ತೂಕ ಕಡಿಮೆ ಮಾಡಲು ಈ ಹಾಲು ಸಹಕರಿಸುತ್ತೆ!
ಸನಾತನ ಧರ್ಮದಲ್ಲಿ ತೆಂಗಿನಕಾಯಿಗೆ ವಿಶೇಷ ಮಹತ್ವವಿದೆ. ಪೂಜೆಯ ಸಮಯದಲ್ಲಿ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ಅದೇ ಸಮಯದಲ್ಲಿ, ಅಡುಗೆಮನೆಯಲ್ಲಿ ಚಟ್ನಿ, ಸಾಂಬಾರ್ ತಯಾರಿಸಲು ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ಇನ್ನು ಸೌಂದರ್ಯದ ವಿಷಯದಲ್ಲೂ ತೆಂಗಿನಕಾಯಿಗೆ ಹೆಚ್ಚಿನ ಮಹತ್ವ ಇದೆ. ಕೂದಲಿಗೆ ಶುದ್ಧ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಅಕಾಲಿಕವಾಗಿ ನೆರೆ ಕೂದಲು ಮತ್ತು ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸುತ್ತದೆ. ಅದ್ರೆ ನಿಮಗೆ ಗೊತ್ತಾ ಇದೇ ತೆಂಗಿನಕಾಯಿಗೆ ತೂಕ ಇಳಿಸೋ ಶಕ್ತಿ ಕೂಡ ಇದೆ.
ಕಳಪೆ ಜೀವನಶೈಲಿ, ಒತ್ತಡ ಮತ್ತು ತಪ್ಪಾದ ಆಹಾರ ಸೇವಿಸೋದ್ರಿಂದ ಬೊಜ್ಜಿನ ಸಮಸ್ಯೆ (obesity problem) ಕಾಣಿಸಿಕೊಳ್ಳುವುದು ಇದೀಗ ಸಾಮಾನ್ಯ. ಇದು ಒಂದು ಜೆನೆಟಿಕ್ಸ್ ರೋಗ. ಇದು ಪೀಳಿಗೆಯಿಂದ ಪೀಳಿಗೆಗೆ ಅನುವಂಶಿಕವಾಗಿ ಬರುವಂತಹ ಕಾಯಿಲೆ. ಇದಲ್ಲದೆ, ದೈಹಿಕವಾಗಿ ಚಟುವಟಿಕೆ ಮಾಡದೆ, ಅತಿಯಾದ ವಿಶ್ರಾಂತಿ ತೆಗೆದುಕೊಳ್ಳುವುದು ಮತ್ತು ತಪ್ಪು ಆಹಾರ ಸೇವನೆಯಿಂದ ಸಹ ಉಂಟಾಗುತ್ತದೆ.
ಆರೋಗ್ಯ ತಜ್ಞರು ಯಾವಾಗಲೂ ನಾರಿನಂಶ ಹೆಚ್ಚಿರುವ ಆಹಾರಗಳನ್ನು ಆಹಾರದಲ್ಲಿ ಸೇರಿಸಲು ಶಿಫಾರಸು ಮಾಡುತ್ತಾರೆ. ಇದಕ್ಕಾಗಿ, ನೀವು ಆ ವಸ್ತುಗಳನ್ನು ಆಹಾರದಲ್ಲಿ ಸೇರಿಸಬೇಕು, ಇದರಲ್ಲಿ ನಾರಿನಂಶವು ಹೇರಳವಾಗಿ ಕಂಡುಬರುತ್ತದೆ. ಫೈಬರ್ ನಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಇದು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ. ಈ ಕಾರಣದಿಂದಾಗಿ, ಹಸಿವು ಕಂಟ್ರೋಲ್ ಮಾಡಬಹುದು.
