- Home
- Life
- Food
- ತೂಕ ಇಳಿಸೋದು, ಜೀರ್ಣಕ್ರಿಯೆ ಹೆಚ್ಚಿಸೋದು ಹೇಗೆಂದು ಇನ್ಮುಂದೆ ಚಿಂತೆ ಮಾಡ್ಬೇಡಿ; ಇಲ್ಲಿದೆ ಬೆಸ್ಟ್ ಐಡಿಯಾ!
ತೂಕ ಇಳಿಸೋದು, ಜೀರ್ಣಕ್ರಿಯೆ ಹೆಚ್ಚಿಸೋದು ಹೇಗೆಂದು ಇನ್ಮುಂದೆ ಚಿಂತೆ ಮಾಡ್ಬೇಡಿ; ಇಲ್ಲಿದೆ ಬೆಸ್ಟ್ ಐಡಿಯಾ!
ತೂಕ ಇಳಿಸಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ನಮ್ಮ ಡಯಟ್ ತುಂಬಾ ಮುಖ್ಯ. ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ಪೋಷಕಾಂಶ ಇರುವ ಆಹಾರಗಳನ್ನು ನಾವು ಪ್ರತಿದಿನ ತಿನ್ನಬೇಕು. ಹಾಗಾದರೆ ತೂಕ ಇಳಿಸಲು ಯಾವೆಲ್ಲಾ ಆಹಾರಗಳು ಬೆಸ್ಟ್ ಅಂತ ಇಲ್ಲಿ ನೋಡೋಣ.

ತೂಕ ಇಳಿಸಲು ಮತ್ತು ಜೀರ್ಣಕ್ರಿಯೆ ಹೆಚ್ಚಿಸಲು 7 ಬೆಸ್ಟ್ ಫುಡ್ಸ್
ತೂಕ ಇಳಿಸಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ನಮ್ಮ ಡಯಟ್ ತುಂಬಾ ಮುಖ್ಯ. ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ಪೋಷಕಾಂಶ ಇರುವ ಆಹಾರಗಳನ್ನು ನಾವು ಪ್ರತಿದಿನ ತಿನ್ನಬೇಕು. ಹಾಗಾದರೆ ತೂಕ ಇಳಿಸಲು ಯಾವೆಲ್ಲಾ ಆಹಾರಗಳು ಬೆಸ್ಟ್ ಅಂತ ಇಲ್ಲಿ ನೋಡೋಣ.
ಕೇವಲ 42 ರಿಂದ 50 ಕ್ಯಾಲೋರಿ ಇರುವ ಕಿವಿ ಹಣ್ಣು
ಕಿವಿ ಹಣ್ಣಿನಲ್ಲಿ ಕ್ಯಾಲೋರಿ ತುಂಬಾ ಕಡಿಮೆ ಇದೆ ಮತ್ತು ಹೊಟ್ಟೆ ತುಂಬಿಸುವ ಪೋಷಕಾಂಶಗಳು ಹೆಚ್ಚಾಗಿವೆ. ಹಾಗಾಗಿ ತೂಕ ಇಳಿಸುವ ಡಯಟ್‌ನಲ್ಲಿ ಸೇರಿಸಲು ಇದು ಬೆಸ್ಟ್ ಹಣ್ಣು. ಒಂದು ಪೂರ್ತಿ ಕಿವಿ ಹಣ್ಣಿನಲ್ಲಿ ಕೇವಲ 42 ರಿಂದ 50 ಕ್ಯಾಲೋರಿ ಮಾತ್ರ ಇರುತ್ತದೆ.
ಪ್ರತಿದಿನ ಒಂದು ಮೊಟ್ಟೆ ತಿಂದರೆ ತೂಕ ಇಳಿಯುತ್ತೆ
ತೂಕ ಇಳಿಸಲು ಸಹಾಯ ಮಾಡುವ ಬೆಸ್ಟ್ ಪ್ರೋಟೀನ್ ಫುಡ್ ಅಂದರೆ ಅದು ಮೊಟ್ಟೆ. ಪ್ರತಿದಿನ ಒಂದು ಮೊಟ್ಟೆ ತಿಂದರೆ ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು ಸಿಗುತ್ತವೆ. ಆರೋಗ್ಯಕ್ಕೆ ಲಾಭ ನೀಡುವ ಅಗತ್ಯ ವಿಟಮಿನ್ ಮತ್ತು ಖನಿಜಾಂಶಗಳು ಇದರಲ್ಲಿ ತುಂಬಿವೆ.
