ಪಿಂಪಲ್ಸ್ ನಿಮ್ಮ ಔಟಿಂಗ್ ಹಾಳುಮಾಡ್ತಿದ್ಯಾ? ಈ ಟ್ರಿಕ್ಸ್ ಟ್ರೈ ಮಾಡಿ
ಪಿಂಪಲ್ ಅಂದ್ರೇನೆ ದೊಡ್ಡ ತಲೆ ನೋವು, ಯಾಕಂದ್ರೆ ಇದು ಕಾಣಿಸೋದು ಪಾರ್ಟಿ, ವೆಡ್ಡಿಂಗ್ ಅಂಡ್ ಔಟಿಂಗ್ ಒಂದಿನ ಮೊದ್ಲು! ದುರದೃಷ್ಟ ಏನಂದ್ರೆ ಒಂದೇ ರಾತ್ರೇಲಿ ಮೊಡವೆಗಳನ್ನು ತೆಗೆದುಹಾಕಲು ಮತ್ತು ಗುಣಪಡಿಸಲು ಸಾಧ್ಯವಾಗದು. ಆದರೆ ಮನೆಯಲ್ಲೇ ಕೆಲ್ವು ಟ್ರಿಕ್ಸ್ ಮೂಲಕ ಪಿಂಪಲ್ಸ್ ಸೈಜ್ ಕಮ್ಮಿ ಮಾಡಬಹುದು. ಸ್ವೇಲ್ಲಿಂಗ್ ಮತ್ತು ನೋವು ಕಮ್ಮಿ ಮಾಡಲು ಏನ್ ಮಾಡಬೇಕು ನೋಡೋಣ..
ರಾತ್ರೋರಾತ್ರಿ ಮೊಡವೆಯ(Pimples) ಸೈಜ್ ಕಡಿಮೆ ಮಾಡೋದು ಹೇಗೆ?
ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ (ಎಎಡಿ) ಮನೆಯಲ್ಲಿ ಮೊಡವೆಯ ಸೈಜ್ ಕಡಿಮೆ ಮಾಡುವುದು ಹೇಗೆ ಎಂದು ತಿಳಿಸಿದೆ. ಇದೇನು ತುಂಬಾ ಕಷ್ಟವಾದ ಕೆಲಸ ಅಲ್ಲ, ನಿಮಗೆ ನಿಮ್ಮ ತ್ವಚೆ ಬಗ್ಗೆ ಕೇರ್ ಇದ್ದರೆ ನೀವು ಸುಲಭವಾಗಿ ಪಿಂಪಲ್ ಸೈಜ್ ಕಡಿಮೆ ಮಾಡಬಹುದು.
ಮೊದಲಿಗೆ ತ್ವಚೆಯನ್ನು ಮೃದುವಾಗಿ ತೊಳೆಯಿರಿ ಮತ್ತು ಸ್ವಚ್ಛವಾದ ಟವೆಲ್ ನಿಂದ(Towel) ಅದನ್ನು ಒರೆಸಿ.
ಒಂದು ಬಟ್ಟೆಯಲ್ಲಿ, ಐಸ್ ಕ್ಯೂಬ್ ಸುತ್ತಿ ಮತ್ತು ಅವುಗಳನ್ನು ಮೊಡವೆಗೆ ಐದರಿಂದ ಹತ್ತು ನಿಮಿಷಗಳ ಕಾಲ ಇಡಿ. ಮಸಾಜ್ ಮಾಡೋ ತರ ಅದರ ಮೇಲೆ ಇಟ್ಟು ತೆಗೆಯಿರಿ.
ನಂತರ 10 ನಿಮಿಷಗಳ ಕಾಲ ರೆಸ್ಟ್ ತೆಗೆದುಕೊಳ್ಳಿ. ಹತ್ತು ನಿಮಿಷದ ಬಳಿಕ ಮತ್ತೆ 5 ರಿಂದ 10 ನಿಮಿಷಗಳ ಕಾಲ ಐಸ್(Ice) ಹಚ್ಚಿ ಮಸಾಜ್ ಮಾಡಿ.
ಇದಾದ ಬಳಿಕ ಕನಿಷ್ಠ 2 % ಬೆಂಜೊಯಿಲ್ ಪೆರಾಕ್ಸೈಡ್ ಹೊಂದಿರುವ ಸ್ಪಾಟ್ ಟ್ರೀಟ್ ಮೆಂಟ್ ಅನ್ನು ಹಚ್ಚಿ. ಇದರಿಂದ ಮೊಡವೆ ಸಮಸ್ಯೆ ನಿವಾರಣೆಯಾಗುತ್ತೆ.
