Asianet Suvarna News Asianet Suvarna News

ಕಣ್ಣು ಕುಣಿಯೋದು ಶುಭ ಅಂತ ಬಿಡ್ಬೇಡಿ, ಅನಾರೋಗ್ಯವೂ ಆಗಿರಬಹುದು!

ಬಲಗಣ್ಣು ಕುಣಿತಾ ಇದೆ, ಎಡಗಣ್ಣು ಕುಣಿತಾ ಇದೆ, ಏನು ಕಾದಿದ್ಯೋ ಅಂತಾ ಅನೇಕರು ಹೇಳೋದನ್ನು ಕೇಳಿರ್ತೇವೆ. ಬೇರೆಯವರಿಗೆ ಕಾಣದೆ ಈ ಕಣ್ಣು ಕುಣಿಯಲು ಅನೇಕ ಕಾರಣವಿದೆ. ಇದನ್ನು ನಿರ್ಲಕ್ಷ್ಯ ಮಾಡುವ ಬದಲು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿದೆ. 
 

Eye Twitching Could Be Dangerous For Human Be Careful
Author
Bangalore, First Published Jul 15, 2022, 3:23 PM IST

ಕಣ್ಣು ಕುಣಿಯೋದು ಸಾಮಾನ್ಯ ಸಂಗತಿ. ಒಂದು ಕಣ್ಣು, ಕಣ್ಣಿನ ರೆಪ್ಪೆ ಅಥವಾ ಕಣ್ಣಿನ ಮೇಲ್ಭಾಗ ಕುಣಿಯುತ್ತಿರುತ್ತದೆ. ಅದು ಬೇರೆಯವರ ಕಣ್ಣಿಗೆ ಕಾಣೋದಿಲ್ಲ. ನಿಮ್ಮ ಅನುಭವಕ್ಕೆ ಬಂದಿರುತ್ತದೆ. ಕೆಲ ಸಮಯದ ನಂತ್ರ ಈ ಸಮಸ್ಯೆ ತಾನಾಗಿಯೇ ಕಡಿಮೆಯಾಗುತ್ತದೆ. ನಮ್ಮ ಭಾರತೀಯ ಸಮಾಜದಲ್ಲಿ  ಕಣ್ಣುಗಳ ಕುಣಿತವನ್ನು ಶುಭ ಮತ್ತು ಅಶುಭದೊಂದಿಗೂ ನೋಡಲಾಗುತ್ತದೆ.  ನಾವಿಂದು ವೈಜ್ಞಾನಿಕ ಕಾರಣಗಳ ಬಗ್ಗೆ ಹೇಳ್ತೇವೆ. ಕಣ್ಣು (Eye) ಕುಣಿಯಲು ಕಾರಣವೇನು? : ಕಣ್ಣುಗಳ ಕುಣಿತಕ್ಕೆ ಕಣ್ಣುಗಳ ನರ (Nerve)ವೇ ಕಾರಣ. ಕಣ್ಣುರೆಪ್ಪೆ (Eyelids) ಗಳು ಅತಿ ಸೂಕ್ಷ್ಮವಾಗಿರುತ್ತವೆ. ಇದರಿಂದಾಗಿ ನರಗಳು ಕೆಲವೊಮ್ಮೆ ಕಣ್ಣುರೆಪ್ಪೆಗಳ ಕುಣಿತಕ್ಕೆ ಕಾರಣವಾಗುತ್ತವೆ.  ಇದು ದೈಹಿಕ ಕಾರಣವಾವಾದ್ರೆ, ಜೀವನಶೈಲಿ (Lifestyle) ಗೆ ಸಂಬಂಧಿಸಿದ ಕೆಲವು ಕಾರಣಗಳೂ ಇದರಲ್ಲಿವೆ.

