಗಲಕಾಯಿ ಮತ್ತು ನೇರಳೆ ಹಣ್ಣಿನ ಜ್ಯೂಸ್ ಸೇವನೆ ಸಾಕಷ್ಟು ಹೆಚ್ಚಾಗಿದೆ. ವೈದ್ಯರು ಸಹ ಇದನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಇದು ಫೈಟೋನ್ಯೂಟ್ರಿಯಂಟ್, ಡಯಟ್ ಫೈಬರ್ ಮತ್ತು ಇತರೆ ಅನೇಕ ಮಿನರಲ್ಸ್  ಮತ್ತು ವಿಟಮಿನ್ಸ್ ಮತ್ತು ಆ್ಯಂಟಿ ಆ್ಯಕ್ಸಿಡೆಂಟ್ಸ್‌ನಿಂದ ಸಮೃದ್ಧವಾಗಿವೆ. ಇವು ಸಾಕಷ್ಟು ಆರೋಗ್ಯಕರವಾಗಿಸುತ್ತೆ. ಜನರು ಮಾರ್ಕೆಟ್‌ನಲ್ಲಿ ಕಂಡು ಬರುವ ಬೇವು, ಹಾಗಲಕಾಯಿ ಮತ್ತು ನೇರಳೆ ಹಣ್ಣಿನ ಜ್ಯೂಸ್ ಸೇವಿಸುತ್ತಾರೆ. ಆದರೆ ಮನೆಯಲ್ಲೇ ಎಲ್ಲಾ ಮೂರು ಪದಾರ್ಥಗಳ ಜ್ಯೂಸ್ ಮಾಡೋ ಮೂಲಕ ನೀವು ಅದನ್ನು ಸೇವಿಸಬಹುದು. 

3 Min read
Suvarna News
Published : Aug 16 2022, 05:37 PM IST
Share this Photo Gallery
  • FB
  • TW
  • Linkdin
  • Whatsapp
113

ಬೇವು(Neem), ಹಾಗಲಕಾಯಿ ಮತ್ತು ನೇರಳೆ ಹಣ್ಣು ಎಲ್ಲವೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇತ್ತೀಚಿಗೆ ಬೇವು, ಹಾಗಲಕಾಯಿ ಮತ್ತು ನೇರಳೆ ಹಣ್ಣಿನ ಜ್ಯೂಸ್  ಸೇವನೆ ಸಾಕಷ್ಟು ಹೆಚ್ಚಾಗಿದೆ. ವೈದ್ಯರು ಸಹ ಇದನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಇದು ಫೈಟೋನ್ಯೂಟ್ರಿಯಂಟ್, ಡಯಟ್  ಫೈಬರ್ ಮತ್ತು ಇತರ ಅನೇಕ ಮಿನರಲ್ಸ್  ಮತ್ತು ವಿಟಮಿನ್ಸ್ ಮತ್ತು ಆ್ಯಂಟಿ ಆ್ಯಕ್ಸಿಡೆಂಟ್ಸ್‌ಗಳಿಂದ ಸಮೃದ್ಧವಾಗಿದೆ, ಇವು ಇದನ್ನು ಸಾಕಷ್ಟು ಆರೋಗ್ಯಕರವಾಗಿಸುತ್ತೆ . ಜನರು ಮಾರ್ಕೆಟ್‌ನಲ್ಲಿ ಕಂಡು ಬರುವ ಬೇವು, ಹಾಗಲಕಾಯಿ ಮತ್ತು ನೇರಳೆ ಹಣ್ಣಿನ ಜ್ಯೂಸ್ ಸೇವಿಸುತ್ತಾರೆ, ಆದರೆ ಮನೆಯಲ್ಲೇ ಎಲ್ಲಾ ಮೂರು ಪದಾರ್ಥಗಳ ಜ್ಯೂಸ್ ಮಾಡೋ ಮೂಲಕ ನೀವು ಅದನ್ನು ಸೇವಿಸಬಹುದು. 