ಮಲಗುವ ಮೊದಲು ಈ ಸ್ಟೆಪ್ಸ್ ಫಾಲೋ ಮಾಡೋದ್ರಿಂದ ಮೊಡವೆಗಳನ್ನು ಕಡಿಮೆ ಮಾಡಬಹುದು
ವೈಟ್ ಹೆಡ್(White head) ಫಾರ್ಮ್ ಆಗಿದ್ದರೆ ನೀವು ಯೋಚನೆ ಮಾಡ್ಬೆಡಿ, ಯಾಕೆಂದ್ರೆ ಅದಕ್ಕಾಗಿ ಹಾಟ್ ಕಂಪ್ರೆಸ್ ಸಹ ಬಳಸಬಹುದು.
ಇದನ್ನು ಮಾಡುವುದು ಹೇಗೆ:
ಸ್ವಚ್ಛವಾದ ವಾಶ್ ಮಾಡಿದ ಕ್ಲಾತ್ ಅನ್ನು ಬಿಸಿ ನೀರಿನಲ್ಲಿ ಅದ್ದಿ. ಮೊಡವೆ ಮೇಲೆ 10 ರಿಂದ 15 ನಿಮಿಷಗಳ ಕಾಲ ಇಡಿ. ಇದನ್ನು 3-4 ಬಾರಿ ರಿಪೀಟ್ ಮಾಡಿ. ಹೀಗೆ ಮಾಡೋದ್ರಿಂದ ಮೊಡವೆ ಕಡಿಮೆಯಾಗುತ್ತೆ.
ಪಿಂಪಲ್ ನಿವಾರಣೆ ಮತ್ತೆ ಕೆಲವು ಟಿಪ್ಸ್
1. ಗ್ರೀನ್ ಟೀ (Green tea)
ಮೈಲ್ಡ್ ಅಥವಾ ಮಾಡರೇಟಾದ ಮೊಡವೆ ಹೊಂದಿರುವ ಜನರು ಗ್ರೀನ್ ಟೀ ಬಳಕೆ ಮಾಡಬಹುದು. ಗ್ರೀನ್ ಟೀಯನ್ನು ನೇರವಾಗಿ ಹಚ್ಚಬಹುದು ಅಥವಾ ಬಟ್ಟೆಯಲ್ಲಿ ಅದ್ದಿ ಹಚ್ಚಬಹುದು. ಇದು ಮೊಡವೆಗಳ ಗಾಯಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು
2. ಟೀ ಟ್ರೀ ಆಯಿಲ್(Tea tree oil)
ಟೀ ಟ್ರೀ ಆಯಿಲ್ ಮೊಡವೆಗೆ ಪರಿಣಾಮಕಾರಿ ಮನೆಮದ್ದು. ಆದರೆ ಎಸ್ಸೇನ್ಸಿಯಲ್ ಆಯಿಲ್ ಅನ್ನು ಕ್ಯಾರಿಯರ್ ಆಯಿಲ್ ನಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ ಬಳಕೆ ಮಾಡೋದು ತುಂಬಾನೆ ಮುಖ್ಯ. ಇದು ಮೊಡವೆ ನಿವಾರಣೆಗೆ ಸಹಾಯ ಮಾಡುತ್ತೆ.
3. ಕೊಪೈಬಾ ತೈಲ
ಮೊಡವೆ ತುಂಬಾನೆ ಸಣ್ಣದಾಗಿದ್ದರೆ, ಆ ಸಂದರ್ಭದಲ್ಲಿ ಚಿಕಿತ್ಸೆಯಲ್ಲಿ ಕೊಪೈಬಾ ತೈಲದ ಜೆಲ್(Gel) ಪರಿಣಾಮಕಾರಿ. ಇದು ಉರಿಯೂತ ಮತ್ತು ಮೊಡವೆಯ ಗಾತ್ರವನ್ನು ಕಡಿಮೆ ಮಾಡುತ್ತೆ. ನೋವನ್ನು ಸಹ ನಿವಾರಣೆ ಮಾಡುತ್ತೆ.
4.ಕ್ಲೇ (Clay)
ಮಿನರಲ್ ಸಮೃದ್ಧ ಜೇಡಿಮಣ್ಣಾದ ಕಯೋಲಿನ್ ಅನ್ನು ಮೊಡವೆಗೆ ಚಿಕಿತ್ಸೆ ನೀಡಲು ಸ್ಕಿನ್ ಕೇರ್ ಉತ್ಪನ್ನದಲ್ಲಿ ಆಗಾಗ್ಗೆ ಬಳಸಲಾಗುತ್ತೆ. ಇವುಗಳನ್ನು ಹಚ್ಚುವುದರಿಂದ ಮೊಡವೆಗಳ ಗಾತ್ರ ಕಡಿಮೆ ಮಾಡಲು ಸಹಾಯ ಮಾಡುತ್ತೆ .