ನಾರಿನಂಶ ಹೆಚ್ಚಿರುವ ಆಹಾರವು ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿ ಬಾಳೆಹಣ್ಣು, ಸೇಬು, ಬ್ರೀಕೊಲಿ, ಬಾರ್ಲಿ ಮೊದಲಾದ ಆಹಾರ ಸೇವಿಸಬಹುದು. ಇದಲ್ಲದೆ, ಪ್ರತಿದಿನ ತೆಂಗಿನ ಹಾಲನ್ನು (coconut milk)ಕುಡಿಯೋ ಮೂಲಕವೂ ನೀವು ತೂಕ ಇಳಿಕೆ ಮಾಡಬಹುದು ಅನ್ನೋದು ನಿಮಗೆ ಗೊತ್ತೇ?. ಹೌದು ತೆಂಗಿನ ಹಾಲು ಸೇವಿಸೋದ್ರಿಂದ ಸುಲಭವಾಗಿ ತೂಕ ಇಳಿಕೆ ಮಾಡಬಹುದು. ಹೇಗೆ ಅನ್ನೋದನ್ನು ನಾವು ನೋಡೋಣ.
ತೆಂಗಿನಕಾಯಿ
ಅನಾದಿ ಕಾಲದಿಂದಲೂ ತೆಂಗಿನಕಾಯಿಗೆ ವಿಶೇಷ ಮಹತ್ವವಿದೆ. ಪೂಜೆಯ ಸಮಯದಲ್ಲಿ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ಅದೇ ಸಮಯದಲ್ಲಿ, ಅಡುಗೆಮನೆಯಲ್ಲಿ ಚಟ್ನಿಯ ವ್ಯಾಪಕ ಬಳಕೆಯಾಗುತ್ತೆ, ಸಿಹಿ ತಿನಿಸು ತಯಾರಿಸಲು ಸಹ ತೆಂಗಿನಕಾಯಿ ಬೇಕೆ ಬೇಕು. ಕೂದಲಿಗೆ ಶುದ್ಧ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಕೂದಲಿನ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತವೆ.
ಇನ್ನೂ ಹೇಳಬೇಕು ಎಂದಾದರೆ, ಎಳನೀರನ್ನು ಕುಡಿಯುವುದರಿಂದ ಅನೇಕ ರೋಗಗಳಿಗೆ ಪರಿಹಾರ ಸಿಗುತ್ತದೆ. ಆದರೆ, ತೆಂಗಿನ ಹಾಲು ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಅನ್ನೋದು ನಿಜವಾಗ್ಲೂ ಗುಡ್ ನ್ಯೂಸ್. ತೆಂಗಿನ ಹಾಲನ್ನು ತೆಂಗಿನ ತಿರುಳಿನಿಂದ ತಯಾರಿಸಲಾಗುತ್ತದೆ. ತೆಂಗಿನ ಹಾಲನ್ನು ಅನೇಕ ರೀತಿಯ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳಲ್ಲಿ ಸಹ ಬಳಸಲಾಗುತ್ತದೆ.
ತೆಂಗಿನ ಹಾಲಿನ ಪ್ರಯೋಜನಗಳು
ತೆಂಗಿನ ಹಾಲಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಟ್ರೈಗ್ಲಿಸರೈಡ್ ಗಳಿವೆ, ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚಯಾಪಚಯ ಕ್ರಿಯೆಯ ಬಿಗಿತದೊಂದಿಗೆ, ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಇದರಿಂದ ಹೆಚ್ಚುತ್ತಿರುವ ತೂಕವನ್ನು (overweight) ಸುಲಭವಾಗಿ ನಿಯಂತ್ರಿಸಬಹುದು.
ಇದರಲ್ಲಿ ನಾರಿನಂಶವೂ ಕಂಡುಬರುತ್ತದೆ. ಇದು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ ಮತ್ತು ಮತ್ತೆ ಮತ್ತೆ ತಿನ್ನುವ ಬಯಕೆಯನ್ನು ಸಹ ಹುಟ್ಟಿಸೋದಿಲ್ಲ. ಇದಲ್ಲದೆ, ಕೊಲೆಸ್ಟ್ರಾಲ್ (cholesterol), ಹೊಟ್ಟೆಯ ಹುಣ್ಣುಗಳು, ಸೋಂಕುಗಳು, ಇತ್ಯಾದಿಗಳನ್ನು ನಿಯಂತ್ರಿಸುವಲ್ಲಿ ತೆಂಗಿನ ಹಾಲು ಸಹ ಪ್ರಯೋಜನಕಾರಿಯಾಗಿದೆ. ಮತ್ತೇಕೆ ತಡ ಇಂದಿನಿಂದಲೇ ತೆಂಗಿನ ಕಾಯಿ ಹಾಲಿನ ಬಳಕೆ ಆರಂಭಿಸಿ.