213
ಈ ಜ್ಯೂಸ್ ಪ್ರಯೋಜನಗಳು

ಈ ಜ್ಯೂಸ್ ಪ್ರಯೋಜನಗಳು

ಬೇವು, ಹಾಗಲಕಾಯಿ(Bitter gourd) ಮತ್ತು ನೇರಳೆ ಹಣ್ಣಿನ ಜ್ಯೂಸ್ ಪ್ರಯೋಜನಗಳು
ಆಹಾರ ತಜ್ಞರ ಪ್ರಕಾರ, ಬೇವು, ಹಾಗಲಕಾಯಿ ಮತ್ತು ನೇರಳೆ ಹಣ್ಣಿನ ಜ್ಯೂಸ್ ಕುಡಿಯೋದು ಮಧುಮೇಹ ರೋಗಿಗಳಿಗೆ ಉತ್ತಮವಾಗಿದೆ ಎಂಬ ಸಲಹೆ ಸಾಮಾನ್ಯವಾಗಿ ಎಲ್ಲರಿಂದಲೂ ಕೇಳಿ ಬರುತ್ತೆ. ಈ ಮೂರು ಪದಾರ್ಥಗಳು ರಕ್ತದಲ್ಲಿನ ಸಕ್ಕರೆ ನಿಯಂತ್ರಿಸುವಲ್ಲಿ ತುಂಬಾ ಪ್ರಯೋಜನಕಾರಿ.

313

ಬೇವು, ಹಾಗಲಕಾಯಿ ಮತ್ತು ನೇರಳೆ ಹಣ್ಣಿನ(Jamun fruit) ಜ್ಯೂಸ್ ಸೇವಿಸುವ ಮೂಲಕ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲಾಗುತ್ತೆ. ಇದಲ್ಲದೆ, ಬೇವು, ಹಾಗಲಕಾಯಿ ಮತ್ತು ನೇರಳೆ ಹಣ್ಣಿನ ಜ್ಯೂಸ್ ಸೇವಿಸೋದರಿಂದ ಅನೇಕ ಪ್ರಯೋಜನಗಳಿವೆ. ಅವುಗಳ ಬಗ್ಗೆ ಒಂದಿಷ್ಟು ಮಾಹಿತಿ, ಇಲ್ಲಿದೆ ತಿಳಿಯೋಣ. 

413

1. ನಿಯಮಿತವಾಗಿ ಈ ಜ್ಯೂಸ್ ಸೇವಿಸೋದ್ರಿಂದ ನಮ್ಮ ರೋಗ ನಿರೋಧಕ ಶಕ್ತಿ (Immunity power) ಬಲಪಡಿಸಲು ಸಹಾಯ ಮಾಡುತ್ತೆ. ಇದಲ್ಲದೇ ಸಾಮಾನ್ಯವಾಗಿ ಕಾಡುವಂತಹ ಶೀತ, ಜ್ವರದಂತಹ ವೈರಲ್ ಸೋಂಕು ಅಪಾಯ ಕಡಿಮೆ ಮಾಡುತ್ತೆ. ಇನ್ನೇಕೆ ತಡ ಸೋಂಕು ನಿವಾರಿಸಿಕೊಳ್ಳಲು ಈ ಜ್ಯೂಸ್ ನಿಯಮಿತವಾಗಿ ಸೇವಿಸಿ.

513

2. ಕಣ್ಣಿಗೆ(Eye) ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆ ಇದ್ದರೆ, ಈ ಜ್ಯೂಸ್ ರಾಮಬಾಣ. ಇದನ್ನು ಸೇವಿಸುವುದರಿಂದ ದೃಷ್ಟಿ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತೆ.
3. ಮೇದೋಜೀರಕ ಗ್ರಂಥಿ, ಪಿತ್ತಜನಕಾಂಗ ಮತ್ತು ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು ಸಹಾಯ ಮಾಡುತ್ತೆ.
 