ಮೆಯೋಕೆಮಿಯಾ (Myokemia) : ಇದು ನಮ್ಮ ಜೀವನಶೈಲಿಗೆ ಸಂಬಂಧಿಸಿದೆ. ಇದು ಸಾಮಾನ್ಯ ಕಾರಣವಾಗಿದೆ. ಮೆಯೋಕೆಮಿಯಾ ಸ್ನಾಯುಗಳ ಸಾಮಾನ್ಯ ಸಂಕೋಚನದಿಂದ ಉಂಟಾಗುತ್ತದೆ. ಇದು ಕಣ್ಣಿನ ಕೆಳಗಿನ ರೆಪ್ಪೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಇದು ಬಹಳ ಕಡಿಮೆ ಸಮಯದವರೆಗೆ ಇರುತ್ತದೆ. ಜೀವನಶೈಲಿಯ ಬದಲಾವಣೆಯಿಂದ ಇದು ನಿಯಂತ್ರಣಕ್ಕೆ ಬರುತ್ತದೆ. 

ಬ್ಲೆಫರೊಸ್ಪಾಸ್ಮ್ ಮತ್ತು ಹೆಮಿಫೇಶಿಯಲ್ ಸೆಳೆತ :  ಬ್ಲೆಫರೊಸ್ಪಾಸ್ಮ್ ಮತ್ತು ಹೆಮಿಫೇಶಿಯಲ್ ಸೆಳೆತ ಎರಡೂ ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ. ಬೆಫರೊಸ್ಪಾಸ್ಮ್ ಇನ್ನಷ್ಟು ತೀವ್ರವಾಗಿರುತ್ತದೆ. ಇದರಲ್ಲಿ ಮಾನವನ ಕಣ್ಣು ಕೆಲವು ಸೆಕೆಂಡುಗಳು, ನಿಮಿಷಗಳು ಅಥವಾ ಕೆಲವು ಗಂಟೆಗಳವರೆಗೆ ಪರಿಣಾಮ ಬೀರಬಹುದು. ಇದು ತುಂಬಾ ತೀವ್ರವಾಗಿರುತ್ತದೆ. ತೀವ್ರತೆಗೆ ಕಣ್ಣು ಮುಚ್ಚುತ್ತದೆ. ಎಷ್ಟು ಕಷ್ಟಪಟ್ಟರೂ ಇದನ್ನು ನಿಲ್ಲಿಸುವುದು ಕಷ್ಟವಾಗುತ್ತದೆ. 

ಮಳೆಗಾಲದಲ್ಲಿ ಕಾಡೋ ಡೇಂಜರಸ್ ಕಾಯಿಲೆಗಳಿವು, ಎಚ್ಚರಿಕೆಯಿರಲಿ

ಉದ್ವೇಗ ಕಾರಣ  :  ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಕೆಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾನೆ. ಆದ್ದರಿಂದಲೇ ಒತ್ತಡ, ಆತಂಕ, ಖಿನ್ನತೆ ಎಂಬ ಪದಗಳು ಸದಾ ಕೇಳಿಬರುತ್ತವೆ. ವ್ಯಕ್ತಿಯ ಒತ್ತಡದ ಮಟ್ಟವು ಹೆಚ್ಚಾದಾಗ, ದೇಹವು ಅದನ್ನು ಬಿಡುಗಡೆ ಮಾಡಲು ಮುಂದಾಗುತ್ತದೆ. ಒತ್ತಡ ಬಿಡುಗಡೆ ಕಣ್ಣು ಕುಣಿತದ ಮೂಲಕವೂ ಆಗುತ್ತದೆ.  ಇದು ವ್ಯಕ್ತಿಯ ಮನಸ್ಸನ್ನು ಬೇರೆಡೆಗೆ ತಿರುಗಿಸುತ್ತದೆ ಮತ್ತು ಒತ್ತಡದ ಸ್ಥಿತಿಯಿಂದ ಹೊರಬರಲು ಸಹಾಯ ಮಾಡುತ್ತದೆ.