ದೇಹದ ಕಲ್ಮಶ ಹೊರಹಾಕುವ ಬ್ರೌನ್ ರೈಸ್
ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಬೇಕಾದ ನಾರಿನಂಶ ಬ್ರೌನ್ ರೈಸ್‌ನಲ್ಲಿ ಹೆಚ್ಚಾಗಿ ಸಿಗುತ್ತದೆ. ಜೊತೆಗೆ, ಇದನ್ನು ತಿಂದರೆ ಹೊಟ್ಟೆ ತುಂಬಿದ ಅನುಭವ ಸಿಗುತ್ತದೆ ಮತ್ತು ಪದೇ ಪದೇ ಹಸಿವಾಗುವುದಿಲ್ಲ.
ಹೊಟ್ಟೆ ತುಂಬಿದ ಅನುಭವ ನೀಡುವ ಸೇಬು
ಸೇಬಿನಲ್ಲಿ ನೀರಿನಂಶ ತುಂಬಾ ಹೆಚ್ಚಿರುತ್ತದೆ. ಒಂದು ಸಾಧಾರಣ ಗಾತ್ರದ ಸೇಬಿನಲ್ಲಿ ಶೇ. 85ರಷ್ಟು ನೀರು ಇರುತ್ತದೆ. ನೀರಿನಂಶ ಹೆಚ್ಚಿರುವ ಆಹಾರ ತಿಂದರೆ ಹೊಟ್ಟೆ ಬೇಗ ತುಂಬುತ್ತದೆ. ಇದರಿಂದ ನಾವು ಹೆಚ್ಚು ಕ್ಯಾಲೋರಿ ತಿನ್ನುವುದನ್ನು ತಪ್ಪಿಸಬಹುದು ಮತ್ತು ತೂಕ ಕಂಟ್ರೋಲ್ ಮಾಡಬಹುದು.
ತೂಕ ಇಳಿಸಲು ಸಹಾಯ ಮಾಡುವ ಚಕ್ಕೆ
ತೂಕ ಇಳಿಸಲು ಟ್ರೈ ಮಾಡುವವರಿಗೆ ಚಕ್ಕೆ ಒಂದು ಬೆಸ್ಟ್ ಮಸಾಲೆ. ಚಕ್ಕೆ ತಿಂದರೆ ದೇಹದ ಮೆಟಬಾಲಿಸಂ ಹೆಚ್ಚಾಗುತ್ತದೆ ಮತ್ತು ದಿನವಿಡೀ ಆಕ್ಟಿವ್ ಆಗಿರಲು ಸಹಾಯ ಮಾಡುತ್ತದೆ. ನೀವು ಚಹಾಗೆ ಅಥವಾ ಅಡುಗೆಗೆ ಚಕ್ಕೆ ಸೇರಿಸಿ ಬಳಸಬಹುದು. ಇದು ಊಟದ ರುಚಿಯನ್ನು ಕೂಡ ಹೆಚ್ಚಿಸುತ್ತದೆ.
ದೇಹದ ಹೆಚ್ಚುವರಿ ನೀರಿನಂಶ ಕಡಿಮೆ ಮಾಡುವ ರಾಗಿ
ರಾಗಿಯಲ್ಲಿ ನಾರಿನಂಶ ತುಂಬಾನೇ ಇದೆ. ಇದು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ರಾಗಿ ತಿಂದರೆ ತ್ವಚೆ ಹೊಳೆಯುತ್ತದೆ ಮತ್ತು ದೇಹದಲ್ಲಿರುವ ಹೆಚ್ಚುವರಿ ನೀರಿನಂಶ ಕೂಡ ಕಡಿಮೆಯಾಗುತ್ತದೆ.
ತೂಕ ಇಳಿಸಲು ಇಡ್ಲಿ ಮತ್ತು ಸಾಂಬಾರ್ ಬೆಸ್ಟ್
ದಕ್ಷಿಣ ಭಾರತದ ಫೇಮಸ್ ಬ್ರೇಕ್‌ಫಾಸ್ಟ್ ಇಡ್ಲಿ ಮತ್ತು ಸಾಂಬಾರ್ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರೋಟೀನ್ ಹೆಚ್ಚಿರುವ ಬೇಳೆ ಬಳಸಿ ಮಾಡುವ ಸಾಂಬಾರ್ ಜೊತೆ ಇಡ್ಲಿ ತಿಂದರೆ ಸ್ನಾಯುಗಳು ಬಲವಾಗುತ್ತವೆ. ಇಡ್ಲಿಯಲ್ಲಿರುವ ನಾರಿನಂಶ ತೂಕ ಇಳಿಸಲು ಕೂಡ ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