613

4. ಚಯಾಪಚಯ ಕ್ರಿಯೆ ವೇಗಗೊಳಿಸಲು ಮತ್ತು ಗ್ಲುಕೋಸ್ ಅನ್ನು ಚಯಾಪಚಯಗೊಳಿಸಲು ಸಹಾಯ ಮಾಡುತ್ತೆ. ನಿಮಗೆ ಯಾವುದೇ ರೀತಿಯ ಜೀರ್ಣಕ್ರಿಯೆ (Digestion) ಸಮಸ್ಯೆ ಇದ್ದರೆ, ಇದನ್ನು ಕುಡಿಯಿರಿ. ಇದರಿಂದ ಚಯಾಪಚಯ ಕ್ರಿಯೆ ಉತ್ತಮವಾಗುತ್ತೆ. 

713

5. ಪಿಂಪಲ್(Pimple) ಸಾಮಾನ್ಯವಾಗಿ ಕಂಡು ಬರುವ ಮತ್ತು ತೊಡೆದು ಹಾಕಲು ಕಷ್ಟವಾಗಿರುವ ಒಂದು ಸಮಸ್ಯೆ. ಈ ಜ್ಯೂಸ್ ಸೇವಿಸಿದ್ರೆ ಮೊಡವೆ ವಿರುದ್ಧ ಹೋರಾಡಲು ಸಹಾಯ ಮಾಡುತ್ತೆ, ಅಷ್ಟೇ ಅಲ್ಲದೇ ಕಲೆಗಳನ್ನು ಸ್ವಚ್ಛಗೊಳಿಸುತ್ತೆ ಮತ್ತು ಹೊಳೆಯುವ ಚರ್ಮ ಪಡೆಯಲು ಸಹಾಯ ಮಾಡುತ್ತೆ.

813

6. ಸರಿಯಾದ ಆಹಾರ ಸೇವನೆ ಮಾಡದೇ ಇದ್ದಾಗ ಹೊಟ್ಟೆ ಸಮಸ್ಯೆ ಕಂಡು ಬರುತ್ತೆ. ಅದರಲ್ಲೂ ಹೆಚ್ಚಾಗಿ ಹೊಟ್ಟೆಯಲ್ಲಿ ಗ್ಯಾಸ್, ಮಲಬದ್ಧತೆ (Constipation), ಹೊಟ್ಟೆ ಉಬ್ಬರ, ಅಜೀರ್ಣದಂತಹ ಸಮಸ್ಯೆಗಳು ಹೆಚ್ಚು ಹಿಂಸೆಯನ್ನು ನೀಡುತ್ತೆ. ಈ ಜ್ಯೂಸ್ ಹೊಟ್ಟೆಯ ಸಮಸ್ಯೆ ವಿರುದ್ಧ ಹೋರಾಡಲು ಸಹಾಯ ಮಾಡುತ್ತೆ.

913

7. ತೂಕ (Weight) ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎನ್ನುವ ಬಗ್ಗೆ ನಿಮಗೆ ಯೋಚನೆ ಇದ್ದರೆ, ಆ ಯೋಚನೆಯನ್ನು ಇಂದೇ ಮರೆತು ಬಿಡಿ. ಯಾಕೆಂದರೆ ಈ ಜ್ಯೂಸ್ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಸುಲಭವಾಗಿ ಕರಗಿಸುತ್ತದೆ. ಆ ಮೂಲಕ ಹೆಚ್ಚುವರಿ ತೂಕ ಕಡಿಮೆ ಮಾಡುತ್ತೆ. ಇದರಿಂದ ನೀವು ಫಿಟ್ ನೆಸ್ ಕಾಪಾಡಿಕೊಳ್ಳಬಹುದು.