ಅತಿಯಾದ ಕೆಫೀನ್ ಸೇವನೆ :  ಚಹಾ ಮತ್ತು ಕಾಫಿಯ ದೈನಂದಿನ ಸೇವನೆಯು ದೇಹದಲ್ಲಿ ಕೆಫೀನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಕೆಫೀನ್ ದೇಹದಲ್ಲಿ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಜೊತೆಗೆ ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಮತ್ತು ಸ್ನಾಯುಗಳಲ್ಲಿ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಕೆಲವು ಸ್ನಾಯುಗಳು ಕಣ್ಣುಗಳ ನರಗಳಿಗೆ ಅಂಟಿಕೊಂಡಿರುತ್ತವೆ. ಇದು ಕಣ್ಣುಗಳ ಕುಣಿತದ ಸಮಸ್ನೆಯುಂಟು ಮಾಡುತ್ತದೆ.

ಮದ್ಯ ಸೇವನೆ : ಕೆಫೀನ್‌ನಂತೆ ಆಲ್ಕೋಹಾಲ್ ಕೂಡ ಕಣ್ಣುಗಳ ಸಂವೇದನೆಯನ್ನು ಹೆಚ್ಚಿಸಲು ಒಂದು ಕಾರಣವಾಗಿದೆ. ಅತಿಯಾದ ಮದ್ಯ ಸೇವನೆಯಿಂದಾಗಿ ಕಣ್ಣುರೆಪ್ಪೆಗಳು ನಿರಂತರವಾಗಿ ಸೆಟೆದುಕೊಳ್ಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ  ಆಲ್ಕೋಹಾಲ್ ಅನ್ನು ತ್ಯಜಿಸುವುದು ಒಳ್ಳೆಯದು. 

ವೈವಾಹಿಕ ಜೀವನ ಹಾಳು ಮಾಡುತ್ತೆ ಪುರುಷರು ಮಾಡೋ ಈ ಕೆಲಸ

ಕಣ್ಣು ಕುಣಿತಕ್ಕೆ ನಿಜವಾದ ಕಾರಣ : ವೈದ್ಯರ ಪ್ರಕಾರ, ಮೆದುಳು ಅಥವಾ ನರಗಳ ಅಸ್ವಸ್ಥತೆಯಿಂದ ವ್ಯಕ್ತಿಯ ಕಣ್ಣು ಕುಣಿಯುತ್ತದೆ. ಇದು ಬ್ಯಾನ್ ಪಾಲ್ಸಿ, ಡಿಸ್ಟೋನಿಯಾ, ಗರ್ಭಕಂಠದ ಡಿಸ್ಟೋನಿಯಾ ಮತ್ತು ಪಾರ್ಕಿನ್ಸನ್‌ನಂತಹ ಅಸ್ವಸ್ಥತೆಗಳನ್ನು ಒಳಗೊಂಡಿದೆ. 

ಕೆಲವು ಇತರ ರೋಗಗಳು : ಕಣ್ಣುಗಳ ಅಲರ್ಜಿ,ನಿದ್ರೆಯ ಕೊರತೆಯಿಂದಲೂ ಕಣ್ಣು ಕುಣಿಯುತ್ತದೆ.  ಕಣ್ಣಿಗೆ ಆಯಾಸವಾದಾಗ, ಒಣ ಕಣ್ಣುಗಳ ಸಮಸ್ಯೆಗಳಿಂದಾಗಿ ಕಣ್ಣುಗಳು ಕುಣಿಯಲು ಪ್ರಾರಂಭಿಸುತ್ತವೆ. ಅಲರ್ಜಿ, ನಿದ್ರೆ ಸಮಸ್ಯೆ ಅಥವಾ ಆಯಾಸ, ಒಣ ಕಣ್ಣಿನಿಂದ ಕಣ್ಣು ಕುಣಿಯುತ್ತಿದ್ದರೆ ನೀವು ಅದಕ್ಕೆ ಚಿಕಿತ್ಸೆ ಪಡೆಯಬೇಕು. ಮೇಲಿನ ರೋಗಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕರೆ ಕಣ್ಣು ಕುಣಿಯುವುದು ಕಡಿಮೆಯಾಗುತ್ತದೆ. 
 

Follow Us:
Download App:
  • android
  • ios