1013

8. ಮಾನಸಿಕ ಆರೋಗ್ಯ ಸುಧಾರಿಸುತ್ತೆ. ಆತಂಕ ಮತ್ತು ಒತ್ತಡ ಕಡಿಮೆ ಮಾಡಲು ಮತ್ತು ಜ್ಞಾಪಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತೆ.
9. ಕೀಲು ನೋವು(Knee pain) ಇತ್ಯಾದಿ ಸಮಸ್ಯೆಯನ್ನು ತೊಡೆದುಹಾಕುತ್ತೆ, ಏಕೆಂದರೆ ಇದು ಯೂರಿಕ್ ಆಮ್ಲವನ್ನು ನಿಯಂತ್ರಣದಲ್ಲಿಡುತ್ತೆ.

1113

10. ರಕ್ತದೊತ್ತಡ (Blood pressure), ರಕ್ತದಲ್ಲಿನ ಸಕ್ಕರೆ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತೆ, ಆ ಮೂಲಕ ಉರಿಯೂತದ ವಿರುದ್ಧ ಹೋರಾಡಲು ಮತ್ತು ಹಾರ್ಟ್ ಅಟ್ಯಾಕ್ (Heart Attack) ಮತ್ತು ಪಾರ್ಶ್ವವಾಯುವಿನಂತಹ ಹೃದಯರಕ್ತನಾಳದ ಕಾಯಿಲೆ ಅಪಾಯವನ್ನು ಕಡಿಮೆ ಮಾಡುತ್ತೆ.

1213
ತಜ್ಞರು ಏನು ಹೇಳುತ್ತಾರೆ?

ತಜ್ಞರು ಏನು ಹೇಳುತ್ತಾರೆ?

ಆಹಾರ ತಜ್ಞರ ಪ್ರಕಾರ, ನೀವು ವೈದ್ಯರನ್ನು ಸಂಪರ್ಕಿಸದೆ ಬೇವು, ಹಾಗಲಕಾಯಿ ಮತ್ತು ನೇರಳೆ ಹಣ್ಣಿನ ಜ್ಯೂಸ್ ಸೇವಿಸೋದನ್ನು ತಪ್ಪಿಸಬೇಕು. ನೀವು ವೈದ್ಯರನ್ನು ಸಂಪರ್ಕಿಸದೆ (Consult doctor) ಇದನ್ನು ಸೇವಿಸಿದರೆ, ಅದು ಆರೋಗ್ಯಕ್ಕೂ ಹಾನಿಯನ್ನುಂಟು ಮಾಡಬಹುದು. ಆದುದರಿಂದ ವೈದ್ಯರ ಸಲಹೆಯ ಮೇರೆಗೆ ಕುಡಿಯೋದು ಉತ್ತಮ.

1313

ವೈದ್ಯರು ನಿಮ್ಮ ಫಿಸಿಕಲ್ ಟೆಸ್ಟ್ ಮಾಡುವ ಮೂಲಕ ಮತ್ತು ಆರೋಗ್ಯ ಸಮಸ್ಯೆಗಳ ಆಧಾರದ ಮೇಲೆ ಈ ಜ್ಯೂಸ್ ಕುಡಿಯಬಹುದೇ? ಇಲ್ಲವೇ? ಅನ್ನೋದನ್ನು ನಿರ್ಧರಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ಇದನ್ನು ತಪ್ಪಿಸೋದು ಸಹ ಒಳ್ಳೆಯದು. ಆದ್ದರಿಂದ, ಬೇವು, ಹಾಗಲಕಾಯಿ ಮತ್ತು ನೇರಳೆ ಹಣ್ಣಿನ ಜ್ಯೂಸ್(Juice) ನೀವೇ ಎಂದಿಗೂ ಕುಡಿಯಬೇಡಿ. ವೈದ್ಯರನ್ನು ಸಂಪರ್ಕಿಸಿದ ನಂತರವೇ ಇದನ್ನು ಸೇವಿಸಿ.

About the Author

SN
Suvarna News
ಆರೋಗ್ಯ
ಆಹಾರಕ್ರಮ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved